ದೈನಂದಿನ ಅಪರಾದ ವರದಿ.
ದಿನಾಂಕ 01.04.2015 ರ 19:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
3
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
4
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
8
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
2
|
ಇತರ ಪ್ರಕರಣ
|
:
|
2
|
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015ರಂದು ಸಂಜೆ 18-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ರೋಹಿತ್ ರವರು ತನ್ನ ಕೆ.ಎ.-19ಇಸಿ-8512ನೇ ನಂಬ್ರದ ಯಮಹಾ ಎಫ್ ಜೆಡ್ ಮೋಟಾರು ಸೈಕಲ್ನ್ನು ನಗರದ ಬಳ್ಳಾಲ್ಬಾಗ್ನಲ್ಲಿರುವ ಫುಡ್ ಲ್ಯಾಂಡ್ ಹೋಟೇಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟು ಹೋಟೇಲ್ಗೆ ಹೋಗಿ ಅಲ್ಲಿ ಊಟ ಮುಗಿಸಿ, ಅಲ್ಲಿಂದ ತನ್ನ ಗೆಳೆಯನ ಕಾರಿನಲ್ಲಿ ತನ್ನ ಮನೆಗ ಹೋಗಿದ್ದು, ತದ ನಂತರ ದಿನಾಂಕ 29-03-2015ರಂದು ಬೆಳಿಗ್ಗೆ 10-00 ಗಂಟೆಗೆ ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಸದ್ರಿ ಮೋಟಾರು ಸೈಕಲ್ನ್ನು ಕಳವುಮಾಡಿಕೊಂಡು ಹೋಗಿದ್ದು, ಅದರ ಮೌಲ್ಯ ರೂ. 40000/- ಆಗಬಹುದು.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-03-2015ರಂದು 15-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಿರಣ್ ರು ತನ್ನ ಬಾಬ್ತು ಕೆ.ಎ.03ವೈ8377ನೇ ಯಮಹಾ ಆರ್.ಎಕ್ಸ್ 135 ಬೈಕ್‌ನ್ನು ಲೇಡಿಹಿಲ್ ಕಾರ್ಪೋರೇಶನ್ ಬ್ಯಾಂಕಿನ ಗ್ರಂಥಾಲಯದ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ಮಾಡಿ ತನ್ನ ಸ್ನೇಹಿತನೊಂದಿಗೆ ಉಡುಪಿಗೆ ಹೋಗಿದ್ದು, ನಂತರ ವಾಪಾಸ್ಸು ಅದೇ ದಿನ 19-00 ಗಂಟೆಗೆ ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಸದ್ರಿ ಮೋಟಾರು ಸೈಕಲ್ನ್ನು ಕಳವುಮಾಡಿಕೊಂಡು ಹೋಗಿದ್ದು, ಅದರ ಮೌಲ್ಯ ರೂ. 15000/- ಆಗಬಹುದು.
3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-04-2015 ರಂದು ಮುಂಜಾನೆ 01-00 ಗಂಟೆ ಸಮಯಕ್ಕೆ ಆರೋಪಿತರು ಅಕ್ರಮ ಕೂಟ ಸೇರಿ ಮಾರಾಕಾಯಧಗಳಿಂದ ಸಜ್ಜಾಗಿ ಮೂರು ಬೈಕುಗಳಲ್ಲಿ ತಲಾ ಮೂವರಂತೆ ಒಟ್ಟು ಒಂಬತ್ತು ಜನ ಆರೋಫಿತರು ಮಂಗಳೂರು ನಗರ ಬೆಸೆಂಟ್ ಜಂಕ್ಷನ್ ಬಳಿಯ ಗಣೇಶ್ ವಿಹಾರ್ ಲಾಡ್ಜ್ ಬಳಿ ಪಿರ್ಯಾದಿದಾರರಾದ ಶ್ರೀ ಶಿಶಿರ ಪೂಜಾರಿ ರವರು ಪರೀಕ್ಷಿತ್ ಎಂಬಾತನೊಡನೆ ಮಾತನಾಡುತ್ತಿದ್ದಾಗ ಸುತ್ತುವರಿದ ಆರೋಪಿತರ ಪೈಕಿ ಲತೀಶ್ ನಾಯಕ್ ಎಂಬಾತನು ಪಿರ್ಯಾದಿದಾರರ ಎಡಕೈ ಮೊಣಗಂಟಿಗೆ ತಲವಾರಿನಿಂದ ಕಡಿದು ತೀವ್ರ ಗಾಯಪಡಿಸಿದಲ್ಲದೇ ಇತರ ಆರೋಪಿತರು ಸೊಂಟದ ಹಿಂಬದಿಗೆ ಚೂರಿಯಿಂದ ತಿವಿದು ರಕ್ತಗಾಯಪಡಿಸಿ ನೆಲಕ್ಕೆ ದೂಡಿ ಹಾಕಿ ಎಡಕಾಲು ಮೊಣಗಂಟಿಗೆ ತರಚಿತ ಗಾಯವನ್ನುಂಟು ಮಾಡಿರುವುದಾಗಿದೆ.
