ದೈನಂದಿನ ಅಪರಾದ ವರದಿ.
ದಿನಾಂಕ 19.03.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
4
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
7
|
ವಂಚನೆ ಪ್ರಕರಣ
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
0
|
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-03-20165ರಂದು ರಾತ್ರಿ 9.00 ಗಂಟೆ ಸಮಯಕ್ಕೆ ಪಿರ್ಯಾದಿದಾರ ಹುಡುಗಿಯು ತನ್ನ ತಂಗಿ ಯೊಂದಿಗೆ ತನ್ನ ಅತ್ತೆ ಮನೆ ಏಳಿಂಜೆಗೆ ಬಂದಾಗ ಅತ್ತೆ ಸೆಲಿನ ಸಲ್ಡಾನರವರು ಟಿ.ವಿ ಬಂದ್ ಮಾಡಿ ರಿಮೋಟ್ ಎಳೆದು ಕೊಂಡ ಕಾರಣದಿಂದ ರಿಮೋಟ್ ಕೇಳಿದಾಗ ಕೊಡದೇ ಅತ್ತೆ ಸೆಲನಾ ಸಲ್ಢಾನರವರು ಪಿರ್ಯಾದಿದಾರರ ನಾದಿನಿ ಸುಜಿತ ಸಲ್ಢಾನ ಹಾಗೂ ನೆರೆಮನೆಯ ಸುರೇಶ್ ಪೂಜಾರಿ ಯವರನ್ನು ಕರೆದು ಅವರು ಬಂದು ಪಿರ್ಯಾದಿದಾರರನ್ನು ಹೊರಗೆ ಹಾಕಿ ಎಂದು ಹೇಳಿ ಸುರೇಶ್ ಪೂಜಾರಿಯು ಪಿರ್ಯಾದಿದಾರರ ಟೀ ಶರ್ಟನ್ನು ಕೈಯಲ್ಲಿ ಹಿಡಿದು ಎಳೆದು ಓಡಲು ಆಗದಂತೆ ತಡೆದುದಲ್ಲದೇ ಪಿರ್ಯಾದಿದಾರರ ನಾದಿನಿ ಪಿರ್ಯಾದಿದಾರರ ತಲೆಯನ್ನು ಗೋಡೆಗೆ ಬಡಿದಿರುತ್ತಾರೆ. ಪಿರ್ಯಾದಿದಾರರ ಅತ್ತೆ ಮೈಗೆ ಕೈ ಹಾಕಿ ಪರಚಿ, ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ, ಜಗಳ ಬಿಡಿಸಲು ಬಂದ ತಂಗಿಗೂ ಕೂಡಾ ಸುರೇಶ್ ನು ಪರಚಿರುತ್ತಾನೆ. ಅಲ್ಲದೇ ನಾದಿನಿ ಕೂಡಾ ತಂಗಿಯೂ ಕೂದಲು ಹಿಡಿದು ಎಳೆದಿರುತ್ತಾರೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.03.2015 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಸುಂದರಿ ರವರು ತಮ್ಮ ಮಗಳು ರೇಖಾ ಎಂಬವಳೊಂದಿಗೆ ಮುಡಿಪುನಿಂದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಹೋಗುವರೇ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ ಮುಡಿಪು ಬಸ್ಸ್ಟಾಂಡ್ ಬಳಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಮುಡಿಪು ಚರ್ಚ್ ಕಡೆಯಿಂದ ದೇರಳಕಟ್ಟೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19ಕ್ಯೂ-6360 ನೇಯದನ್ನು ಅದರ ಸವಾರ ಗಿರಿಧರ್ ರಾವ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಕಚ್ಚಾ ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ರಸ್ತೆಗೆ ಬಿದ್ದು, ಅವರ ಎಡ ಕೈ ಕೋಲುಕೈ ಮತ್ತು ಎಡ ಕೋಲು ಕಾಲಿಗೆ ಕೀಲು ಮುರಿತದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015 ರಂದು ಬೆಳಿಗ್ಗೆ 11.10 ಗಂಟೆಗೆ ಪುತ್ತಿಗೆ ಗ್ರಾಮದ ಸಂಪಿಗೆ ಅಶ್ವಥಪುರ ಕ್ರಾಸ್ ರಸ್ತೆಯ ಜಂಕ್ಷನ್ ಬಳಿ ಕಿನ್ನಿಗೋಳಿ ಕಡೆಯಿಂದ ಬಂದ ಮದರ್ ಇಂಡಿಯ ಬಸ್ಸ್ ನಿಂದ ಇಳಿದು ಬಲ ಬದಿಯ ರಸ್ತೆಗೆ ದಾಟುತ್ತಿರುವ ಸಮಯ ಮೂಡಬಿದ್ರೆಯ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ಬೋಲೆರೋ ಪಿಕಪ್ ವಾಹನ ನಂ ಕೆಎ 19 ಡಿ 9968 ನೇದರ ಚಾಲಕ ವಿಜಯ್ ಎಂಬತಾನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶ್ರೀಮತಿ ಜಾನಕಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಗೆ ಗಂಭೀರ ರಕ್ತ ಗಾಯ ವಾದವರನ್ನು ಪಿರ್ಯಾದಿದಾರರಾದ ಶ್ರೀ ರೋಶನ್ ಫರ್ನಾಂಡಿಸ್ ರವರು ಮತ್ತು ಅಲ್ಲಿ ಸೇರಿದ ಜನರು ಎಬ್ಬಿಸಿ ಒಂದು ಅಟೊ ರಿಕ್ಷಾ ದಲ್ಲಿ ಚಿಕಿತ್ಸೆಗೆ ಮೂಡಬಿದ್ರೆ ಅಳ್ವಾಸ್ ಅಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಮಂಗಳೂರ ಎ ಜೆ ಅಸ್ಪತ್ರೆ ಕೊಂಡು ಹೋಗಿದ್ದು ವೈದ್ಯರು ಪರೀಕ್ಷೀಸಿ ಅಪರಾಹ್ನ 12.55 ಗಂಟೆಗೆ ಮೃತಪಟ್ಟಿರುವುದಾಗಿದೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2015 ರಂದು ಬೆಳಿಗ್ಗೆ ಸಮಯ 10.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸೂರಜ್ ರವರು ತನ್ನ ಅಟೋ ನಂ ಕೆ ಎ 19 ಡಿ 8533 ನೇದರಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಎದುರುಕಡೆಯಿಂದ ಅಂದರೇ ಬೆಳುವಾಯಿ ಕಡೆಯಿಂದ ಮೂಡಬಿದ್ರೆ ಕಡೆಗೆ ಒಂದು ಗುಡ್ಸ ಅಟೋ ರಿಕ್ಷಾ ನಂ ಕೆ ಎ 19 ಬಿ 4126 ನೇಯದರ ಚಾಲಕನು ತನ್ನ ಬಾಬ್ತು ಅಟೋರಿಕ್ಷಾವನ್ನು ಅತೀ ವೇಗ ಅಜಾಗುರುಕತೆಯಿಂದ ಚಲಾಯಿಸಿ ಕೊಂಡು ಬಂದು ಅಲಂಗಾರ್ ಜಗದೀಶ್ ಅಧಿಕಾರಿಯವರ ಮನೆಯ ಎದುರು ಇಳಿಜಾರ್ ರಸ್ತೆಯಲ್ಲಿ ನನ್ನ ರಿಕ್ಷಾ ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿಯ ತಲೆಗೆ ಬಲ ಕಣ್ಣಿಗೆ ಮತ್ತು ಎಡ ಕೈಗೆ ರಕ್ತ ಗಾಯವಾಗಿರುತ್ತದೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚೇತನ್ ರವರು ಉಜ್ಜೋಡಿ ಡೆಂಟಲ್ ಲ್ಯಾಬ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17-03-2015 ರಂದು ಸಮಯ ರಾತ್ರಿ 10-00 ಗಂಟೆಗೆ ಪಿರ್ಯಾದಿಯವರು ತನ್ನ ಸ್ನೇಹಿತ ಜಗದೀಶ ರವರ ಜೊತೆಯಲ್ಲಿ ಕಂಕನಾಡಿ ಕರಾವಳಿ ಜಂಕ್ಷನ್ ಬಳಿ ಇರುವ ಗೋಕುಲ್ ಹೊಟೇಲ್ ಎದುರಿನ ಪಾನ್ ಬೀಡಾ ಸ್ಟಾಲ್ ನ ಬಳಿ ಮಾತನಾಡುತ್ತಾ ನಿಂತಿದ್ದಾಗ ಪಿರ್ಯಾದಿಯವರ ಪರಿಚಯದವರಾದ ಇಮ್ತಿಯಾಜ್ ಹಾಗೂ ಆತನ ಜೊತೆಯಲ್ಲಿ ಅನಿಲ್, ಸುನಿಲ್, ಪ್ರಸಾದ್, ಗಣೇಶ್, ರವರು ಸಹ ಬಂದಿದ್ದು, ಪಿರ್ಯಾದಿಯವರಿಗೆ ಇಮ್ತಿಯಾಜ್ ನು ಸ್ವಲ್ಪ ಸಾಲದ ಹಣ ಕೊಡಲು ಬಾಕಿ ಇದ್ದು ಪಿರ್ಯಾದಿಯವರು ಇಮ್ತಿಯಾಜ್ ನಲ್ಲಿ ನನಗೆ ಹಣದ ಅಗತ್ಯವಿದೆ ಆದಷ್ಟು ಬೇಗ ಹಣವನ್ನು ಕೊಡುವಂತೆ ವಿನಂತಿಸಿದಾಗ ಅನಿಲ್ ಎಂಬಾತನು ಪಿರ್ಯಾದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದಾಗ ಇಮ್ತಿಯಾಜ್ ನು ಪಿರ್ಯಾದಿಯವರ ಶರ್ಟ್ ಹಿಡಿದೆಳೆದು ನಿನಗೆ ಹಣ ಬೇಕಾ ಎಂದು ಜೀವ ಬೆದರಿಕೆ ನೀಡಿ ಕೈಯಿಂದ ಪಿರ್ಯಾದಿಯವರ ಮೇಲೆ ಹಲ್ಲೆ ನಡೆಸಿದನು, ಜೊತೆಯಲ್ಲಿದ್ದ ಸುನಿಲ್ ಎಂಬಾತನು ಪಾನ್ ಸ್ಟಾಲ್ ನ ಅಡಿಯಲ್ಲಿ ಇಟ್ಟಿದ್ದ ಸ್ಟೀಲ್ ಪೈಪ್ ತುಂಡನ್ನು ಎಳೆದು ಪಿರ್ಯಾದಿಯವರ ಮುಖಕ್ಕೆ ಮತ್ತು ಬಲ ಕಾಲಿಗೆ ಹಲ್ಲೆ ನಡೆಸಿದನು. ಅನಿಲ್, ಪ್ರಸಾದ್ ಮತ್ತು ಗಣೇಶ್ ಎಂಬವರು ಪಿರ್ಯಾದಿಯವರಿಗೆ ಮತ್ತು ಪಿರ್ಯಾದಿಯವರ ಜೊತೆಯಲ್ಲಿದ್ದ ಜಗದೀಶ್ ರವರಿಗೆ ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದು,ಹಲ್ಲೆ ನಡೆಸಿರುತ್ತಾರೆ. ನಂತರ ಎಲ್ಲರೂ ಸೇರಿ ಈ ಬಗ್ಗೆ ಮುಂದಕ್ಕೆ ನಿಮ್ಮನ್ನು ನೋಡೊಕೊಳ್ಳುತ್ತೇವೆ ಎಂಬುವುದಾಗಿ ಜೀವ ಬೆದರಿಕೆಯನ್ನು ಹಾಕಿರುತ್ತಾರೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2015 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರು ತನ್ನ ಮನೆಯವರೊಂದಿಗೆ ತನ್ನ ಬಾಬ್ತು ಕಾರು ನಂಬ್ರ ಕೆ.ಎಲ್.14ಪಿ 5980 ನೇದನ್ನು ನಂತೂರು ಬಳಿ ಚಲಾಯಿಸುತ್ತಾ ಬಿಕರ್ನಕಟ್ಟೆ ಕಡೆಗೆ ಹೋಗುತ್ತಿದ್ದಾಗ ನಂತೂರು ಜಂಕ್ಷನ್ ಬಳಿ ಕೆ.ಎ.19ಡಿ.5832 ನೇ ರಿಕ್ಷಾ ಚಾಲಕ ಯೋಗೇಶ ದುರುಗುಟ್ಟಿ ನೋಡಿ ಜರಿದು ಚಲಾಯಿಸುತ್ತಾ ಕೆ.ಪಿ.ಟಿ ಕಡೆಗೆ ಹೋದಾಗ ಅದನ್ನು ವಿಚಾರಿಸಲು ಪಿರ್ಯಾದಿದಾರರು ನಂತೂರು ಬಬ್ಬು ಸ್ವಾಮಿ ದೈವಸ್ಥಾನದ ಬಳಿ ಸಮಯ ಸುಮಾರು ಸಂಜೆ 6.45 ರಿಂದ 7.00 ಗಂಟೆ ಮಧ್ಯೆ ಹೋದಾಗ ಆರೋಪಿಗಳಾದ ರಿಕ್ಷಾ ಚಾಲಕ ಯೋಗೇಶ ಮತ್ತು ನಂತೂರು ಬಳಿಯ ಮೋಬೈಲ್ ಅಂಗಡಿಯ ಅಮಿತ್ ನಾಯಕ್ ಹಾಗೂ ಜೊತೆಯಲ್ಲಿದ್ದ ಇತರ ಯುವಕರು ಸೇರಿ ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಪಿರ್ಯಾದಿದಾರರಿಗೆ ಮತ್ತು ಅವರ ಸಂಬಂಧಿ ಶಾಕೀರ ಅಹಮ್ಮದ್ ರವರಿಗೆ ತಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿರುವುದಾಗಿದೆ.
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.03.2015 ರಂದು ಮುಂಜಾನೆ ಸುಮಾರು 02.00 ಗಂಟೆಗೆ ಬೈಕು ನಂಬ್ರ KA19-EA-1817 ರಲ್ಲಿ ಫಿರ್ಯಾದುದಾರರಾದ ಜೊಸೇಫ್ ಪೀಟರ್ ಫರ್ನಾಂಡಿಸ್ ರವರ ಮಗ ಜೋಯೆಲ್ ಪರ್ನಾಂಡಿಸ್ ಎಂಬವರು ಸವಾರರಾಗಿ ನಂತೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ, ಸೈಂಟ್ ಸೆಬಾಸ್ಟಿಯನ್ ಚರ್ಚ್ ಬೆಂದೊರ್ ವೆಲ್ ಬಳಿಯ ಹಂಪ್ಸ್ ಹತ್ತಿರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಸ್ಕಿಡ್ಡಾಗಿ ರಸ್ತೆಗೆ ಬಿದ್ದ ಪರಿಣಾಮ ಜೋಯೆಲ್ ಪರ್ನಾಂಡಿಸ್ ರ ತಲೆಗೆ, ಎದೆಗೆ ಮತ್ತು ಬಾಯಿಗೆ ಗಂಭೀರ ಸ್ವರೋಪದ ಗುದ್ದಿದ ಗಾಯ ಹಾಗೂ ಕಿವಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ಪಡೆದು ನಂತರ ಪಾದರ್ ಮುಲ್ಲರ್ಸ್ ಆಸ್ಪತ್ರೆಯ MICU ನಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2015 ರಂದು 9:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಮನೋಜ್ ಕುಮಾರ್ ರವರು ತನ್ನ ಬಾಬ್ತು ಮೋಟಾರು ಸೈಕಲು ಕೆಎ-31-ಆರ್-7604ನೇದರಲ್ಲಿ ತಣ್ಣೀರು ಬಾವಿ ಕಡೆಯಿಂದ ಮಂಗಳೂರಿಗೆ ಹೋಗುವರೇ ಎನ್.ಹೆಚ್-66ರಲ್ಲಿ ಕುದುರೆ ಮುಖ ಜಂಕ್ಷನ್ ಬಳಿ ರಸ್ತೆಯನ್ನು ಕ್ರಾಸ್ ಮಾಡಲು ದ್ವಿ ಚಕ್ರವನ್ನು ನಿಲ್ಲಿಸಿದ್ದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ-20-1704 ನಂಬ್ರದ ಬಸ್ಸನ್ನು ಅದರ ಚಾಲಕನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದು, ತಲಗೆ ಗಂಬೀರ ಸ್ವರೂಪದ ಗಾಯವಾಗಿ ಮೈ,ಕೈಗೆ ತರಚಿದ ಗಾಯವಾಗಿರುತ್ತದೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ರಾಮ ಭವನ ಕಾಂಪ್ಲೆಕ್ಸ್ನಲ್ಲಿರುವ ಸಮೃದ್ಧಿ ಅಸೋಸಿಯೇಟ್ಸ್ ಪ್ರಕಾಶ್ ಎಂಬವರು ದಿನಾಂಕ: 03-04-2014 ರಂದು ಉದಯವಾಣಿ ಪತ್ರಿಕೆಯಲ್ಲಿ ಸಿಂಗಾಪುರ ದೇಶಕ್ಕೆ ಕೆಲಸದಾಳು ಬೇಕೆಂದು ಜಾಹಿರಾತು ನೀಡಿದ್ದು ಅದರಂತೆ ಫಿರ್ಯಾದಿದಾರರಾದ ಶ್ರೀ ಎಸ್ ಮಹಮ್ಮದ್ ಶರೀಫ್ ಎಂಬವರು ವೀಸಾ ನೀಡುವ ಬಗ್ಗೆ 1,30,000/- ಗಳನ್ನು ನೀಡಿದ್ದು ಆರೋಪಿಯು ಸಿಂಗಾಪುರಕ್ಕೆ ಯುಟಿಲಿಟಿ ವರ್ಕರ್ ಅಂತ ವೀಸಾ ನೀಡುವುದಾಗಿ ಭಾರತೀಯ ಪಾಸ್ ಪೋರ್ಟನ್ನು ಕೂಡಾ ಪಡೆದಿರುತ್ತಾನೆ. ಆರೋಪಿಯು ವೀಸಾ ನೀಡದೇ ಪದೇ ಪದೇ ಸತಾಯಿಸುತ್ತಾ ವೀಸಾ ನೀಡದೇ ಹಾಗೂ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದು ಕಚೇರಿಗೆ ವಿಚಾರಿಸಲು ಹೋದಾಗ ಆರೋಪಿಯ ಜೊತೆಗೆ ಅವರ ಕಚೇರಿಯ ಸಿಬ್ಬಂದಿಗಳಾದ ಕುಮಾರಿ ರೇಷ್ಮಾ, ಶ್ರೀಕಾಂತ, ಬ್ರಾಹ್ಮಿ ಮತ್ತು ಸುರೇಶ್ ಎನ್ನುವವರು ಆರೋಪಿಯ ಜೊತೆ ಸೇರಿ ವೀಸಾ ನೀಡದೇ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿದ್ದಲ್ಲದೇ ಜೀವ ಬೆದರಿಕೆ ಒಡ್ಡಿರುತ್ತಾರೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18.03.2015 ರಂದು ಮುಂಜಾನೆ 6.15 ಗಂಟೆಗೆ ವಳಚ್ಚಿಲ್ ಎಂಬಲ್ಲಿ KA11A7398 ನೇ ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೆಸ್ಕಾಂ ಕಂಪೆನಿಗೆ ಸಂಬಂಧಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂ ಇಲಾಖೆಗೆ ರೂ 22000/- ನಷ್ಟ ಉಂಟಾಗಿರುತ್ತದೆ ಎಂಬುದಾಗಿ ಮೆಸ್ಕಾಂ ಕುಲಶೇಖರದ ಸೀನಿಯರ್ ಆಫೀಸರ್ ಆದ ಶ್ರೀ ಶ್ರೀ ಡೈನೆಷಿಯಸ್ ಡಿ'ಸೋಜಾ ರವರು ದೂರು ನೀಡಿರುವುದಾಗಿದೆ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18.03.2015 ರಂದು ಸಂಜೆ 5.30 ಗಂಟೆಗೆ ಕಣ್ಣೂರು ರೈಲ್ವೆ ಬ್ರಿಡ್ಜ್ ಬಳಿ ಬಸವರಾಜ ಎಂಬುವವರು ಸೈಕಲ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಬಿ.ಸಿ ರೋಡ್ ಕಡೆಗೆ N.H-73 ನೇ ರಸ್ತೆಯಲ್ಲಿ KA-41 A-8028 ನೇ ನಂಬ್ರದ ಲಾರಿಯನ್ನು ಅದರ ಚಾಲಕನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಗಂಡನ ಸೈಕಲ್ಗೆ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ ಮತ್ತು ಸೊಂಟಕ್ಕೆ ಗಂಬೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಗಿದೆ.
rose day gift
ReplyDeletered rose day
7 feb rose day
rose day greetings
world rose day
date of rose day
rose day cards
valentines day rose
valentine rose day
rose day msgs
national rose day
rose day wallpapers