Wednesday, February 18, 2015

Daily Crime Reports : 18-02-2015

ದೈನಂದಿನ ಅಪರಾದ ವರದಿ.

ದಿನಾಂಕ 18.02.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

4

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:16-02-2015ರಂದು ರಾತ್ರಿ 9.00ಗಂಟೆ ಸಮಯಕ್ಕೆ ಕೊಲ್ಲೂರು ಗ್ರಾಮದ ಪಿರ್ಯಾದಿದಾರರಾದ ಶ್ರೀ ಜೋನ್ ಸನ್ ಡಿ'ಸೋಜಾ ರವರ ಅಣ್ಣ ಆರೋಪಿ ವಿಲ್ಫ್ಡ್ರೆಡ್  ಡಿ"ಸೊಜಾ  ಎಂಬವರು  ಮನೆಯ ಬಳಿ ಗುಡ್ಡೆಯಲ್ಲಿ ಅಕೇಶಿಯಾ ಮರದ ಕೊಂಬೆಗೆ ನೈಲಾನ್ ಬೆಲ್ಟನ್ನು ಕಟ್ಟಿ ಅದರ ಸಹಾಯದಿಂದ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಲ್ಳು ಪ್ರಯತ್ನ ಪಟ್ಟಿದ್ದು, ಚಿಕಿತ್ಸೆಗಾಗಿ ಮಂಗಳೂರು ನಗರದ .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.02.2015 ರಂದು ಸಮಯ ಸುಮಾರು ಸಂಜೆ 7.15 ಗಂಟೆಗೆ ಆಟೋ ಟೆಂಪೂ ನಂಬ್ರ KA19-B-8029  ಚಾಲಕನು ನಂದಿಗುಡ್ಡೆ ಕಡೆಯಿಂದ ಮಂಗಳಾದೇವಿ ಕಡೆಗೆ ಟೆಂಪೋವನ್ನು  ಅತೀ ವೇಗ ಮತ್ತು ಅಜಾಗರೂಕತೆಯಿಂದ   ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲಾಯಿಸಿಕೊಂಡು ಬಂದು ತೃಪ್ತಿ ಹೋಟೆಲ್ ಎದುರು ತಲುಪಿದಾಗ ಎದುರಿನಿಂದ  ಅಂದರೆ ಜೆಪ್ಪು ಕಡೆಯಿಂದ ಬರುತ್ತಿದ್ದ ಸ್ಕೂಟರ್ ನಂಬ್ರ KA19-EJ-8345 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೂಟರ್ ಸವಾರ ರಾಜಯ್ಯ ಎಂಬುವರು ಸ್ಕೂಟರ್ ಸಮೇತ  ರಸ್ತೆಗೆ ಬಿದ್ದು ಬಲಕೈಗೆ ಮೂಳೆಮುರಿತದ ಗುದ್ದಿದ ನೋವು, ಬಲಭುಜಕ್ಕೆ  ಗುದ್ದಿದ ನೋವು ಮುಖದ ಬಲಭಾಗಕ್ಕೆ  ರಕ್ತಗಾಯ ,ಎಡಕಿವಿಯ ಬಳಿ ರಕ್ತಗಾಯ ಉಂಟಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.  

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.02.2015 ರಂದು ಸಮಯ ಸುಮಾರು ಮದ್ಯಾಹ್ನ  12.15  ಗಂಟೆಗೆ  ಮೊಟಾರ್ ಸೈಕಲ್  ನಂಬ್ರ KA19-EG-8630   ನ್ನು ಕ್ಲಾಕ್ ಟವರ ಕಡೆಯಿಂದ ಟೌನ್ ಹಾಲ್ ಕಡೆಗೆ ಅತೀ  ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಟೌನ್ ಹಾಲ್ ಎದುರುಗಡೆ ರಸ್ತೆಯಲ್ಲಿ, ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಅಪ್ಪು ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯ ಎದೆಯ ಎಡಭಾಗಕ್ಕೆ ಗುದ್ದಿದ ನೋವು ,ಸೊಂಟಕ್ಕೆ ಗುದ್ದಿದ ನೋವು  ಮತ್ತು ಮುಖದ ಎಡಭಾಗಕ್ಕೆ ರಕ್ತಗಾಯ ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.

