Friday, April 3, 2015

KAVOOR PS LIMITS MURDER CASE : 5 HELD

ಕೊಲೆ ಪ್ರಕರಣದ ಆರೋಪಿಗಳ ಬಂಧನ

ದಿನಾಂಕ 02-04-2015 ರಂದು ಕಾವೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾಧ ಶ್ರೀ ಉಮೇಶ್ ಕುಮಾರ್ ಎಂ.ಎನ್ ಮತ್ತು ಸಿಬ್ಬಂದಿಯವರು ದಿನಾಂಕ 30-03-2015 ರಂದು ಮುಂಜಾನೆ 01-30 ಗಂಟೆಗೆ ದೇರೆಬೈಲು ನೆಕ್ಕಿಲಗುಡ್ಡೆ ಎಂಬಲ್ಲಿ ರಿತೇಶ್ ಶೆಟ್ಟಿಗಾರ್ @ ರೀತು@ರಿತೇಶ್ ಎಂಬಾತನನ್ನು ಕೊಲೆ ಮಾಡಿ ಆತನ ಸ್ನೇಹಿತರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಾದ ಪ್ರಭಾಕರ್ @ ಪ್ರಭ, ನಿಶಾಂತ್ @ ನಿಶಾಂತ್ ಕಾವೂರು, ಶೈಲೇಶ್ ಶೆಟ್ಟಿ @ ಶೈಲು, ವಿನೋದ್ ಶೆಟ್ಟಿ @ ಬೋಟಿ, ಭರತೇಶ್ ಎಂಬವರನ್ನು ಬೆಳಿಗ್ಗೆ 06-30 ಗಂಟೆಗೆ ಮುಡಿಪು ಬಳಿಯಿಂದ ವಶಕ್ಕೆ ತೆಗೆದುಕೊಂಡಿದ್ದು ತನಿಖಾಧಿಕಾರಿಯವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಆರೋಪಿಗಳಿಗೆ ಮಾನ್ಯ ನ್ಯಾಯಾಂಗ ಬಂಧನ ವಿಧಿಸಿದೆ.

ಕಾವೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  39/2015 ಕಲಂ 143, 144, 147, 148, 149, 302, 307 R/w 149 ಐಪಿಸಿ ಪ್ರಕರಣದ ಆರೋಪಿಗಳ ವಿವರ

 

ಆರೋಪಿತರ ಹೆಸರು ವಿಳಾಸ:

ನಿಶಾಂತ್ @ ನಿಶಾಂತ್ ಕಾವೂರು

ಪ್ರಾಯ 30 ವರ್ಷ

ತಂದೆಃ ದಿವಂಗತ ಗುರುರಾಜ್,

ವಾಸಃ ಕೇರಾಫ್ ಲ್ಯಾನ್ಸಿ, ಲೋಹಿತ್ ನಗರ,

ಅಶೋಕನಗರ ಪೋಸ್ಟ್, ದೇರೆಬೈಲ್, ಮಂಗಳೂರು.

ಪ್ರಭಾಕರ ಅಂಚನ್ @ ಪ್ರಭ ಪ್ರಾಯ 36 ವರ್ಷ

ತಂದೆಃ ಕೃಷ್ಣಪ್ಪ,

ವಾಸಃ ನೆಕ್ಕಿಲಗುಡ್ಡೆ, ದೇರೆಬೈಲ್ ಗ್ರಾಮ,

ಅಶೋಕನಗರ ಪೋಸ್ಟ್, ಮಂಗಳೂರು.

