Wednesday, February 4, 2015

Daily Crime Reports : 04-02-2015

ದಿನಾಂಕ 04.02.201518:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
4
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
2
ಇತರ ಪ್ರಕರಣ
:
1































1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ಬಸ್ಸು ನಂಬ್ರ KA-20-C-4727 ನೇ ದರ ಚಾಲಕ ಅಬ್ದುಲ್ ಸುಕುರ್ ಎಂಬವರು ಬೆಳಿಗ್ಗೆ 10:50 ಕ್ಕೆ ಮಂಗಳೂರಿನಿಂದ ಬಿಟ್ಟು ಬಸ್ಸನ್ನು ಚಲಾಯಿಸುತ್ತಾ ಬೆಳಿಗ್ಗೆ 11:30 ಗಂಟೆಗೆ ಕೊಲ್ನಾಡು ತಲುಪಿದಾಗ ಒಂದು ರಿಕ್ಷಾವನ್ನು  ಓವರ್ ಟೇಕ್ ಮಾಡಿಕೊಂಡು ಬಂದು 11:35 ಗಂಟೆಗೆ ಮುಲ್ಕಿ ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಒಂದು ಬೈಕ್  ನಂಬ್ರ: KA-19-EH-7083 ನೇ ದರಲ್ಲಿ ಬಂದ ಇಬ್ಬರು ಬಸ್ಸನ್ನು ತಡೆದು ನಿಲ್ಲಿಸಿ ಬಾರಿ ಓವರ್ ಟೇಕ್ ಮಾಡುತ್ತೀಯ  ಎಂದು ಅವಾಚ್ಯ ಶಬ್ದಗಳಿಂದ ಬೈದು, ಬಸ್ಸು ಚಾಲಕನ ಬಾಗಿಲು  ಎಳೆದು ಚಾಲಕ ಅಬ್ದುಲ್ ಸುಕುರ್ ಗೆ  ಕೈಯಿಂದ ಹೊಡೆದು ತುಳಿದು ಜೀವ ಬೆದರಿಕೆ ಹಾಕಿದಲ್ಲದೆ ನಂತರ ಬಂದ ರಿಕ್ಷಾದಲ್ಲಿದ್ದ 4 ಜನರಲ್ಲಿ 3 ಜನರು  ಬಸ್ಸಿನ ಬಾಲಿಗಿನಿಂದ ಒಳಗೆ ಬಂದ ಆರೋಪಿಗಳಾದ ರಿಕ್ಷಾ ಚಾಲಕರಾದ ವಿಲ್ಫೆಡ್ ಡಿ ಸೋಜಾ, ಸಂತೋಷ್ ಶೆಟ್ಟಿ, ಕಿಶೋರ್ ಪೂಜಾರಿ ಯವರು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಲಗೇಜಿನಿಂದ ಗುದ್ದಿ ಜೀವ ಬೆದರಿಕೆ  ಹಾಕಿರುತ್ತಾರೆ.

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ಬೆಳಿಗ್ಗಿನ ಜಾವ 03-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬೆಂಗ್ರೆ ಗ್ರಾಮದ ಅರಬ್ಬಿ ಸಮುದ್ರ ಮತ್ತು ಗುರುಪುರ ನದಿ ಕೂಡುವ ಸ್ಥಳವಾದ ಅಳಿವೆ ಬಾಗಿಲಿನ ಸಮುದ್ರದಲ್ಲಿ ಪಿರ್ಯಾದಿದಾರರಾದ ಶ್ರೀ ಸುರೇಶ್ ಅಮೀನ್ ರವರು ತನ್ನ ಜೊತೆಗಾರರೊಂದಿಗೆ ಸುವರ್ಣ ಸಪ್ತಮಿ ಎಂಬ ಬೋಟಿನಲ್ಲಿ ಮೀನು ಹಿಡಿಯುತ್ತಿದ್ದ ಸಮಯ ಬೋಟಿನಲ್ಲಿದ್ದ ಧನರಾಜ್ (32) ಎಂಬವರು ಪಿರ್ಯಾದಿದಾರರಲ್ಲಿ ಮೂತ್ರ ಮಾಡಿ ಬರುವುದಾಗಿ ಬೋಟಿನ ಹಿಂಬದಿಗೆ ಹೋದವರು ಮೂತ್ರ ಮಾಡುತ್ತಿದ್ದ ಸಮಯ ಸಮುದ್ರದ ಅಲೆಯ ಅಬ್ಬರಕ್ಕೆ ಬೋಟ್ ಜೋರಾಗಿ ಅಲುಗಾಡಿದ ಸಮಯ ಮೂತ್ರ ಮಾಡುತ್ತಿದ್ದ ಧನ್ ರಾಜ್ ರವರು  ಆಯಾ ತಪ್ಪಿ ಅಕಸ್ಮಾತ್ ಸಮುದ್ರದ ನೀರಿಗೆ  ಬಿದ್ದು  ಕಾಣೆಯಾಗಿರುತ್ತಾರೆ.