 

4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-02-2015ರಂದು ಬೆಳಿಗ್ಗ 10:00 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಯಮುನಪ್ಪ ವಾಯ್.ಟಿ. ರವರು ಕುಳಾಯಿ ಗ್ರಾಮದ ರಾಹೆ-66  ಮೆಟ್ರೋ ಮಾರ್ಬಲ್  ಎಂಬ ಗ್ರಾನೈಟ್ ಅಂಗಡಿ ಬಳಿ ಕೆಎ-20-ಬಿ-2388 ನಂಬ್ರದ ಟೆಂಪೋವನ್ನು ರಿವರ್ಸ್ ತೆಗೆಯುವ ಸಲುವಾಗಿ ನಿಲ್ಲಿಸಿ ನೋಡುತಿದ್ದ ಸಮಯ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಎಮ್.ಸಿ-0673 ನಂಬ್ರದ ಮಾರುತಿ ರಿಟ್ಜ್ ಕಾರನ್ನು ಅದರ ಚಾಲಕಿ ಪೂರ್ಣಿಮಾ ಶೆಟ್ಟಿಯವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಟೆಂಪೋದ ಮುಂಭಾಗದ ಬಲ ಬದಿಗೆ ಡಿಕ್ಕಿ ಪಡಿಸಿ ಅಲ್ಲಿಂದ ಮುಂದಕ್ಕೆ ಚಲಿಸಿ ಅಲ್ಲೇ ಬಳಿ ಇರಿಸಿದ ಗ್ರಾನೈಟ್ ಕಲ್ಲುಗಳು ಜಖಂಗೊಂಡಿದ್ದು ಪಿರ್ಯಾಧಿದಾರರ ಟೆಂಪೋಗೆ ಸುಮಾರು 25000/-ದಷ್ಟು ಮತ್ತು 2,,50,000/- ರೂಪಾಯಿಯಷ್ಟು ಮೌಲ್ಯದ ಗ್ರಾನೈಟ್ ಕಲ್ಲುಗಳು ಜಖಂ ಗೊಂಡು ನಷ್ಟವುಂಟಾಗಿರುತ್ತದೆ.

 

