ದಿನಾಂಕ 03-03-2015 ರಂದು ¥sÁzÀgï «°AiÀÄA «Ä£ÉÃd¸ï, ¦DgïM, ªÀÄAUÀ¼ÀÆgÀÄ PÉxÉÆ°Pï qÀAiÀŸï, ªÀÄAUÀ¼ÀÆgÀÄ ಎಂಬವರು ಠಾಣೆಗೆ ಬಂದು ಕೆಲವು ದಿನಗಳಿಂದ ಶ್ರೀರಾಮ ಎಡಿಪಡಿತ್ತಾಯ ಎಂಬ ಯುವಕನು ಫೇಸ್ ಬುಕ್ ನಲ್ಲಿ ಕ್ರೈಸ್ತ ಧರ್ಮದ ಮೂಲ ಸಿದ್ದಾಂತಗಳ ಮೇಲೆ ಹಲ್ಲೆ ಮಾಡುವಂತಹ ಹೇಳಿಕೆಗಳನ್ನು ಬರೆದು ಕ್ರೈಸ್ತ ಧರ್ಮಕ್ಕೆ ಭಾರತೀಯ ಸಹ ಬಾಳ್ವೆಯ ಪರಂಪರೆಗೆ ಹಾಗೂ ಸರ್ವ ಸ್ವೀಕರಣಾ ಭಾವದ ಹಿಂದೂ ಧರ್ಮಕ್ಕೆ ಅಪಾರ ಅನ್ಯಾಯ ಮಾಡಿ, ಕರ್ನಾಟಕದ ಘನತೆ ಗೌರವಕ್ಕೆ ಧಕ್ಕೆಯಾಗುವಂತೆ, ಭಾರತದ ಸಂವಿಧಾನದ ಮೂಲತತ್ವಗಳಿಗೆ ಹಾನಿಯಾಗುವಂತೆ ಪ್ರಕಟಿಸಿ, ಸಮಾಜದ ಶಾಂತಿ ಸುವ್ಯವಸ್ಥೆಗೆ ಅಪಾರ ಹಾನಿಯಾಗುವ ಸಾಧ್ಯತೆಗಳಿರುತ್ತದೆ, ಆದುದರಿಂದ ಸದ್ರಿಯವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿರುವ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸು ಠಾಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸು ಠಾಣಾ ಮೊ.ನಂ 37/2015 ಕಲಂ 66 ಐ.ಟಿ. ಆಕ್ಟ್ ಹಾಗೂ ಕಲಂ 153ಎ, 153ಬಿ, 295ಎ ಐ.ಪಿ.ಸಿ ರಂತೆ ತನಿಖೆಯಲ್ಲಿರುತ್ತದೆ.
ಪತ್ತೆಕಾರ್ಯಾಚಾರಣೆ
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎಸ್. ಮುರುಗನ್ IPS , ಮಂಗಳೂರು ನಗರ ಮತ್ತು ಮಾನ್ಯ ಪೊಲೀಸ್ ಉಪ ಆಯುಕ್ತರಾದ ಶ್ರೀ ಕೆ.ಎಸ್ ಸಂತೋಷ್ ಬಾಬು ಐ.ಪಿ.ಎಸ್ (ಕಾನೂನು ಮತ್ತು ಶಿಸ್ತು ವಿಭಾಗ), ಶ್ರೀ ವಿಷ್ಣುವರ್ಧನ್ (ಅಪರಾಧ ವಿಭಾಗ), ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕಲ್ಯಾಣ ಶೆಟ್ಟಿ ಇವರ ಮಾರ್ಗದಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ , ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಕಾನೂನು ಮತ್ತು ಶಿಸ್ತು ವಿಭಾಗದ ಪೊಲೀಸು ಉಪ ನಿರೀಕ್ಷಕರವರ ಆದೇಶದಂತೆ ಸುಭಾಶ್ಚಂದ್ರ ಹೆಚ್.ಸಿ 746, ಸತ್ಯನಾರಾಯಣ ಹೆಚ್.ಸಿ 1075, ಮತ್ತು ಗಂಗಾಧರ ಪಿಸಿ 819 ರವರುಗಳು ಆರೋಪಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿ, ಆರೋಪಿಯನ್ನು ಪತ್ತೆ ಮಾಡಿರುತ್ತಾರೆ. ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಹೆಚ್. ಟಿ.ಸಿ ಮೊಬೈಲ್ ನ್ನು ಆರೋಪಿಯ ವಶದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. .
ಆರೋಪಿಯ ಹೆಸರು ಮತ್ತು ವಿಳಾಸ:
ಶ್ರೀರಾಮ್ ಎಡಪಡಿತ್ತಾಯ, @ ಶ್ರೀರಾಮ್ ಎನ್.ಎಸ್, ಪ್ರಾಯ: 27 ವರ್ಷ, ತಂದೆ: ಎನ್ ಶ್ರೀಧರ ಭಟ್, ವಾಸ: "ಸುರಲೀಲಾ" 1/12 ಎ ಮೈನ್ ರೋಡ್, ಬಾಲಾಜಿ ನಗರ, ಉತ್ತರಹಳ್ಳಿ, ಬೆಂಗಳೂರು-560061
No comments:
Post a Comment