Friday, February 6, 2015

Daily Crime Reports : 06-02-2015

ದೈನಂದಿನ ಅಪರಾದ ವರದಿ.
ದಿನಾಂಕ 06.02.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0
 
 
 
 
 
 
 
 
 
 
 
 
 
 
 
 
 
 
 
 
 
 
 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-2015 ರಂದು ಸಮಯ ಸುಮಾರು ಮದ್ಯಾಹ್ನ 2.30 ಗಂಟೆಗೆ ಪಿರ್ಯಾದುದಾರರು ತನ್ನ ತಂದೆಯ ಬಾಬ್ತು ಮೊ ಸೈಕಲ್ ನಂಬ್ರ ಕೆ, 15.ಎಲ್ -3211ನ್ನು  ದೇರೆಬೈಲ್ ಕಡೆಯಿಂದ ಕದ್ರಿ ಕಡೆಗೆ ಬರುವರೇ  ಕುಂಟಿಕಾನ ಪೈರ್  ಸ್ಟೇಷನ್ ಎದರು ರಸ್ತೆ ತಲಪುವಾಗ  ಕುಂಟಿಕಾನ ಕಡೆಯಿಂದ ಕೆ.ಎಲ್-14 ಎಲ್-3009   ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗಿವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೊ ಸೈಕಲ್ ಬಲ ಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಬೈಕ್ ಸಮೇತ ಡಾಂಬರು ರಸ್ತೆಗೆ ಬಿದ್ದು  ಎಡಭುಜಕ್ಕೆ  ಹಾಗೂ  ಎಡಕಾಲಿಗೆ ಗುದ್ದಿದಂತಹ ನೋವು ಉಂಟಾಗಿರುತ್ತದೆ ಅಲ್ಲದೇ ಬಲಕಾಲಿನ ಮದ್ಯ ಬೆರಳಗೆ ರಕ್ತಗಾಯವಾಗಿ ಎಜೆ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿರುತ್ತಾರೆ.
 
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2015 ರಂದು ಸಮಯ ಸುಮಾರು ಮದ್ಯಾಹ್ನ 2.00 ಗಂಟೆಗೆ ಪಿಯಾದುದಾರರಾದ ಶ್ರೀ ಕಾರ್ತಿಕ್ ರವರು ತಮ್ಮ ಬಾಬ್ತು ಕೆ.-19-ಎಎ-5558 ನೇ ಆಟೋ ರಿಕ್ಚಾದಲ್ಲಿ ಪ್ರಯಾಣಿಕರೊಬ್ಬರನ್ನು ಕುಳ್ಳರಿಸಿಕೊಂಡು ಕೆಪಿಟಿ ಕಡೆಯಿಂದ ಕೊಟ್ಟಾರ ಕಡೆಗೆ ಹೋಗುವರೇ ಎಜೆ ಆಸ್ಪತ್ರೆ ತಲಪಿದಾಗ ಪಿರ್ಯಾದುದಾರರ ಹಿಂದಿನಿಂದ ಮೊ ಸೈಕಲ್  ನಂಬ್ರ ಕೆ. 19-ಇಜಿ-9068 ನೇದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗಿವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ ಮುಂದಕ್ಕೆ ಹೋಗುವ ವೇಳೆ ರಸ್ತೆಯಲ್ಲಿ ಬರುತ್ತಿದ್ದ ನಾಯಿಯೊಂದನ್ನು ಕಂಡು  ಒಮ್ಮೇಲೆ ಬ್ರೇಕ್  ಹಾಕಿದ ಪರಿಣಾಮ  ಬೈಕ್ ಸ್ಕಿಡಾಗಿ ಅದರ ಸಹ ಸವಾರ ರಸ್ತೆಗೆ ಬಿದ್ದು  ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿ ತೇಜಸ್ವೀನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಸಿಬಿನ್ ಥೋಮಸ್ ಮುಕ್ಕದ ಶ್ರೀನಿವಾಸ್ ಕಾಲೇಜಿನಲ್ಲಿ 2 ನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದು, ದಿನಾಂಕ 05-02-2015 ರಂದು ತನ್ನ ಸ್ನೇಹಿತ ಸಜೀಶನು ಹೇಳಿದ ಪ್ರಕಾರ ಹೊಟೇಲ್ ಟೌನ್ ಗೇಟಿನ ರೂಂ ನಂ 408 ಕ್ಕೆ ಬಂದು ತಂಗಚ್ಚನ್ ಹಾಗೂ ಥೋಮಸ್ ಯಾರು ಎಂದು ಕೇಳಿದ್ದು, ಈ ಸಮಯ  ರೂಮಿನಲ್ಲಿ 4 ಜನರು ಇದ್ದು, ಫಿರ್ಯಾದಿದಾರರು ತನ್ನ ಸ್ನೇಹಿತ ಸಜೀಶ್ ರವರು ನಿಮ್ಮನ್ನು ಕದ್ರಿ ಪೊಲೀಸ್ ಠಾಣೆಗೆ ಬರಲು ತಿಳಿಸಿರುತ್ತಾರೆ, ಎಂದು ಹೇಳಿದಾಗ ತಂಗಚ್ಚನ್ ಎನ್ನುವ ವ್ಯಕ್ತಿ ಫಿರ್ಯಾದಿದಾರರ ಅಂಗಿಯ ಕಾಲರನ್ನು ಹಿಡಿದು ಎಳೆದಿದ್ದು, ಥೋಮಸ್ ಎಂಬವರು ಫಿರ್ಯಾದಿದಾರರನ್ನು ದೂಡಿ ಹಾಕಿ ಕೈಯಿಂದ ಹೊಡೆದಿರುತ್ತಾರೆಈ ಸಮಯ ಫಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 8 ಪವನಿನ ಚಿನ್ನದ ಸರವನ್ನು ತಂಗಚ್ಚನ್ ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆಆರೋಪಿಗಳು ಹಾಗೂ ಸಜೀಶ್ ಮಧ್ಯೆ ಯಾವುದೋ ವ್ಯವಹಾರದಲ್ಲಿ ಬಿನ್ನಾಭಿಪ್ರಾಯವಿದ್ದು, ಇದೇ ಕಾರಣದಿಂದ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲ್ಲದೇ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಒಡ್ಡಿರುವುದಾಗಿದೆ. ಫಿರ್ಯಾದಿದಾರರು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
 