4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.03.2015 ರಂದು ಪಿರ್ಯಾದಿದಾರರಾದ ಶ್ರೀ ಪ್ರಹ್ಲಾದ್ ಶೆಟ್ಟಿ ರವರು ತನ್ನ ಪತ್ನಿಯ ಬಾಬ್ತು ಕಾರು ನಂಬ್ರ ಕೆ.ಎ-19-ಎಂ.ಎ-2688 ನೇದನ್ನು ಮಂಗಳೂರು ನಗರದ ಎ.ಬಿ ಶೆಟ್ಟಿ ಸರ್ಕಲ್ ಕಡೆಯಿಂದ ಜ್ಯೋತಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ, ಬೆಳಿಗ್ಗೆ ಸಮಯ ಸುಮಾರು 08:10 ಗಂಟೆಗೆ ಎಲ್‌ಎಲ್.ಎಚ್ ರಸ್ತೆಯ ಆಲುಕ್ಕಾಸ್ ಜುವೆಲ್ಲರ್ಸ್‌ನ ಸ್ವಲ್ಪ ಎದುರು ತಲುಪಿದಾಗ, ಮಿಲಾಗ್ರಿಸ್ ಕ್ರಾಸ್ ರಸ್ತೆಯ ಕಡೆಯಿಂದ ಬಾವುಟಗುಡ್ಡೆ ಕಡೆಗೆ ಕಾರು ನಂಬ್ರ ಕೆ.ಎ-19-ಎಂ.ಎ-3162 ನೇದನ್ನು ಅದರ ಚಾಲಕಿಯು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗದ ಬಂಪರ್ ಮತ್ತು ಬಂಪರಿನ ಕ್ಲಾಂಪ್ಗಳು ಜಖಂ ಉಂಟಾಗಿದ್ದು, ಈ ಬಗ್ಗೆ ಅಪಘಾತ ಉಂಟು ಮಾಡಿದ ಕಾರಿನ ಚಾಲಕಿರವರು ಪಿರ್ಯಾದಿದಾರರ ಕಾರಿಗೆ ಉಂಟಾದ ನಷ್ಟವನ್ನು ಕೊಡುವುದಾಗಿ ತಿಳಿಸಿ, ಈಗ್ಯೆ ರಿಪೇರಿಯ ಹಣವನ್ನು ನೀಡಲು ನಿರಾಕರಿಸಿರುತ್ತಾರೆ.
5.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 01-04-2015 ರಂದು ಪಿರ್ಯಾದಿದಾರರಾದ ಶ್ರೀ ಸುಧೀರ್ ವಿ.ಆರ್. ರಾವ್ ರವರು ತನ್ನ ಬಾಬ್ತು ಕಾರು ನಂಬ್ರ ಕೆ.ಎ-19-ಎಂ.ಸಿ-9052 ನೇದನ್ನು ಮಂಗಳೂರು ನಗರದ ಲೇಡಿಹಿಲ್ ಚರ್ಚ್ ಕಡೆಯಿಂದ ಮಣ್ಣಗುಡ್ಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ, ಬೆಳಿಗ್ಗೆ ಸಮಯ 08:40 ಗಂಟೆಗೆ ಗಾಂಧೀನಗರದ ಭಟ್ ನರ್ಸಿಂಗ್ ಹೋಂ ಎದುರುಗಡೆ ತಲುಪಿದಾಗ, ಕಾರು ನಂಬ್ರ ಕೆ.ಎ-20-ಜೆಡ್-5955 ನೇದನ್ನು ಅದರ ಚಾಲಕರು ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು, ಬಂದ ವೇಗಕ್ಕೆ ಸುಮಾರು 40 ಅಡಿ ದೂರ ಹೋಗಿ ನಿಂತಿದ್ದು, ಅಪಘಾತದ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂಭಾಗ ತುಂಬಾ ಜಖಂಗೊಂಡಿದ್ದು ಹಾಗೂ ಎದ್ರಿ ಕಾರಿನ ಎಡಬದಿಯ ಬಂಪರ್, ಡೋರ್ಗಳು ಜಖಂಗೊಂಡಿರುತ್ತದೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.03.2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 31.03.2015 ರ ಬೆಳಿಗ್ಗೆ 06:00 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು, ಬಾಳೆಪುಣಿ ಗ್ರಾಮದ ಮುಡಿಪು ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಇಬ್ರಾಹಿಂ ಎ.ಪಿ. ರವರ ಡಿ.ಎಂ.ಟ್ರೇಡರ್ಸ್ ಎಂಬ ಅಂಗಡಿಯ ಶಟರನ್ನು ಯಾರೋ ಕಳ್ಳರು ಮೀಟಿ ತೆರೆದು ಒಳ ಪ್ರವೇಶಿಸಿ ಒಳಗಡೆ ಇದ್ದ ಸುಮಾರು 60 ಕೆ.ಜಿ. ತೂಕದ ರೂ.60,000/- ಮೌಲ್ಯದ 4 ಅಡಿಕೆ ತುಂಬಿಸಿದ ಚೀಲ, ಮತ್ತು 60 ಕೆ.ಜಿ. ತೂಕದ ರೂ 30,000/-ಮೌಲ್ಯದ ಕಾಳುಮೆಣಸು ಹಾಗೂ ಕ್ಯಾಶ್ಕೌಂಟರ್ನಲ್ಲಿದ್ದ ರೂ 3,000/- ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 93,000/- ಆಗಬಹುದು.
