ದೈನಂದಿನ ಅಪರಾದ ವರದಿ.
ದಿನಾಂಕ 19.02.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 18.02.2015 ರಂದು ಪಿರ್ಯಾದಿದಾರರಾದ ಬರ್ಕೆ ಪೊಲೀಸ್ ಠಾಣಾ ಪಿಸಿ 548 ಶ್ರೀ ಸೋಮ ನಾಯ್ಕ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ.19.ಈಸಿ.8823ನೇದರಲ್ಲಿ ಕದ್ರಿ ಠಾಣಾ ಪಿ ಸಿ 356ನೇ ಚನ್ನಬಸಪ್ಪ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ನಗರದ ಕೋಟ್ಟಾರ ಚೌಕಿ - ಉರ್ವಾಸ್ಟೋರ್ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬರುತ್ತಾ ಸಮಯ ಸಂಜೆ 18.35 ಗಂಟೆಗೆ ಜಿಂಜರ್ ಹೋಟೆಲ್ ಎದುರುಗಡೆ ತಲುಪುವ ಸಮಯ ಮೋಟಾರು ಸೈಕಲ್ ನಂಬ್ರ ಕೆಎ.19.ಡಬ್ಲ್ಯು. 4516ನೇದನ್ನು ಅದರ ಸವಾರ ಒಬ್ಬರನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಪಿರ್ಯಾದಿದಾರರ ಮೋಟಾರು ಸೈಕಲಿನ ಹಿಂದುಗಡೆಯಿಂದ ಅಂದರೆ ಕೊಟ್ಟಾರ ಚೌಕಿ ಕಡೆಯಿಂದ ಉರ್ವಾಸ್ಟೋರ್ ಕಡೆಗೆ ಅತೀವೇಗ ಹಾಗೂ ಅಜಾಗರು ಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿನ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎರಡೂ ಕೈಗಳ ಮಣಿಗಂಟಿಗೆ ತರಚಿದ ಮತ್ತು ಗುದ್ದಿದ ಗಾಯ ಹಾಗೂ ಸಹಸವಾರ ಚನ್ನಬಸಪ್ಪ ರವರಿಗೆ ಬಲ ಕೈ, ಬಲ ಸೊಂಟದ ಬಳಿ, ಬಲ ಕಾಲಿನ ಕೋಲು ಕಾಲಿಗೆ ತರಚಿದ ಗಾಯವಾಗಿರುತ್ತದೆ. ಅಲ್ಲದೆ ಆರೋಪಿ ಬೈಕ್ ಸವಾರ ಮತ್ತು ಸಹ ಸವಾರನಿಗೂ ಗಾಯವಾಗಿರುವುದಾಗಿದೆ. ಆರೋಪಿ ಮೋಟಾರು ಸೈಕಲ್ ಸವಾರ ಅಮಲು ಪದಾರ್ಥಸೇವಿಸಿದಂತೆ ಕಂಡು ಬರುತ್ತಿರುವುದಾಗಿದೆ.
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.02.2015 ರಂದು ಸಂಜೆ ವೇಳೆ ಪಿರ್ಯಾದಿದಾರರಾದ ಕುಮಾರಿ ಸಂಗೀತಾ ರವರು ಮತ್ತು ಅವರ ಅಕ್ಕಂದಿರಾದ ಶ್ರೀಮತಿ ರಕ್ಷಿತಾ, ಕುಮಾರಿ ದೀಪಿಕಾ ಮತ್ತು ಸಂಬಂದಿ ಕುಮಾರಿ ಹರ್ಷಿತಾರೊಂದಿಗೆ ಮೂಡಬಿದ್ರೆ ಪೇಟೆಯಲ್ಲಿ ಚಿನ್ನದ ಒಡವೆ ಖರೀದಿಸಿ, ಬಳಿಕ ಪಿರ್ಯಾದಿ ಮತ್ತು ಹರ್ಷಿತಾರವರು ಮೂಡಬಿದ್ರೆ ಪೇಟೆಯಲ್ಲಿರುವ ಪ್ರಭಾತ್ ಸಿಲ್ಕ್ ಸೆಂಟರ್‌ನ ಕಟ್ಟಡದ ಬ್ಯೂಟಿ ಪಾರ್ಲರ್ಗೆ ತೆರಳಿದ್ದರೆಂದು , ಅಕ್ಕಂದಿರು ಮೆಡಿಕಲ್ಗೆ ಎಂದು ತೆರಳಿದ್ದ ಕಾರಣ ಅವರನ್ನು ಕರೆದುಕೊಂಡು ಬರುತ್ತೇನೆಂದು ಹೇಳಿ ಹರ್ಷಿತಾಳು ತೆರಳಿದ್ದರೆಂದು, ಆ ಸಂದರ್ಭ ಪಿರ್ಯಾದಿದಾರರು ಬ್ಯೂಟಿಪಾರ್ಲರ್‌ನ ಹೊರಗೆ ನಿಂತು ಮುಖ್ಯ ರಸ್ತೆಯನ್ನು ವೀಕ್ಷಿಸಿದ್ಯಾಗೆ, ಕುಮಾರಿ ಹರ್ಷಿತಾಳು ಮುಖ್ಯರಸ್ತೆಯಲ್ಲಿ ನಿಂತಿದ್ದ ಒಂದು ಓಮಿನಿ ಕಾರನ್ನು ಹತ್ತಿದ್ದು ಓಮಿನಿ ಕಾರು ವೇಗವಾಗಿ ಹನುಮಾನ್ ದೇವಸ್ಥಾನ ಕಡೆಗೆ ಹೋಗಿರುತ್ತದೆಂದು ಈ ಘಟನೆ ನಡೆಯುವಾಗ ಸಾಯಂಕಾಲ ಸುಮಾರು 7:00 ಗಂಟೆ ಆಗಿರಬಹುದೆಂದು, ಕುಮಾರಿ ಹರ್ಷಿತಾಳನ್ನು ಯಾರೋ ಅಪರಿಚಿತರು ಯಾವುದೋ ದುರುದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.02.2015 ರಂದು ಮದ್ಯಾಹ್ನ 1.30 ಗಂಟೆಗೆ ಮೋಟಾರ್ ಸೈಕಲ್ ನಂಬ್ರ KA19-ED-124 ನ್ನು ಅದರ ಸವಾರರು ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಮಂಗಳಾದೇವಿ ಕಡೆಯಿಂದ ಮಂಕಿಸ್ಟಾಂಡ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಂಕಿಸ್ಟಾಂಡ್ ನ ಚೌಡೇಶ್ವರಿ ದೇವಸ್ತಾನದ ಎದುರುಗಡೆ ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಶ್ರೀ ಅಜಯ್ ಮೆಂಡಲ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯು ರಸ್ತೆಗೆ ಬಿದ್ದು, ಅವರ ಬಲಕಣ್ಣಿಗೆ ಗುದ್ದಿದ ನೋವು,ಹಣೆಯ ಬಲಭಾಗದಲ್ಲಿ ಹಾಗೂ ಮುಖದ ಬಲಭಾಗದಲ್ಲಿ ರಕ್ತಗಾಯ, ಬಲಕಾಲಿನ ತೊಡೆಗೆ ಮತ್ತು ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು ಉಂಟಾಗಿ ಕೆಎಂಸಿ ಅತ್ತವಾರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕೆತ್ಸೆಯಲ್ಲಿರುತ್ತಾರೆ. ಮತ್ತು ಅಪಘಾತ ಪಡಿಸಿದ ಬೈಕು ಸವಾರನ ಮುಖಕ್ಕೆ ಹಾಗೂ ತುಟಿಗೆ ರಕ್ತಗಾಯವಾಗಿರುತ್ತದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.02.2015 ರಂದು ಸಮಯ ಸುಮಾರು ಮುಂಜಾನೆ 01.15 ಗಂಟೆಗೆ ಅಂಬಾಸಿಡರ್ ಕಾರು ನಂಬ್ರ KA23-M-7499 ನೇ ಕಾರು ಚಾಲಕ ಬಿಜೈ ಚರ್ಚ್ ಮುಖ್ಯ ರಸ್ತೆಯಲ್ಲಿ ಆಕ್ಟಾಗನಲ್ ಟ್ಯುಬುಲರ್ ಕಂಬಕ್ಕೆ ಅಪಘಾತ ಪಡಿಸಿದ ಪರಿಣಾಮ ಮನಾಪಾಗೆ 32.000 ಗಳ ನಷ್ಟ ಉಂಟಾಗಿದ್ದು, ಸದ್ರಿ ವಾಹನ ಮಾಲೀಕರು ದಿನಾಂಕ 13.02.2015 ರ ಒಳಗಾಗಿ ಸದ್ರಿ ಮೊತ್ತವನ್ನು ಪಾವತಿಸುವುದಾಗಿ ಕೋರಿ ಪತ್ರ ಬರೆದು ನೀಡಿರುತ್ತಾರೆ. ಆದರೆ ಈ ವರೆಗೂ ಹಣ ಪಾವತಿಸಿದ ಹಿನ್ನಲೆಯಲ್ಲಿ ಉಂಟಾಗಿರುವ ಆರ್ಥಿಕ ನಷ್ಠ ವನ್ನು ಪಾಲಿಕೆಗೆ ಬರೆಸಿಕೊಡವಂತೆ ಮನಪಾದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್) ಇಂಜಿನಿಯರ್ ಶ್ರೀ ಯಶವಂತ್ ಕಾಮತ್ ರವರು ದೂರು ನೀಡಿರುವುದಾಗಿದೆ.
