Monday, March 16, 2015

Daily Crime Reports : 15-03-2015

ದೈನಂದಿನ ಅಪರಾದ ವರದಿ.
ದಿನಾಂಕ 15.03.201518:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
5
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
1
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
3
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-03-2015 ರಂದು ಬೆಳಿಗ್ಗೆ 9-00 ಗಂಟೆಗೆ ಮಠದಕಣಿ ರಸ್ತೆಯಲ್ಲಿರುವ ಇನ್ಲ್ಯಾಂಡ್ ಇಯೊನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಲ್ಲಿ ಮನೆ ಕೆಲಸಕ್ಕಿದ್ದ ಓರಿಸ್ಸಾ ಮೂಲದ ಹುಡುಗಿ ಪ್ಲ್ಯಾಟ್ ನಿಂದ ಹೊರ ಹೋದ ಬಳಿಕ ಮನೆಯಿಂದ ಹೊರ ಹೋದವಳು ವಾಪಾಸ್ಸು ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ಹುಡುಗಿ ಮನೆಯಿಂದ ಹೊರ ಹೋಗುವಾಗ ಮೊಬೈಲ್ ಫೋನ್‌‌ವೊಂದನ್ನು ಹಾಗೂ ಫ್ಲ್ಯಾಟಿನ ಬಾಗಿಲನ್ನು ಲಾಕ್ಮಾಡಿ, ಕೀಯನ್ನು ಜೊತೆಯಲ್ಲಿ ಕೊಂಡು ಹೋಗಿರುತ್ತಾಳೆ  ಹಾಗೂ  ಮನೆಯಲ್ಲಿ ಪ್ಲಾಟ್ ನ ಮಾಲಕಿ ಹಾಗೂ ಆಕೆ ಇಬ್ಬರೇ ವಾಸ್ತವ್ಯವಿದ್ದುದಾಗಿದೆ.
 
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 14-03-2015ರಂದು ಮಧ್ಯಾಹ್ನ ಸುಮಾರು 1-30 ಗಂಟೆಗೆ ನವಮಂಗಳೂರು ಬಂದರ್ನಿಂದ ಪಿರ್ಯಾದಿದಾರರಾದ ಶ್ರೀ ಲೋಹಿತ್ ರವರ ಬಾಬ್ತು ಪ್ರೊವಿಡೆನ್ಸ್ ಶಿಪ್ಪಿಂಗ್ ಕಂಪೆನಿಗೆ ಸೇರಿದ  16 ಟನ್ ಕೋಲ್ ನ್ನು ಲಾರಿ ಚಾಲಕ ಇಮ್ತಿಯಾಜ್  ಯಾನೆ ರಶೀದ್ ನ ಬಾಬ್ತು ಕೆ.. 12 ಬಿ. 9090ನೇ ಲಾರಿಯಲ್ಲಿ ತುಂಬಿಸಿ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಭಟ್ ವೇಬ್ರಿಡ್ಜ್ ಗೆ ತೂಕ ಮಾಡುವರೇ ಆತನಲ್ಲಿ ಕಳುಹಿಸಿದ್ದು, ಆರೋಪಿಯು ದಾರಿ ಮಧ್ಯೆ 8 ಟನ್ ಕೋಲನ್ನು ಕಳವು ಮಾಡಿರುತ್ತಾರೆ. ಇದರ ಅಂದಾಜು ಮೌಲ್ಯ ಸುಮಾರು 48,000-00 ಆಗಿರುತ್ತದೆ.
 
