Sunday, April 5, 2015

Daily Crime Reports : 05-04-2015

ದೈನಂದಿನ ಅಪರಾದ ವರದಿ.
ದಿನಾಂಕ 05.04.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
1
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
0
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದುದಾರರಾದ ಶ್ರೀ ಶರತ್ ರಾಜ್ ಡಿ. ರವರು ತಮ್ಮ ಬಾವ ಶ್ರೀ ದಯಾಳು ಎಸ್ ರವರ ಬಾಬ್ತು ಕೆ. 47 0364 ನಂಬ್ರದ ಹೀರೋ ಹೊಂಡಾ ಸಿಡಿ ಡಾನ್ ಮೋಟಾರ್ಸೈಕಲ್‌‌ನ ಚಾಲಕರಾಗಿದ್ದು . ದಿನಾಂಕ 24-03-2015 ರಂದು ಪಿರ್ಯಾಧಿದಾರರು ಕೆಲಸದ ನಿಮಿತ್ತ ಕೊಟ್ಟಾರ ಕಡೆಗೆ ಬಂದಿದ್ದು, ಕೆಲಸ ಮುಗಿಸಿ ಮನೆಗೆ ವಾಪಾಸ್ಸು ಹೋಗುವ ಸಮಯ ರಾತ್ರಿ 08:30 ಗಂಟೆ ಸುಮಾರಿಗೆ ಉರ್ವ ಸ್ಟೋರ್ ಬಳಿ ಇರುವ ಕವಿತಾ ವೈನ್ಸ್‌‌ ಗೆ ಊಟಕ್ಕೆಂದು ಹೋಗಿದ್ದು, ಸದ್ರಿ ಸಮಯ ತಮ್ಮ ಬಾಬ್ತು ಮೋಟಾರ್ಸೈಕಲನ್ನು ಕವಿತಾ ವೈನ್ಸ್‌‌ ‌ನ ಎದರುಗಡೆ ಪಾರ್ಕ್ಮಾಡಿದ್ದು  ಊಟಕ್ಕೆ ಹೋಗಿ ಸುಮಾರು ಅರ್ಧ ಗಂಟೆಯ ನಂತರ ಹೊರಗಡೆ ಬಂದು ಪಾರ್ಕ್ಮಾಡಿದ ಸ್ಥಳದಲ್ಲಿ ಮೋಟಾರ್ಸೈಕಲನ್ನು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಇದ್ದಿರುವುದಿಲ್ಲ. ಸುತ್ತಮುತ್ತ ಹಾಗೂ ಮಂಗಳೂರು ನಗರದ ಇತರ ಸ್ಥಳಗಳಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ದಿನಾಂಕ 04-04-2015 ರ ವರೆಗೂ ಹುಡುಕಾಡಿ ಮೋಟಾರ್ ಸೈಕಲ್ಪತ್ತೆಯಾಗದೆ ಇದ್ದುದರಿಂದ ಠಾಣೆಗೆ ಬಂದು ಲಿಖಿತ ಪಿರ್ಯಾದಿ ನೀಡಿರುವುದಾಗಿದೆ.
 
