ಉಳ್ಳಾಲ ಉರೂಸ್ 2015 ಇದರ ಪೂರ್ವಬಾವಿ ಸಭೆ
ಉಳ್ಳಾಲದಲ್ಲಿರುವ ಇತಿಹಾಸ ಪ್ರಸಿದ್ದ ಬಹುಮಾನ್ಯರಾದ ಖುತ್ಬುಝ್ಝಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್ರವರ 423 ನೇ ವಾರ್ಷಿಕ ಹಾಗೂ 20 ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮವು ದಿನಾಂಕ:02-04-2015 ರಿಂದ 26-04-2015 ರವರೆಗೆ 25 ದಿನಗಳ ಕಾಲ ಸಯ್ಯದ್ ಮದನಿ ದರ್ಗಾ ಉಳ್ಳಾಲ ಇಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿ ಯಾಗಿ ಸಭೆಯನ್ನು ದಿನಾಂಕ 22-3-2015 ರಂದು ಉಳ್ಳಾಲ ದರ್ಗಾದ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯಲ್ಲಿ ಸರ್ವ ಧರ್ಮದ ಹಾಗೂ ಸರ್ವ ಪಕ್ಷದ ಗಣ್ಯರು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಹಾಜರಾದ ಗಣ್ಯರ ವಿವರ :
1. ಶ್ರೀ ಯುಟಿ ಖಾದರ್ ಸನ್ಮಾನ್ಯ ಆರೋಗ್ಯ ಸಚಿವರು ಕರ್ನಾಟಕ ಸರಕಾರ
2. ಯು ಎಸ್ ಹಂಜ ಅಧ್ಯಕ್ಷರು ಉಳ್ಳಾಲ ಮದನಿ ದರ್ಗಾ
3. ಚಂದ್ರಹಾಸ್ ಉಚ್ಚಿಲ್ ಅಧ್ಯಕ್ಷ ಬಿಜೆಪಿ ಮಂಗಳೂರು ಕ್ಷೇತ್ರ ವಿಧಾನ ಸಭಾ ಕ್ಷೇತ್ರ
4 ಚಂದ್ರಹಾಸ್ ಉಳ್ಳಾಲ ಅಧ್ಕ್ಷಕರು ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲ
5. ದಿನಕರ ಉಳ್ಳಾಲ, ಮಾಜಿ ಉಳ್ಳಾಲ ಪುರ ಸಭಾ ಸದಸ್ಯರು,
6. ಶ್ರೀಕರ ಕಿಣಿ, ಮುಖ್ಯಸ್ಥರು, ಗೌಡ ಸರಸ್ವತ ಬ್ರಾಹ್ಮಣ,
7. ಸೀತಾರಾಮ ಬಂಗೇರ, ಸೊಮೇಶ್ವರ ಗ್ರಾಮದ ಹಿರಿಯ ನಾಗರಿಕ
8. ದಿನೇಶ್ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ಉಳ್ಳಾಲ ಪುರ ಸಭೆ
9. ಬಾಬು ಬಂಗೇರ, ಮೊಗವೀರ ಹಿ.ಪ್ರಾ.ಶಾಲಾ ಅಭಿವೃದ್ದಿ ಮುಖ್ಯಸ್ಥರು
10. ರೋಹಿತಾಶ್ವ, ಸಂಪನ್ಮೂಲ ವ್ಯಕ್ತಿ.
11. ದಯಾನಂದ ತೊಕ್ಕೊಟ್ಟು, ಮಾಜಿ ಕೌನ್ಸಿಲರ್,
12. ಡೆನ್ನಿಸ್ ಡಿ'ಸೋಜ, ಮುಖ್ಯಸ್ಥರು, ಕ್ರಿಶ್ಚಿಯನ್ ಸಮುದಾಯ, ತೊಕ್ಕೊಟ್ಟು,
13. ಧರ್ಮಗುರುಗಳು ಸೈಂಟ್ ಸೆಬೆಸ್ಟಿಯನ್ ಚರ್ಚ್, ತೊಕ್ಕೊಟ್ಟು ಒಳಪೇಟೆ.
14. ಲಕ್ಷ್ಮಣ್ ಉಳ್ಳಾಲ, ನಾಗರಿಕರು, ಉಳ್ಳಾಲ.
15. ವಿಶ್ವನಾಥ, ಗಟ್ಟಿ ಸಮುದಾಯದ ಮುಖ್ಯಸ್ಥರು
16. ಎಸ್. ಮುರುಗನ್ , ಐ.ಪಿ.ಎಸ್. ಐ.ಜಿ.ಪಿ. ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಂಗಳೂರು.
17. ವಿಷ್ಣುವರ್ಧನ, ಪೊಲೀಸ್ ಉಪ ಆಯುಕ್ತರು, ( ಅಪರಾಧ ಮತ್ತು ಸಂಚಾರ) ಮಂಗಳೂರು ನಗರ.
18. ಕಲ್ಯಾಣ್ ಶೆಟ್ಟಿ, ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ.
19. ಸವಿತೃ ತೇಜ್ ಪಿ.ಡಿ. ಪೊಲೀಸ್ ನಿರೀಕ್ಷಕರು, ಉಳ್ಳಾಲ ಪೊಲೀಸ್ ಠಾಣೆ.
20. ಭಾರತಿ.ಜಿ. ಪೊಲೀಸ್ ಉಪ ನಿರೀಕ್ಷಕರು, (ಕಾ & ಸು) ಉಳ್ಳಾಲ ಪೊಲೀಸ್ ಠಾಣೆ.
ಸಭೆಯಲ್ಲಿ ದಿನಾಂಕ:02-04-2015 ರಿಂದ 26-04-2015 ರವರೆಗೆ ನಡೆಯುವ ಸಯ್ಯದ್ ಮದನಿ ದರ್ಗಾ ಉಳ್ಳಾಲ ಇದರ ಉರೂಸ್ ಕಾರ್ಯಕ್ರಮವು ಸುಸೂತ್ರವಾಗಿ ನಡೆಯುವಂತೆ ಚರ್ಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಉಳ್ಳಾಲ ಪರಿಸರದ ಶುಚಿತ್ವ ಹಾಗೂ ಯಾವುದೇ ಸಾಂಕ್ರಮಿಕ ರೋಗ ಹರಡದಂತೆ ಚರ್ಚಿಸಲಾಯಿತು ಹಾಗೂ ಸಂಜೆ 06-00 ಗಂಟೆಯ ನಂತರ ಉಳ್ಳಾಲ ಬೀಚ್ ಗೆ ಪ್ರವಾಸಿಗರು ಹೋಗದಂತೆ ತಿರ್ಮಾನ ಕೈಗೊಳ್ಳಲಾಗಿದೆ. ವಾಹನ ಸಂಚಾರ ಸುಗಮವಾಗುವಂತೆ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ನೇಮಕದ ಬಗ್ಗೆ ಚರ್ಚಿಸಲಾಗಿದೆ.
ಸಭೆಯ ಫೋಟೋ
No comments:
Post a Comment