7.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31.03.2015 ರಂದು ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ಅನ್ಸಾರ್ನಗರ ಎಂಬಲ್ಲಿ ಆರೋಪಿ ಸಿರಾಜನು ಆಕ್ಟಿವ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19ಇಕೆ-6903ನೇಯದರಲ್ಲಿ ಝಾಕೀರ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ತೌಡುಗೋಳಿ ಕ್ರಾಸ್ ಕಡೆಯಿಂದ ಮಂಜನಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ರಾಹಿಂ ತಮೀಮ್(15) ಎಂಬಾತನಿಗೆ ಢಿಕ್ಕಿಹೊಡೆದು ಹತೋಟಿ ತಪ್ಪಿ ಸುಮಾರು 30 ಅಡಿ ಆಳದ ತಗ್ಗು ಪ್ರದೇಶಕ್ಕೆ ಬಿದ್ದಿದ್ದು, ಆರೋಪಿಯು ಢಿಕ್ಕಿ ಹೊಡೆದ ಪರಿಣಾಮ ಇಬ್ರಾಹಿಂ ತಮೀಮ್ಗೆ ತೀವ್ರ ತರದ ಗಾಯವಾಗಿದ್ದು, ಈತನನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಅಲ್ಲದೇ ಸಹಸವಾರ ಝಾಕೀರ್ಗೆ ಎದೆಗೆ ಮತ್ತು ಮೈಕೈಗೆ ಗುದ್ದಿದ ಗಾಯವಾಗಿದ್ದು ಈತನನ್ನು ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ.
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-03-2015 ರಂದು 18:30 ಗಂಟೆಗೆ ಮಂಗಳೂರು ನಗರದ ಪಂಪ್‌ವೆಲ್ ಎಂಬಲ್ಲಿ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ MH-50-1677 ನಂಬ್ರದ ಲಾರಿಯನ್ನು ಚಾಲಕ ವಿಠಲ್ ಮಹದೇವ್ ಪವರ್ ಎಂಬಾತನು ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿ ಗ್ಯಾಬ್ರಿಯಲ್ ಜೇಸು ಪ್ರಿಯಾ ಎಂಬವರು ನಂತೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-EN-1941 ನಂಬ್ರದ ಸ್ಕೂಟರ್‌ನ್ನು ಓವರ್ಟೇಕ್ ಮಾಡಿ ಮುಂದಕ್ಕೆ ಹೋಗುವ ವೇಳೆ ಲಾರಿಯನ್ನು ನಿರ್ಲಕ್ಷತನದಿಂದ ಎಡಕ್ಕೆ ತಿರುಗಿಸಿ KA-19-EN-1941 ಸ್ಕೂಟರ್ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರನು ಸ್ಕೂಟರ್‌ನಿಂದ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಬಿದ್ದು, ಸ್ಕೂಟರ್ ಸವಾರ ಗ್ಯಾಬ್ರಿಯಲ್ ಜೇಸು ಪ್ರಿಯಾ ರವರ ಎಡಕೈಗೆ, ಎದೆಗೆ, ಬೆನ್ನಿಗೆ ತರಚಿದ ರಕ್ತಗಾಯ ಮತ್ತು ಗಂಭೀರ ಸ್ವರೂಪದ ಒಳ ಜಖಂ ಉಂಟಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕಾವೂರಿನ ಕಾಲೇಜ್ ನಲ್ಲಿ ಬಿ.ಕಾಂ ಓದುತ್ತಿದ್ದ ವಿದ್ಯಾರ್ಥಿನಿ ಸುಮಾರು 3 ತಿಂಗಳಿನಿಂದ ಓದುದನ್ನು ನಿಲ್ಲಿಸಿ ಬಜ್ಪೆ ಯ ತನ್ನ ಮನೆಯಲ್ಲಿದ್ದು ದಿನಾಂಕ: 30/03/2015 ರಂದು ರಾತ್ರಿ ಸುಮಾರು 11-00 ಗಂಟೆಗೆ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದವಳು ದಿನಾಂಕ: 31/03/2015 ರಂದು 04-30 ಗಂಟೆಗೆ ಮನೆಯಲ್ಲಿ ನೋಡಿದಾಗ ಕಾಣೆಯಾಗಿರುತ್ತಾಳೆ ಈ ಬಗ್ಗೆ ಸಂಬಂಧಿಕರೆಲ್ಲರಲ್ಲೂ ಪೋನ್ ಮಾಡಿ ವಿಚಾರಿಸಿದರೂ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ.