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2015 ರಂದು 13.30 ಗಂಟೆಗೆ  ಪಿರ್ಯಾದುದಾರರಾದ ಶ್ರೀ ಉಮೇಶ್ ಇಟಗಿ ರವರು ತಮ್ಮ ಬಾಬ್ತು ಮೊ ಸೈಕಲ್ ನಂಬ್ರ ಕೆ. 13-ಇಸಿ 0402 ನ್ನು ಹಂಪನಕಟ್ಟೆ ಕಡೆಯಿಂದ ಕಂಕನಾಡಿ ಕಡೆಗೆ ಹೋಗುವರೇ ಹೈಲ್ಯಾಂಡ ಆಸ್ಪತ್ರೆಯ ಎದರು ರಸ್ತೆಯಲ್ಲಿ ತಲಪುತ್ತಿದಂತೆ ಕಂಕನಾಡಿಕಡೆಯಿಂದ ಕಾರು ನಂಬ್ರ ಕೆ.19-ಎಂ.ಬಿ-8529 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗಿವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಹಾಗೂ ಪಿರ್ಯಾದುದಾರರ ಹಿಂದೆ ಬರುತ್ತಿದ್ದ ಮೊ  ಸೈಕಲ್ ನಂಬ್ರ ಕೆ.-19-ಇಸಿ-4038 ನೇದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಹಾಗೂ ಹಿಂದುಗಡೆ ಬರುತ್ತಿದ್ದ ಮೊ  ಸೈಕಲ್ ನಂಬ್ರ ಕೆ.-19-ಇಸಿ-4038 ನೇದರ ಸವಾರ ಹಾಗೂ ಹಿಂಬಂದಿ ಸವಾರರು ರಸ್ತೆಗೆ ಬಿದ್ದು ಈ ರಸ್ತೆ ಅಪಘಾತದಿಂದ ಪಿರ್ಯಾದುದಾರರಿಗೆ ಬಲ  ಭುಜಕ್ಕೆ ಗಂಭೀರ  ಸ್ವರೂಪದ ಗುದ್ದಿದ ನೋವು ಹಾಗೂ  ಬಲ ಕಾಲಿಗೆ ತರಚಿದ ಗಾಯವಾಗಿದ್ದು ಹಾಗು ಮೊ  ಸೈಕಲ್ ನಂಬ್ರ ಕೆ.-19-ಇಸಿ-4038 ನೇದರ ಸವಾರರಿಗೆ ಬಲ ಕಾಲಿನ ಮೊಣಗಂಟೆಗೆ ಹಾಗೂ ಬಲ ಕಾಲಿನ ಪಾದದ ಮೇಲಿನ ಗಂಟಿಗೆ  ಗುದ್ದಿದ ನೋವು ಉಂಟಾಗಿದ್ದು ಹೈಲ್ಯಾಂಡ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ  ಈ ಅಪಘಾತದಲ್ಲಿ  ಮೂರು ವಾಹನಗಳು ಜಖಂ ಆಗಿರುವುದಾಗಿದೆ.

