ದೈನಂದಿನ ಅಪರಾದ ವರದಿ.
ದಿನಾಂಕ 09.02.2015 ರ 14:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
2
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
1
|
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2015 ರಂದು ಸಮಯ 01-00 ಗಂಟೆಗೆ ಮಂಗಳೂರು ನಗರದ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕರಾದ ವೆಲೆಂಟೈನ್ ಡಿ ಸೋಜ ರವರಿಗೆ ಮಂಗಳೂರು ನಗರದ ವ್ಯಾಸ ನಗರ ವಿಶ್ವಾಸ್ ಗ್ರೂಪ್ಸ್ ನ ಕಾಮಗಾರಿ ನಡೆಯುತ್ತಿರುವ ಸಾಮ್ರಾಟ್ ಅಪಾರ್ಟ್ ಮೆಂಟ್ ಬಳಿ ಬಲ್ಮಠ ಬಳಿ ಹಲವಾರು ಜನರು ಅಂದರ್- ಬಾಹರ್ ಜೂಜಾಟವನ್ನು ಆಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಷಯವನ್ನು ಮೇಲಾಧಿಕಾರಿಯವರುಗಳಿಗೆ ತಿಳಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ವ್ಯಾಸ ನಗರ ವಿಶ್ವಾಸ್ ಗ್ರೂಪ್ಸ್ ನ ಕಾಮಗಾರಿ ನಡೆಯುತ್ತಿರುವ ಸಾಮ್ರಾಟ್ ಅಪಾರ್ಟ್ ಮೆಂಟ್ ಬಳಿ ಬಲ್ಮಠ ಬಳಿ ಸಮಯ ಬೆಳಿಗ್ಗೆ 02-15 ಗಂಟೆಗೆ ಧಾಳಿ ನಡೆಸಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 11 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಹಾಗೂ ಅಮಾನತ್ತು ಪಡಿಸಿಕೊಂಡ ನಗದು ಹಣ 11,060/-ರೂಪಾಯಿ, ದಿನಪತ್ರಿಕೆ, 52 ಇಸ್ಪೀಟು ಎಲೆಗಳು ಮತ್ತು ಒಂದು ಚಾರ್ಜರ್ ಲೈಟನ್ನು ಅಮಾನತ್ತು ಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿ ಮಹಜರು ಹಾಗೂ ವರದಿಯನ್ನು ನೀಡಿದ್ದನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚಂದ್ರು ರೈ ರವರು ತಾನು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಕಂಕನಾಡಿಯ ಕರಾವಳಿ ಜಂಕ್ಷನ್ ನಲ್ಲಿರುವ ಉದಯ ಕಿಚನೆಸ್ಟ್ ಶೋ ರೂಮ್ ಗೆ ದಿನಾಂಕ: 07-02-2015 ರಂದು ರಾತ್ರಿ ಸಮಯ ಸುಮಾರು 20-30 ಗಂಟೆಗೆಯಿಂದ ದಿನಾಂಕ: 08-02-2015 ರಂದು ಬೆಳಿಗ್ಗೆ ಸಮಯ ಸುಮಾರು 08-00 ಗಂಟೆಗೆ ಮಧ್ಯೆ ಯಾರೋ ಕಳ್ಳರು ಸದ್ರಿ ಶೋರೂಮ್ ನ ಒಂದನೇ ಮಹಡಿಯ ಬಾಗಿಲನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಕೊರೆದು ತೆರದು ಆ ಮೂಲಕ ಒಳಪ್ರವೇಶಿಸಿ ಸದ್ರಿ ಶೋ ರೂಮ್ ನ ತಳ ಅಂತಸ್ತಿನಲ್ಲಿ ಡ್ರಾವರ್ ನಲ್ಲಿ ಇರಿಸಿದ್ದ ನಗದು ಹಣ ರೂ.16,000/- ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.02.2015 ರಂದು 13:45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ಶರೀಫ್ ರವರು ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಅಮರಶ್ರೀ ಟಾಕೀಸ್ನ ಬಳಿ ಸೋಡಾ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿ ರಾಜು ಎಂಬವರು "ಬಾರಿ ಗುಜಿರಿ ಮೀನು ವ್ಯಾಪಾರ ಮಾಡುತ್ತಿಯಾ, ದೊಡ್ಡ ಜನ ನೀನು" ಎಂದು ಹೇಳಿ ಕಾಲಿನಿಂದ ಹೊಟ್ಟೆಗೆ ತುಳಿದು ಎಡ ಕೈಯನ್ನು ಹಿಡಿದು ತಿರುಗಿಸಿರುವುದಲ್ಲದೆ, ಬಲ ಕೆನ್ನೆಗೆ ಉಗುರಿನಿಂದ ಗೀರಿ ಜೀವ ಬೆದರಿಕೆ ಹಾಕಿರುತ್ತಾರೆ.