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 11-03-2015 ರಂದು ಬೆಳಿಗ್ಗೆ ಪಿರ್ಯಾದುದಾರರಾದ ಶ್ರೀಮತಿ ಮುಸ್ತಾರಿಕಾ ರವರ ಗಂಡ  ಅಲ್ತಾಫ್ ಯಾನೆ ಅಬ್ದುಲ್ ವಹಾಬ್ ರವರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಹೋಗುವಾ ರೆಡಿಯಾಗಿರು ಎಂದು ಪಿರ್ಯಾದಿಯಲ್ಲಿ ಹೇಳಿದ್ದುಮಕ್ಕಳಿಗೆ ಪರೀಕ್ಷೆ ಇರುವುದರಿಂದ ರೆಡಿಯಾಗದೇ ಇದ್ದು ಇದರಿಂದ ಕೋಪಗೊಂಡ ಪಿರ್ಯಾದಿದಾರರ ಗಂಡ ಪಿರ್ಯಾದಿಯನ್ನು ಹೊಡೆದಿದ್ದು, ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಇರುವುದರಿಂದ ತಾಯಿ ಮನೆಯಿಂದ ಹೋಗಿ ಬರೋಣವೆಂದು ಹೇಳಿ ದಿನಾಂಕ. 14-03-2015ರಂದು ಮನೆಯಲ್ಲಿದ್ದ ಗಂಡನಲ್ಲಿ ಪಿರ್ಯಾದಿ ಕೇಳಿದಾಗ ಕೋಪಗೊಂಡು ಕಬ್ಬಿಣದ ರಾಡ್ ಮತ್ತು ಅನ್ನ ತೆಗೆಯುವ ಅಲ್ಯುಮಿನಿಯಂ ಸೌಟ್ ನಿಂದ ಪಿರ್ಯಾದಿಯ ಎಡಕಾಲ ಹಿಂಬದಿ, ಹಾಗೂ ಎಡ ಸೊಂಟಕ್ಕೆ, ಮತ್ತು ಬಲಕಾಲ ಪಾದದ ಮೇಲ್ಗಡೆ, ಬಲಕೈ, ಎಡಕೈಗೆ ಹೊಡೆದು ಬಾಸುಂಡೆ ಬರುವ ಗಾಯವನ್ನುಂಟು ಮಾಡಿರುತ್ತಾರೆಗಂಡ ಹೊಡೆಯುತ್ತಿದ್ದಂತೆ ಮಾವ ಹಸನಬ್ಬಾ ಕೂಡಾ ಅವಳಿಗೆ ಹೊಡಿಬಿಡಬೇಡ ಇನ್ನೂ ಹೊಡಿ ಎಂದು ಹೇಳಿದ್ದಲ್ಲದೇ ಮಾವ ಕೂಡಾ ಕೈ ಮುಷ್ಟಿ ಮಾಡಿ ತಲೆಗೆ ಹೊಡೆದಿರುತ್ತಾರೆ.
 
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ದೀಪಶ್ರೀ ಗಣೇಶ್ ಎಂಬವರು ದಿನಾಂಕ 21-10-2010 ರಂದು ಪಣಂಬೂರಿನ ಜೆ ಎನ್ ಸಿ ಮದುವೆ ಮಂಟಪದಲ್ಲಿ ಮದುವೆಯಾಗಿರುತ್ತಾರೆ. ಮದುವೆ ಮಾತುಕತೆಯಾಗಿ 50 ಪವನ್ ಚಿನ್ನ ಹಾಗೂ ಮದುವೆ ಖರ್ಚುಗಳನ್ನು ನೋಡಬೇಕೆಂದು ಹೇಳಿದಕ್ಕೆ ಪಿರ್ಯಾದಿ ಕಡೆಯವರು ಒಪ್ಪಿಕೊಂಡು ಮದುವೆಯಾಗಿರುವುದಾಗಿದೆ. ಪಿರ್ಯಾದಿಯ ಗಂಡನ ಮನೆ ಬೆಂಗಳೂರಿನಲ್ಲಿ ಆಗಿದ್ದು ಪಿರ್ಯಾದಿಯ ಗಂಡ ಗಣೇಶ್ ಸ್ವಾಮಿನಾಥ ರವರಿಗೆ ವಿದೇಶದಲ್ಲಿ ಕೆಲಸವಾಗಿರುತ್ತದೆ. ಪಿರ್ಯಾದಿ ಹಾಗೂ ಗಂಡ ಜೊತೆಯಿರುವಾಗ ಒಳ್ಳೆ ರೀತಿಯಲ್ಲಿದ್ದು ನಂತರ ಗಂಡ ವಿದೇಶಕ್ಕೆ ಹೋದ ಬಳಿಕ ನೀವು ಹೆಚ್ಚು ಬಂಗಾರ, ಹಣ ನೀಡಲಿಲ್ಲ, ನೀವು ಕನ್ನಡ ಮಾತನಾಡುವವರು ಎಂದು ಅತ್ತೆ ಮಾವ ಕಿರುಕುಳ ನೀಡುತ್ತಿದ್ದರು. ನಂತರ ಪಿರ್ಯಾದಿಯ ಗಂಡ ಕೂಡ ಪೋನ್ ನಲ್ಲಿ ಬೈಯುತ್ತಾ ಪಿರ್ಯಾದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಪಿರ್ಯಾದಿಯ ಅತ್ತೆ ಮಾವ ಹಾಗೂ ಸಂಬಂಧಿ ಡಾ. ವಿಜಯ ಕೂಡ ವರದಕ್ಷಿಣೆಯ ಬಗ್ಗೆ ಕಿರುಕುಳ ನೀಡಿರುವುದಾಗಿಯೂ ಹಾಗೂ ಪಿರ್ಯಾದಿ 2012 ರಿಂದ ಕುಳಾಯಿ ಯಲ್ಲಿರುವ ತಂದೆ ತಾಯಿ ಮನೆಯಲ್ಲಿದ್ದಾಗ ಪಿರ್ಯಾದಿಯ ಗಂಡ ಪಿರ್ಯಾದಿಗೆ ಅತ್ತೆ ಮಾವನ ಮಾತು ಕೇಳಿ ಹೀಯಾಳಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದನು. ಬಳಿಕ ಪಿರ್ಯಾದಿ ಮಗುವಿಗೆ ಜನ್ಮ ನೀಡಿದ ಬಳಿಕ ನೀನು ಹೆಚ್ಚು ಚಿನ್ನ ಹಾಗೂ ಹಣವನ್ನು ತರಬೇಕು ಇಲ್ಲದಿದ್ದರೆ ನೀನು ಬೆಂಗಳೂರಿಗೆ ಬರುವುದು ಬೇಡ ಎಂಬಿತ್ಯಾದಿಯಾಗಿ ವರದಕ್ಷಿಣೆ ಕಿರುಕುಳ ನೀಡಿರುತ್ತಾರೆ.
 