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04-04-2015 ರಂದು ಸುರತ್ಕಲ್ ಪೊಲೀಸ್ ಠಾಣಾ ಪಿ ಎಸ್ ಐ ರವಿಶಂಕರ್  ರವರಿಗೆ ಮಂಗಳೂರು ತಾಲೂಕು  ಕಾಟಿಪಳ್ಳ ಗ್ರಾಮದ 2ನೇ ಬ್ಲಾಕ್ ಸರಕಾರಿ ಶಾಲೆ ಬಳಿಗೆ 407 ಟೆಂಪೊದಲ್ಲಿ ದನಗಳನ್ನು ಕಸಾಯಿಕಾನೆಗೆ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ  ಮದ್ಯಾಹ್ನ 3-30 ಗಂಟೆ ವೇಳೆಗೆ ಮೇಲಿನ ಸ್ಥಳದಲ್ಲಿದ್ದ ಸಮಯ ಗಣೇಶಪುರ ಕಡೆಯಿಂದ  ಬಂದ ಕೆಎ 20 199 ನೇ 407 ಟೆಂಪೊ ವನ್ನು ಪರಿಶೀಲಿಸಿದಾಗ ಅದರಲ್ಲಿ 3 ದನಗಳು ಮತ್ತು 1 ಕರು ಇದ್ದು ಅವುಗಳ ಮೂಗಿಗೆ ನೈಲಾನ್ ಹಗ್ಗದಿಂದ ಅಮಾನುಷ ರೀತಿಯಲ್ಲಿ ಉಸಿರುಗಟ್ಟಿಸುವಂತೆ ಕಟ್ಟಿಹಾಕಿದ್ದು ಆರೋಪಿಗಳು ಸದ್ರಿ ದನಗಳನ್ನು ಸಾಗಾಟ ಮಾಡುವರೇ ಯಾವುದೇ ದಾಖಲಾತಿಗಳನ್ನು ಹೊಂದದೇ ಇದ್ದು ಅಕ್ರಮವಾಗಿ  ಮಾಂಸಕ್ಕಾಗಿ ವಧೆ ಮಾಡುವರೇ ಸಾಗಾಟ ಮಾಡುತ್ತಿದ್ದುದ್ದು ಕಂಡು ಬಂದಿದ್ದು ಟೆಂಪೊದಲ್ಲಿದ್ದ ಬಶೀರ್, ಪುಟ್ಟರಾಜು, ಸುಂದರ ಇವರನ್ನು ಮತ್ತು 3 ದನ 1 ಕರುವನ್ನು ಹಾಗೂ ಸದ್ರಿ ವಾಹನವನ್ನು ಪಂಚರ ಸಮಕ್ಷಮ  ಸ್ವಾಧೀನ ಪಡಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾಗಿದೆ.
 
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04-04-2015 ರಂದು ಪಿರ್ಯಾದಿದಾರರಾದ ಶ್ರೀಮತಿ ಸರೋಜಿನಿ ರವರು ಮಂಗಳೂರಿನ ಲೇಡಿಹಿಲ್ ನಿಂದ  ಕೆಲಸ ಮುಗಿಸಿ ತನ್ನ ಮನೆಯಾದ ಬೊಲ್ಪುಗುಡ್ಡೆಗೆ ಹೋಗುವರೇ ಕಾವೂರು ಕಡೆ ಹೋಗುವ ಗೋಲ್ಡನ್ ಟ್ರಾವೆಲ್ಸ್ ಬಸ್ ನಲ್ಲಿ ಬಂದು ಸುಮಾರು ಸಂಜೆ 07-15 ಗಂಟೆಗೆ ಕಾವೂರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇಳಿದು ಸ್ವಲ್ಪ ದೂರ ನಡೆದುಕೊಂಡು ಹೋಗುವಾಗ ಮೇರಿಹಿಲ್ ಕಡೆಯಿಂದ ಬಂದ ಮೋಟಾರ್ ಸೈಕಲ್ ಸವಾರರು ಪಿರ್ಯಾದುದಾರರ ಬಳಿಗೆ ಬಂದು ತುಳುವಿನಲ್ಲಿ ಯೆಯ್ಯಾಡಿಗೆ ಹೋಗುವ ದಾರಿ ಯಾವುದು ಎಂಬುದಾಗಿ ವಿಚಾರಿಸಿದಾಗ ಯೆಯ್ಯಾಡಿಗೆ ಹೋಗುವ ರಸ್ತೆಯನ್ನು ಪಿರ್ಯಾದುದಾರರು ತಿಳಿಸಿದ್ದು, ಅದರಂತೆ ಮೋಟಾರ್ ಸೈಕಲ್ ಸವಾರರು ಬೈಕನ್ನು ಮುಂದಕ್ಕೆ ಚಲಾಯಿಸುತ್ತಿದ್ದಂತೆ ಹಿಂದುಗಡೆ ಸವಾರನು ಪಿರ್ಯಾದುದಾರರ ಕುತ್ತಿಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 2 1/4 ಪವನ್ ತೂಕದ ಸುಮಾರು 40,000/- ಮೌಲ್ಯದ ಚಿನ್ನದ ಚೈನನ್ನು ಬಲತ್ಕಾರವಾಗಿ ಎಳೆದು ಆರೋಪಿಗಳು ತಮ್ಮ ಬೈಕಿನಲ್ಲಿ ಪರಾರಿಯಾಗಿರುತ್ತಾರೆ.
 