5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-02-2015 ರಂದು ಬೆಳಿಗ್ಗೆ ಸುಮಾರು 09:00 ಗಂಟೆ ಸಮಯಕ್ಕೆ ಜೋಕಟ್ಟೆ ಕಡೆಯಿಂದ ಬೈಕಂಪಾಡಿ ಕಡೆಗೆ ಪಿ.ಟಿ.ಸಿ ಎಂಬ ನಾಮಫಲಕವಿರುವ ಕೆಎ-19-ಎಡಿ-5977 ನಂಬ್ರದ ಬಸ್ಸನ್ನು ಅದರ ಚಾಲಕ ಉಮ್ಮರ್ ಫಾರೂಕ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಾಯಿಸಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ಬಸ್ಸು ನಿಲ್ದಾಣದ ಸಮೀಪವಿರುವ ವಿದ್ಯುತ್ ವಿತರಣ ಪರಿವರ್ತಕಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅದು ಜಖಂಗೊಂಡು ಸುಮಾರು 85,000/- ರೂಪಾಯಿಯಷ್ಟು ನಷ್ಟ ಸಂಭವಿಸಿರುತ್ತದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 16-2-2015 ರಂದು ಮದ್ಯಾಹ್ನ 12-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ಭಜನಾ ಮಂದಿರದ ಬಳಿಯ ವಾಸಿ ನವೀನ್ರವರು ಮನೆಯಿಂದ ಹೊರಗೆ ಹೋದವರು ಅದೇ ದಿನ ಸಂಜೆ 3-30 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ರಾಜ್ಕಿರಣ್ ರವರ ಮೊಬೈಲ್ದೂರವಾಣಿಗೆ ನವೀನ್ನವರು ತನ್ನ ಮೊಬೈಲ್ದೂರವಾಣಿಯಿಂದ ಕರೆಮಾಡಿ ತುಂಬಾ ಬೇಸರದಿಂದ ಇನ್ನು ಮುಂದೆ ತಂದೆ ತಾಯಿಯವರನ್ನು ನೀನು ಚೆನ್ನಾಗಿ ನೋಡಿಕೊಳ್ಳಬೇಕು. ನಾನು ಇನ್ನು ಇರುವುದಿಲ್ಲ ಎಂದು ಹೇಳಿ ಆತನು ಇರುವ ಸ್ಥಳವನ್ನು ಹೇಳಿರುವುದಿಲ್ಲ.  ನಂತರ ಆತನ ಮೊಬೈಲ್ಕನೆಕ್ಷನ್ಸಿಗದೇ ಇದ್ದು, ಬಳಿಕ ಫಿರ್ಯಾದಿದಾರರು ತನ್ನ ಇನ್ನೊಬ್ಬ ಅಣ್ಣ ಪ್ರಶಾಂತ್ಮತ್ತಿತರರು ಸೇರಿಕೊಂಡು ನವೀನ್ರವರನ್ನು ಹುಡುಕಾಡಿದ್ದಲ್ಲಿ ನವೀನ್ ರವರು ಉಪಯೋಗಿಸುತ್ತಿದ್ದ ಕೆಎ.19.ಇಜೆ.1498 ನೇ ಯಮಾಹಾ ಎಫ್ಜಡ್ ಮೋಟಾರ್ ಬೈಕ್ಸೋಮೇಶ್ವರ ದೇವಸ್ಥಾನದ ಬಲಬದಿಯಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ಇದ್ದು, ಆದರೆ ನವೀನ್ಎಲ್ಲಿಯೂ ಸಿಗದೇ ಇದ್ದುದನ್ನು ಕಂಡು ಅವರನ್ನು ಆಸುಪಾಸು, ಸಂಬಂಧಿಕರ ಮನೆ, ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿ ತಿಳಿದುಕೊಂಡರೂ ಆತನು ಪತ್ತೆಯಾಗದೇ ಕಾಣೆಯಾಗಿದ್ದು, ದಿನಾಂಕ. 17-2-2015 ರಂದು  ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 