ಮುಲ್ಕಿ ಪೊಲೀಸ್ ಠಾಣಾ ಪೊಲೀಸರಿಂದ ಅಂತರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ
~~~~*****~~~
ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಮಚಂದ್ರ ನಾಯಕ್ ರವರು ದಿನಾಂಕ 21-03-2015 ರಂದು ನಾನು ಠಾಣಾ ವ್ಯಾಪ್ತಿಯಲ್ಲಿ ಇಲಾಖಾ ಜೀಪು ಕೆಎ-19-ಜಿ-513 ನೇದರಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ವಾಮನ್ ಸಾಲಿಯಾನ್ ಹೆಚ್.ಸಿ. 1902 ಧಮೇಂದ್ರ, ಪಿ.ಸಿ. 510 ರಾಜೇಶ್, ಪಿ.ಸಿ. 618 ಶೇಕಪ್ಪ ಪಿ.ಸಿ. 833 ಲೋಹಿತ್ ಪಿ.ಸಿ. 832 ಸುಧೀರ್ ಮತ್ತು ಜೀಪು ಚಾಲಕ ಪಿ.ಸಿ. 967 ಬಸವರಾಜ್ ಇವರೊಂದಿಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕೊಕ್ಕರೆಕಲ್ಲು ಪೆಟ್ರೋಲ್ ಬಂಕನ ಎದುರು ವಾಹನ ತಪಾಸಣೆ ಮಾಡುತ್ತಿರುವಾಗ ಸಂಜೆ ಸಮಯ 17:15 ಗಂಟೆ ಸುಮಾರಿಗೆ ಹಳೆಯಂಗಡಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲನ್ನು ನಿಲ್ಲಿಸುವರೇ ಸೂಚನೆಯನ್ನು ನೀಡಿದಾಗ ಮೋಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲನ್ನು ಮೆಲ್ಲನೆ ನಿಲ್ಲಿಸಿದಂತೆ ಮಾಡಿ ನಂತರ ಒಮ್ಮೆಲೇ ಮುಂದೆ ಕೊಂಡು ಹೋದಾಗ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸುಮಾರು 100 ಅಡಿಯಷ್ಟು ಮುಂದಕ್ಕೆ ಬೆನ್ನಟ್ಟಿ ಹೋಗಿ ಮೋಟಾರ್ ಸೈಕಲ್ ಸವಾರರಿಬ್ಬರನ್ನು ಮೋಟಾರ್ ಸೈಕಲ್ ಸಮೇತ ನಿಲ್ಲಿಸಿ ಸದ್ರಿ ಇಬ್ಬರ ಹೆಸರು, ವಿಳಾಸ ಕೇಳಲಾಗಿ ಮೋಟಾರ್ ಸೈಕಲ್ ಸವಾರನ ಹೆಸರು ಶಂಕರ ಪ್ರಾಯ:34 ವರ್ಷ, ತಂದೆ:ದಿವಂಗತ ಜವರೇಗೌಡ, ವಾಸ:ಎನ್.ಬಿಂಡೇನಾಹಳ್ಳಿ, ಚನ್ನರಾಯಪಟ್ನ ತಾಲೂಕು, ಹಾಸನ ಜಿಲ್ಲೆ.ಎಂದು ತಿಳಿಸಿರುತ್ತಾರೆ. ಸಹ ಸವಾರನ ಹೆಸರು ಕೇಳಲಾಗಿ ಪ್ರಕಾಶ್ @ ಪಕೀರ ಪ್ರಾಯ: 32 ವರ್ಷ, ತಂದೆ:ಶಿವಪ್ಪ, ವಾಸ:ಗುಳದಳ್ಳಿ, ಹರಿಹರ ತಾಲೂಕು, ದಾವಣಗೆರೆ ಜಿಲ್ಲೆ ಎಂದು ತಿಳಿಸಿರುತ್ತಾನೆ. ಮೋಟಾರ್ ಸೈಕಲ್ ನ್ನು ಪರಿಶೀಲಿಸಿ ನೋಡಲಾಗಿ ಹಿರೋ ಹೋಂಡಾ ಕಂಪೆನಿಯಾ ಕಪ್ಪು ಬಣ್ಣದ ಸ್ಪೆಂಡರ್ ಮೋಟಾರ್ ಸೈಕಲ್ ಆಗಿದ್ದು ಇದರ ಎದುರಿನ ನಂಬರ್ ಪ್ಲೇಟ್ ತರಚಿ ಹೋಗಿದ್ದು, ಹಿಂಭಾಗದ ನಂಬರ್ ಪ್ಲೇಟನ್ನು ಪರಿಶೀಲಿಸಿದ್ದಲ್ಲಿ ಸದ್ರಿ ನಂಬರ್ ಪ್ಲೇಟ್ ಕೂಡಾ ಉಜ್ಜಿದಂತೆ ಕಂಡು ಬಂದಿದ್ದು ಸರಿಯಾಗಿ ಪರಿಶೀಲಿಸಿ ನೋಡಲಾಗಿ KA-19-R-7841 ಆಗಿರುತ್ತದೆ. ಇದರ ಇಂಜಿನ್ ನಂಬ್ರ ಪರಿಶೀಲಿಸಿ ನೋಡಲಾಗಿ 03K15E01600ಆಗಿದ್ದು, ಚಾಸಿಸ್ ನಂಬ್ರ 03L16F01191 ಆಗಿರುತ್ತದೆ. ಸದ್ರಿ ಮೋಟಾರ್ ಸೈಕಲ್ ನ ದಾಖಲಾತಿ ಯನ್ನು ಸವಾರ ಶಂಕರನಲ್ಲಿ ಕೇಳಿದಾಗ ತಡವರಿಸಿ ಒಮ್ಮೆ ಮನೆಯಲ್ಲಿ ಇರುವುದಾಗಿಯೂ ಇನ್ನೊಮ್ಮೆ ದಾಖಲಾತಿ ಇಲ್ಲವೆಂದು ತಿಳಿಸಿದ್ದು, ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಸದ್ರಿ ಮೋಟಾರ್ ಸೈಕಲನ್ನು 2015ನೇ ಇಸವಿಯ ಮಾರ್ಚ್ ತಿಂಗಳ ಎರಡನೇಯ ವಾರದಲ್ಲಿ ಮಂಗಳೂರು ಕಂಕನಾಡಿಯ ರೈಲ್ವೆ ನಿಲ್ದಾಣದ ಬಳಿ ಕೋರ್ದಬ್ಬು ದೈವಸ್ಥಾನದ ಪಕ್ಕ ನಿಲ್ಲಿಸಿದ್ದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.