5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತಿರುವು ರಸ್ತೆಯಲ್ಲಿ ದಿನಾಂಕ 23.02.2015 ರಂದು 00:30 ಗಂಟೆಗೆ ಸ್ಟೇಟ್ಕಾರು ನಂಬ್ರ ಕೆಎ-41ಜಿಎ-1 ರಲ್ಲಿ ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಚಿವರಾದ ಯು.ಟಿ.ಖಾದರ್ರವರ ಕಾರನ್ನು ಚಾಲಕ ಮೋಹನ್ಎಂಬವರು ಹೂ ಹಾಕುವ ಕಲ್ಲು ಕಡೆಯಿಂದ ನಾಟೆಕಲ್ಲು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ರಸ್ತೆಯ ತೀರ ಬಲಕ್ಕೆ ಬಂದು ಮೈಲುಕಲ್ಲಿಗೆ ಢಿಕ್ಕಿ ಹೊಡೆದು ಮತ್ತೆ ಕಾರು ಮೋರಿಗೆ ಮಗುಚಿ ಬಿದ್ದು ಕಾರಿನಲ್ಲಿದ್ದ ಕಾರು ಚಾಲಕ ಮೋಹನ್ರವರಿಗೆ ತಲೆಗೆ ರಕ್ತಗಾಯವಾಗಿದ್ದು, ಸಚಿವರಾದ ಯು.ಟಿ.ಖಾದರ್ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಾಳು ಮೋಹನ್ರವರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಬಳಿಕ ಚಿಕಿತ್ಸೆಯಿಂದ ಬಿಡುಗಡೆಯಾಗಿರುತ್ತಾರೆ. ಕಾರು ಪೂರ್ತಿ ಜಖಂಗೊಂಡಿರುವುದಾಗಿದೆ.
 