17-2-2015 ರಂದು ರಾತ್ರಿ 12-30 ಗಂಟೆಯ ಹೊತ್ತಿಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಒಂಭತ್ತುಕೆರೆ ಮೆರಿಡಿಯನ್ಕಾಲೇಜ್ಸಮೀಪದಲ್ಲಿ ಲ್ಯಾಂಡ್ಮಾರ್ಕ್  ಬಿಲ್ಡರ್ಸ್ನವರು ನಿರ್ಮಿಸುತ್ತಿರುವ ಹೊಸ ಕಟ್ಟಡದ ಬಳಿ ತಾತ್ಕಾಲಿಕ ಶೆಡ್ನಲ್ಲಿ ವಾಸವಾಗಿರುವ ಫಿರ್ಯಾದಿದಾರರಾದ ಶ್ರೀ ನಿಂಗರಾಜ್ರವರ ಕೋಣೆಯ ಬಾಗಿಲನ್ನು ಆರೋಪಿ ಮಲ್ಲೇಶ ಮತ್ತಿತರರು ಬಡಿದು ಕೂಗಿ ಕರೆದ ನಂತರ, ಅವರ ಪಕ್ಕದ ಕೋಣೆಯ ಶಿವಾನಂದರವರ ಕೋಣೆಯ ಬಾಗಿಲನ್ನು ಬಡಿದು ಅವರನ್ನು ತುಂಬಾ ಸಲ ಕರೆದಾಗ ಶಿವಾನಂದರ ಪತ್ನಿ ಗುಳಿಗವ್ವ @ ಶಿಲ್ಪ ರವರು ಬಾಗಿಲು ತೆರೆದಾಗ ಆರೋಪಿ ಮಲ್ಲೇಶ ಮತ್ತಿತರರು ಅವರ ಕೋಣೆಗೆ ಅಕ್ರಮ ಪ್ರವೇಶ ಮಾಡಿ ಶಿವಾನಂದ ರವರನ್ನು ಹೊರಗೆ ಎಳೆದುಕೊಂಡು ಹೋಗುತ್ತಿದ್ದಾಗ ಆತನ ಹೆಂಡತಿ ಮಲ್ಲೇಶ ಮತ್ತಿತರರಲ್ಲಿ ಯಾಕೆ ತನ್ನ ಗಂಡನನ್ನು ಎಳೆದುಕೊಂಡು ಹೋಗುತ್ತೀರಿ ಎಂದು ಕೂಗಿ ಕೇಳಿದಾಗ ಅವರುಗಳು ಆಕೆಯಲ್ಲಿ ನಿನ್ನ ಗಂಡನಿಗೆ ಭಾರೀ ಅಹಂಕಾರ ಇದೆ, ಆತನನ್ನು ವಿಚಾರಿಸಲು ಇದೆ,  ನೀನು ವಿಚಾರದಲ್ಲಿ ಹೆಚ್ಚೇನು ಮಾತನಾಡಿದರೆ ನಿನ್ನನ್ನು ಮತ್ತು ನಿನ್ನ ಗಂಡನನ್ನು ಸಾಯಿಸುತ್ತೇನೆ ಎಂದು ಬೆದರಿಸಿ ಆರೋಪಿಗಳು ಅವರು ಬಂದಿರುವ ಕಾರಿನಲ್ಲಿ ಶಿವಾನಂದನನ್ನು ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.02.2015 ರಂದು ಬೆಳಿಗ್ಗೆ ಸುಮಾರು 10.00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಸುಮಂಗಳ ಬಾಳಿಗ ರವರ ತಾಯಿ ಶ್ರೀಮತಿ ವಿನಯ ನಯನ ಬಾಳಿಗ ಎಂಬವರು ಮಂಗಳೂರು ನಗರಕ್ಕೆ ಹೋದವರು ದಿನಾಂಕ; 17.02.2015 ರಂದು ಬೆಳಿಗ್ಗೆ 08.00 ಗಂಟೆಯಾದರೂ ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ  ಕಾಣೆಯಾಗಿರುವುದಾಗಿದೆ. ಕಾಣೆಯಾದ ಹೆಂಗಸಿನ ಚಹರೆ ಮತ್ತು ವಿವರ : 1. ಹೆಸರು-ವಿನಯ ನಯನ ಬಾಳಿಗ, 2. ಪ್ರಾಯ-50 ವರ್ಷ, 3. ಕೆಲಸ-ಮನೆವಾರ್ತೆ, 4. ಮೈಬಣ್ಣ -ಬಿಳಿ ಸಪೂರ ಶರೀರ, ಸಾದರಣ ಮೈಕಟ್ಟು, ಕಪ್ಪು ಬಣ್ಣದ ತಲೆ ಕೂದಲು, 5. ಉಡುಪು-ಹಸಿರು ಬಣ್ಣದ ಸೀರೆ, ಕಿವಿಗೆ ಹಾಗೂ ಕುತ್ತಿಗೆಗೆ ಆಭರಣ ಹಾಗೂ  ಕನ್ನಡಕವನ್ನು ಮತ್ತು ಕೆಂಪು ಬಣ್ಣದ ಬ್ಯಾಗ್ಧರಿಸಿರುತ್ತಾರೆ. 6. ಮಾತನಾಡುವ ಭಾಷೆ - ಕೊಂಕಣಿ, ಕನ್ನಡ, ತುಳು