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಶ್ರೀ ಶಿಜು ಜೋಸೆಫ್ಪ್ರಾಯ: 32 ವರ್ಷ ಎಂಬಾತನು ಮಾಂಟ್ರಾಡಿ ಬೋರುಗುಡ್ಡೆ ಮನೋಜ್ಜಾರ್ಜ್ಎಂಬವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದು, ಯಾವಾಗಲೂ ಸಂಜೆ ಕೆಲಸಕ್ಕೆ ಹೋಗಿ ರಾತ್ರಿ ಮನೋಜ್ಜಾರ್ಜ್ರವರ ಮನೆಯಲ್ಲಿಯೇ ಉಳಕೊಂಡು ಮರುದಿನ ರಬ್ಬರ್ಟ್ಯಾಪಿಂಗ್ ಆದ ನಂತರ ಮದ್ಯಾಹ್ನ ಸಮಯಕ್ಕೆ ಮನೆಗೆ ಬರುತ್ತಿದ್ದನು. ಅಂತೆಯೇ ದಿನಾಂಕ: 31-03-2015ರಂದು ಸಂಜೆ 08-00 ಗಂಟೆಗೆ ಮಾಂಟ್ರಾಡಿ ಬೋರುಗುಡ್ಡೆ ಮನೋಜ್ಜಾರ್ಜ್ಎಂಬವರ ತೋಟಕ್ಕೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿ ಮರು ದಿನ ಮದ್ಯಾಹ್ನಕ್ಕೆ ಬರಬೇಕಾದ ಶಿಜು ಜೋಸೆಫ್ಬಾರದೇ ಇದ್ದು ಸಂಜೆ ಸುಮಾರು 04-00 ಗಂಟೆಯ ನಂತರ ಆತನಿಗೆ ದೂರವಾಣಿ ಕರೆ ಮಾಡಿದ್ದು, ಆಗ ಆತನು  ತಾನು ತಲೆ ಕೂದಲು ಕಟ್ಟಿಂಗ್ನ ಬಗ್ಗೆ ಶೆಲೂನ್ನಲ್ಲಿ ಇದ್ದೇನೆ, ಅರ್ಧ ಗಂಟೆ ಬಿಟ್ಟು ಬರುತ್ತೇನೆ ಎಂಬುದಾಗಿ ಹೇಳಿದ್ದು, ರಾತ್ರಿಯಾದರೂ ಮನೆಗೆ ಬಾರದೇ ಇದ್ದು ಸಂಬಂದಿಕರ ಮನೆ ಹಾಗೂ ಇತರ ಕಡೆ ಹುಡುಕಾಡಿದಲ್ಲಿ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ. ಕಾಣೆಯಾದವರ ಚಹರೆ ಗುರುತುಗಳು: ಹೆಸರು: ಶಿಜು ಜೋಸೆಫ್‌, ಪ್ರಾಯ: 32 ವರ್ಷ, ತಂದೆ: ಜೋಸೆಫ್, ಎತ್ತರ: 6 ಫೀಟ್‌, ಎಣ್ಣೆ ಕಪ್ಪು ಮೈಬಣ್ಣ. ಕಪ್ಪು ತಲೆಕೂದಲು. ಧರಿಸಿರುವ ಬಟ್ಟೆ ಬರೆಗಳು: ಜೀನ್ಸ್ ಪ್ಯಾಂಟ್‌, ಟಿ. ಶರ್ಟ್ಮತ್ತು ಕನ್ನಡ ಧರಿಸಿರುತ್ತಾನೆತಿಳಿದಿರುವ ಭಾಷೆ: ಇಂಗ್ಲೀಷ್‌, ಮಲಯಾಳಂ, {ಅಲ್ಪಸ್ವಲ್ಪ ಕನ್ನಡ ಮತ್ತು ತುಳು ಮಾತಾಡುತ್ತಾನೆ} ವಿದ್ಯಾಭ್ಯಾಸ       :ಬಿ..ವಿದ್ಯಾಭ್ಯಾಸ.
 

No comments:

Post a Comment