Thursday, February 5, 2015

Daily Crime Reports : 05-02-2015

ದೈನಂದಿನ ಅಪರಾದ ವರದಿ.
ದಿನಾಂಕ 05.02.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0
 
 
 
 
 
 
 
 
 
 
 
 
 
 
 
 
 
 
 
 
 
 
 

1.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-2015 ರಂದು ಪಿರ್ಯಾದುದಾರರಾದ ಶ್ರೀ ಖಲಂದರ್ ಇರ್ಷಾಧ್ ರವರು ತನ್ನ  ಬಬ್ತು ಕೆ.. 19 ಡಿ 3062  ನೇ ನೀರಿನ ಟ್ಯಾಂಕರ್ ನ್ನು ಚಲಾಯಿಸಿಕೂಂಡು ಬಜಪೆ ಕಡೆಯಿಂದ ಕಳವಾರು ಕಡೆಗೆ ಹೋಗುತ್ತಿರುವಾಗ ಓಡ್ಡಿದಕಳ ಎಂಬಲ್ಲಿಗೆ ಮಧ್ಯಾಹ್ನ  12-00 ಗಂಟೆಗೆ  ತಲುಪುವಾಗ ಎದುರಿನಿಂದ ಅಂದರೆ ಕಳವಾರು ಕಡೆಯಿಂದ ಬಜಪೆ  ಕಡೆಗೆ ಬರುತ್ತಿದ್ದ  ಟಿಪ್ಪರ್ ವಾಹನ ಸಂಖ್ಯೆ  ಕೆ. 37 – 6637  ನೇ ದರ ಚಾಲಕನು ಎದುರಿನಿಂದ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ಒವರ್ ಟೇಕ್ ಮಾಡಿ ಬಂದಾಗ ಪಿರ್ಯಾದಿದಾರರ ಟ್ಯಾಂಕರನ್ನು  ರಸ್ತೆಯ ಬಲ ಬದಿಗೆ ತನ್ನ ರಕ್ಷಣೆಗಾಗಿ ತಿರುಗಿಸಿದಾಗ  ಒವರ್ ಟೇಕ್ ಮಾಡಿದ ಟಿಪ್ಪರ್ ವಾಹನವು ಡಿಕ್ಕಿ ಹೊಡೆದು ಪಿರ್ಯದಿದಾರರ ಎಡಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿರುವುದದಲ್ಲದೇ ಎಡಕಾಲಿನ ಪಾದದ ಬಳಿ ಜಖಂ ಆಗಿದ್ದು  ಹಾಗೂ ಟ್ಯಾಂಕರ್ ನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು ಟಿಪ್ಪರ್ ಹೆಡ್ಡ ಲೈಟ್ ಮತ್ತು ಸೈಡ್ ಮಿರರ್  ತುಂಟಾಗಿರುತ್ತದೆ. ಹಾಗೂ ತಪ್ಪಿಸಲು ಹೋದಾಗ ಎದುರಿನಿಂದ ಬಂದ ಕೆಎ 04 – 9443 ನೇದ ಟಿಪ್ಪರ್ ನ ಮುಂಭಾಗ ಜಖಂ ಆಗಿರುತ್ತದೆ. ಈ ಕೃತ್ಯಕ್ಕೆ ಕೆಎ 37 – 6637 ನೇ ಚಾಲಕನ  ಅತಿ ವೇಗ ಮತ್ತು ಅಜಾಗೂರುಕತೆಯ ಚಾಲನೆ ಕಾರಣವಾಗಿರುತ್ತದೆ.
 
2.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.02.2015 ರಂದು ಬೆಳಗ್ಗೆ 10.30 ಗಂಟೆ ವೇಳೆಗೆ ಪಿರ್ಯಾದುದಾರರಾದ ಶ್ರೀ ಸಚಿನ್ ಕುಮಾರ್ ರವರು ಬೈಕ ನಂಬ್ರKA-19-EG-1087 ನ್ನು ಚಲಾಯಿಸಿಕೊಂಡು ಕುಲಶೇಖರ ಕಡೆಯಿಂದ ಗುರುಪುರ ಕಡೆಗೆ ಹೋಗುತ್ತ ವಾಮಂಜೂರು ಪೆಟ್ರೋಲ್ ಬಂಕ್ ಎದುರುಗಡೆ ತಲುಪುವಾಗ ಪೆಟ್ರೋಲ್ ಬಂಕ್ಕಡೆಯಿಂದ KA-04-MA-5944 ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದುದಾರರ ಮರ್ಮಾಂಗಕ್ಕೆ ಗುದ್ದಿದ ನೋವು ಆಗಿದ್ದು ಅವರನ್ನು ಆರೋಪಿ ಕಾರು ಚಾಲಕನು ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದ ಪಿರ್ಯಾದುದಾರರು ತನಗಾದ ನೋವು ಸಾಮಾನ್ಯದಂದು ಮನೆಗೆ ಹೋಗಿದ್ದು ರಾತ್ರಿ ಗಾಯವು ಉಲ್ಬನಗೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ಕೋಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
 