5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-02-2015ರಂದು ಪಿರ್ಯಾಧಿದಾರರಾದ ಶ್ರೀ ನೌಫಾಲ್ ರವರು ಕೆಎ-19ಇಹೆಚ್-2387 ನಂಬ್ರದ ಮೋಟಾರು ಸೈಕಲಿನಲ್ಲಿ ಸವಾರರಾಗಿಯೂ ತನ್ನ ತಂದೆ ಹಮೀದ್ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಎಳತ್ತೂರಿನಿಂದ ಪಕ್ಷಿಕೆರೆಗೆ ಹೋಗುತ್ತಾ ಮದ್ಯಾಹ್ನ 12:15 ಗಂಟೆ ಸಮಯಕ್ಕೆ ಪುನರೂರು ಮಂದಿರ ಬಳಿಗೆ ತಲುಪಿದಾಗ ಪುನರೂರು ಕೆನರಾ ಲೈಟಿಂಗ್ಸ್ ಕಂಪೆನಿ ಕಡೆಯಿಂದ ಎಳತ್ತೂರು ಕಡೆಗೆ ಕೆಎ-19ಡಬ್ಲ್ಯೂ-9987 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಮೈತಾಬ್ ಎಂಬವರು ಸಹ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾಧಿದಾರರಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲಿನಲ್ಲಿದ್ದವರು ಮೋಟಾರು ಸೈಕಲು ಸಮೇತ ರಸ್ತೆಗೆ ಬಿದ್ದು, ಪಿರ್ಯಾಧಿದಾರರ ಮುಖ, ದವಡೆಗೆ, ಎಡ ಭುಜಕ್ಕೆ ಗಂಭೀರ ತರದ ಗಾಯವಗಿದ್ದು, ಅವರ ತಂದೆಗೆ ತಲೆಗೆ ಗುದ್ದಿದ ಗಾಯವಾಗಿದ್ದು ಅಪಘಾತ ಪಡಿಸಿದ ಮೋಟಾರು ಸೈಕಲಿನ ಸವಾರನಿಗೂ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಘಾತ ಪಡಿಸಿದ ಮೋಟಾರು ಸೈಕಲು ಸವಾರ ಚಿಕಿತ್ಸಾ ವೆಚ್ಚ ಕೊಡುವುದಾಗಿ ಹೇಳಿ ಹೋದವರು ಚಿಕಿತ್ಸಾ ವೆಚ್ಚವನ್ನು ಭರಿಸದೇ ಇರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18-02-2015 ರಂದು ಪಿರ್ಯಾದಿದಾರರಾದ ಪುರುಷೋತ್ತಮ್ ರವರು ತನ್ನ ಮನೆಯಾದ ನರಿಕೊಂಬು ನಿಂದ ಬೆಳಿಗ್ಗೆ ಹೊರಟು ಮಂಗಳೂರು ತಾಲೂಕು ಮೊಳೂರು ಗ್ರಾಮದ ಬರಿಪಟ್ಲ ಎಂಬಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದು, ಕೆಲಸಕ್ಕೆ ಜಲ್ಲಿ ಮುಗಿಯಿತು ಎಂಬುದಾಗಿ ಮೇಸ್ತ್ರಿಯವರು ಹೇಳಿದಂತೆ ಕೆ.