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-03-2015 ರಂದು ರಾತ್ರಿ 21:30 ಗಂಟೆಗೆ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರವಾಸವನ್ನು ಏರ್ಪಡಿಸಿದ್ದು, ಈ ಪ್ರವಾಸದಲ್ಲಿ ವಿದ್ಯಾರ್ಥಿಗಳ ಪೈಕಿ ಕೆಲವು ವಿದ್ಯಾರ್ಥಿನಿಯರು ಇದ್ದು, ಇವರನ್ನು ಅನ್ಯ ಧರ್ಮದ ವಿದ್ಯಾರ್ಥಿಗಳ ಜೊತೆ ಪ್ರವಾಸಕ್ಕೆ ಕರೆದುಕೊಂಡು ಹೋಗಬಾರದೆಂದು ಸುಮಾರು 100-150 ಮಂದಿ  ಯುವಕರು ಅಕ್ರಮಕೂಟ ಸೇರಿ ಮುಖ್ಯ ರಸ್ತೆಗೆ ತಡೆಯೊಡ್ಡಿ, ಇದನ್ನು ಆಕ್ಷೇಪಿಸಿದಾಗ ಕಾಲೇಜಿನ ಉಪನ್ಯಾಸಕರು ಪ್ರವಾಸವನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳೆಲ್ಲರನ್ನು ಪ್ರವಾಸಕ್ಕೆ ಹೋಗಲು ಬಂದ ಬಸ್ ನಂಬ್ರ ಕೆಎ-19-ಡಿ-9269ರಿಂದ ಕೆಳಗಿಸಿ ಅವರವರ ಮನೆಗೆ ಕಳುಹಿಸಿಕೊಟ್ಟಿದ್ದು, ಗಲಾಟೆ ಮಾಡುತ್ತಿದ್ದ ಗುಂಪನ್ನು ಕರ್ತವ್ಯದಲ್ಲಿದ್ದ ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದಾಗ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕೂಡಾ ಕಲ್ಲು ಬಿಸಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿಗೆ ಕೂಡಾ ಕಲ್ಲು ಬಿಸಾಡಿ ಗಾಜನ್ನು ಪುಡಿ ಮಾಡಿ ನಷ್ಟಗೊಳಿಸಿರುತ್ತಾರೆ. ಆರೋಪಿಗಳು ಕಲ್ಲು ತೂರಾಟ ನಡೆಸಿದಾಗ ಕರ್ತವ್ಯದಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯವಾಗಿರುತ್ತದೆ.
 
7.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2015 ರಂದು ರಾತ್ರಿ 00:30 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸಾಂಬಾರ್ ತೋಟದಲ್ಲಿರುವ ನೂರಾನಿಯಾ ಜುಮ್ಮಾ ಮಸೀದಿಗೆ ಕಾರಿನಲ್ಲಿ ಬಂದ 3-4 ಜನ ಕಿಡಿಗೇಡಿಗಳು ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕಲ್ಲು ಬಿಸಾಡಿ 2 ಕಿಟಕಿಯ ಗಾಜನ್ನು ಹುಡಿ ಮಾಡಿ ಸುಮಾರು 10,000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಎಸ್. ಮೊಹಮ್ಮದ್ ಎಂಬವರು ದೂರು ನೀಡಿರುತ್ತಾರೆ.
 
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-03-2015 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲಿಂಗಮ್ಮ ರವರು ಕಲ್ಲಮುಂಡ್ಕೂರು ಕಡೆಯಿಂದ ಮೂಡುಬಿದ್ರೆ ಕಡೆಗೆ ಕೆ ಎ 19-ಎಎ 4545 ನೇ ಬಸ್ಸಿನಲ್ಲಿ ಬರುತ್ತ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಗ್ರಾಮದ ತೊಡಂಕಿಲ ಬ್ರಿಡ್ಜ ಬಳಿಯಲ್ಲಿ ತಿರುವಿನಲ್ಲಿ ಚಾಲಕನು ಬಸ್ಸಿನ ಬ್ರೆಕನ್ನು ಒಮ್ಮಲೇ ಹಾಕಿದ ಪರಿಣಾಮ ಪಿರ್ಯಾದಿದಾರರ ಎದುರಿನ ಸೀಟಿನಿಂದ ಮುಗ್ಗರಿಸಿ ಬಿದ್ದು ರಸ್ತೆಗೆ ಎಸೆಯಲ್ಪಟ್ಟಿದ್ದು ಹಣೆಗೆ ಎಡಕನ್ನೆಗೆ ಮೂಗುವಿನಲ್ಲಿ ಎರಡು ಕಾಲುಗಳ ಮೊಣಗಂಟಿಗೆ  ಗಾಯಗೊಂಡಿದಲ್ಲದೇ ಎಡಕೈಯ ಮೊಣಗಂಟು, ಮಣಿಗಂಟು ಬಲ ಕೈಯ ಮಣಿಗಂಟಿಗೆ ಜಖಂ ಗೊಂಡು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
 
