ದೈನಂದಿನ ಅಪರಾದ ವರದಿ.
ದಿನಾಂಕ 17.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
2
|
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ಸಂಜೆ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರಿಗೆ ದೊರೆತ ಖಚಿತ ವರ್ತಮಾನದಂತೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಮಂಗಳೂರು ತಾಲೂಕು ಏಳಿಂಜೆ ಗ್ರಾಮದ ಪಟ್ಟೆ ಕೋರ್ದಬ್ಬು ದೈವಸ್ಥಾನದ ಬಳಿ 16-30 ಗಂಟೆಗೆ ತೆರಳಿ, ಅಲ್ಲಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕಕ್ಕೆ ಧಾಳಿ ನಡೆಸಿದಾಗ ಆರೋಪಿಗಳೆಲ್ಲಾ ಓಡಿ ಹೋಗಿದ್ದು, ಸ್ಥಳದಲ್ಲಿ ಕೋಳಿ ಅಂಕ ಜೂಜಾಟಕ್ಕೆ ಬಳಸಿದ್ದ 5 ಹುಂಜ ಕೋಳಿ, ಎರಡು ಬಾಲು ಕತ್ತಿ, ಹಾಗೂ ಬಾಲು ಕತ್ತಿಯನ್ನು ಕೋಳಿಯ ಕಾಲಿಗೆ ಕಟ್ಟಲು ಉಪಯೋಗಿಸುವ ನೂಲು ಇವುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳೆಲ್ಲರೂ ಓಡಿ ಹೋಗಿದ್ದು, ಪಂಚನಾಮೆಯ ಸಮಯದಲ್ಲಿ ಪಂಚರು ಹಾಗೂ ಇತರೆ ಲಭ್ಯ ಸಾಕ್ಷಿದಾರರನ್ನು ವಿಚಾರಿಸಿಕೊಂಡಲ್ಲಿ ಸ್ಥಳದಲ್ಲಿ ಕೋಳಿ ಅಂಕ ಜೂಜಾಟ ದಲ್ಲಿದ್ದ ಓಡಿ ಹೋದ ಜನರ ಪೈಕಿ 5 ಜನ ಆರೋಪಿಗಳ ಗುರುತು ಲಭಿಸಿದ್ದು, ಮತ್ತಿತರರು ಕೂಡಾ ಇದ್ದಿರುತ್ತಾರೆ. ಆರೋಪಿಗಳು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜೂಜಾಟವನ್ನು, ನಡೆಸಿದ್ದರಿಂದ ವಶಪಡಿಸಿಕೊಂಡ ಸೊತ್ತು ಸಮೇತ ಠಾಣೆಗೆ ಬಂದು ಓಡಿ ಹೋದ ಆರೋಪಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿದ್ದಾಗಿದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ಫಿರ್ಯಾದಿದಾರರಾದ ಶ್ರೀ ಮುನೀರ್ ರವರು ಅವರ ಅಕ್ಕನ ಮಗಳ ಮದುವೆ ಕಾರ್ಯಕ್ರಮ ಮುಗಿಸಿ ಅಕ್ಕನ ಮನೆಯಾದ ಬೋಳಿಯಾರನಿಂದ ಕುತ್ತಾರು ಕಡೆಗೆ ಕೆ.ಎ. 19 ಡಿ. 7452 ನೇ ಟಾಟಾ ಎ.ಸಿ ಗಾಡಿಯನ್ನು ಮಹಮ್ಮದ್ ಹನೀಫ್ ಚಲಾಯಿಸಿಕೊಂಡು ಫಿರ್ಯಾದಿ ಹೆಂಡತಿ, ಮಗು ಹಾಗೂ ಫಿರ್ಯಾದಿಯ ಹೆಂಡತಿಯ ತಮ್ಮನಾದ ಮಹಮ್ಮದ್ ನಜೀಮ್ ರೊಂದಿಗೆ ಸದ್ರಿ ಟಾಟಾ ಎ.