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14.02.2015 ರಂದು ಸಂಜೆ ಸುಮಾರು 5.00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಪ್ರಕಾಶ್ ಪುರುಷ ರವರು ತನ್ನ ಬಾಬ್ತು KA-19 EG-5046 ನೇ ನಂಬ್ರದ ಮೋಟಾರ್ಸೈಕಲ್ನಲ್ಲಿ ಅವರ ಗೆಳೆಯ ರವಿ ಫೆರ್ನಾಂಡಿಸ್ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳರಿಸಿಕೊಂಡು ಬೆಂಜಿನಪದವು ಕಡೆಯಿಂದ ನೀರುಮಾರ್ಗ್ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ನೀರುಮಾರ್ಗ್ಬಳಿಯ ಫೆರ್ಮಂಕಿ ಚರ್ಚ್ಬಳಿ ತಲುಪುತ್ತಿದ್ದಂತೆ ಒಳ ರಸ್ತೆಯಿಂದ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೆ ಮುಖ್ಯ ರಸ್ತೆಗೆ ಪ್ರವೇಶಿಸಿ ಫಿರ್ಯಾದಿದಾರರ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಸಹ ಸವಾರ ರವಿ ಫೆರ್ನಾಂಡಿಸ್ರವರು ಬೈಕ್ಸಮೇತ ರಸ್ತೆಗೆ ಬಿದ್ದು ಫಿರ್ಯದಿದಾರರ ಎಡ ಭುಜಕ್ಕೆ, ಎಡ ಕಾಲು ಮಣಿಗಂಟಿಗೆ, ಬೆನ್ನಿಗೆ ಹಾಗೂ ರವಿ ಫೆರ್ನಾಡಿಸ್ರವರ ಎಡ ಭುಜಕ್ಕೆ ಗುದ್ದಿದ ತೀವೃ ತರಹದ ಗಾಯಗೊಂಡಿರುವುದಲ್ಲದೇ ಆರೋಪಿ ದ್ವಿಚಕ್ರ ವಾಹನದ ಸವಾರನು ಅಪಘಾತದ ಸಮಯ ಸದ್ರಿ ಗಾಯಾಳುಗಳ ವೈಧ್ಯಕೀಯ ವೆಚ್ಚವನ್ನು ಭರಿಸುವುದಾಗಿ ಫಿರ್ಯದುದಾರರಲ್ಲಿ ಮೊಬೈಲ್ನಂಬ್ರ ನೀಡಿ ಭರವಸೆ ಕೊಟ್ಟಿದ್ದು ಇದುವರೆಗೂ ಯಾವುದೇ ವೈಧ್ಯಕೀಯ ವೆಚ್ಚವನ್ನು ನೀಡಿರುವುದಿಲ್ಲ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  17.02.2015 ರಂದು ಶ್ರೀಮತಿ ರೂಪಿನಿಯವರು ನೀಡಿದ ಅರ್ಜಿಗೆ ಸಂಬಂದಿಸಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಸಿಬ್ಬಂದಿಯವರಾದ ಫಿರ್ಯಾದಿದಾರರಾದ ಶ್ರೀ ಬಂದೆ ನವಾಜ್ ಬಿರಾದಾರ್ ರವರನ್ನು ಹಾಗೂ ಪಿಸಿ 544 ನೇಯವರನ್ನು ಆಪಾಧಿತ ಮಾರ್ಷಲ್ ಮಾನೇಜಸ್, ಪಚ್ಚನಾಡಿ ಮಂಗಳೂರು ಎಂಬವರಿಗೆ ಪೊಲೀಸ್ ನೋಟಿಸ್ ಜ್ಯಾರಿ ಮಾಡುವರೇ  ಕಳುಹಿಸಲಾಗಿದ್ದು, ಅದರಂತೆ ಸದ್ರಿ ಸಿಬ್ಬಂದಿಯವರು ಅರ್ಜೀದಾರರೊಂದಿಗೆ ಆರೋಪಿತರ ಮನೆ ಬಳಿಗೆ ಹೋಗಿ ಫಿರ್ಯಾದಿದಾರರು ಆರೋಪಿಗೆ ಪೊಲೀಸ್ ನೋಟಿಸ್ ನೀಡಲು ಹೋದಾಗ ಸದ್ರಿ ಆರೋಪಿ ಮಾರ್ಷಲ್ ಮಾನೇಜಸ್, ಪಚ್ಚನಾಡಿ ಮಂಗಳೂರು ಎಂಬವನು ಪಿರ್ಯಾದಿದಾರರ ಕೈಯಿಂದ ಪೊಲೀಸ್ ನೋಟಿಸನ್ನು ಎಳೆದುಕೊಂಡು  ಹರಿದು ಬಿಸಾಡಿ, ಪೊಲೀಸ್ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರ ಶರ್ಟ್ಕಾಲರನ್ನು ಹಿಡಿದು ಎಳೆದಾಡಿ ದೂಡಿ ಹಾಕಿದ್ದಲ್ಲದೇ ಪಿರ್ಯಾದಿದಾರರನ್ನು, ಪಿಸಿ 544 ನೇಯವರನ್ನು ಉದ್ದೇಶಿಸಿ "ನಿಮ್ಮ ಪೊಲೀಸ್ ನೋಟಿಸಿಗೆ ಯಾರು ಹೆದರುತ್ತಾರೆ ? ಎಂಬಿತ್ಯಾದಿಯಾಗಿ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಅರ್ಜಿದಾರರಾದ ಶ್ರೀಮತಿ ರೂಪಿನಿ ಎಂಬವರಿಗೂ ಅವಾಚ್ಯ ಶಬ್ದಗಳಿಂದ ಬೈದು ಮಾನಕ್ಕೆ ಕುಂದುಂಟು  ಮಾಡಿರುತ್ತಾರೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.02.2015 ರಂದು ರಾತ್ರಿ ಸುಮಾರು 7-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಮಣಿಕಂಠ ರವರು ಬಸ್ಸು ಕೆಎ-19-ಎಬಿ-5727 ನೇಯದನ್ನು ಚಲಾಯಿಸಿಕೊಂಡು ಬರುತ್ತಾ ಸ್ಕೂಟರೊಂದನ್ನು ವಾಮಂಜೂರು ಜಂಕ್ಷನ ಸಮೀಪ ಓವರ್ ಟೇಕ್ ಮಾಡಿದಾಗ ಎದುರುಗಡೆಯಿಂದ ಸೈಫು ಎಂಬುವನು ಇನ್ನೊಬ್ಬನನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಬೈಕ್ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಬೈದಿದ್ದು, ನಂತರ ಸದ್ರಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ವಾಮಂಜೂರು ಭವಿಷ್ಯನಿಧಿ ಕ್ವಾಟ್ರಸ್ ಎದುರುಗಡೆ ರಸ್ತೆಯಲ್ಲಿ ಪಿರ್ಯಾದುದಾರರು ಚಲಾಯಿಸುತ್ತಿದ್ದ 3 ಸಿಟಿ ಬಸ್ಸನ್ನು ತಡೆದು ನಿಲ್ಲಿಸಿ. ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ನಂತರ ಮುಂದುವರೆದು, ಇದೇ ದಿನ ದಿನಾಂಕ 17.02.2015 ರಂದು ರಾತ್ರಿ ಸುಮಾರು 9-30 ಗಂಟೆ ವೇಳೆಗೆ ಸದ್ರಿ ಸೈಫುದ್ದೀನನು ಶಿವನಗರ ಎಂಬಲ್ಲಿ ದೊಂಬಿ ನಡೆಸುವ ಉದ್ದೇಶದಿಂದ ಆತನ ಕೆಲವು ಜನರನ್ನು ಒಟ್ಟಿಗೆ ಸೇರಿಸಿಕೊಂಡು ಪಿರ್ಯಾದುದಾರರು ಚಾಲಕನಾಗಿರುವ ಸಾರ್ವಜನಿಕ ಸ್ವತ್ತಾದ ಸಿಟಿ ಬಸ್ಸು ಕೆಎ-19-ಎಬಿ-5727 ನೇಯದಕ್ಕೆ ಕಲ್ಲೆಸೆದು, ಬಸ್ಸಿನ ಹಿಂಬದಿ ಗಾಜನ್ನು ಜಖಂಗೊಳಿಸಿ ಸುಮಾರು 1.000/- ರೂಪಾಯಿಗಳಷ್ಟು ನಷ್ಟವುಂಟು ಮಾಡಿರುತ್ತಾನೆ.

No comments:

Post a Comment