9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-03-2015 ರಂದು ಸಮಯ ಸುಮಾರು ರಾತ್ರಿ 9-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ನಂದೀಶ್ ರವರು ಕೆಎ-19-ಇಇ-1867ರಲ್ಲಿ ಸವಾರರಾಗಿದ್ದುಕೊಂಡು ನಂತೂರು ಕಡೆಯಿಂದ  ಪದವಿನಂಗಡಿ ಕಡೆಗೆ ಬರುತ್ತಾ  ಕೆಪಿಟಿ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ನಂತೂರು ಕಡೆಯಿಂದ ಕಾರು ನಂಬ್ರ ಕೆಎ -19-ಎಮ್.ಸಿ-7734 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಬೈಕ್ ಸಮೇತ ಡಾಂಬರು ರಸ್ತೆಗೆ ಬಿದ್ದು ಎಡಕೈ ಮೊಣಗಂಟಿಗೆ, ಎಡಕೈ ಬೆರಳುಗಳಿಗೆ, ಎಡಕಾಲಿನ ಮೊಣಗಂಟಿಗೆ, ಎಡಕಾಲಿನ ಪಾದಕ್ಕೆ ಚರ್ಮ ಕಿತ್ತು ಹೋದತಂಹ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ, ಪಾದಕ್ಕೆ ತರಚಿದಂತ ಗಾಯ ಬಲಭುಜಕ್ಕೆ ರಕ್ತ ಗಾಯ, ತಲೆಗೆ ರಕ್ತಗಾಯ ಉಂಟಾಗಿ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
10.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:14/15-03-2015 ರಂದು ಪಿರ್ಯಾದಿದಾರರಾದ ಶ್ರೀ ಯು.ಆರ್.ಡಿ'ಸೋಜಾ, ಎಎಸ್ಐ ರವರು  ರಾತ್ರಿ ಠಾಣಾ ಪಭಾರ ಕರ್ತವ್ಯದಲ್ಲಿರುವ ಸಮಯ ದಿನಾಂಕ:  15-03-2015 ರಂದು ಸಮಯ ಸುಮಾರು ಬೆಳಿಗ್ಗೆ 02-30 ಗಂಟೆಗೆ ಮಂಗಳೂರು ದಕ್ಷಿಣ ಠಾಣಾ ಅ.ಕ್ರ. 46/2015 ಪ್ರಕರಣದ ಆರೋಪಿ ರಾಜೇಶ್ ಮತ್ತು ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಅಪ್ರಾಪ್ತ ಬಾಲಕಿ ರವರನ್ನು ಠಾಣಾ ಸಿಬ್ಬಂದಿಗಳು ಠಾಣೆಗೆ ತಂದು ಹಾಜರುಪಡಿಸಿದ್ದುಪಿರ್ಯಾದಿದಾರರು ಅಪ್ರಾಪ್ತ ಬಾಲಕಿಯನ್ನು ಮಹಿಳಾ ಸಿಬ್ಬಂದಿಯವರ ಬೆಂಗಾವಲಿನಲ್ಲಿ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿರುತ್ತಾರೆ.   ಬಾಲಕಿಯನ್ನು ಅಪಹರಣ ಮಾಡಿದ ರಾಜೇಶ್ ನನ್ನು ಘಟನೆಯ ಬಗ್ಗೆ ವಿಚಾರಿಸಲು, ಹಾಗೂ ಸೂಕ್ತ ಭದ್ರಿಕೆಯಲ್ಲಿ ಇಡುವ ಬಗ್ಗೆ ತಪಾಸಣೆ ನಡೆಸಲು ಸಮಯ ಸುಮಾರು ಬೆಳಿಗ್ಗೆ 3-15 ಗಂಟೆಗೆ  ಪಿರ್ಯಾದಿದಾರರು ತನ್ನ ಬಳಿ ನಿಲ್ಲಿಸಿ ವಿಚಾರಿಸುತ್ತಿದ್ದ ಸಮಯ ಪಿರ್ಯಾದಿದಾರರ ಪಕ್ಕದಲ್ಲಿ ಇಟ್ಟಿದ್ದ ವಾಕಿಟಾಕಿ  ಕೈ ತಾಗಿ ಕೆಳಗೆ ಬಿದಿದ್ದುಅದನ್ನು ಬಗ್ಗಿ ಹೆಕ್ಕಿ ತೆಗೆಯುವದರೊಳಗೆ  ರಾಜೇಶನು  ತಕ್ಷಣ ಆತನಲ್ಲಿದ್ದ  ಬ್ಯಾಗ್ ನಲ್ಲಿದ್ದ  ವಿಷ ಪದಾರ್ಥವಿರುವ ಟಿನ್ ನಿಂದ ದ್ರಾವಣವನ್ನು ಕುಡಿದು ಆತ್ಮ ಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ. ಆರೋಪಿ ರಾಜೇಶ್ ಮತ್ತು ಅಪ್ರಾಪ್ತ ಬಾಲಕಿ ಪರಸ್ಪರ ಗಾಡವಾಗಿ ಪ್ರೀತಿಸುತ್ತಿದ್ದು, ಇದಕ್ಕೆ ಅವರ ಎರಡೂ ಕಡೆಯ ಮನೆಯವರ ಒಪ್ಪಿಗೆಯಿಲ್ಲದೇ ಇದ್ದುದರಿಂದ ಅವರಿಬ್ಬರು ಆತ್ಮ ಹತ್ಯೆ ಮಾಡುವರೇ ತೀರ್ಮಾನಿಸಿ, ಈ ಬಗ್ಗೆ ಒಂದು ಡೆತ್ ನೋಟನ್ನು ದಿನಾಂಕ: 09-03-2015 ರಂದು ಬರೆದಿಟ್ಟಿರುತ್ತಾರೆ. ಹಾಗೂ ವಿಷ ಪದಾರ್ಥವನ್ನು ಈ ಮೊದಲೇ ಖರೀದಿಸಿ ಬ್ಯಾಗ್ ನಲ್ಲಿ ಇಟ್ಟುಕೊಂಡಿರುತ್ತಾರೆ. ರಾಜೇಶ್ ನ ಮೇಲೆ ಪೊಲೀಸ್ ಕೇಸ್ ಆಗಿರುವುದರಿಂದ ಜೈಲು ಶಿಕ್ಷೆ ಆಗಬಹುದು ಎಂಬ ಭಯದಿಂದ ವಿಷ ಕುಡಿದಿರುವುದಾಗಿದೆ ಎಂಬುದಾಗಿ ರಾಜೇಶ್ ನನ್ನು ವಿಚಾರಿಸುವ ಸಮಯ ತಿಳಿಸಿರುತ್ತಾನೆ. ಈ ಬಗ್ಗೆ ರಾಜೇಶ್ ನನ್ನು ಕೂಡಲೇ ಚಿಕಿತ್ಸೆ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ   ಕಳುಹಿಸಿಕೊಡಲಾಗಿದೆ.
 