ಸಿ ಗಾಡಿಯಲ್ಲಿ ಪ್ರಯಾಣಿಕರಾಗಿ ಕುಳಿತು ಬರುತ್ತಾ, ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಮಾನಸ ಫರ್ನಿಚರ್ ಅಸೈಗೋಳಿ ಬಳಿ ದಿನಾಂಕ 16-03-2015 ರ ಬೆಳಗಿನ ಜಾವ 02:00 ಗಂಟೆಗೆ ತಲುಪುತ್ತಿದ್ದಂತೆ ಸದ್ರಿ ಕೆ.ಎ. 19 ಡಿ. 7452 ನೇ ಟಾಟಾ ಎ.ಸಿ ಚಾಲಕ ವಾಹನವನ್ನು ಅತಿ ವೇಗವಾಗಿ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಒಮ್ಮಲೇ ಬ್ರೆಕ್ ಹಾಕಿದಾಗ ನಿಯಂತ್ರಣ ತಪ್ಪಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಫಿರ್ಯಾದಿದಾರರ ತುಟಿಗೆ, ಹಣೆಗೆ ಹಾಗೂ ಇತರ ಕಡೆ ರಕ್ತಗಾಯವಾಗಿದ್ದು, ಫಿರ್ಯಾದಿದಾರರ ಹೆಂಡತಿಗೆ ಎಡಕಾಲಿನ ಕೋಲು ಕಾಲು, ಬಲಕಾಲಿನ ಪಾದ ಹಾಗೂ ಹಣೆಗೆ ರಕ್ತಗಾಯವಾಗಿದ್ದು, ಬಲಕೈ ಕಟ್ಟಿನ ಬಳಿ ತರಚಿದ ಗಾಯ, ಎಡಕಣ್ಣಿನ ಬಳಿ ಗುದ್ದಿದ ನೋವು, ಮಗನಿಗೆ ತಲೆಗೆ ಎಟಾಗಿ ಪ್ರಜ್ನಾಹೀನ ಸ್ಥಿತಿಯಲ್ಲಿದ್ದು, ಹೆಂಡತಿಯ ತಮ್ಮನಿಗೆ ಎಡಗಣ್ಣಿನ ಬಳಿ ಮತ್ತು ತುಟಿಗೆ, ಬಲಕಾಲಿನ ಮೊಣಗಟ್ಟಿನ ಬಳಿ ಗುದ್ದಿದ ಹಾಗೂ ತರಚಿದ ಗಾಯ ಹಾಗೂ ಚಾಲಕನಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು, ಚಿಕಿತ್ಸಯ ಬಗ್ಗೆ ಯೇನಪೋಯ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13.03.2015 ರಂದು ಸಮಯ ಸುಮಾರು ಸಂಜೆ 4.30 ಗಂಟೆಗೆ ಫಿರ್ಯಾದುದಾರರಾದ ಶ್ರೀ ರಾಮಣ್ಣ ರವರು ಕರಾವಳಿ ಕಡೆಯಿಂದ ರೂಟ್ ನಂಬ್ರ 43 ರ ಸಿಟಿ ಬಸ್ಸೊಂದರಲ್ಲಿ ಪ್ರಯಾಣಿಕರಾಗಿ ಕುಳಿತುಕೊಂಡು ಟೌನ್ ಹಾಲ್ ಕಡೆಗೆ ಹೋಗುವರೇ, ಟೌನ್ ಹಾಲ್ ಎದುರು ತಲುಪುತ್ತಿದ್ದಂತೆ, ಬಸ್ಸಿನ ಚಾಲಕರು ವೇಗವಾಗಿ ಚಲಾಯಿಸಿಕೊಂಡು ಟೌನ್ ಹಾಲ್ ಬಳಿಯ ಹಂಪ್ಸ್ ಮೇಲೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ಹಿಂಬದಿ ಸೀಟಿನಿಂದ ಬಸ್ಸಿನ ಒಳಗೆ ಬಿದ್ದ ಪರಿಣಾಮ ಸೊಂಟಕ್ಕೆ ಮತ್ತು ಹೊಟ್ಟೆಗೆ ಗುದ್ದಿದ ನೋವುಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2015 ರಂದು