10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-04-2015 ರಂದು ಬೆಳಿಗ್ಗೆ 10-40 ಗಂಟೆಯ ಸಮಯ ರಾ.ಹೆ 66 ರ ಕೂಳೂರು (ಕೂಳೂರು-ಪಣಂಬೂರು) ರಸ್ತೆಯ ಏಕಮುಖ ರಸ್ತೆಯ ಸೇತುವೆಯಲ್ಲಿ ಕಾರು ನಂಬ್ರ MH- 05 AJ- 3961 ನೇಯ ಕಾರನ್ನು ಅದರ ಚಾಲಕರಾದ ಆನಂದ ಶೇಖರ್ ಸುವರ್ಣ ರವರು ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಏಕಮುಖ ವ್ಯವಸ್ಥೆಯ ವಿರುದ್ದವಾಗಿ ಪಣಂಬೂರು ಕಡೆಯಿಂದ ಕೂಳೂರು ಕಡೆಗೆ ಚಲಾಯಿಸುತ್ತಾ; ಕೂಳೂರು ಕಡೆಯಿಂದ ಪಣಮಂಬೂರು ಕಡೆಗೆ ಬರುತ್ತಿರುವ ಮೋಟಾರ ಸೈಕಲ್ ನಂಬ್ರ KA- 19 S- 9098 ನೇಯದಕ್ಕೆ ಡಿಕ್ಕಿಹೊಡೆದ ಪರಿಣಾಮ ಅದರ ಸವಾರಿ ಮಾಡುತಿದ್ದ ಸುನೀಲ್ ಆಚಾರ್ಯ ಎಂಬವರು ಗಂಭೀರ ಸ್ವರೂಪದ ಗಾಯಗೊಂಡಿದ್ದು, ಎ ಜೆ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿದೆ.
11.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2015 ರಂದು 22-30 ಗಂಟೆಯಿಂದ ದಿನಾಂಕ 29-03-2015 ರಂದು 22-30 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಸಿಲ್ವ ಕ್ರಾಸ್ ರಸ್ತೆಯಲ್ಲಿರುವ Marcelia Castle ಅಪಾರ್ಟ್ ಮೆಂಟ್ ನ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ ವಿನೋಲಾ ಝೀನಾ ರೊಡ್ರಿಗಸ್ ರ ಆರ್. ಸಿ. ಮಾಲಕತ್ವದ 2013ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 35000/- ಬೆಲೆ ಬಾಳುವ KA 19 EH 3232 ನೊಂದಣಿ ಸಂಖ್ಯೆಯ ಹೀರೊ ಕಂಪನಿಯ Maestro Deluxe BS III ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು , ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗದಲ್ಲಿರುವ ಟೂಲ್ಸ್ ಬಾಕ್ಸ್ ನಲ್ಲಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ R.C. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
12.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-03-2015 ರಂದು ಫಿರ್ಯಾದುದಾರರಾದ ಶ್ರೀಮತಿ ಜೆ. ಕಸ್ತೂರಿ ರವರು ಮನೆಯಿಂದ ಹೊರಟು ಜಪ್ಪು ರೈಲ್ವೆ ಟ್ರ್ಯಾಕ್ ಹತ್ತಿರ ಇರುವ ಸಂಬಂದಿಕರ ಮನೆಗೆ ಹೋಗಿ ವಾಪಾಸು ಮನೆಗೆ ನಡೆದುಕೊಂಡು ಮನೆಯ ಕಡೆಗೆ ಬರುತ್ತಿರುವಾಗ ಸಂಜೆ ಸುಮಾರು 6-30 ಗಂಟೆಗೆ ಜಪ್ಪು ಮಹಕಾಳಿಪಡ್ಪು ಎಂಬಲ್ಲಿರುವ ಕೆನರಾ ವುಟ್ & ಪ್ಲೈವುಡ್ ಪ್ಯಾಕ್ಟರಿಯ ಕಂಪೌಂಡಿನ ಬಳಿಗೆ ತಲುಪಿದಾಗ ಹಿಂದುಗಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಫಿರ್ಯಾದುದಾರರ ಬಳಿಗೆ ಬಂದು ಬೈಕನ್ನು ನಿಲ್ಲಿಸಿ, ಹಿಂಬದಿ ಕುಳಿತ ಯುವಕನು ಎಂಪಾಸಿಸ್ ಕಡೆಗೆ ಹೋಗುವ ದಾರಿ ಯಾವುದೆಂದು ಕನ್ನಡ ಬಾಷೆಯಲ್ಲಿ ಕೇಳಿ, ಏಕಾಏಕಿಯಾಗಿ ಫಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ತೆಗೆದು ವಾಪಾಸು ಬೈಕ್ ನಲ್ಲಿ ಎಂಪಾಸಿಸ್ ಕಡೆಗೆ ಪರಾರಿಯಾಗಿರುತ್ತಾರೆ. ಘಟನೆಯಿಂದ ಫಿರ್ಯಾದುದಾರರ ಕುತ್ತಿಗೆಗೆ ಗಾಯವಾಗಿರುತ್ತದೆ. ಚಿನ್ನದ ಸರದ ಅಂದಾಜು ಮೌಲ್ಯ ಸುಮಾರು ರೂ 60,000/- ಆಗಬಹುದು.
13.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-02-2015 ರಂದು 13-00 ಗಂಟೆಯಿಂದ 13-35 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದ ಕಾಪ್ರಿಗುಡ್ಡ ಜುಮಾ ಮಸೀದಿ ಕಟ್ಟಡದ ಮುಂಭಾಗದಲ್ಲಿ ಪಿರ್ಯಾದಿದಾರರಾದ ಶ್ರೀ ಅರ್ಫಾಜ್ ಝಾಕೀರ್ ರವರು ಪಾರ್ಕ್ ಮಾಡಿ ಇಟ್ಟಿದ್ದ ಮೊಹಮ್ಮದ್ ಆಶೀಫ್ ಎಂಬವರ ಮಾಲಕತ್ವದ 2014ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 40,000/- ಬೆಲೆ ಬಾಳುವ KA 19 EM 3606 ನೊಂದಣಿ ಸಂಖ್ಯೆಯ HONDA ACTIVA BS III ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು , ಕಳವಾದ ದ್ಚಿಚಕ್ರ ವಾಹನದಲ್ಲಿ ಪಿರ್ಯಾದಿದರರ ಹೆಲ್ಮೆಟ್ ಹಾಗೂ ಕೆಲಸಕ್ಕೆ ಸಂಬಂಧಿಸಿದ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಹುಡುಕಾಡಿದಲ್ಲಿ ಇಲ್ಲಿಯ ತನಕ ಪತ್ತೆಯಾಗಿರುವುದಿಲ್ಲ.