ಆರೋಪಿತರಿಗೆ ಅವರ ತಪ್ಪನ್ನು ತಿಳಿಯಪಡಿಸಿಕೊಂಡು ಸ್ಥಳದಲ್ಲಿ ಪಂಚರ ಸಮಕ್ಷಮ ಮಹಜರು ತಯಾರಿಸಿಕೊಂಡು ಕಳವಿಗೆ ಸಂಬಂದಿಸಿದ KA-19-R-7841 ನೇ ಮೋಟಾರು ಸೈಕಲನ್ನು ಅಮಾನತುಪಡಿಸಿಕೊಂಡು ಹಾಗೂ ಆರೋಪಿಗಳನ್ನು ಅವರ ಆರೋಪವನ್ನು ತಿಳಿಸಿ 18-30 ಗಂಟೆಗೆ ದಸ್ತಗಿರಿ ಮಾಡಲಾಗಿದೆ. ನಂತರ 18:40 ಗಂಟೆಗೆ ಮುಲ್ಕಿ ಪೊಲೀಸ್ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣಾ ಅ.ಕ್ರ. ನಂಬ್ರ 40/2015 ಕಲಂ : 41 (1) (ಡಿ) 102 ಸಿ.ಆರ್.ಪಿ.ಸಿ. ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಬಳಿಕ ಆರೋಪಿಗಳ ವಿಚಾರಣೆಯ ಸಮಯ ಕೇರಳ ರಾಜ್ಯದ ನಿಲೇಶ್ವರದಲ್ಲಿ ಅತುಲ್ ಆಟೋ ರಿಕ್ಷಾವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ, ಕಳವು ಮಾಡಿ ಮೋಟಾರು ಸೈಕಲ್ ಗಳಾದ ಹಿರೋ ಹೊಂಡ ಸ್ಪೆಂಟರ್ ಮತ್ತು ಬಜಾಜ್ ಪಲ್ಸ್ ರ್ ಮೋಟಾರು ಸೈಕಲ್ ಗಳ ಬಗ್ಗೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಅರೋಪಿತರುಗಳಿಂದ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಿವರ
ಕ್ರ ಸಂ | ವಾಹನದ ಮಾದರಿ | ರಿಜಿಸ್ಟ್ರೇಷನ್ ನಂಬ್ರ | ಇಂಜಿನ್ ನಂ | ಚೇಸಿಸ್ ನಂಬ್ರ |
1 | HERO HONDA SPLENDAR | KA-19-R-7841 | 03K15E01600 | 03L16F01191 |
2 | BAJAJ PULSOR BLACK | KA19-EA-3039 | DHGBSD12771 | MD2DHZZD17274 |
ಆರೋಪಿಗಳ ಹೆಸರು ವಿಳಾಸ ಹಾಗೂ ಪೋಟೊ
| |
1. ಶಂಕರ ಪ್ರಾಯ:34 ವರ್ಷ, ತಂದೆ:ದಿವಂಗತ ಜವರೇಗೌಡ, ವಾಸ:ಎನ್.ಬಿಂಡೇನಾಹಳ್ಳಿ, ಚನ್ನರಾಯಪಟ್ನ ತಾಲೂಕು, ಹಾಸನ |
|
|
|
ಸದ್ರಿ ಕಾಯಾಚರಣೆಯನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಅಯುಕ್ತರಾದ ಶ್ರೀ ಮುರುಗನ್ ರವರ ಮಾರ್ಗದರ್ಶನದಂತೆ ಶ್ರೀ ಸಂತೋಷ್ ಬಾಬು , ಉಪ ಪೊಲೀಸ್ ಆಯುಕ್ತರು(ಕಾ.ಸು) ಮತ್ತು ಶ್ರೀ ವಿಷ್ಣುವರ್ಧನ್, ಉಪ ಪೊಲೀಸ್ ಆಯುಕ್ತರು (ಅ.ಮತ್ತು ಸಂಚಾರ) ರವರ ನಿರ್ಧೇಶನದಂತೆ ಶ್ರೀ ರವಿಕುಮಾರ್, ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಪಿ.ಎಸ್.ಐ ಪರಮೇಶ್ವರ, ಎ.ಎಸ್.ಐ ವಾಮನ್ ಸಾಲಿಯಾನ್ , ಮತ್ತು ಸಿಬ್ಬಂದಿಗಳಾದ ಧರ್ಮೆಂದ್ರ, ರಾಜೇಶ್, ಶೇಖಪ್ಪ, ಲೋಹಿತ, ಸುಧೀರ್ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
No comments:
Post a Comment