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-205 ರಂದು ಮಧ್ಯಾಹ್ನ ಸಮಯ ಪಿರ್ಯಾದಿದಾರರದ ಶ್ರೀ ಪ್ರಭಾಕರನ್ ಚೆಟ್ಟಿಯರ್ ರವರು ಕೆಲಸ ಮುಗಿಸಿ ಎನ್ ಎಂ ಪಿ ಟಿ ಬಳಿಯಿಂದ ಕೆಎ.19.ಎಡಿ-1818ನೇ ನಂಬ್ರದ ಬಸ್ಸಿನಲ್ಲಿ ಮದ್ಯದಲ್ಲಿ ನಿಂತುಕೊಂಡು ಪ್ರಯಾಣಿಸುತ್ತಾ ಮದ್ಯಾಹ್ನ ಸುಮಾರು 03.00 ಗಂಟೆಗೆ ಎನ್ ಎಂ ಪಿ ಟಿ ಬಸ್ ಸ್ಟಾಪ್ ನಿಂದ ಮುಂದೆ ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಕೆಎ.19.ಎ.1010 ಟಿಪ್ಪರ್ ಲಾರಿಯೊಂದನ್ನ ಅದರ ಚಾಲಕ ಸ್ಯಮನ್ ಕೊರೆಯ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಬಸ್ ಗೆ ಹಿಂದಿನಿಂದ ಢಿಕ್ಕಿಪಡಿಸಿದ್ದಾಗ ಪಿರ್ಯಾದಿದಾರರು ಮುಂದಕ್ಕೆ ತಲ್ಲಪಟ್ಟು ಬಸ್ ನ ರಾಡೊಂದು ಮುಖಕ್ಕೆ ಎಡಕೆನ್ನಗೆ ಕಣ್ಣಬಳಿಗೆ ತಾಗಿ ಪಿರ್ಯಾದಿದಾರರು ಉಪಯೋಗಿಸುತ್ತಿದ್ದ ಕನ್ನಡಕ ಜಖಂಗೊಂಡು ಚಿಕಿತ್ಸೆಯ ಬಗ್ಗೆ ದಾಖಲಾಗಿ ಚಿಕಿತ್ಸೆಪಡೆದಿರುತ್ತಾರೆ. ಪಿರ್ಯಾಧಿದಾರರಿಗೆ ಚಿಕಿತ್ಸೆಯ ವೆಚ್ಚದ ಬಗ್ಗೆ ಆರೋಪಿ ಚಾಲಕನು ವೆಚ್ಚ ಭರಿಸುವುದಾಗಿ ತಿಳಿಸಿದ್ದು ನಂತರ ಆಸ್ಪತ್ರೆಗೊ ಬರದೆ ವೆಚ್ಚ ಭರಿಸದೇ ಸತಾಯಿಸಿದ್ದೂ ದೂರು ನೀಡಲು ವಿಳಂಬವಾಗಿರುತ್ತದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2015 ರಂದು ಸಂಜೆ ಸುಮಾರು 16-00 ಗಂಟೆಗೆ ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮದ ಚಂದ್ರಹಾಸ ನಗರ ಎಂಬಲ್ಲಿರುವ ಪಿರ್ಯಾಧಿದಾರರಾದ ಶ್ರೀ ದಲ್ಫಿ ಸುವಾರಿಸ್ ರವರ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಿ ಶೇಖ್ ಮೋನ್ @ ಐರೋಲಾ ಎಂಬಾತನು ಪಿರ್ಯಾಧಿದಾರರ ಅನುಮತಿ ಇಲ್ಲದೇ 4 ಅಡಿಕೆ ಮರಗಳನ್ನು ಕಡಿದು ಪಿರ್ಯಾದಿದಾರರಿಗೆ ನಷ್ಷವನ್ನುಂಟುಮಾಡಿರುತ್ತಾರೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-02-2015 ರಂದು ರಾತ್ರಿ 09-30 ಗಂಟೆ ಸಮಯಕ್ಕೆ ಆರೋಪಿತ ಜಗಧೀಶ ಮೂಲ್ಯ ರವರು ತನ್ನ ಬಾಬ್ತು 