3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.02.2015 ರಂದು ಪಿರ್ಯಾದುದಾರರಾದ ಶ್ರೀ ಹರಿಕೃಷ್ಣಾ ರವರು ಅವರ ತಂದೆಯೊಂದಿಗೆ ವಾಯುವಿಹಾರದ ಬಗ್ಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 9.15 ಗಂಟೆ ವೇಳೆಗೆ ಶ್ರೀನಿವಾಸ ಮಲ್ಯ ಲೇಔಟ್ ನ 5ನೇ ಮೇನ್ ರಸ್ತೆ ಹತ್ತೀರ ತಲುಪಿದಾಗ ಅಲ್ಲಿಯ ರಸ್ತೆ ಬದಿಯಲ್ಲಿ ಐದು ಜನರು ಬಿಯರ್ಗಳನ್ನು ಕುಡಿಯುತ್ತಿದ್ದುದನ್ನು ನೋಡಿ ತಮ್ಮಷ್ಟಕ್ಕೆ ಮಾತಾಡಿಕೊಂಡು ಮುಂದಕ್ಕೆ ಹೋದಾಗ ಸದ್ರಿ ಐದು ಜನರು ಪಿರ್ಯಾದಿ ಮತ್ತು ಅವರ ತಂದೆಯ ಬಳಿಗೆ ಬಂದು ಅವರಿಬ್ಬರನ್ನು ತಡೆದು ನಿಲ್ಲಿಸಿ ನಮ್ಮನ್ನು ಏನು ನೋಡುವದು ಎಂಬಿತ್ಯಾದಿಯಾಗಿ ಬೈದುದಲ್ಲದೆ, ಒಬ್ಬನು ಕೈಯಿಂದ ಪಿರ್ಯಾದುದಾರರ ಕೆನ್ನೆಗೆ ಹೊಡೆದಿದ್ದು ಇನ್ನೊಬ್ಬನು ಹೆಲ್ಮೆಟ್ನಿಂದ ಪಿರ್ಯಾದುದಾರರ ತಲೆಗೆ ಹೊಡೆದಿರುತ್ತಾನೆ. ಅಲ್ಲದೆ ಐದು ಜನ ಆರೋಪಿಗಳು ಪಿರ್ಯಾದುದಾರರನ್ನು ಹಿಡಿದು ಎಳೆದಾಡಿ ಶರ್ಟನ್ನು ಹರಿದು ನೆಲಕ್ಕೆ ಬೀಳಿಸಿ ಕಾಲುಗಳಿಂದ ತುಳಿದಿದ್ದು ಆರೋಪಿಗಳು ನಡೆಸಿದ ಹಲ್ಲೆಯಿಂದ ಪಿರ್ಯಾದಿದಾರರ ತಲೆಗೆ ನೋವಾಗಿದ್ದಲ್ಲದೆ ಬಲಕೈ ಮದ್ಯದ ಬೆರಳಿಗೆ ಮತ್ತು ಕುತ್ತಿಗೆಯ ಬಳಿ ಗಾಯವಾಗಿರುತ್ತದೆ. ಆರೋಪಿಗಳು ಬೀಯರ್ ಕುಡಿಯುತ್ತಿದ್ದುದನ್ನು ಪಿರ್ಯಾದುದಾರರು ನೋಡುತ್ತಾ ಎನೋ ಮಾತನಾಡಿದರೆಂಬ ಸಿಟ್ಟಿನಿಂದ ಆರೋಪಿಗಳು ಈ ತಕ್ಷೀರನ್ನು ನಡೆಸಿದ್ದಾಗಿರುತ್ತದೆ.
 

No comments:

Post a Comment