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.02.2015 ರಂದು ಸಮಯ ಸುಮಾರು ಮದ್ಯಾಹ್ನ 12.30 ಗಂಟೆಗೆ ಫಿರ್ಯಾದುದಾರರಾದ ಶ್ರೀ ನಿತ್ಯಾನಂದ ಕೆ. ರವರು ತಮ್ಮ ಬಾಬ್ತು ಕಾರು ನಂಬ್ರ KA 41-M-686 ರಲ್ಲಿ  ಚಾಲಕರಾಗಿದ್ದುಕೊಂಡು ಕಾರನ್ನು  ಕಂಕನಾಡಿ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಪಂಪವೆಲ್ ಸರ್ಕಲ್ ನ ಸೇತುವೆಯ ಬಳಿ ತಲುಪುತ್ತಿದ್ದಂತೆ, ಫಿರ್ಯಾದುದಾರರ ಹಿಂದುಗಡೆಯಿಂದ  ಅಂದರೆ ತಲಪಾಡಿ ಕಡೆಯಿಂದ ಲಾರಿ ನಂಬ್ರ KA19-AA-5110 ರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿನ ಬಲಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಬಲಭಾಗ ಸಂಪೂರ್ಣ ಜಖಂ ಅಗಿರುತ್ತದೆ ಮತ್ತು ಫಿರ್ಯಾದುದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚಂದ್ರಶೇಖರ ಎಂಬವರು ತಾನು ಕೆಲಸ ಮಾಡುತ್ತಿರುವ ಮಂಗಳೂರು ತಾಲೂಕು ಮುಳೂರು ಗ್ರಾಮದ ಗುರುಪುರ ಬಾಲ ಸಂರಕ್ಷಣಾ ಕೇಂದ್ರದಲ್ಲಿದ್ದ ರವಿ 14 ವರ್ಷ ಎಂಬ ಬಾಲಕ ದಿನಾಂಕ: 02/02/2015 ರಂದು ರಾತ್ರಿ 8.00 ಗಂಟೆಗೆ ಊಟ ಮಾಡಿ ಕೈತೊಳೆಯಲು ಹೋದವನು ನಾಪತ್ತೆಯಾಗಿದ್ದು, ಈತನನ್ನು ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದವನ ಚಹರೆ ವಿವರ: ಹೆಸರು : ರವಿ ಪ್ರಾಯ : 14 ವರ್ಷ, ಎತ್ತರ : 5 ಅಡಿ 1 ಇಂಚು ಮೈಬಣ್ಣ : ಎಣ್ಣೆ ಕಪ್ಪು, ಧೃಢಕಾಯ ಶರೀರ, ಧರಿಸಿರುವ ಬಟ್ಟೆ : ಕೆಂಪು ಬನಿಯಾನ್ ಧರಿಸಿರುತ್ತಾನೆ. ಮಾತನಾಡುವ ಭಾಷೆ : ಕನ್ನಡ.

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02/02/2015 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಲ್ಲಯ್ಯ ರವರು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಮಳಲಿ ಮಟ್ಟಿ ಎಂಬಲ್ಲಿ ಹಿಟಾಚಿ ಯಂತ್ರದಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವಾಗ ಆರೋಪಿ ದೋಗ್ರ ಪೂಜಾರಿಯು ಸುಮಾರು 25-30 ಜನರೊಂದಿಗೆ ಬಂದು ಪಿರ್ಯಾದಿದಾರರನ್ನು ಹಿಟಾಚಿ ಸೀಟಿನಿಂದ ಕೆಳಗೆ ಇಳಿದು ಬರುವಂತೆ ಹೇಳಿದಾಗ ಪಿರ್ಯಾದಿದಾರರು ಕೆಳಗೆ ಇಳಿದು ಬಂದು ವಿಚಾರ ಕೇಳಿದಾಗ, ಆರೋಪಿ ದೋಗ್ರ ಪೂಜಾರಿ ಮತ್ತು ಇಬ್ಬರು ವ್ಯಕ್ತಿಗಳು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ  "ನಿನ್ ಕಂಪೆನಿಯವರಿಗೆ ಬಾಷೆ ಇಲ್ಲವಾ?, ನಾವು ಮೊನ್ನೆ ಎಚ್ಚರಿಕೆ ಕೊಟ್ಟರೂ ಕೆಲಸ ಆರಂಭ ಮಾಡಿದ್ದೀಯಾ, ನಿನಗೆ ಜೀವದಲ್ಲಿ ಆಸೆ ಇಲ್ಲವಾ?" ಎಂದು ಅವಾಚ್ಯ ಶಬ್ದಗಳಿಂದ ಬೈದು. ಕೈಗಳಿಂದ ಹೊಡೆದು, ನೆಲಕ್ಕೆ ದೂಡಿ ಹಾಕಿ, ಕಾಲುಗಳಿಂದ ತುಳಿದು ಹಲ್ಲೆ ಮಾಡಿದ್ದಲ್ಲದೇ, "ಇನ್ನು ಮುಂದಕ್ಕೆ ಇಲ್ಲಿ ಕೆಲಸ ಮಾಡಿದರೆ ಜಾಗೃತೆ" ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಹಲ್ಲೆಗೆ ಕಾರಣವೇನೆಂದರೆ ದಿನಾಂಕ: 31/01/2015 ರಂದು ಆರೋಪಿಗಳು ಹೆಚ್.ಪಿ.ಸಿ.ಎಲ್. ನವರ ಗ್ಯಾಸ್ ಪೈಪ್ ಲೈನ್ ಅಳವಡಿಸುವುದಕ್ಕೆ ಗ್ರಾಮಸ್ಥರ ವಿರೋಧ ಇದೆ. ಸೋಮವಾರದಿಂದ ಇಲ್ಲಿ ಕೆಲಸ ಮಾಡಬಾರದೆಂದು ಎಂದು ಹೇಳಿದ್ದರೂ ಪಿರ್ಯಾದಿದಾರರು ಕೆಲಸ ಮುಂದವರಿಸಿದ್ದರಿಂದ ಈ ಕೃತ್ಯ ನಡೆಸಿರುವುದಾಗಿದೆ.

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ರಾತ್ರಿ 8-05 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಶ್ರೀ ಗಣೇಶ್ ಬಬ್ಬಾ ರವರು ಮಂಗಳೂರು ನಗರದ ಪಾಂಡೇಶ್ವರ ಕಟ್ಟೆಯಲ್ಲಿರುವ ಪಾಂಡೇಶ್ವರ ನ್ಯೂರೋಡ್ ಜಂಕ್ಷನ್ ಬಳಿಯಲ್ಲಿ ಫಿರ್ಯಾದುದಾರರ ಮಕ್ಕಳಿಗಾಗಿ ಕಾಯುತ್ತಿದ್ದಾಗ, ಫಿರ್ಯಾದುದಾರರ ಹೆಂಡತಿ ಆರೋಪಿ 1 ನೇ ಶಶಿಕಲಾರವರು ಹಾಗೂ ಆರೋಪಿ 1 ನೇಯವರ ಮೊದಲನೆಯ ಗಂಡ ಮಗಳು ಆರೋಪಿ 3 ನೇ ಸೀಮಾ ರವರು, ಆರೋಪಿ 3 ನೇಯವರ ಗಂಡ, ಆರೋಪಿ 2 ನೇ ಶಶಿಕುಮಾರ್ ರವರುಗಳು ತಮ್ಮ ಕೈಯಲ್ಲಿ ಮಾರಾಕಾಯುಧಗಳನ್ನು ಹಿಡಿದುಕೊಂಡು ಬಂದು ಆರೋಪಿ 1 ನೇಯವರು ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು  "ನಿನನ್ ಕೆರಂದೆ ಬುಡಯೆ ಎಂದು ಕೇಳಿ ಆರೋಪಿ 1 ನೇಯವರ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಫಿರ್ಯಾದುದಾರರ ತಲೆಗೆ ಹೊಡೆಯಲು ಬಂದಾಗ, ಫಿರ್ಯಾದುದಾರರು ತಪ್ಪಿಸಿದ್ದರಿಂದ ಆ ಪೆಟ್ಟು ಬಲ ರಟ್ಟೆಗೆ ಬಿತ್ತು ಅಷ್ಟರಲ್ಲಿ ಆರೋಪಿ 1 ನೇಯವರ ಜೊತೆಯಲ್ಲಿದ್ದ ಆರೋಪಿ 2 ನೇಯವರು  "ಈ ಬದ್ಕ್ಯರೆ ಬಲ್ಲಿ ಮಗಾ" ಎಂದು ಹೇಳಿ ಆತನ ಕೈಯಲ್ಲಿದ್ದ ಚೂರಿಯಿಂದ ಫಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದುದಾರರ ಕುತ್ತಿಗೆಗೆ ಬಲವಾಗಿ ತಿವಿಯಲು ಬಂದಾಗ, ಫಿರ್ಯಾದುದಾರರು ಬಲಕೈಯನ್ನು ಅಡ್ಡ ಹಿಡಿದುದ್ದರಿಂದ ಬಲಕೈಯ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಪುನಃ ಆರೋಪಿ 2 ನೇಯವರು ಫಿರ್ಯಾದುದಾರರ ಕುತ್ತಿಗೆಗೆ ತಿವಿದಾಗ ಎಡ ಕೈಯನ್ನು ಅಡ್ಡ ಹಿಡಿದ್ದರಿಂದ ಫಿರ್ಯಾದುದಾರರ ಎಡಕೈಯ ಮೊಣಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ ಆ ಸಮಯದಲ್ಲಿ ಆರೋಪಿ 3 ನೇಯವರು ಆಕೆಯ ಕೈಯಲ್ಲಿದ್ದ ಜಲ್ಲಿ ಕಲ್ಲಿನಿಂದ ಮುಖಕ್ಕೆ, ದವಡೆಗೆ ಹೊಡೆದಿರುತ್ತಾಳೆ. ಇದರಿಂದ ಫಿರ್ಯಾದುದಾರರು ಬೊಬ್ಬೆ ಹೊಡೆದು ಕುಸಿದು ನೆಲಕ್ಕೆ ಬಿದ್ದಾಗ, ಆರೋಪಿ 1 ನೇಯವರು ಆಕೆಯ ಕೈಯಲ್ಲಿದ್ದ ಕಬ್ಬಿಣದ ರಾಡ್ನಿಂದ ಫಿರ್ಯಾದುದಾರರ ಎಡಕಾಲಿನ ಮೊಣಗಂಟಿಗೆ ಬಲವಾಗಿ ಯದ್ವಾತದ್ವ ಹೊಡೆದಿರುತ್ತಾಳೆ. ನಂತರ ಈ ಮೂವರು ಆರೋಪಿಗಳು ಸೇರಿ ಫಿರ್ಯಾದುದಾರರು ಬಿದ್ದಲ್ಲಿಗೆ ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಇದರಿಂದ ಫಿರ್ಯಾದುದಾರರ ಕಣ್ಣಿನ ಕೆಳ ಭಾಗಕ್ಕೆ ತರಚಿದ ಹಾಗೂ ಊದಿದ ಗಾಯವಾಗಿರುತ್ತದೆ. ಫಿರ್ಯಾದುದಾರರ ಬೊಬ್ಬೆ ಕೇಳಿ ದಾರಿಹೋಕರು ಹತ್ತಿರ ಬರುತ್ತಿದ್ದಂತೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಗೊಂಡ ಫಿರ್ಯಾದುದಾರರು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ರಾತ್ರಿ 7-50 ಗಂಟೆಗೆ ಫಿರ್ಯಾದುದಾರರಾದ ಕುಮಾರಿ ಕೃಪಾ ರವರು ತನ್ನ ತಾಯಿ, ತನ್ನ ಅಕ್ಕ ಹಾಗೂ ಅಕ್ಕನ ಗಂಡನವರೊಂದಿಗೆ ಜೊತೆಯಲ್ಲಿ ಪಾಂಡೇಶ್ವರ ಕಟ್ಟೆ ಬಳಿಯ ಅಂಗಡಿಯಿಂದ ಸಮಾನು ತರಲು ಹೋಗುತ್ತಿದ್ದಾಗ, ಪಾಂಡೇಶ್ವರ ನ್ಯೂ ರೋಡ್ ನಲ್ಲಿರುವ ಎನ್.ಟಿ.ಟಿ ಫ್ಲಾಟ್ ಬಳಿ ತಲುಪುತ್ತಿದ್ದಂತೆ ಸಮಯ ರಾತ್ರಿ 8-00 ಗಂಟೆ ವೇಳೆಗೆ ಫಿರ್ಯಾದುದಾರರ ತಂದೆ ಗಣೇಶ್ ಎಂಬಾತನು ಫಿರ್ಯಾದುದಾರರನ್ನು ಅವರೊಂದಿಗಿದ್ದ ಅವರ ತಾಯಿ, ಅಕ್ಕ ಮತ್ತು ಅಕ್ಕನ ಗಂಡನನ್ನು ಅಡ್ಡಗಟ್ಟಿ, ತಡೆದು ನಿಲ್ಲಿಸಿ, ಫಿರ್ಯಾದುದಾರರ ತಾಯಿಯನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದುದಾರರ ತಾಯಿಗೆ ಕೈಯಿಂದ ಮುಖಕ್ಕೆ ಹೊಡೆದನು. ಈ ಬಗ್ಗೆ ಫಿರ್ಯಾದುದಾರರು ಕೇಳಿದಾಗ "ನೀನು ಕೇಳಲು ಯಾರು?" ಎಂದು ಬೈದು ರಸ್ತೆ ಬದಿಯಲ್ಲಿದ್ದ ಜಲ್ಲಿ ಕಲ್ಲನ್ನು ತೆಗೆದು ಬಲ ಕಣ್ಣಿನ ಹುಬ್ಬಿಗೆ ಹೊಡೆದನು. ಅಷ್ಟರಲ್ಲಿ ಬಿಡಿಸಲು ಬಂದ ಫಿರ್ಯಾದುದಾರರ ಅಕ್ಕನನ್ನು ದೂಡಿ ಹಾಕಿದರು, ಫಿರ್ಯಾದುದಾರರಿಗೆ ಈ ಹಲ್ಲೆಯಿಂದ ರಕ್ತ ಗಾಯವಾಗಿರುತ್ತದೆ. ಇವರನ್ನು ಫಿರ್ಯಾದುದಾರರ ತಾಯಿ ಹಾಗೂ ಅಕ್ಕ ರವರನ್ನು  ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಿರುತ್ತಾರೆ.


09.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜೀವನ್ವಿಜಯಾನಂದ್ಗುರೂಜಿ ರವರು ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ನ್ಯೂಉಚ್ಚಿಲ ಎಂಬಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು, ಇವರು ದೇವರ ಧಾರ್ಮಿಕ ಕೆಲಸ ಕಾರ್ಯಗಳನ್ನು ಶೃದ್ಧೆಯಿಂದ ನಿರ್ವಹಿಸುತ್ತಿದ್ದು, ಇವರ ಬಳಿ ಬಂದಿರುವ ಕೆಲವು ಜನರ ಕಷ್ಪ ಕಾರ್ಪಣ್ಯಗಳಿಗೆ ಹಣದ ಅಪೇಕ್ಷೆ ಇಲ್ಲದೆ ಸ್ಪಂದಿಸುತ್ತಾ ಬಂದಿದ್ದು, ಇವರಿಂದ ಪ್ರಯೋಜನ ಪಡೆದಂತಹ ಕೆಲವು ಜನರು ಫಿರ್ಯಾದಿದಾರರಿಗೆ ಕೊಟ್ಟಂತಹ ಹಣದಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲಾ ಧರ್ಮದ ಹತ್ತಾರು ಬಡರೋಗಿಗಳಿಗೆ ಚಿಕಿತ್ಸೆ ಮತ್ತು ಕಣ್ಣಿನ ಅಪರೇಶನ್ಮತ್ತು ಕಿವಿ ಕೇಳದವರಿಗೆ ಕಿವಿ ಕೇಳುವ ಶಬ್ದ ಶ್ರವಣ ಸಾಧನವನ್ನು ಫಿರ್ಯಾದಿದಾರರು ಕೊಡುತ್ತಿದ್ದರು. ಮತ್ತು ದಿನಾಂಕ. 31-10-2014 ರಿಂದ 06-11-2014 ರ ವರೆಗಿನ "ಕುಡ್ಲ ತುಳು ಪತ್ರಿಕೆ" ಯ ಪಾಕ್ಷಿಕ ಪತ್ರಿಕೆಯಲ್ಲಿ ಫಿರ್ಯಾದಿದಾರರು ನೀಡಿದ ಸಂದರ್ಶನದಲ್ಲಿ " ದೇಯಿ ಬೈದೆದಿ ತೀರ್ದಿನಿ ಅತ್ತ್ ಕೆರ್ತಿನಿ" ಎಂಬ ಶೀರ್ಷಿಕೆಯಡಿ ಮುದ್ರಣಗೊಂಡ ಸಂದರ್ಶನದಲ್ಲಿ ಫಿರ್ಯಾದಿದಾರರು ಕೋಟಿ ಚೆನ್ನಯ್ಯರ ಐತಿಹಾಸದ ಕುರಿತು ತಿಳಿಸಿರುವುದನ್ನು ಸಹಿಸಲಾರದ ಆರೋಪಿಗಳಾದ 1)ಸುಧಾಕರ ಶೆಟ್ಟಿ @ ಜಿ.ವಿ.ಎಸ್.ಉಳ್ಳಾಲ ಧರ್ಮನಗರ 2)ಅವರ ಹೆಂಡತಿ ಪಡುಮಲೆಯ ಮೈಂದಡ್ಕದ ನಾರಾಯಣ ರೈಯ ಮಗಳು ವಿದ್ಯಾಶ್ರೀ ರೈ, 3)ಎಣ್ಮೂರು ದೀಕ್ಷಿತ್ ರೈ, 4) ಪ್ರದೀಪ್ಕುಮಾರ್ಶೆಟ್ಟಿ ಕೋಡು ಶಿರ್ವ ಇವರುಗಳು ಜೊತೆ ಸೇರಿಕೊಂಡು                            "ಗುರೂಜಿಯು ಒಬ್ಬ ಕಳ್ಳ, ಹಣ ಮಾಡಲು ಅವರು ಸುಳ್ಳು ಹೇಳುತ್ತಿದ್ದಾರೆ, ಅವರಿಗೆ ಏನೂ ಗೊತ್ತಿಲ್ಲ" ಎಂಬಿತ್ಯಾದಿ ಆರೋಪಗಳನ್ನು ಜನಜನರಲ್ಲಿ ಹೇಳಿಕೊಂಡು ಬಂದಿರುವುದಲ್ಲದೆ, ದಿನಾಂಕ.17-11-2014 ನೇ ಸೋಮವಾರದ "ಜಯಕಿರಣ" ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಿರುತ್ತಾರೆ. ಮತ್ತು ಜನರಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಬಂದಿರುತ್ತಾರೆ. 2014 ನೇ ನವೆಂಬರ್ತಿಂಗಳ ಕೊನೆಯ ವಾರದ ಒಂದು ದಿನ ಫಿರ್ಯಾದಿದಾರರು ವಿದ್ಯಾಶ್ರೀ. ಎಸ್. ರೈ ಮತ್ತು ಸುಧಾಕರ ಶೆಟ್ಟಿ ಯಾನೆ ಜಿ.ವಿ. ಎಸ್. ಉಳ್ಳಾಲ ಇವರುಗಳನ್ನು ಫಿರ್ಯಾದಿದಾರರ ನ್ಯೂಉಚ್ಚಿಲದ ಬೃಂದಾವನ ಎಂಬ ಮನೆಗೆ ಬರಮಾಡಿಸಿಕೊಂಡು ನಾಲ್ಕು ಮಂದಿಯ ಉಪಸ್ಥಿತಿಯಲ್ಲಿ ಅವರುಗಳಲ್ಲಿ "ಯಾಕಮ್ಮ ನೀವು ಹೀಗೆ ಮಾಡಿದ್ದೀರಾ" ಎಂದು ಅವರುಗಳಲ್ಲಿ ಸಮಾಧಾನದಲ್ಲಿ ಕೇಳಿದ್ದಕ್ಕೆ ಅವರು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಸಿದಲ್ಲದೆ ಮರುದಿನ "ಫೇಸ್ಬುಕ್‌" ಎಂಬ ಅಂತರ್ಜಾಲತಾಣದಲ್ಲಿ ಬರಹಗಳನ್ನು ಪ್ರಕಟಿಸಿದಲ್ಲದೆ, ಫಿರ್ಯಾದಿದಾರರ ಬಗ್ಗೆ ಅಪಪ್ರಚಾರದ ಪ್ರಕಟನೆಯನ್ನು ಪ್ರಕಟಿಸಿ ಫೇಸ್ಬುಕ್ಎಂಬ ಸಾಮಾಜಿಕ ಮಾಹಿತಿ ತಂತ್ರಜ್ಞಾನ ಜಾಲಗಳನ್ನು ದುರುಪಯೋಗ ಪಡಿಸಿರುತ್ತಾರೆ.

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 17.01.2015 ರಂದು ಫಿರ್ಯಾದಿದಾರರಾದ ಶ್ರೀ ಸುದೇಶಾ ರವರ ತಂದೆ ದಾಮೋಧರ ಜೆ ಯವರು ತಂದೋಳಿಗೆ ಜಂಕ್ಷನಿನ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಗಣೇಶ ಶೆಟ್ಟಿ ಎಂಬವರ ಬಾಬ್ತು  ಕಾರು  ನಂಬ್ರ: ಕೆಎ/19/ಟಿವಿಎಸ್‌‌ಎಲ್‌‌‌/281/13-14 ನೇ  ಹೊಸ ಮಾರುತಿ ಸುಜುಕಿ ಸ್ವೀಪ್ಟ್ಕಾರನ್ನು  ಗಣೇಶ ಶೆಟ್ಟಿ ಯವರ ಮಗ ಸುಖೇಶ ಶೆಟ್ಟಿ ಎಂಬಾತನು  ನಿರ್ಲಕ್ಷ್ಯ ತನದಿಂದ ಕಾರನ್ನು ಒಮ್ಮೆಲೇ ಹಿಂದಕ್ಕೆ ತೆಗೆದ ವೇಳೆ ಫಿರ್ಯಾದಿದಾರರ ತಂದೆ ದಾಮೋಧರ ಜೆ ಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಸೊಂಟಕ್ಕೆ ಮತ್ತು ಬಲ ಕೈಯ ಭುಜಕ್ಕೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 03.02.2015 ರಂದು ಬೆಳಿಗ್ಗೆ 9.07 ಗಂಟೆಗೆ ಮೃತಪಟ್ಟಿದ್ದಾಗಿದೆ.

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರು ಮತ್ತು ಆರೋಪಿತರು ನೆರೆಕರೆಯವರಾಗಿದ್ದು ಸದ್ರಿಯವರ ಮದ್ಯ ಜಾಗದ ವಿಷಯದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ OS ನಂಬ್ರ 259/11 ರಂತೆ ವ್ಯಾಜ್ಯವಿದ್ದು ಇದೇ ದ್ವೇಷದಿಂದ ದಿನಾಂಕ;02.02.2015 ರಂದು ರಾತ್ರಿ 08.45 ಗಂಟೆಯಿಂದ 9ಗಂಟೆ ಸಮಯದಲ್ಲಿ ಆರೋಪಿಯು ಪಿರ್ಯಾದುದಾರರ ಮನೆಯ ಬಳಿಗೆ ಬಂದು ಪಿರ್ಯಾದುದಾರರನ್ನು ಉದ್ದೆಶಿಸಿ ನೀವು ಮನೆ ಖಾಲಿ ಮಾಡದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಪಿರ್ಯಾದಿದಾರರ ಎರಡು ಹೂ ಕುಂಡಗಳನ್ನು ಬಿಸಾಡಿ ಹೊಡೆದು ಹಾಕಿದ್ದಲ್ಲದೆ, ಪಿರ್ಯಾದಿದಾರರ ಮನೆಯೊಳಗೆ ಅಕ್ರಮ ಪ್ರವೆಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಮಹಿಳೆಯಾದ ಪಿರ್ಯಾದಿದಾರರ ಮಾನ ಹಾನಿ ಮಾಡಿದ್ದಲ್ಲದೇ ಕೈಯಿಂದ ಗುದ್ದಿದ ಪರಿಣಾಮ ಪಿರ್ಯಾದಿದಾರರ ಎದೆಗೆ ನೋವು ಉಂಟಾಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

No comments:

Post a Comment