ಶೈಲೇಶ್ ಶೆಟ್ಟಿ @ ಶೈಲು ಪ್ರಾಯ 21 ವರ್ಷ

ತಂದೆಃ ಮಹಾಬಲ ಶೆಟ್ಟಿ,

,ವಾಸ: EWS-56, ಬೋಂದೆಲ್,

ಕಾವೂರು ಗ್ರಾಮ, ಮಂಗಳೂರು

ವಿನೋದ್ ರಾಜ್ ಶೆಟ್ಟಿ @ ಬೋಟಿ ಪ್ರಾಯ 24 ವರ್ಷ,

ತಂದೆಃ ದಿವಂಗತ ಪುರುಷೋತ್ತಮ ಶೆಟ್ಟಿ,

ವಾಸಃ ಪಿಂಟೋ ಕಂಪೌಂಡ್,

ಲಾಂಗ್ ಲೈನ್, ಉರ್ವಾ ಮಂಗಳೂರು.

 

ಭರತೇಶ್ ಪ್ರಾಯ 20 ವರ್ಷ

ತಂದೆಃ ಮಾಲತೇಶ್,

ವಾಸಃ ವಿಘ್ನೇಶ್ ನಿಲಯ,

ದೇವಿನಗರ, ಕಂಬ್ಳಪದವು,

ಮುಡಿಪು, ಕೊಣಾಜೆ, ಮಂಗಳೂರು ತಾಲೂಕು

 

 

ಪ್ರಕರಣದ ಸಾರಾಂಶ

            ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 29-03-2015 ರಂದು ಮಂಗಳೂರು ತಾಲೂಕು ದೇರೆಬೈಲ್ ಗ್ರಾಮದ ಮಾಲೆಮಾರ್ ನೆಕ್ಕಿಲಗುಡ್ಡೆ ಎಂಬಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಆಯೋಜಿಸಲಾದ ನಾಟಕವನ್ನು ನೋಡುವರೇ ಪಿರ್ಯಾದುದಾರರು ಬಂದಿದ್ದು, ಅಲ್ಲಿ ಅವರಿಗೆ ಸ್ನೇಹಿತರಾದ ಮಿಥುನ್, ರೀತು @ ರಿತೇಶ್, ಯತೀಶ್ ಎಂಬವರು ಇದ್ದರು, ರಾತ್ರಿ ಸುಮಾರು 12-30 ಗಂಟೆಗೆ ಕಾರ್ಯಕ್ರಮ ಮುಗಿದು ಎಲ್ಲ ಸಾರ್ವಜನಿಕರು ತೆರಳಿದ್ದು ಪಿರ್ಯಾದುದಾರರು ಮತ್ತು ಆತನ ಸ್ನೇಹಿತರು ಅಲ್ಲೇ ನಿಂತು ಮಾತಾನಾಡುತ್ತಿದ್ದರು, ಅಲ್ಲಿಗೆ ಕಾರ್ಯಕ್ರಮ ಆಯೋಜಿಸಿರುವ ಪ್ರಭಾಕರ್ ನೆಕ್ಕಿಲಗುಡ್ಡೆ, ನಿಶಾಂತ್ ಕಾವೂರು ಮತ್ತು ನೋಡಿ ಗುರುತಿರುವ ಮೂವರು ಬಂದರು, ಅ ಸಮಯ ರಿತೇಶ್ ಪ್ರಭಾಕರ್ ಬಳಿ ತನ್ನಿಂದ ಈ ಹಿಂದೆ ಸಾಲವಾಗಿ ಪಡೆದ ಹಣವನ್ನು ವಾಪಾಸು ನೀಡದೇ ಇದ್ದ ಬಗ್ಗೆ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಯಿತು, ಆಗ ಪ್ರಭಾಕರ್ ರವರು ಅಲ್ಲಿಂದ ಸ್ವಲ್ಪ ದೂರ ಹೋಗಿ ಪುನಃ ಅವರ ಬಳಿಗೆ ಬಂದು ತನ್ನ ಕೈಯಲ್ಲಿದ್ದ ತಲವಾರಿನಿಂದ ರಿತೇಶನಿಗೆ ಕಡೆದಾಗ ಜೊತೆಗಿದ್ದ ನಿಶಾಂತ್ ಕೂಡ ಆತನ ಕೈಯಲ್ಲಿದ ತಲವಾರಿನಿಂದ ಕಡಿದನು, ