ದೈನಂದಿನ ಅಪರಾದ ವರದಿ.
ದಿನಾಂಕ 13.02.2015 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
8
|
ವಂಚನೆ ಪ್ರಕರಣ
|
:
|
2
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 12.02.2015 ರಂದು ಪಿರ್ಯಾದಿದಾರರಾದ ಶ್ರೀ ಚಿತ್ತರಂಜನ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ. 19 ಎಂಬಿ.7054 ನೇದನ್ನು ಮಂಗಳೂರು ನಗರದ ಲಾಲ್ ಬಾಗ್ - ಬಿಜೈ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಭಾರತ್ ಮಹಲ್ ಎಂಬಲ್ಲಿ ತಲುಪಿದ ಸಮಯ ಸಂಜೆ 16.15 ಗಂಟೆಗೆ ಭಾರತ್ ಮಾಲ್ ಎದುರುಗಡೆ ಸಿಗ್ನಲ್ ಬಿದ್ದುದರಿಂದ ಪಿರ್ಯಾದಿದಾರರು ಕಾರನ್ನು ನಿಲ್ಲಿಸಿ ನಂತರ ಹೋಗುವ ಸಿಗ್ನಲ್ ಬಿದ್ದಾಗ ಕಾರನ್ನು ಮುಂದಕ್ಕೆ ಚಲಾಯಿಸುತ್ತಿರುವ ಸಮಯ ಕಾರಿನ ಹಿಂದುಗಡೆ ಇದ್ದ ಕೆ ಎಸ್ ಆರ್ ಟಿ ಸಿ ಬಸ್ಸು ನಂಬ್ರ ಕೆ ಎಲ್ 15 8632ನೇದನ್ನು ಅದರ ಚಾಲಕ ಅಜಾಗರುಕತೆಯಿಂದ ಒಮ್ಮೆಲೇ ಮುಂದಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿನ ಎಡ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಜಖಂ ಉಂಟಾಗಿರುತ್ತದೆ.
2.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-02-2015 ರಂದು ಸಂಜೆ 6-00 ಗಂಟೆಯಿಂದ ದಿನಾಂಕ 09-02-2015 ರ ಬೆಳಿಗ್ಗೆ 8-00 ಗಂಟೆಯ ಮಧ್ಯೆ ಮಂಗಳೂರು ತಾಲೂಕಿನ ಬಜಪೆ ಗ್ರಾಮದ ತೊಟ್ಟಿಲ ಗುರಿ ಪುನರ್ವಸತಿ ಕಾಲನಿಯಲ್ಲಿ ಪುನರ್ವಸತಿ ಕಾಮಗಾರಿ ನಡೆಸುತ್ತಿದ್ದ ಸ್ಥಳದಿಂದ ಕಾಮಗಾರಿಗೆ ಬೇಕಾದ ಸಾಮಗ್ರಿಗಳಾದ ಕಾಂಕ್ರಿಟ್ ಹ್ಯಾಂಡ್ ಮಶಿನ್ -1, ಕಾಂಕ್ರಿಟ್ ಐರನ್ ಶಿಟ್ -1, ಸ್ಕೇಫ್ ಪೊಲ್ಡಿಂಗ್ ಹೀಗೆ ಸುಮಾರು 35000/- ರೂ ಬೆಲೆ ಬಾಳುವ ಸೊತ್ತುಗಳನ್ನು ಯಾರೊ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ.
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-02-2015ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಈ ಪಿರ್ಯಾಧಿದಾರರಾದ ಶ್ರೀ ಗೋವರ್ಧನ್ ಎಂಬವರು ಸವಾರರಾಗಿ ಲೋಕೇಶ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡಉ ಮಂಗಳೂರಿನಿಂದ ಮುಕ್ಕಕ್ಕೆ ಮೋಟಾರು ಸೈಕಲು ನಂಬ್ರ ಕೆಎ-19-ಇಇ-6658ನೇದರಲ್ಲಿ ಹೋಗುತ್ತಾ ಪಣಂಬೂರು ಸರ್ಕಲ್ ಬಳಿ ತಲುಪಿದಾಗ ಪೊಲೀಸರ ಸೂಚನೆಯಂತೆ ನಿಲ್ಲಿಸಿದಾಗ ಪಿರ್ಯಾಧಿದಾರರ ಮೋಟಾರು ಸೈಕಲಿನ ಹಿಂದಿನಿಂದ ಕೆಎ-19-ಎಮ್.ಡಿ-5409 ನಂಬ್ರದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರು ಮತ್ತು ಸಹ ಸವಾರರು ರಸ್ತೆಗೆ ಬಿದ್ದು, ಪಿರ್ಯಾಧಿದಾರರ ಎಡ ಕೈ ಮೂಳೆ ಮುರಿತವಾಗಿದ್ದು, ಸಹ ಸವಾರ ಲೋಕೇಶ್ ರವರು ಸೊಂಟಕ್ಕೆ ತೀವ್ರ ತರದ ಗಾಯವಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ.
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-02-2015 ರಂದು ಮದ್ಯಾಹ್ನ 03-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಸಾಪಿನ್ ತನ್ನ ಬಾಬ್ತು KA- 19 EF- 0460 ನೇ ದ್ವಿಚಕ್ರ ವಾಹನವನ್ನು ಸವಾರರಾಗಿ, ಅಬ್ದುಲ್ ಸಮದ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕಾವೂರು ರಸ್ತೆಯಲ್ಲಿ ಹೋಗುತ್ತಾ ಗಾಂಧಿ ನಗರ ಎಂಬಲ್ಲಿ ತಲುಪಿದಾಗ ಕೂಳೂರು ಕಡೆಯಿಂದ ಕಾವೂರು ಕಡೆಗೆ KA- 19 MC- 6304 ನಂಬ್ರದ ಕಾರನ್ನು ಅದರ ಚಾಲಕ ಶಶಿಧರ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಸಹಸವಾರ ಅಬ್ದುಲ್ ಸಮದ್ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಅಲ್ಪ ಪ್ರಮಾಣದ ಗಾಯವಾಗಿ ಸಹ ಸವರಾ ಅಬ್ದುಲ್ ಸಮದ್ ನಿಗೆ ಎಡಗಾಲಿನ ಮೂಳೆಮುರಿತದ ಗಾಯವಾಗಿದ್ದು ಈ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅಬ್ದುಲ್ ಸಮದ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರಗೆ ದಾಖಲಿಸಿರುವುದಾಗಿದೆ.
5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-02-2015 ರಂದು ರಾತ್ರಿ 09-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಣದೀಪ್ ಕಾಂಚನ್ ರವರು ಕಾವೂರು ಜಂಕ್ಷನ್ ನಲ್ಲಿರುವ ಸಮಯ ಪರಿಚಯದ ಚಂದ್ರಪಾಲ ಹೆಗ್ಡೆ ಎಂಬವರು ಕಾವೂರು ಜಂಕ್ಷನ್ ನಲ್ಲಿ ತನ್ನ ಮನೆಯ ಕಡೆಗೆ ಹೋಗುವರೇ ರಸ್ತೆ ದಾಟುತ್ತಿರುವಾಗ ಬೊಂದೆಲ್ ಕಡೆಯಿಂದ ಬಜ್ಪೆ ಕಡೆಗೆ ಆಟೋರಿಕ್ಷಾ ಕೆ ಎ 19 ಸಿ 2203 ಅದರ ಚಾಲಕ ಇಮ್ತಿಯಾಜ್ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಪರಿಚಯದ ಚಂದ್ರಪಾಲ್ ಹೆಗ್ಡೆ ಎಂಬವರಿಗೆ ಡಿಕ್ಕಿಹೊಡೆದ ಪರಿಣಾಮ ಚಂದ್ರಪಾಲ್ ಹೆಗ್ಡೆ ರವರು ರಸ್ತೆಗೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ರೀತಿಯ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 13-02-2015 ರಂದು ಮುಂಜಾನೆ 05-00 ಗಂಟೆಗೆ ಮೃತಪಟ್ಟಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರವೀಂದ್ರ ರವರ ಮಗ ಶ್ರಮಿತ್(20) ನು ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಎಟೆಂಡರ್ ಆಗಿ ಕೆಲಸ ಮಾಡುತ್ತಿದ್ದು, ಅದರಂತೆ ಮಗ ಶ್ರಮಿತ್ ನು ದಿನಾಂಕ. 10-2-2015 ರಂದು ಬೆಳಿಗ್ಗೆ 7-00 ಗಂಟೆಗೆ ತಲಪಾಡಿ ಗ್ರಾಮದ ನಾರ್ಲ ಪಡಿಲ್ ಎಂಬಲ್ಲಿರುವ ತನ್ನ ವಾಸ್ತವ್ಯದ ಮನೆಯಿಂದ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್‌ಗೆ ಕೆಲಸ ಮಾಡಲು ಹೋಗಿದ್ದು, ಅಂದು ಸಂಜೆ 5-00 ಗಂಟೆಗೆ ಶ್ರಮಿತ್ ನು ಆತನ ಮೊಬೈಲ್ ದೂರವಾಣಿಯಿಂದ ಫಿರ್ಯಾದಿದಾರರ ಮೊಬೈಲ್ ದೂರವಾಣಿಗೆ ಕರೆಮಾಡಿ ತನಗೆ ಆಫೀಸ್ನಲ್ಲಿ ನಿಲ್ಲಲು ಇದೆ, ತಾನು ಮನೆಗೆ ಬರುವಾಗ ತಡವಾಗುತ್ತದೆ ಎಂದು ತಿಳಿಸಿದನು. ಆದರೆ ಶ್ರಮಿತ್ ನು ಕೆಲಸ ಮುಗಿಸಿ ಎಂದಿನಂತೆ ಮನೆಗೆ ಬಾರದೇ ಇದ್ದುದನ್ನು ಕಂಡು ಫಿರ್ಯಾದಿದಾರರು ಆತನ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಪ್ ಬರುತ್ತಿತ್ತು. ಮತ್ತು ಆತನು ಕೆಲಸ ಮಾಡುತ್ತಿರುವಲ್ಲಿ ವಿಚಾರಿಸಿದಾಗ ಆತನು ಕೆಲಸ ಪೂರೈಸಿ ಹೊರಟು ಹೋಗಿರುತ್ತಾನೆ ಎಂದು ತಿಳಿದು ಬಂದಿದ್ದು, ನಂತರ ಫಿರ್ಯಾದಿದಾರರು ತಮ್ಮ ಸಂಬಂಧಿಕರ ಮನೆ, ಹಾಗೂ ಶ್ರಮಿತ್ನ ಸ್ನೇಹಿತರಲ್ಲಿ ವಿಚಾರಿಸಿ ತಿಳಿದುಕೊಂಡರೂ ಆತನು ಈ ತನಕ ಎಲ್ಲಿಯೂ ಪತ್ತೆಯಾಗದೇ ಇರುವುದಾಗಿದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2015 ರಿಂದ ಆರೋಪಿತ ಜಮ್‌ಶೆದ್ ಎಂಬುವನು ಪಿರ್ಯಾದುದಾರರಾದ ಶ್ರೀ ಫಾರೂಕ್ ಅಹಮ್ಮದ್ ಎನ್. ಖಾನ್ ರವರ ಬಾಬ್ತು ಟಾಟಾ ಕಂಪನಿಯ ಟ್ರಕ್ ನಂಬ್ರ HR-55-L-8760 ನೇದರ ಚಾಲಕನಾಗಿದ್ದು ದಿನಾಂಕ 07-02-2015 ರಂದು ಸಂಜೆ 16-00 ಗಂಟೆಗೆ ಹರಿಯಾಣದಿಂದ ಅಕ್ಕಿಯ ಲೋಡ್ನ್ನು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪಿನಲ್ಲಿರುವ ಸೂಪರ್ ಮಾರ್ಕೆಟ್‌ಗೆ ತೆಗೆದುಕೊಂಡು ಬಂದು ಲೋಡ್ ಖಾಲಿ ಮಾಡಿ ನಂತರ ಬಾಡಿಗೆಯ ಹಣ 54,000 ರೂ.ಗಳನ್ನು ಪಡೆದುಕೊಂಡು ನಂತರ ಪಿರ್ಯಾದುದಾರರಿಗೆ ಕರೆ ಮಾಡಿದಾಗ ಪಿರ್ಯಾದುದಾರರು ತಿಳಿಸಿದಂತೆ ಬೆಳಗಾವಿ ಆಫೀಸಿಗೆ ಖಾಲಿ ಗಾಡಿಯನ್ನು ವಾಪಾಸು ತರುವುದಾಗಿ ಒಪ್ಪಿಕೊಂಡು ಹೇಳಿ ನಂತರ ಬೆಳಗಾವಿಯ ಆಫೀಸಿಗೂ ಬಾರದೇ ಸುಮಾರು 5 ದಿನಗಳ ತಬನಕ ಆತನ ಮೊಬೈಲ್ ದೂರವಾಣಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆರೋಪಿತನು ಪಿರ್ಯಾದುದಾರರ ಸುಮಾರು 15,00,00 ಬೆಲೆಬಾಳುವ ಟ್ರಕ್ನ್ನು 54,000 ರೂಪಾಯಿ ನಗಧು ಹಣದೊಂದಿಗೆ ಕದ್ದು ಪರಾರಿಯಾಗಿ ಪಿರ್ಯಾದುದಾರರಿಗೆ ನಂಬಿಕೆ ದ್ರೋಹ ಮತ್ತು ವಂಚನೆಯನ್ನು ಮಾಡಿರುವುದಾಗಿದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುತ್ತಾರ್ ಪರಿಸರ ಸಿಯಾದ ಜೀವನ್‌ರಾಜ್ ಕುತ್ತಾರ್ ಎಂಬವನು ದೇಶದ 125 ಕೋಟಿ ಜನ ಭಾರತೀಯರು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆರಿಸಿದಂತಹ ದೇಶದ ಘನವೆತ್ತ ಪ್ರಧಾನಿಯಾದ ಮಾನ್ಯ ಶ್ರೀ ನರೇಂದ್ರ ಮೋದಿಯವರನ್ನು ಇತ್ತೀಚೆಗೆ ನಡೆದ ದಿಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಅಂತರ್ಜಾಲ ತಾಣಗಳಲ್ಲಿ ದಿಲ್ಲಿ ನಿಯೋಜಿತ ಮುಖ್ಯಮಂತ್ರಿ ಶ್ರೀ ಅರವಿಂದ ಕ್ರೇಜಿವಾಲ್ರವರು ಭೇಟೆಯಾಡಿದ ರೀತಿಯಲ್ಲಿ ಒಂದು ಕೈಯಲ್ಲಿ ಕೋವಿಯನ್ನು ಹಿಡಿದು ಇನ್ನೊಂದು ಕೈಯಲ್ಲಿ ಯಾವುದೋ ಒಂದು ಪ್ರಾಣಿ ಜೀವದ ಮುಖಕ್ಕೆ ಪ್ರಧಾನಿಯವರ ಮುಖವನ್ನು ಜೋಡಣೆ ಮಾಡಿ ದೇಶಕ್ಕೆ ಅವಮಾನ ಮಾಡಿದಲ್ಲದೆ, ದೇಶದ 125 ಕೋಟಿ ಜನ ಭಾರತೀಯರ ಭಾವನೆಗಳನ್ನು ಘಾಸಿಗೊಳಿಸುವಂತೆ ಮಾಡಿದ್ದಾನೆ. ಸದ್ರಿ ಅಂತರ್ಜಾಲ ಚಿತ್ರವು ದಿನಾಂಕ 11-02-2015 ರ ರಾತ್ರಿ 12-45 ಗಂಟೆಗೆ ವಾಟ್ಸಪ್ ಪೊಸಕುರಲ್ ಗ್ರೂಫ್‌ನಿಂದ ಜೀವನ್‌ರಾಜ್ ಕುತ್ತಾರ್- ಮೊಬೈಲ್ ದೂರವಾಣಿ ನಂಬರಿನಿಂದ ಪಿರ್ಯಾದುದಾರರ ಮೊಬೈಲ್ ದೂರವಾಣಿಗೆ ಬಂದಿರುತ್ತದೆ.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-02-2015 ರಿಂದ ಹಿಂದೆ ನಾಲ್ಕೈದು ತಿಂಗಳ ನಡುವೆ ಆರೋಫಿಗಳಾದ ಆಂಕುರ್ ಭಾಟಿಯಾ, ನೈನಾ ಸಿಘಾನಿಯಾ ಹಾಗೂ ವಿಕಾಸ್ ಗುಪ್ತಾ ಎಂಬವರು ಫಿರ್ಯಾದಿದಾರರಾದ ಶ್ರೀ ಎಂ. ಅನಂತ್ ಪ್ರಭು ರವರ ಮೊಬೈಲಿಗೆ ಬೇರೆ ಬೇರೆ ಮೊಬೈಲಿನಿಂದ ಕರೆಗಳನ್ನು ಮಾಡಿ ತಮ್ಮನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಬೆಂಗಳೂರಿನಿಂದ ಕರೆ ಮಾಡುತ್ತಿರುವುದಾಗಿಯೂ ಫಿರ್ಯಾದಿದಾರರಿಗೆ ಲೋನ್ ಹಾಗೂ ಓಡಿ ಸೌಲಭ್ಯ ಒದಗಿಸುವುದಾಗಿ ತಿಳಿಸಿ ರೂ 1,05,000/- ಹಾಗೂ ರೂ. 50000/- ದ ಎರಡು ಚೆಕ್ಕುಗಳನ್ನು ಪಡೆದು ದೆಹಲಿಯ ಬೋಗಸ್ ಅಕೌಂಟಿಗೆ ಹಾಕಿ ವಂಚನೆ ಮಾಡಿದ್ದಾಗಿದೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.02.2015 ರಂದು ಫಿರ್ಯಾದಿದಾರರಾದ ಶ್ರೀ ಹಸನ್ ರವರು ತನ್ನ ಸಂಬಂದಿಕರ ಬೈಕ ನಂಬ್ರ ಕೆಎ-19-ಇಹೆಚ್-4185 ರಲ್ಲಿ ತನ್ನ ಹೆಂಡತಿ ಅಕ್ಕ ಶಂಶಾದರವರನ್ನು ಕುಳ್ಳಿರಿಸಿಕೊಂಡು ಬೆಳಿಗ್ಗೆ 10.30 ಗಂಟೆಗೆ ಅಡ್ಯಾರನಿಂದ ವಳಚ್ಚಿಲ್ ಕಡೆಗೆ ಹೋಗುವರೇ ಸೋಮನಾಥ ಕಟ್ಟೆ ಹತ್ತಿರ ಬಲಗಡೆಯ ಇಂಡಿಕೇಟರ ಹಾಕಿಕೊಂಡು ನಿಂತಿರುವಾಗ ಹಿಂದುಗಡೆಯಿಂದ ಅಂದರೆ ಅಡ್ಯಾರ ಕಡೆಯಿಂದ ಕೆಎ-19-ಇಇ-4376 ನೇ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅದರ ಚಾಲಕರು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಶಂಶಾದರೊಂದಿಗೆ ಬೈಕ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ನನ್ನ ತಲೆಗೆ ರಕ್ತಗಾಯ,ಬಲ ಕಣ್ಣಿನ ಮೇಲ್ಬಾಗದ ಹಾಗೂ ಬಲ ಕೆನ್ನೆಗೆ ರಕ್ತಗಾಯ ಎಡಕಾಲಿನ ಪಾದದ ಮೇಲಿನ ಗಂಟಿನ ಬಳಿ ರಕ್ತಗಾಯವಾಗಿ ಶಂಶಾದರವರಿಗೆ ಎಡಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಕೆಎ-19-ಇಇ-4376 ಬೈಕ ಸವಾರರು ಪಿರ್ಯಾದಿದಾರರ ಮತ್ತು ಶಂಶಾದ್ರವರ ಆಸ್ಪತ್ರೆ ಚಾರ್ಜ ಕೊಡುತ್ತೇನೆಂದು ಹೇಳಿದ್ದು ಈಗ ಕೊಡಲು ನಿರಾಕರಿಸುತ್ತೀರುವುದರಿಂದ ಪಿರ್ಯಾದಿಯನ್ನು ತಡವಾಗಿ ಕೊಟ್ಟದ್ದಾಗಿರುತ್ತದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.02.2015 ರಂದು ಫಿರ್ಯಾದಿದಾರರಾದ ಶ್ರೀ ಸ್ಟೀಫನ್ ವಿನೋದ್ ಕರಕಡ ರವರು ತನ್ನ ಅಣ್ಣನ ಬೈಕ ನಂಬ್ರ KA-19-EL-0843 ನೇದರಲ್ಲಿ ತಂಗಿಯನ್ನು ಹಿಂಬದಿ ಸವಾರರಾಗಿದ್ದಕೊಂಡು ಬೆಳಿಗ್ಗೆ 07.30 ಗಂಟೆಗೆ ವೀರನಗರ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಸಮಯ ವೀರನಗರದ ಪೇರ್ಲದ ಅಗ್ರೀಕಲ್ಚರ ಗೇಟನ ಎದರುಗಡೆ ರಸ್ತೆಯಲ್ಲಿ ತಲುಪುತ್ತಿದ್ಸಂತೆ ಎದುರುಗಡೆಯಿಂದ ಅಂದರೆ ಜಲ್ಲಿಗುಡ್ಡೆ ಕಡೆಯಿಂದ ಕೆಎ-19-ಇಎಂ-0566 ಯಮಹಾ ಎಫ್ ಝಡ್ ಬೈಕನ ಸವಾರರಾದ ವೈಶಾಕರವರು ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯೀಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಬಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿದಾರರು ಹಾಗೂ ಅವರ ಹಿಂಬದಿ ಸವಾರರಾದ ಶ್ರೀಮತಿ ಶೆರ್ಲಿನ ರವರು ಸ್ಕೂಟರ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈ ಕಿರುಬೆರಳು,ಉಂಗುರ ಬೆರಳು ಹಾಗೂ ಮಧ್ಯದ ಬೆರಳಿಗೆ ಮೂಳೆ ಮುರಿತದ ಗುದ್ದಿದ ನೋವು, ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು ಹಾಗೂ ಬಲ ಕಾಲಿನ ಪಾದ ಮತ್ತು ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ.ಫಿರ್ಯಾದಿದಾರರ ತಂಗಿ ಶೆರ್ಲಿನ ರವರ ಬಲಕಾಲಿನ ಕಿರುಬೆರಳಿಗೆ ರಕ್ತಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ನೊವುಂಟಾಗಿರುತ್ತದೆ, ಅಪಘಾತ ಮಾಡಿದ ಬೈಕ ಸವಾರರು ಕೂಡಾ ಬೈಕ ಸಮೇತ ರಸ್ತೆಗೆ ಬಿದ್ದುದರಿಂದ ಎರಡು ಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜಗದೀಶ ಶೆಟ್ಟಿ ರವರು ಮಂಗಳೂರು ನಗರದ ನಾಗೂರಿಯಲ್ಲಿರುವ ಕರ್ನಾಟಕ ಸರ್ಕಾರಿ ಸ್ವಾಮ್ಯದ MSL ಮಳಿಗೆಯಲ್ಲಿ ಡಾಟಾ ಎಂಟ್ರ ಅಪರೇಟರಾಗಿ ಕೆಲಸ ಮಾಡುತ್ತಿದ್ದು ಇವರೊಂದಿಗೆ ADEO ಗಳಾಗಿ ಸತೀಶ್ ಕುಮಾರ ಶೆಟ್ಟಿ ಮತ್ತು ಮೋಹನ ಕೆ ಯವರ ಕೂಡಾ ಕೆಲಸ ಮಾಡುತ್ತಿದ್ದು ಪ್ರತಿದಿನದಂತೆ ದಿನಾಂಕ: 11.02.2015 ರಂದು ಇವರುಗಳು ಸದ್ರಿ ಮಧ್ಯ ಮಾರಾಟ ಮಳಿಗೆಯನ್ನು ಶೇಟರ್ ಎಳೆದು ಬೀಗ ಹಾಕಿ ಹೋಗಿದ್ದು, ನಂತರ ಬೆಳಿಗ್ಗೆ 6 ಗಂಟೆ ಸಮಯಕ್ಕೆ ಪಕ್ಕದ ಹೋಟೆಲ ಮಾಲೀಕರು ಇವರ ಮಧ್ಯ ಮಳಿಗೆಯ ಬೀಗ ಮುರಿದದ್ದನ್ನು ನೋಡಿ ಪೋನ ಮಾಡಿದ್ದು ಅದರಂತೆ ಫಿರ್ಯಾದಿದಾರರು ಕೂಡಲೇ ಬಂದು ನೋಡಿದಾಗ ಯಾರೋ ಕಳ್ಳರು ಮಧ್ಯದಂಗಡಿಯ ಶೇಟರ ಬೀಗ ಹೊಡೆದು ಸೆಂಟರ ಲಾಕ್ ಗಾಡ್ರೆಜ್ ಮುರಿದು ಮಧ್ಯದಂಗಡಿಯೊಳಗೆ ಪ್ರವೇಶಿಸಿ ಅಂಗಡಿಯೊಳಗಿನ ಅಲ್ಮೇರಾದೊಳಗೆ ದಾಸ್ತಾನು ಮಾಡಿದ್ದ 1) 750 ml Blenders Pride Whisky-4 2)750 ml DSP Whisky-12 3)750 ml Royal Stag Whisky-10 4)750 ml DSP Blake Whisky-9 5)750 Ml Deva red Wine-2 ಒಟ್ಟು 37 ಮಧ್ಯದ ಬಾಟಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ 19.575.66 ಪೈಸೆ ಆಗಿರುತ್ತದೆ. ಅದಲ್ಲದೇ ಅಕ್ಕಪಕ್ಕದ ಅಂಗಡಿಗಳ ಕಳುವಿಗೆ ಪ್ರಯತ್ನಿಸಿರುತ್ತಾರೆ.
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09.02.2015 ರಂದು ಸಂಜೆ 6.45 ಕ್ಕೆ ಮಂಗಳೂರು ನಗರದ ಶಕ್ತಿನಗರದಲ್ಲಿನ ಪಿರ್ಯಾದಿದಾರರಾದ ಶ್ರೀ ನಿತಿನ್ ರಾಜ್ ರವರ ಮಾವ ಪ್ರಭಾಕರ ಬಂಡಾರಿ ಎಂಬವರ ಕಂಪೌಂಡನೊಳಗೆ ಫಿರ್ಯಾದಿದಾರರು ತನ್ನ ಬಾಬ್ತು ಕೆಎ-19-ಇಎ-3039 ನೇ ದ್ವಿ ಚಕ್ರ ವಾಹನ (ಬಜಾಜಪಲ್ಸರ್ ಮೋಟಾರ ಸೈಕಲ ಕಪ್ಪು ಬಣದ್ದು) ವನ್ನು ನಿಲ್ಲಿಸಿ ಅಲ್ಲೇ ಇರುವ ತನ್ನ ಮನೆಗೆ ಹೋಗಿದ್ದು ದಿನಾಂಕ 10.02.2015 ರ ಬೆಳಿಗ್ಗೆ ಸುಮಾರು 5 ಗಂಟೆಗೆ ಎಂದಿನಂತೆ ಪಿರ್ಯಾದಿದಾರರ ತಂದೆ ಸೀತಾರಾಮರವರು ನೋಡಿದಾಗ ಸದ್ರಿ ಮೋಟಾರ ಸೈಕಲ್ ಕೆಎ-19-ಇಎ-3039 ಕಾಣಿಸದೆ ಇದ್ದು ಎಲ್ಲಾ ಕಡೆ ಹುಡುಕಿ ನೋಡಿದ್ದು ಸಿಕ್ಕಿರುವುದಿಲ್ಲ ದಿನಾಂಕ 09.02.2015 ರ ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 18.000/ ಆಗಿರುತ್ತದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.02.2015 ರಂದು ಸಂಜೆ ಸುಮಾರು 6.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶೇಖರ್ ಎಸ್. ಪೂಜಾರಿ ಎಂಬುವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-21 ಆರ್-9875 ರಲ್ಲಿ ಸಹ ಸವಾರ ವಿನಯ್ ಎಂಬವನನ್ನು ಕುಳ್ಳರಿಸಿಕೊಂಡು ಸಾರ್ವಜನಿಕ ರಸ್ತೆಯಾದ ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಕಡೆಗೆ ಹೋಗುವರೇ ಮೋಟಾರ್ ಬೈಕ್ ನ್ನು ಸವಾರಿ ಮಾಡುತ್ತಾ ವಾಮಂಜೂರು ಚರ್ಚ್ನ ಎದುರುಗಡೆ ತಲುಪುತಿದ್ದಂತೆ ಫಿರ್ಯಾದಿದಾರರ ಎಡಬದಿಯಲ್ಲಿ ಕೆಎ-19 ಇಎಚ್-2208 ನೇ ಸ್ಕೂಟರ್ನ್ನು ಅದರ ಸವಾರಳು ಸವಾರಿ ಮಾಡಿಕೊಂಡು ಹೋಗುತ್ತಾ ಯಾವುದೇ ಸೂಚನೆ ನೀಡದೇ ಒಂದೇ ಸವನೆ ಅವರ ಸ್ಕೂಟರ್ನ್ನು ರಸ್ತೆಯ ಬಲಭಾಗಕ್ಕೆ ನಿರ್ಲಕ್ಷತನದಿಂದ ಸವಾರಿ ಮಾಡಿ ಫಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಸಹ ಸವಾರರು ರಸ್ತೆಗೆ ಎಸೆಯಲ್ಪಟ್ಟು ಫಿರ್ಯಾದಿದಾರರ ಸೊಂಟಕ್ಕೆ ಗುದ್ದಿದ ನೋವು, ಎಡ ಭುಜಕ್ಕೆ ಮತ್ತು ಎಡಕೈಗೆ ರಕ್ತ ಗಾಯ ಎಡ ಕಾಲಿನ ಮೊಣಗಂಟು ಹಾಗೂ ಎಡ ಕಾಲಿನ ಬೆರಳಿಗೆ ರಕ್ತಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ರಕ್ತ ಗಾಯವುಂಟಾಗಿದ್ದು ಫಿರ್ಯಾದಿದಾರರಾದ ಶೇಖರ್ ಎಂಬುವವರು ಚಿಕಿತ್ಸೆಯ ಸಲುವಾಗಿ ಮಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.02.2015 ರಂದು ಸಂಜೆ ಸುಮಾರು 3.45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ ರವರ ತಂದೆ-ತಾಯಿಯವರು ಅಡ್ಯಾರ್ ಪರಿಸರದಲ್ಲಿ ಕೂಲಿ ಕೆಲಸವನ್ನು ಮುಗಿಸಿ ಫರಂಗಿಪೇಟೆ ಎಂಬಲ್ಲಿ ಮೀನು ಮಾರ್ಕೆಟ್ ನ ಬಳಿ ತಾತ್ಕಾಲಿಕ ಟೆಂಟ್ನ್ನು ಹಾಕಿಕೊಂಡಿದ್ದು ಈ ಟೆಂಟ್ಗೆ ಬರಲು ಅಡ್ಯಾರ್ ಸತ್ಯ ಸೌಧ ಕಟ್ಟಡದ ಬಳಿ ರಾ.ಹೆದ್ದಾರಿಯನ್ನು ದಾಟಲು ಡಿವೈಡರ್ ಬಳಿ ನಿಂತ್ತುಕೊಂಡಿದ್ದಾಗ ಒಂದು ಮೋಟಾರ್ ಸೈಕಲ್ ಸವಾರನು ಮಂಗಳೂರು ಕಡೆಯಿಂದ ಬಿ ಸಿ ರೋಡ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ಡಿವೈಡರ್ ಬಳಿ ನಿಂತ್ತುಕೊಂಡಿದ್ದ ಫಿರ್ಯಾದಿದಾರರ ತಾಯಿ ರುದ್ರಮ್ಮ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಬಲ ಕೈಗೆ ಗುದ್ದಿದ ಗಾಯವುಂಟಾಗಿದ್ದು ಸ್ಕೂಟರ್ ನಂಬ್ರ ನೋಡಲಾಗಿ ಅದು ನೊಂದಣಿ ಸಂಖ್ಯೆಯಾಗದ ಹೊಸ ಆಕ್ಟೀವಾ ಜುಪಿಟರ್ ಮೋಟಾರ್ ಸೈಕಲ್ ಆಗಿದ್ದು ಸವಾರನ ಹೆಸರನ್ನು ಕೇಳಲಾಗಿ ನೆಲ್ಸನ್ ಜಾನ್ಸನ್ ಡಿಸೋಜ ಆಗಿರುತ್ತದೆ. ಸದ್ರಿ ಗಾಯಾಳು ಚಿಕಿತ್ಸೆಗಾಗಿ ಪಂಪವೆಲ್ನ ಇಂಡಿಯನ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಚಿಕಿತ್ಸೆಗೆ ಹಣವನ್ನು ಒದಗಿಸಲು ಅಸಾಧ್ಯವಾದುದರಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
No comments:
Post a Comment