4 ಚಕ್ರ ಅಳವಡಿಸಿರುವ ಅಂಗವಿಕಲರು ಉಪಯೋಗಿಸುವ ಕೆಎ-19-ಎಫ್ಸಿ-9887 ನೇ ನಂಬ್ರದ ಸ್ಕೂಟರ್ ಮಾದರಿಯ ವಾಹನವನ್ನು ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಲ್ಲಾಪು ಎಂಬಲ್ಲಿ ನಿಯಂತ್ರಿಸಲಾಗದೆ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಆರೋಪಿತನು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ವರೂಪದ ಗಾಯಗೊಂಡು ಪ್ರಜ್ಞಾಹೀನನಾಗಿ ಯುನಿಟಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದವನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08-02-2015 ರಂದು ಸಂಜೆ 06-01 ಗಂಟೆಗೆ ಮೃತಪಟ್ಟಿರುವುದಾಗಿದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2015 ರಂದು ಸಂಜೆ ಸಮಯ ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಹನೀಫ್ ರವರು ಇಕ್ಬಾಲ್ರವರೊಂದಿಗೆ ಮೊಹಮ್ಮದ್ ಜಾಕೀರ್ ರವರ ಟಾಟಾ ಎಸಿಯಲ್ಲಿ ತಲಪಾಡಿಯಲ್ಲಿ ಡೀಸಿಲ್ ತುಂಬಿಸಿಕೊಂಡು ಬರುತ್ತಿರುವಾಗ ತಲಪಾಡಿ ಸೇತುವೆ ಬಳಿ ರಾತ್ರಿ ಸಮಯ ಸುಮಾರು 10-55 ಗಂಟೆಗೆ ಸುಮಾರು 07 ಜನರು ಮೂರು ಮೋಟಾರ್ ಸೈಕಲ್ನಲ್ಲಿ ಬಂದು ಪಿರ್ಯಾದುದಾರರ ಟಾಟಾ ಏಸ್ ವಾಹನವನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಮೋಟಾರ್ ಸೈಕಲ್ನಲ್ಲಿದ್ದ ಪಿರ್ಯಾದಿಯ ಪರಿಚಯವಿರುವ ತಲಪಾಡಿಯ ನಿವಾಸಿ ಪ್ರೇಮ ಮತ್ತು ಆತನ ಜೊತೆಗೆ ಇನ್ನಿಬ್ಬರು ಸೇರಿಕೊಂಡು ಪಿರ್ಯಾದುದಾರರ ಹತ್ತಿರ ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದುದಲ್ಲದೆ ನಿಂದಿಸಿ, ಅಲ್ಲಿಯೇ ಇದ್ದ ಜಲ್ಲಿ ಕಲ್ಲಿನಿಂದ ಹೊಡೆದಿದ್ದು ನಂತರ ಇನ್ನಿಬ್ಬರು ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದು ಈ ಹಲ್ಲೆ ನಡೆಸಿದ ಸಮಯ ಪಿರ್ಯಾದಿದಾರರ ಶರ್ಟ್ನ ಕಿಸೆಯಲ್ಲಿ ಇದ್ದ ರೂಪಾಯಿ 48 ಸಾವಿರ ನಗದು ಹಣ ಬಿದ್ದು ಹೋಗಿರುತ್ತದೆ.
No comments:
Post a Comment