14.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜಯಂತ್ ಉಳ್ಳಾಲ್ ರವವರು ತನ್ನ ಪತ್ನಿಯ ತಾಯಿಯವರ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳು ಮತ್ತು ಅತ್ತೆಯವರೊಂದಿಗೆ ವಾಸವಾಗಿದ್ದು, ದಿನಾಂಕ 30/03/2015 ರಂದು ರಾತ್ರಿ ಸುಮಾರು 11 ಗಂಟೆಗೆ ಮನೆಯ ಮುಂದಿನ ಮತ್ತು ಹಿಂಬದಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದ್ದು ದಿನಾಂಕ 31-03-2015 ರಂದು ಬೆಳಿಗ್ಗೆ 06-00 ಗಂಟೆಗೆ ಇವರ ಅತ್ತೆಯವರು ಮಲಗುವ ಕೋಣೆಯಲ್ಲಿದ್ದ ಕಪಾಟು ತೆರೆದಿರುವ ಬಗ್ಗೆ ಪಿರ್ಯಾದಿದಾರರಲ್ಲಿ ಬಂದು ತಿಳಿಸಿದಾಗ ನಂತರ ಪಿರ್ಯಾದಿದಾರರು ಹೋಗಿ ನೋಡಿದಾಗ ಆ ಕೋಣೆಯ ಕಪಾಟಿನ ಒಳಗಡೆ ಸೇಫ್ ಲಾಕರ್‌ನ ಒಳಗಡೆ ಇಟ್ಟಿದ್ದ ವಿವಿಧ ನಮೂನೆಯ ಬಂಗಾರದ ಆಭರಣ ಸೊತ್ತುಗಳು ನಗದು ಹಣ 2,75,000 ಕಳವಾಗಿರುವುದಾಗಿದೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 30-3-2015 ರಂದು ರಾತ್ರಿ ಸುಮಾರು 8-30 ಗಂಟೆಯಿಂದ ದಿನಾಂಕ. 31-3-2015 ರಂದು ಬೆಳಿಗ್ಗೆ 07-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ 2ನೇ ಕೊಲ್ಯ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ತನುಂಜಯ ರಾವ್ ರವರ ಮಾಲಕತ್ವದ ತನು ಸ್ಟುಡಿಯೋದ ಶಟರನ್ನು ಮತ್ತು ಎಲ್‌ಐಸಿ ಏಜೆಂಟ್ ಶ್ರೀಮತಿ. ಶಶಿಕಲಾ ರವರ ಎಲ್ಐಸಿ ಕಛೇರಿಯ ಶೆಟರನ್ನು ಯಾರೋ ಕಳ್ಳರು ಮುರಿದು ಒಳಗಡೆ ಪ್ರವೇಶಿಸಿ ಸ್ಟುಡಿಯೋದಿಂದ ಸುಮಾರು 40 ಸಾವಿರ ಮೌಲ್ಯದ 3 ಕ್ಯಾಮರಗಳು, ನಗದು ಹಣ ರೂ.6 ಸಾವಿರ, ಇಂಟರ್‌ನೆಟ್ ಡೋಂಗಲ್, ಪೆನ್‌ಡ್ರೈವ್, ಪಾಸ್‌ಪೋರ್ಟ್, ವೋಟರ್ ಐಡಿ, ಪಾನ್‌ಕಾರ್ಡ್, ಆಧಾರ್ಕಾರ್ಡ್, ವಾಹನದ ಲೈಸನ್ಸ್, ಆರ್ಸಿ ಪುಸ್ತಕ, ಅಂಗಡಿಯ ಟ್ರೇಡ್ ಲೈಸನ್ಸ್, ಇನ್‌ಕಮ್ ಟ್ಯಾಕ್ಸ್ ರಿಟನ್ಸ್, ಹಾಗೂ ಎಲ್‌ಐಸಿ ಏಜೆಂಟ್ ಶಶಿಕಲಾ ರವರ ಕಛೇರಿಯಿಂದ ಸುಮಾರು 60 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 1 ಲಕ್ಷ ಆಗಬಹುದು.