4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.02.2015 ರಂದು ರಾತ್ರಿ 8.30 ಗಂಟೆ ವೇಳೆಗೆ ಪಿರ್ಯಾದುದಾರರಾದ ಶ್ರೀಮತಿ ಬೀಫಾತಿಮಾ ರವರು ಅವರ ಮನೆಯಾದ ಅಡ್ಯಾರ ಕೆಮ್ಮಂಜೂರು ಕಡೆಗೆ ಹೋಗುವರೇ ಅಡ್ಯಾರು ಕಟ್ಟೆಯ ಬಳಿ ರಸ್ತೆ ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಪರಂಗಿಪೇಟೆ ಕಡೆಗೆ ಸ್ಕೂಟರ್ ನಂಬ್ರ KA-19-EH4399 ನ್ನು ಅದರ ಸವಾರನು ತನ್ನ ಬಾಪ್ತು ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವಂತೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಅಡ್ಯಾರು ಕಟ್ಟೆ ಬಳಿ ರಸ್ತೆ ದಾಟುತ್ತಿದ್ದ ಬೀಫಾತಿಮ ಎಂಬವರಿಗೆ ಡಿಕ್ಕಿ ಹೊಡೆದುದರ ಪರಿಣಾಮಬಲಕೈಗೆ ಸೊಂಟಕ್ಕೆ ಮತ್ತು ಬಲ ಕೋಲುಕಾಲಿಗೆ ಗುದ್ದಿದ ಗಾಯವನ್ನುಂಟು ಮಾಡಿ ಸ್ಕೂಟರ್ ಸವಾರ ತನ್ನ ಬಾಪ್ತು ವಾಹನವನ್ನು ನಿಲ್ಲಿಸದೆ ಹಾಗು ಗಾಯಾಳುವನ್ನು ಚಿಕಿತ್ಸೆಗೆ ಒಳಪಡಿಸದೇ ಪರಾರಿಯಾಗಿದ್ದಾಗಿರುತ್ತದೆ. ಸದ್ರಿ ಗಾಯಾಳು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ
 

No comments:

Post a Comment