ದೈನಂದಿನ ಅಪರಾದ ವರದಿ.
ದಿನಾಂಕ 23.03.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
1
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
3
|
ಇತರ ಪ್ರಕರಣ
|
:
|
1
|
1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರವಿ ಹೆಚ್ ಜಾನಗಿರಿ ರವರು 6 ವರ್ಷಗಳಿಂದ ಟಾಟಾ ಡೊಕೋಮೋ ಕಂಪೆನಿಯ ಮೊಬೈಲ್ ಟವರ್ ಗಳ ಟೆಕ್ನೀಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸುಮಾರು 6 ವರ್ಷಗಳ ಹಿಂದೆ ಕಾವೂರು ಶಾಂತಿನಗರದಲ್ಲಿರುವ ಮುರಗುಡ್ಡೆ ಎಂಬಲ್ಲಿ ಮೊಬೈಲ್ ಟವರ್ ನ್ನು ಹಾಕಿದ್ದು, ಇದರ ಕಾರ್ಯನಿರ್ವಹಣೆಗೆ EXIED 600 AH ಕಂಪೆನಿಯ 2 ವೋಲ್ಟ್ ನ ಒಟ್ಟು24 ಬ್ಯಾಟರಿಗಳನ್ನು ಅಲ್ಲಿಯೇ ಹತ್ತಿರದ ಟವರ್ ಶೆಲ್ಟರ್ ರೂಂ ನಲ್ಲಿ ಅಳವಡಿಸಿದ್ದು, ದಿನಾಂಕ 20-03-2015 ರಂದು ಮಧ್ಯಾಹ್ನ 3-10 ಗಂಟೆಗೆ ಕೆಲಸ ಮುಗಿಸಿ ಟವರ್ ಶೆಲ್ಟರ್ ನ ರೂಂ ನ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ದಿನಾಂಕ 22/03/2015 ರಂದು ಬೆಳಿಗ್ಗೆ 10-30 ಗಂಟೆಗೆ ಬಂದು ನೋಡಿದಾಗ ಟವರ್ ಶೆಲ್ಟರ್ ನ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಒಡೆದು ಒಳಗಡೆ ಇದ್ದ EXIED 600 AH ಕಂಪೆನಿಯ 2 ವೋಲ್ಟ್ ನ ಒಟ್ಟು24 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತುಗಳ ಮೌಲ್ಯ ತಿಳಿದಿರುವುದಿಲ್ಲ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-03-2015 ರಂದು 09-00 ಗಂಟೆಗೆ ಸೋಮನಾಥ ಪೂಜಾರಿ ಎಂಬವರು ಮಂಗಳೂರು ಕುಲಾಯಿ ಕಾನ ಪ್ರೇಮನಗರ ಅವರ ಮನೆಯಿಂದ ಮಗಳನ್ನು ಶಾಲೆಗೆ ಬಿಟ್ಟು ಕೆಲಸಕ್ಕೆಂದು ಹೋದವರು ಈ ತನಕ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಚಹರೆಃ 37 ವರ್ಷ, 5 ಅಡಿ 6 ಇಂಚು ಎತ್ತರ, ದೃಡಕಾಯ ಶರೀರ, ಗೋದಿ ಮೈಬಣ್ಣ, ಕನ್ನಡ, ತುಳು, ಹಿಂದಿ ಮಾತನಾಡುತ್ತಾರೆ, ಪ್ಯಾಂಟ್ ಮತ್ತು ಶರ್ಟ್ ಧರಿಸಿರುತ್ತಾರೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಬಾಳ ಸುರತ್ಕಲ್ ಮನೆಯಲ್ಲಿದ್ದ ರಾಜು ಎಂಬಾತನು ದಿನಾಂಕ 11-01-2015 ರಂದು ಹೋಟೇಲ್ ಕೆಲಸಕ್ಕೆಂದು ಹೋದವನು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಚಹರೆಃ 33 ವರ್ಷ, ಸಾದಾರಣ ಶರೀರ, ಗೋದಿ ಮೈಬಣ್ಣ, ತುಳು ಕನ್ನಡ ಹಿಂದಿ ನೇಪಾಳಿ ಬಾಷೆ ಮಾತನಾಡುತ್ತಾನೆ. ಪ್ಯಾಂಟ್ ಶರ್ಟ್ ಧರಿಸಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜಯರಾಮ್ ಗಟ್ಟಿ ರವರು ತನ್ನ ಪತ್ನಿ ಯೊಂದಿಗೆ ದಿನಾಂಕ 22.03.2015 ರಂದು ಮದ್ಯಾಹ್ನ ಸುಮಾರು 2:00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಹರೇಕಳ ಗ್ರಾಮದ ಬೈತಾರ್ ಎಂಬಲ್ಲಿರುವ ತಮ್ಮ ಅಡಿಕೆ ತೋಟದಲ್ಲಿ ಮೂತ್ರಶಂಕೆ ಮಾಡುತ್ತಿರುವಾಗ ಆರೋಪಿಗಳಾದ ಅಜರ್ ಮತ್ತು ಸರ್ಫುದ್ದೀನ್‌ರವರು ತೋಟದೊಳೆಗೆ ಅಕ್ರಮ ಪ್ರವೇಶ ಮಾಡಿ ತಡೆದು ನಿಲ್ಲಿಸಿ ಆರೋಪಿ 1ನೇ ಅಜರನು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊತ್ತಳಿಕೆಯಿಂದ ಹೊಡೆದುದ್ದಲ್ಲದೇ ಆರೋಪಿ ಸರ್ಫುದ್ದೀನ್ ಕೂಡಾ ಕೈಗಳಿಂದ ಹಲ್ಲೆ ನಡೆಸಿರುತ್ತಾನೆ. ಇದನ್ನು ಬಿಡಿಸಲು ಬಂದ ಫಿರ್ಯಾದಿದಾರರ ಹೆಂಡತಿಯನ್ನು ಆರೋಪಿ 2ನೇಯವನು ದೂಡಿ ಹಾಕಿದ್ದು, ಇವರ ಬೊಬ್ಬೆ ಕೇಳಿ ನೆರೆಯವರು ಅಲ್ಲಿಗೆ ಬರುವುದನ್ನು ಕಂಡು ಆರೋಪಿಗಳು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಗಾಯಾಳುಗಳು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.03.2015 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿರುವ ಸಮಯ ಇಸ್ಪಿಟ್ ಜುಗಾರಿ ಆಟದ ಬಗ್ಗೆ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆರೆಕಾಡು ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ತೆರೆದ ಸ್ಥಳಕ್ಕೆ 5.50 ಗಂಟೆಗೆ ಧಾಳಿ ಮಾಡಿ ಹಣವನ್ನು ಪಣವಾಗಿಟ್ಟು ಇಸ್ಪಿಟು ಎಲೆಗಳಿಂದ "ಅಂದರ್ ಬಾಹರ್" ಎಂಬ ಜುಗಾರಿ ಆಟವಾಡುತ್ತಿದ್ದ ಆರೋಪಿಗಳಾದ ಈಶ್ವರ, ದಯಾನಂದ, ಸುಂದರ, ರಾಮಕೃಷ್ಣ ಎಂಬವರುಗಳನ್ನು ದಸ್ತಗಿರಿ ಮಾಡಿ , ಆಟಕ್ಕೆ ಉಪಯೋಗಿಸಿದ ನಗದು ಹಣ ರೂ 1,630/-, 50 ಇಸ್ಪಿಟ್ ಎಲೆಗಳು, ಮತ್ತು ನೆಲಕ್ಕೆ ಹಾಸಿದ 1 ಹಳೆಯ ಪೇಪರ್ ಗಳನ್ನು 6.00 ಗಂಟೆಯಿಂದ 6.30 ಗಂಟೆಯ ವರೆಗೆ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.03.2015 ರಂದು ಬೆಳಿಗ್ಗೆ ಆಳ್ವಾಸ್ ಕಾಲೇಜಿನ ಹಾಸ್ಟೇನ್ ಪ್ರಥಮ ವರ್ಷದ ವಿದ್ಯಾರ್ಧಿನಿಯು ಬೆಳಿಗ್ಗೆ ಸುಮಾರು 11:00 ಗಂಟೆಗೆ ಔಟಿಂಗೆ ಹೋದವಳು ಮರಳಿ ಹಾಸ್ಟೇಲ್ಗೆ ಬಾರದೇ ಕಾಣೆಯಾಗಿರುತ್ತಾಳೆ. ಆಕೆಯ ಶಿವಮೊಗ್ಗ ಜಿಲ್ಲೆಯವಳಾಗಿದ್ದು, ಕಾಣೆಯಾದವಳ ಚಹರೆ ಗುರುತು : ದುಂಡು ಮುಖ, ಗೋದಿ ಮೈಬಣ್ಣ, ಎತ್ತರ ಸುಮಾರು 5,2 ಇಂಚು, ಹೋಗುವಾಗ ಹಳದಿ ಬಣ್ಣದ ಪ್ಯಾಂಟ್ ಹಾಗೂ ಮತ್ತು ಶಾಲೂ, ಬಿಳಿ ಕೆಂಪು ಮಿಶ್ರಿತ ಟಾಪ್ ಧರಿಸಿರುತ್ತಾಳೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.03.2015 ರಂದು ಸಮಯ ಸುಮಾರು 20:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ. ರಾಜೇಂದ್ರ ಕುಮಾರ್ ರವರು ಅವರ ಬಾಬ್ತು ಶ್ರೀ ಪದ್ಮಾಂಬ ಸ್ಟೋರ್ ಎಂಬ ಅಂಗಡಿಯಲ್ಲಿದ್ದ ಸಮಯ ಮೂಡಬಿದ್ರೆ ಕಡೆಯಿಂದ ಒಂದು ಆಟೋರಿಕ್ಷಾದಲ್ಲಿ ಬಂದು ಇಳಿದ ಸುದೀರ್ (18) ಎಂಬಾತನು ರಸ್ತೆಯನ್ನು ಬಲ ಬದಿಗೆ ದಾಟುತ್ತಿರುವಾಗ ಶಿರ್ತಾಡಿ ಕಡೆಯಿಂದ ಕೆ.ಎ 20 ಆರ್ 4843 ನೇದನ್ನು ಅದರ ಚಾಲಕ ಪ್ರಕಾಶ್ ಪೂಜಾರಿಯವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸುದೀರ್ಗೆ ಡಿಕ್ಕಿ ಹೊಡೆದು ಸುಮಾರು 15 ಮೀಟರ್ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಒಮ್ಮೆಲೆ ರಸ್ತೆಗೆ ಬಿದ್ದವನ್ನು ಪಿರ್ಯಾದಿಯವರು ಮತ್ತು ಬೈಕ್ ಸವಾರ ಪ್ರಕಾಶ್ ಎಂಬವರು ರಸ್ತೆಯಿಂದ ಎತ್ತಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ಕಾರಿನಲ್ಲಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21/03/2015 ರಂದು ರಾತ್ರಿ ಸುಮಾರು 10-45 ಗಂಟೆ ಸಮಯಕ್ಕೆ ಮಂಗಳಜ್ಯೋತಿಯ ಜಗದೀಶ್ ಎಂಬುವರು ಮಂಗಳೂರು ನಗರದ ಶಕ್ತಿನಗರದ ಮುತ್ತಪ್ಪಗುಡಿ ಬಳಿ ನಡೆಯುವ ಯಕ್ಷಗಾನವನ್ನು ನೋಡಲು ಹೋಗಿದ್ದವರು ಅಲ್ಲಿಯೇ ಸಮೀಪದ ಪಾಸ್ಟ್ ಪುಡ್ ಅಂಗಡಿಯ ಬಳಿ ಅವರ ಪರಿಚಯದ ಗಣೇಶ್ ಎಂಬಾತನೊಂದಿಗೆ ಮಾತನಾಡುತ್ತಿದ್ದಂತೆ ಶಕ್ತಿನಗರದ ರಾಜ ರಾಜೇಶ್ವರಿ ದೇವಸ್ಥಾನದ ಬಳಿ ವಾಸ್ತವ್ಯ ವಿರುವ ಮಂಜುನಾಥ ಎಂಬುವರ ತಮ್ಮ ವಿಶು ಹಾಗೂ ಅವನೊಂದಿಗೆ ಇದ್ದ ಕೆಲವು ಜನ ವ್ಯಕ್ತಿಗಳಲ್ಲಿ ಯಾರೋ ಒಬ್ಬಾತನು ಜಗದೀಶ್ ಎಂಬುವರು ನಿಂತಿದ್ದ ಕಡೆಗೆ ಬಾಟಲಿ ಎಸೆದಾಗ ಯಾರು ಬಾಟಲಿ ಎಸೆದಿರುವುದೆಂದು ನೋಡಿದಾಗ ಅವರೊಂದಿಗೆ ಇದ್ದ ಒಬ್ಬಾತನು ಎನು ದುರುಗುಟ್ಟಿ ನೋಡುತ್ತಿ ಎಂದು ಕೇಳಿದಾಗ ಅವರೊಂದಿಗೆ ಜಗದೀಶನು ನಿಮ್ಮನ್ನು ದುರುಗುಟ್ಟಿ ನೋಡಿಲ್ಲ ಎಂಬುದಾಗಿ ಉತ್ತರಿಸುತ್ತಿದ್ದಂತೆ ಜಗದೀಶ್ ಎಂಬುವರ ಕೈ ಯನ್ನು ಕೆಲವರು ಹಿಡಿದುಕೊಂಡು ಒಬ್ಬಾತನು ಬ್ಲೇಡ್ ನಿಂದ ಕೈಗೆ ಗೀರಿರುವುದಾಗಿಯೂ ಉಳಿದವರು ಬಾಟಲಿಯಿಂದ ಹೊಡೆದುದರ ಪರಿಣಾಮ ಜಗದೀಶ್ ರವರ ಎಡ ಕೈಗೆ ಮತ್ತು ತಲೆಯ ಹಿಂಬದಿಗೆ ರಕ್ತ ಬರುವ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಸಿ ಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಿ ಟಿ ಆಸ್ಪತ್ರೆಯಲ್ಲಿ ಗಾಯಾಳುವನ್ನು ಪರೀಕ್ಷಿಸಿ ಹೊರ ರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಿರುವುದಾಗಿದೆ.
No comments:
Post a Comment