ಎ -15.4289 ನೇದರ ಪಿಕಅಪ್ ವಾಹನದಲ್ಲಿ ಅದರ ಚಾಲಕರಾದ ಜಗದೀಶ ಎಂಬವರೊಡನೆ ಬರಿಪಟ್ಲ ಎಂಬಲ್ಲಿಂದ ಹೊರಟು ಗಂಜಿಮಠ ದಿಂದ ಜಲ್ಲಿ ತುಂಬಿಸಿಕೊಂಡು ಬರಿಪಟ್ಲ ಎಂಬಲ್ಲಿಗೆ ಮದ್ಯಾಹ್ನ 12-00 ಗಂಟೆಗೆ ತಲುಪಿದಾಗ ಚಾಲಕ ಜಗದೀಶ ಎಂಬುವರು ಚಲಾಯಿಸುತ್ತಿದ್ದ. ಕೆಎ-15-4289 ನೇ ಪಿಕಅಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಚಲಿಸಿ 25 ಅಡಿ ಆಳಕ್ಕೆ ಬಿದ್ದ ಪರಿಣಾಮ ಪಿರ್ಯಾದುದಾರರ ಕೋಲು ಕಾಲಿಗೆ ರಕ್ತ ಗಾಯ, ಹಣೆಗೆ ತಲೆ ಹಿಂಭಾಗ ಬಲ ಬದಿಗೆ ಎದೆಗೆ ಗುದ್ದಿದ ಗಾಯ, ಸೊಂಟ ಮತ್ತು ಎಡಕೋಲು ಕಾಲಿಗೆ ಗಾಯವಾಗಿದ್ದು, ಚಾಲಕ ಜಗದೀಶ ಎಂಬುವರಿಗೆ ತಲೆಯ ಹಿಂಭಾಗ ಎಡಬದೆಗೆ ರಕ್ತ ಗಾಯ ಮತ್ತು ಸೊಂಟಕ್ಕೆ ಮೂಳೆಮುರಿತದ ಗಾಯ ವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎಸ್.ಸಿ.ಎಸ್ ಆಸ್ಪತ್ರೆ ಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು, ಈ ಅಪಘಾತಕ್ಕೆ ಕೆ.ಎ -15 4289 ನೇದರ ಚಾಲಕ ಜಗದೀಶ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮದಿಂದಾಗಿರುತ್ತದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.02.2015 ರಂದು ಸಂಜೆ 6.00 ಗಂಟೆ ವೇಳೆಗೆ ಒಂದು ಹುಡುಗಿ ಪಡೀಲ್ ಎಂಬಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ಹೋಗುವರೇ ಬಸ್ಸಿಗಾಗಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿರುವಾಗ, ಪಂಪವೆಲ್ ಕಡೆಯಿಂದ ಕೆಎಲ್-14-7788 ನೇ ಹುಂಡೈ -20 ಕೆಂಪು ಬಣ್ಣದ ಕಾರು ಹುಡುಗಿ ನಿಂತಿರುವ ಸ್ಥಳದ ಬಳಿ ನಿಲ್ಲಿಸಿ ಅದರ ಚಾಲಕ ಬಿ.ಸಿ.ರೋಡ್ ಕಡೆಗೆ ಹೋಗುವ ದಾರಿ ಕೇಳಿದಾಗ ಹುಡುಗಿಯು ಕೈಯಲ್ಲಿ ತೋರಿಸಿದಾಗ ಸದ್ರಿ ಕಾರು ಚಾಲಕ ಹುಡುಗಿಯಲ್ಲಿ "ಕಾರಿನಲ್ಲಿ ಬಂದು ಬಿ.ಸಿ. ರೋಡ್ ತೋರಿಸು ನಿನ್ನನ್ನು ವಾಪಾಸು ಬಿಡುತ್ತೇವೆ" ಎಂಬುದಾಗಿ ಹೇಳಿದಾಗ ಹುಡುಗಿಯು ಬರುವುದಿಲ್ಲ ಎಂದು ಹೇಳಿದ್ದು, ಸದ್ರಿ ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಹುಡುಗಿಯ ಕೈ ಹಿಡಿದು ಕಾರಿನೊಳಗೆ ಎಳೆಯಲು ಪ್ರಯತ್ನಿಸಿದಾಗ, ಹುಡುಗಿಯು ಬೊಬ್ಬೆ ಹಾಕಿದಲ್ಲಿ ಅಲ್ಲಿಯೇ ಹತ್ತಿರದಲ್ಲಿದ್ದ ಕೆಲವರು ಬಂದುದರಿಂದ ಆರೋಪಿಗಳು ವೇಗವಾಗಿ ಬಿ.ಸಿ. ರೋಡ್ ಕಡೆಗೆ ಹೋಗಿರುವುದಾಗಿದೆ.
No comments:
Post a Comment