16.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಜಗದೀಪ್ ಹೆಚ್ ಆರ್ ರವರು ಮಂಗಳೂರು ನಗರ ಹಿಲ್ ಟಾಪ್ ಬಾಲಕರ ಹಾಸ್ಟೆಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿದಾರರು ಕೆಲಸ ಮಾಡಿಕೊಂಡಿರುವ ಹಾಸ್ಟಲಿನಲ್ಲಿ ವಾಸ್ತವ್ಯವಿದ್ದ ಬಿ.ಇ. ವಿಧ್ಯಾರ್ಥಿಯಾಗಿರುವ ಓಲ್ಫಿನ್ ಬೇಬಿ ಎಂಬವನು ದಿನಾಂಕ 30-03-2015 ರಂದು ಬ್ಯಾಂಕ್ ಸಾಲದ ಬಗ್ಗೆ ಸಹಿ ಹಾಕಲು ಇರುವುದರಿಂದ ಹೋಗಿ ಬರುವುದಾಗಿ ಹೇಳಿ ರಾತ್ರಿ 11 ಗಂಟೆಗೆ ಪತ್ರದಲ್ಲಿ ಬರೆದು ಫಿರ್ಯಾದಿದಾರರಲ್ಲಿ ಕೊಟ್ಟು ಹೋಗಿದ್ದು, ಮರುದಿನ 31-03-2015 ರಂದು ಆತನ ತಾಯಿ ಫೋನ್ ಮಾಡಿ ಓಲ್ಫಿನ್ ಬೇಬಿ ಮನೆಗೆ ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಓಲ್ಫಿನ್ ಬೇಬಿ ಮನೆಗೂ ಹೋಗದೇ ಹಾಸ್ಟೆಲಿಗೂ ಬಾರದೇ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದ ಹುಡುಗನ ಚೆಹರೆ ಹೆಸರು: ಓಲ್ಫಿನ್ ಬೇಬಿ, ಎತ್ತರ : 6.2 ಅಡಿ, ಬಿಳಿ ಬಣ್ಣ, ನಸು ಕೆಂಪು ಬಣ್ಣದ ಉದ್ದ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾನೆ, ಕಾಲೇಜು ಬ್ಯಾಗು ತೆಗೆದುಕೊಂಡು ಹೋಗಿರುತ್ತಾನೆ.
17.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30.03.2015 ರಂದು ರಾತ್ರಿ 8.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಂಜಿತ್ ರವರು ತನ್ನ ಬಾಬ್ತು ಕೆಎ-19-ಎಸ್-767 ನೇ ಸ್ಕೂಟರ್‌ನಲ್ಲಿ ಸವಾರನಾಗಿದ್ದುಕೊಂಡು ತನ್ನ ಅಣ್ಣ ಹಿತೇಶ್ ರವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಾ ಕಣ್ಣೂರು ಮಸೀದಿ ಬಳ ತಲುಪುತ್ತಿದ್ದಂತೆ ಕಣ್ಣೂರು ಗ್ರೌಂಡ್ ಕಡೆಯಿಂದ KA19C6554 ನೇ ಟಿಪ್ಪರ್ ನ್ನು ಅದರ ಚಾಲಕ ಹೈದರಾಲಿ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಅಣ್ಣ ಹಿತೇಶ್ ಸ್ಕೂಟರ್ ಸಮೇತ ಡಾಮರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಕುತ್ತಿಗೆಗೆ, ಎದೆಯ ಭಾಗಕ್ಕೆ, ಸೊಂಟಕ್ಕೆ ಹಾಗೂ ಕೈಕಾಲುಗಳಿಗೆ ತರಚಿದಂತ ನೋವು ಉಂಟಾಗಿರುತ್ತದೆ. ಹಾಗೂ ಹಿತೇಶ್ ರವರ ಮೂಗಿಗೆ ಗುದ್ದಿದ ನೋವುಂಟಾಗಿರುತ್ತದೆ ಮತ್ತು ಮುಖಕ್ಕೆ ರಕ್ತಗಾಯ ಉಂಟಾಗಿರುತ್ತದೆ, ಎಡಕಾಲಿಗೆ ಮತ್ತು ಬಲಕೈ ಮೊಣಗಂಟಿಗೆ ತರಚಿದ ಗಾಯ ಉಂಟಾಗಿರುತ್ತದೆ.
18.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30.03.2015 ರಂದು ಪಿರ್ಯಾದುದಾರರಾದ ಶ್ರೀ ಚಂದ್ರಶೇಖರ ಸಮನಿ ರವರು ರಾತ್ರಿ ಸುಮಾರು 8:00 ಗಂಟೆ ಸಮಯಕ್ಕೆ ಅಡ್ಯಾರ್ ಕಟ್ಟೆಯ ಬಳಿ ಇರುವ ಅವರ ಸ್ವಂತ ಕಟ್ಟಡದ ಎದುರುಗಡೆ ಇರುವ ಅಂಗಡಿಯೊಂದಕ್ಕೆ ಹೋಗಲು ರಸ್ತೆ ದಾಟುತ್ತಿರುವ ಸಮಯ ಮಂಗಳೂರು ಕಡೆಯಯಿಂದ KA-05-NB-4590ನೇ ನಂಬ್ರದ ಕಾರನ್ನು ಅದರ ಚಾಲಕ ಶಬೀರ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಅವರ ಹಣೆಗೆ ರಕ್ತಗಾಯ, ತಲೆಗೆ ರಕ್ತಗಾಯ, ಬಲಕಾಲಿನ ಪಾದದ ಮೇಲಿನ ಗಂಟಿಗೆ ಮೂಳೆ ಮುರಿತದ ಗುದ್ದಿದ ನೋವು, ಎಡಕೈಗೆ ಕಾಲುಗಳಿಗೆ ತರಚಿದ ಗಾಯ ಹಾಗೂ ಎಡಪಕ್ಕೆಗೆ ಗುದ್ದಿದ ನೋವುಂಟಾದವರು ಚಿಕಿತ್ಸೆಯ ಬಗ್ಗೆ ನಗರದ ಒಮೆಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.
19.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31.03.2015 ರಂದು ಬೆ: 11.30 ಗಂಟೆಗೆ ಪಚ್ಚನಾಡಿ ಅಚ್ಚುಕೋಡಿ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಪ್ರದೀಪ್ ಹೆಗ್ಡೆ ರವರ ಸೈಟ್‌ಗೆ ಹೋಗುವ ದಾರಿಯಲ್ಲಿ ಅವರ ಪರಿಚಯದವಾರದ ಸಂತೋಷ್ ಮತ್ತು ಅವರ ಕೆಲಸದವರಾದ ವಿಖ್ಯಾತ್ ರವರ ಜೊತೆ ಮಾತನಾಡುತ್ತಿರುವ ಸಮಯ ಆರೋಪಿ ಉದಯ ಶೆಟ್ಟಿ ಯವರು ಅವರ ಬಾಬ್ತು ಮಾರುತಿ A ಸ್ಟಾರ್ ಕಾರಿನಲ್ಲಿ ಬಂದು ಕಾರನ್ನು ನಿಲ್ಲಿಸಿ ಇಳಿದು ಪಿರ್ಯಾದಿದಾರರ ಬಳಿ ಬಂದು ಅವರನ್ನು ಉದ್ದೇಶಿಸಿ ಈ ಡೋಂಗಿ, ಚೀಟರ್ ಎನ್ನ ಕಾಸ್ ಮರ್ಯಾದೆಡ್ ದೀಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಅವರ ಮುಖಕ್ಕೆ, ಬೆನ್ನಿಗೆ ಕೈಯಿಂದ ಹೊಡೆದು, ಜಲ್ಲಿಕಲ್ಲಿನಿಂದ ಅವರ ಕಾಲಿಗೆ ಹೊಡೆದು ಹಲ್ಲೆ ಮಾಡಿ ನಂತರ ಅವರು ಧರಿಸಿದ್ದ ಅಂಗಿಯನ್ನು ಹರಿದು ಹಾಕಿದ್ದಲ್ಲದೇ, ಪಿರ್ಯಾದಿದಾರರಿಗೆ ಈ ಬಾರಿ ನೀನು ಬಚಾವಾಗಿದ್ದಿ ಹಣ ಕೊಡದಿದ್ದಲ್ಲಿ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ ಹೋಗಿರುತ್ತಾರೆ.
20.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31.03.2015 ರಂದು ರಾತ್ರಿ 8.00 ಗಂಟೆಗೆ ಫಿರ್ಯಾದಿದಾರರಾದ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕಲ್ಯಾಣ ಶೆಟ್ಟಿ ರವರು ತಮಗೆ ದೊರೆತ ಖಚಿತ ವರ್ತಮಾನದ ಮೇರೆಗೆ ತಮ್ಮ ಅಧೀನ ಸಿಬ್ಬಂದಿಯವರು ಹಾಗೂ ಪಂಚಾಯತ್ದಾರರೊಂದಿಗೆ ಠಾಣೆಯಿಂದ ಹೊರಟು ರಾತ್ರಿ 9.00 ಗಂಟೆ ವೇಳೆಗೆ ಮಂಗಳೂರು ನಗರದ ಅರ್ಕುಳ ಗ್ರಾಮದ ವಳಚ್ಚಿಲ್ ಶ್ರೀನಿವಾಸ ಕಾಲೇಜ್ ಬಳಿಯ ಬಸ್ ನಿಲ್ದಾಣದ ಸಮೀಪ ಆಟೋ ರಿಕ್ಷಾ ನಂಬ್ರ: KA-19 AA-7382 ನೇದರಲ್ಲಿ ಕುಳಿತುಕೊಂಡು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವೇಳೆ ಆರೋಪಿ ಜಬ್ಬರ್ ಯಾನೆ ಮಂಗ ಜಬ್ಬರ ಎಂಬುವವನು ಪರಾರಿಯಾಗಿದ್ದು ಆಟೋ ರಿಕ್ಷಾದಲ್ಲಿದ್ದ ಆರೋಪಿ ಸಲೀಂ ಎಂಬುವವನನ್ನು ಅಂಗ ಶೋಧನೆ ಮಾಡಲಾಗಿ ಆತನ ವಶದಲ್ಲಿ ಒಟ್ಟು 1100 ಗ್ರಾಂ ತೂಕದ ಮಾದಕ ವಸ್ತುವಾದ ಗಾಂಜಾ ಪತ್ತೆಯಾಗಿದ್ದು ಸದ್ರಿ ಗಾಂಜಾವನ್ನು ಹಾಗೂ ಗಾಂಜಾ ಮಾರಾಟ ಮಾಡಿ ಸಂಗ್ರಹಿಸಿದ ಹಣ ನಗದು ರೂ 900 ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋ ರಿಕ್ಷಾ, ಮೊಬೈಲ್ ಫೋನ್ ಖಾಲಿ ಪ್ಲಾಸ್ಟಿಕ್ ಕವರ್‌ಗಳನ್ನು ಸ್ವಾಧೀನ ಪಡಿಸಿದ್ದಲ್ಲದೇ ಸದ್ರಿ ಆರೋಪಿಯಿಂದ ಗಾಂಜಾ ಖರೀದಿಸುವರೇ ಮಾರುತಿ ಆಲ್ಟೋ 800 ಕಾರ್ ನಂಬ್ರ KA-19 MD-3981 ನೇದರಲ್ಲಿ ಬಂದು ಗಾಂಜಾವನ್ನು ಖರೀದಿಸಿದ್ದ ಆರೋಪಿಗಳಾದ ಮಂಜುನಾಥ ಮತ್ತು ರಂಗನಾಥ ಎಂಬುವವರಿಂದ ಒಟ್ಟು 40 ಗ್ರಾಂ ತೂಕದ 8 ಗಾಂಜಾ ತುಂಬಿದ ಸಣ್ಣ ಪಾಕೆಟ್ಗಳನ್ನು ಮತ್ತು ಮೊಬೈಲ್ ಫೊನ್‌ನ್ನು ಹಾಗೂ ಮಾರುತಿ ಆಲ್ಟೋ 800 ಕಾರನ್ನು ಮಹಜರು ಮುಖೇನ ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಗಾಂಜಾದ ಒಟ್ಟು ಮೌಲ್ಯ 22.800 ಆಗಿರುತ್ತದೆ.