ಪಿರ್ಯಾದುದಾರರಾದ ಶ್ರೀ ಉಬೈದುಲ್ಲಾ ರವರು ತನ್ನ ಕ್ಲಾಸ್‌ಮೇಟ್ ಜೊತೆ ಉಳ್ಳಾಲ ಗ್ರಾಮದ ಉಳ್ಳಾಲ ಬೀಚ್ಗೆ ಹೋಗಿ ಬೀಚ್ನಲ್ಲಿ ಕುಳಿತು ಮಾತನಾಡುತ್ತಿರುವಾಗ ಸಂಜೆ 16-00 ಗಂಟೆಯ ಸಮಯ ಅಪರಿಚಿತ ಯುವಕರ ಗುಂಪು ಸೇರಿಕೊಂಡು ಬಂದು ಇಬ್ಬರನ್ನು ತಡೆದು ನಿಲ್ಲಿಸಿ ಹೆಸರು ವಿಳಾಸವನ್ನು ಕೇಳಿದ್ದು, ತಿಳಿಸಿದಾಗ ಸದ್ರಿ ಯುವಕರು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಕೆನ್ನೆಗೆ ಹೊಡೆದು, ಜೀವ ಬೆದರಿಕೆ ಹಾಕಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.03.2015 ರಂದು ಫಿರ್ಯಾದಿದಾರರಾದ ಶ್ರೀ ನಝೀಮ್ ರವರು ವಾಮಂಜೂರು ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿದ್ದ ಸ್ಟೋಲಾಚ್ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರಾದ ಉಳಾಯಿಬೆಟ್ಟುವಿನ ಶಾಕೀರ್, ಫಯಾಜ್, ಅಜ್ಮಲ್, ಮತ್ತು ಉಬೈದುಲ್ಲಾ ರೊಂದಿಗೆ ಭಾಗವಹಿಸಿದ್ದು ನಂತರ ಸದ್ರಿ ಕಾರ್ಯಕ್ರಮದ ಊಟಕ್ಕಾಗಿ ಫಿರ್ಯಾದಿದಾರರು ಅವರ ಸ್ನೇಹಿತರೊಟ್ಟಿಗೆ ಕ್ಯೂ ನಲ್ಲಿ ನಿಂತುಕೊಂಡಿರುವ ವೇಳೆ ಸುಮಾರು ರಾತ್ರಿ 11.30 ಗಂಟೆಗೆ ಫಿರ್ಯಾದಿದಾರರಿಗೆ ಪರಿಚಯವಿರುವ ವಾಮಂಜೂರಿನವರಾದ ಇಮ್ತಿಯಾಜ್, ಅಜರುದ್ದೀನ್, ನಜೀರ್ ಮತ್ತು ಬದ್ರುದ್ದೀನ್ ಎಂಬುವವರು ಫಿರ್ಯಾದಿದಾರರನ್ನು ಮತ್ತು ಅವರ ಸ್ನೇಹಿತರನ್ನು ಉದ್ದೇಶಿಸಿ ನೀವು ಉಳಾಯಿಬೆಟ್ಟುವಿನವರು ಇಲ್ಲಿಗೆ ಏಕೆ ಬಂದದ್ದು ಎಂದು ಅವಾಚ್ಯವಾಗಿ ಬೈದು ಕಾರ್ಯಕ್ರಮ ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಿಂದ ಫಿರ್ಯಾದುದಾರರಿಗೆ ಇಮ್ತಿಯಾಜ್ ಎಂಬುವವನು ಹೊಡೆದಿರುತ್ತಾನೆ ಹಾಗೂ ಅಜರುದ್ದೀನ್, ಬದ್ರುದ್ದೀನ್ ಸೇರಿಕೊಂಡು ಫಿರ್ಯಾದುದಾರರ ಜೊತೆಯಲ್ಲಿ ಊಟಕ್ಕೆ ಕ್ಯೂ ನಲ್ಲಿ ನಿಂತಿದ್ದ ಶಾಕೀರ್, ಫಯಾಜ್, ಅಜ್ಮಲ್, ಮತ್ತು ಉಬೈದುಲ್ಲಾ ರವರನ್ನು ಕೈಗಳಿಂದ ಮತ್ತು ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆ ಮಾಡಿರುತ್ತಾರೆ. ಈ ಘಟನೆ ನಂತರ ಫಿರ್ಯದುದಾರರು ಅವರ ಸಂಬಂಧಿ ಶರೀಫ್ ಎಂಬುವರಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದು, ಶರೀಫ್ರವರು ಗಾಯಗೊಂಡ ಫಿರ್ಯಾದಿದಾರರನ್ನು ಎಸ್‌ಸಿಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಫಿರ್ಯಾದುದಾರರನ್ನು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಸದ್ರಿ ಘಟನೆಗೆ ಫಿರ್ಯಾದುದಾರರು ಮತ್ತು ಅವರ ಉಳಾಯಿಬೆಟ್ಟುವಿನ ಸ್ನೇಹಿತರು ವಾಮಂಜೂರಿನ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರಿಂದ, ವಾಮಂಜೂರಿನವರಾದ ಇಮ್ತಿಯಾಜ್, ಅಜರುದ್ದೀನ್, ನಜೀರ್ ಮತ್ತು ಬದ್ರುದ್ದೀನ್ ಎಂಬುವವರನ್ನು ಫಿರ್ಯಾದುದಾರರು ಮತ್ತು ಅವರ ಸ್ನೇಹಿತರು ಕಡೆಗಣಿಸಿದ್ದಾರೆಂಬ ಸಿಟ್ಟಿನಿಂದ ಫಿರ್ಯಾದಿದಾರರು ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿರುವುದಾಗಿದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.03.2015 ರಂದು ಪಿರ್ಯಾದುದಾರರಾದ ಶ್ರೀ ಕರಿಬಸಪ್ಪ ರವರು ಅವರ ಪರಿಚಯದವರ ಬಾಬ್ತು KA-19-S-3975ನೇ ನಂಬ್ರದ ಆಕ್ಟಿವಾ ಸ್ಕೂಟರ್ನಲ್ಲಿ ಶೋಭಾ ಶೆಣೈ ಎಂಬವರನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಯೆಯ್ಯಾಡಿ ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುವರೇ ಮೇರಿಹಿಲ್ ಮಿಸ್ಯುಬಸ್ ಶೋ ರೂಂ ಎದುರುಗಡೆ ರಸ್ತೆಯಲ್ಲಿ ತಲುಪುತ್ತಿದ್ದಂತೆ ಅವರ ಹಿಂದುಗಡೆಯಿಂದ ನಂಬ್ರ ತಿಳಿಯದ ಮಾರುತಿ ಓಮ್ನಿ ಕಾರೊಂದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರಿನ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಹಿಂಬದಿ ಸವಾರೆ ಶೋಭಾ ಶೆಣೈ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಶೋಭಾ ಶೆಣೈ ರವರ ತಲೆಗೆ ಗಂಭೀರ ಸ್ವರೂಪದ ಗುದ್ದಿದ ನೋವು ಹಾಗೂ ಕೈ ಕಾಲುಗಳಿಗೆ ತರಚಿದ ಗಾಯಗೊಂಡಿರುವುದಲ್ಲದೇ ಅಪಘಾತ ಉಂಟು ಮಾಡಿದ ಆರೋಪಿ ಓಮ್ನಿ ಕಾರು ಚಾಲಕ ಗಾಯಾಳು ಶೋಭಾ ಶೆಣೈ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡದೇ ಕಾರು ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.03.2015 ರಂದು ಪಿರ್ಯಾದಿದಾರರಾದ ಜೆಸ್ಸಿ ಅಬ್ರಾಹಂ ರವರು ಫಾದರ್ ಮುಲ್ಲರ್ ಆಸ್ಪತ್ರೆಯ ಪಂಪ್ವೆಲ್ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋರಿಕ್ಷಾದಲ್ಲಿದ್ದ ಇಬ್ಬರು ಏಕಾಏಕಿಯಾಗಿ ಪಿರ್ಯಾದುದಾರರನ್ನು ರಿಕ್ಷಾದೊಳಗೆ ಎಳೆದು ಪಿರ್ಯಾದುದಾರರ ಬಾಯಿಯನ್ನು ಮುಚ್ಚಿ ಭಲತ್ಕಾರವಾಗಿ ಕರೆದೊಯ್ಯುತ್ತಾ ಪಿರ್ಯಾದುದಾರರ ಬಾಬ್ತು ನೋಕಿಯಾ ಮೊಬೈಲ್ ಫೋನ್, ನಗದು ರುಪಾಯಿ 500/- ಮತ್ತು ಲೇಡೀಸ್ ವಾಚ್ ಇದ್ದ ಬ್ಯಾಗನ್ನು ಬಲಾತ್ಕಾರವಾಗಿ ಕಸಿದುಕೊಂಡು ಸದ್ರಿ ರಿಕ್ಷಾದಲ್ಲಿ ಕದ್ರಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದುದಾರರು ಆಟೋರಿಕ್ಷಾದಿಂದ ಹಾರಿ ತಪ್ಪಿಸಿಕೊಂಡು ಬಂದಿದ್ದು, ಈ ಘಟನೆಯು ಮಧ್ಯಾಹ್ನ 12:30 ರಿಂದ 1:00 ಗಂಟೆ ಮಧ್ಯೆ ಸಂಭವಿಸಿದ್ದು, ಆರೋಪಿಗಳು ಸುಲಿಗೆ ಮಾಡಿದ ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 9000/- ಆಗಬಹುದು.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಉಳಾಯಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ 27/33ರ 0.58 ಎಕ್ರೆ ಜಾಗಕ್ಕೆ ಉಳಾಯಿಬೆಟ್ಟು ಗ್ರಾಮಪಂಚಾಯತ್ನಿಂದ ನಮೂನೆ ಸಂಖ್ಯೆ 9 ಮತ್ತು 11ನ್ನು ವಿತರಿಸದೇ ಇದ್ದರೂ ಮಹಮ್ಮದ್ ಶರೀಫ್ ಎಂಬವರು ಉಳಾಯಿಬೆಟ್ಟು ಗ್ರಾಮ ಪಂಚಾಯತ್ನಿಂದ ವಿತರಿಸಿರುವ ನಮೂನೆ ಸಂಖ್ಯೆ 9 ಮತ್ತು 11 ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಮಂಗಳೂರು ಕೋ-ಅಪರೇಟಿವ್ ಲಿ. ಸೊಸೈಟಿ ಇವರಿಗೆ ಆಸ್ತಿಯ ಅಡಮಾನ ಮಾಡಲು ಸದ್ರಿ ನಕಲಿ ದಾಖಲಾತಿಗಳನ್ನು ನೈಜ ದಾಖಲಾತಿ ಎಂದು ಹಾಜರುಪಡಿಸಿದ್ದು, ಈ ಬಗ್ಗೆ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನ ಪಿಡಿಒ ಶ್ರೀ ಸುರೇಶ್ ಟಿ. ರವರು ದೂರು ನೀಡಿರುವುದಾಗಿದೆ.
No comments:
Post a Comment