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರಾದ ಮಧುಕರ ಶೆಟ್ಟಿಯವರು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಮಂಗಳೂರು ವನ್ ಶಾಲೆಯ ಮಕ್ಕಳನ್ನು ಮಾರುತಿ ಓಮ್ನಿ ವ್ಯಾನಿನಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಂತೆ ದಿನಾಂಕ. 13-3-2015 ರಂದು ಸಂಜೆ ಸುಮಾರು 4-05 ಗಂಟೆಯ ಹೊತ್ತಿಗೆ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುವ ಸಲುವಾಗಿ ಶಾಲಾ ಗ್ರೌಂಡ್ಗೆ ವಾಹನದಲ್ಲಿ ಬಂದಾಗ ಆರೋಪಿಗಳಾದ ಮಹಮ್ಮದ್ ಅಸಬ್, ಸಯ್ಯದ್ ಉಮ್ಮರ್, ಅಬ್ದುಲ್ ನೌಫಾಲ್ ಮತ್ತು ಇತರರು ಫಿರ್ಯಾದಿದಾರರ ವಾಹನವನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಫಿರ್ಯಾದಿಯನ್ನು ಮಾರುತಿ ಓಮ್ನಿ ವ್ಯಾನಿನಿಂದ ಹೊರಗೆ ಎಳೆದು ಹಾಕಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳೆಲ್ಲರೋ ಒಂದೇ ಸವನೆ ಕೈಗಳಿಂದ ಫಿರ್ಯಾದಿದಾರರ ತಲೆಗೆ, ಕೆನ್ನೆಗೆ, ಬೆನ್ನಿಗೆ ಮತ್ತಿತರ ಕಡೆಗಳಿಗೆ ಹೊಡೆದು ಗುದ್ದಿದಲ್ಲದೆ ಕಾಲಿನಿಂದ ಹೊಟ್ಟೆಗೆ ತುಳಿದಿರುತ್ತಾರೆ. ಅಗ ಫಿರ್ಯಾದಿದಾರರು ನೋವಿನಿಂದ ಜೋರಾಗಿ ಬೊಬ್ಬೆ ಹಾಕಿದಾಗ ಅಲ್ಲಿಗೆ ಇತರರು ಬರುವುದನ್ನು ನೋಡಿ ಅವರುಗಳು ಅಲ್ಲಿಂದ  ಓಡಿ ಹೋಗಿರುತ್ತಾರೆ.
 
12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-03-2015 ರಂದು ರಾತ್ರಿ 00-45 ಗಂಟೆಯ ಸಮಯ ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲ ಗ್ರಾಮದ ಉಳ್ಳಾಲ ಹಜರತ್ಶಾಲೆಯ ಬಳಿ ಯುವಕರ ಗುಂಪು ಕಲ್ಲುಗಳನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿಕೊಂಡು ನಮಗೆ ನ್ಯಾಯಬೇಕು ಎಂದು ಹೇಳುತ್ತಾ ಪಿರ್ಯಾದುದಾರರಾದ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷರಾದ ಶ್ರೀ ಸವಿತೃ ತೇಜ್ ಪಿ.ಡಿ. ರವರ ಜೀಪ್ನ್ನು ರಸ್ತೆಯಲ್ಲಿ ಅಡ್ಡ ಹಾಕಿ ಮುಂದಕ್ಕೆ ಹೋಗದಂತೆ ಮತ್ತು ಸರಕಾರದ ಕರ್ತವ್ಯವನ್ನು ನಿರ್ವಹಿಸಲು ತಡೆದು ಅಡ್ಡಿಯನ್ನುಂಟು ಮಾಡಿದ್ದು ಸದ್ರಿಯವರು ಗುಂಪು ಯಾವುದೋ ಕಾನೂನು ಬಾಹಿರ ಕೃತ್ಯ ನಡೆಸಲು ಗುಂಪು ಸೇರಿದ್ದು ಗುಂಪನ್ನು ಚದರುವಂತೆ ಹೇಳಿದರೂ , ಕೇಳದೇ ಇದ್ದಾಗ ಲಾಠಿ ಹಿಡಿದು ಜೀಪಿನಿಂದ ಇಳಿದಾಗ, ಎದ್ದು ಬಿದ್ದು ಓಡುವಾಗ ಬಿದ್ದು ಉರುಳಾಡಿ ಎದ್ದುಕೊಂಡು ಪರಾರಿಯಾಗಿರುತ್ತಾರೆ.
 
13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅಬ್ದುಲ್ ರಹೀಮಾನ್ ರವರು ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಒನ್‌‌ ಶಾಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬರುವ ವಾಹನದ ಚಾಲಕರಾಗಿದ್ದು, ದಿನಾಂಕ 13-03-2015ರ ಸಂಜೆ 16-30 ಗಂಟೆ ಸಮಯ ಮಂಗಳೂರು ಒನ್ಶಾಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಲು ಓಮಿನಿಯಲ್ಲಿ ಕೂರಿಸಿದಾಗ ಅಲ್ಲಿ 07 ಜನ ಯುವಕರು ಅಕ್ರಮ ಕೂಟ ಸೇರಿಕೊಂಡು ಬಂದು ಓಮ್ನಿ ವಾಹನವನ್ನು ಮುಂದೆ ಹೋಗದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಕಾಲಿನಿಂದ ತುಳಿದು ನೋವುವನ್ನುಂಟು ಮಾಡಿ ಹೊರಟು ಹೋಗಿರುತ್ತಾರೆ.
 
14.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-03-2015 ರಂದು ರಾತ್ರಿ 22-15 ಗಂಟೆಯ ಸಮಯ ಚೆಂಬುಗುಡ್ಡೆಯ ಮಂಗಳೂರು ಒನ್ಶಾಲೆಯಲ್ಲಿ ಓಮಿನಿಯ ಚಾಲಕನು ಸದ್ರಿ ಶಾಲೆಯ ನರ್ಸರಿಯ ಬಾಲಕಿಗೆ ದೌರ್ಜನ್ಯ ನಡೆಸಿದ್ದಾನೆಂದು ಯುವಕರ ಗುಂಪು ಮೇಲಂಗಡಿ ದರ್ಗಾದ ಬಳಿ ಅಕ್ರಮ ಕೂಟ ಸೇರಿಕೊಂಡು ಕಲ್ಲು ಬಾಟ್ಲಿ ಹಿಡಿದುಕೊಂಡು ಠಾಣೆಯ ಕಡೆಗೆ ಬರುತ್ತಿದಾರೆಂಬ ಮಾಹಿತಿಯ ಮೇರೆಗೆ ಪಿರ್ಯಾದುದಾರರಾದ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ (ಕಾ&ಸು) ರಾದ ಭಾರತಿ ಜಿ. ರವರು ಸಿಬ್ಬಂದಿಯ ಜೊತೆಯಲ್ಲಿ ಅಲ್ಲಿಗೆ ಹೊರಟಾಗ ಮಿಲ್ಲತ್ನಗರದಲ್ಲಿ ಸದ್ರಿ ಗುಂಪು ಎದುರಾಗಿದ್ದು, ಮೇಘಾಪೋನಿನಿಂದ ಕಾನೂನು ಬಾಹಿರ ಗುಂಪು ಚದುರಿ ಹೋಗುವಂತೆ ತಿಳುವಳಿಕೆ ನೀಡಿದಾಗ ಸದ್ರಿ ಗುಂಪು ನ್ಯಾಯ ಬೇಕು, ನ್ಯಾಯ ಬೇಕು ಎಂದು ಬೊಬ್ಬೆಹೊಡೆಯುತ್ತಾ ಪೊಲೀಸ್ರ ಮೇಲೆ ಕಲ್ಲು ಬಾಟ್ಲಿ  ಎಸೆದು ಪೊಲೀಸ್ರ ಮರಣವನ್ನುಂಟು ಮಾಡಲು ಪ್ರಯತ್ನಿಸಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂಧಿಗಳು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದಾಗ ಗಲ್ಲಿ ರಸ್ತೆಗಳಲ್ಲಿ ಎದ್ದು ಬಿದ್ದು ಓಡಿ ಹೋಗಿರುತ್ತಾರೆ, ಕಲ್ಲು ಎಸೆದುದರಿಂದ ಸಿಬ್ಬಂಧಿಗಳು ಗಾಯಗೊಂಡಿದ್ದು ಮತ್ತು ಇಲಾಖಾ ಜೀಪು ಕೂಡಾ ಹಾನಿಗೊಂಡಿದೆ.
 
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-03-2015 ರಂದು ರಾತ್ರಿ 20-30 ಗಂಟೆಯ ಯುವಕರ ಗುಂಪು ಚೆಂಬುಗುಡ್ಡೆಯ ಮಂಗಳೂರು ಒನ್ಶಾಲೆಯಲ್ಲಿ ನರ್ಸರಿ ಶಾಲೆಯ ಬಾಲಕಿಗೆ ಶಾಲೆಯ ವ್ಯಾನಿನ ಚಾಲಕನು ದೌರ್ಜನ್ಯ ಎಸಗಿದ್ದಾನೆಂದು ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಹೈವೆಯಲ್ಲಿ ಬಸ್ಸ್ಟ್ಯಾಂಡಿಗೆ ತಿರುಗುವಲ್ಲಿ ಕಲ್ಲು ಹಿಡಿದು ಅಕ್ರಮ ಕೂಟ ಸೇರಿ ಹೋಗಿ ಬರುವ ವಾಹನಗಳ ಸಂಚಾರಕ್ಕೆ ತಡೆ ಒಡ್ಡಿದಾಗ ಪಿರ್ಯಾದುದಾರರಾದ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ(ಅಪರಾಧ)ರಾದ ರಾಜೇಂದ್ರ ರವರು ಮತ್ತು ಸಿಬ್ಬಂಧಿಗಳು ಸ್ಥಳಕ್ಕೆ ಹೋಗಿ ಸದ್ರಿ ಅಕ್ರಮ ಕೂಟಕ್ಕೆ ಚದುರುವಂತೆ ಹೇಳಿದಾಗ, ಸದ್ರಿ ಗುಂಪು ಪೊಲೀಸ್ರ ಮರಣವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ಸರಕಾರದ ಕರ್ತವ್ಯ ನಿರತ ಪಿರ್ಯಾದುದಾರರ ಮತ್ತು ಸಿಬ್ಬಂಧಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಪೊಲೀಸ್ರ ಮೇಲೆ ಕಲ್ಲು ಬಿಸಾಡಿ ಪೊಲೀಸ್ರನ್ನು ಗಾಯಗೊಳಿಸಿದ್ದು ಅಲ್ಲದೆ ವಾಹನಗಳ ಮೇಲೆ ಕಲ್ಲು ಎಸೆದು ಗಾಜುಗಳನ್ನು ಪೂಡಿಮಾಡಿ ನಷ್ಟವನ್ನುಂಟು ಮಾಡಿರುತ್ತಾರೆ.
 

No comments:

Post a Comment