21.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01.04.2015 ರಂದು 00:15 ಗಂಟೆಗೆ ಫಿರ್ಯಾದಿದಾರರಾದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಶ್ರೀ ಎಂ.ಡಿ. ಮಡ್ಡಿ ರವರು ಸಿಬ್ಬಂಧಿಗಳ ಜೊತೆಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕಕ್ಕೆಬೆಟ್ಟು ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಟ್ಟು ಆರು ಜನ ಯುವಕರು ಪರಸ್ಪರ ಆವಾಚ್ಯ ಶಬ್ದದಿಂದ ಬೈದಾಡುತ್ತಾ ಕೈಗಳಿಂದ ಹೊಡೆದಾಟ ನಡೆಸುತ್ತಾ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುತ್ತಿರುವುದನ್ನು ಕಂಡು ಅವರುಗಳನ್ನು ವಶಕ್ಕೆ ತೆಗೆದುಕೊಂಡು ಅವರುಗಳು ಪರಸ್ಪರ ವಿನಾಕಾರಣ ದುರುಗುಟ್ಟಿ ನೋಡುತ್ತಿದ್ದಾರೆ ಎಂಬ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡೆದಾಟ ನಡೆದಿರುವುದಾಗಿ ತಿಳಿದು ಬಂದ ಪ್ರಕಾರ ಚೇತನ್ ಕುಮಾರ್, ರೋಹಿತ್, ರೋಹಿತ್ ಕುಮಾರ್, ಭರತ್, ಗಣೇಶ್, ರಾಜೇಶ್ ಎಂಬವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.
22.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01.04.2015 ರಂದು ಪಿರ್ಯಾದಿದಾರರಾದ ಅರ್ಚನಾ ಕಿಣಿ ರವರು ಕೆಲಸದ ಮೇಲೆ ಅವರ ತಾಯಿಯ ಬಾಬ್ತು ಕಾರು ನಂಬ್ರ: KA-19-MB-0477 ನೇ ದನ್ನು ಚಲಾಯಿಸಿಕೊಂಡು ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ವಾಪಾಸ್ಸು ಬರುವಾಗ ಮಧ್ಯಾಹ್ನ ಸುಮಾರು 3.20 ಗಂಟೆಗೆ ಬೈತುರ್ಲಿ ಜಂಕ್ಷನ್ ಬಳಿ ಬರುತ್ತಿದ್ದಂತೆ ಹಿಂಬಾಗದಿಂದ ಅಂದರೆ ವಾಮಂಜೂರು ಕಡೆಯಿಂದ ಬಸ್ಸು ನಂಬ್ರ: ಕೆಎ-19-ಎಸಿ-7733 ನೇದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬಾಗ ಸಂಪೂರ್ಣ ಜಖಂ ಆಗಿರುತ್ತದೆ ಈ ಅಪಘಾತದಿಂದ ಪಿರ್ಯಾದಿದಾರರ ಕಾರು ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿಯಾಗಿದ್ದು ಇದರ ಪರಿಣಾಮ ಕಾರಿನ ಬಲಭಾಗದ ಎದುರಿನ ಭಾಗ ಕೂಡಾ ಜಖಂ ಆಗಿರುತ್ತದೆ ಈ ಅಪಘಾತದ ಗಡಿಬಿಡಿಯಲ್ಲಿ ಪಿರ್ಯಾದಿದಾರರಿಗೆ ಲಾರಿಯ ನಂಬ್ರವನ್ನು ನೋಡಲು ಆಗಿರುದಿಲ್ಲವಾಗಿಯೂ ಈ ಅಪಘಾತಕ್ಕೆ ಬಸ್ಸು ಚಾಲಕನ ಅತೀವೇಗದ ಚಾಲನೆಯೇ ಕಾರಣವಾಗಿರುತ್ತದೆ.
Happy Rose Day
ReplyDeleterose day images
rose day 2016
rose day pics
rose day special
rose day sms
rose day quotes
rose day messages
when is rose day
rose day wallpaper
rose day sms in hindi
rose day sayari
rose day status
rose day msg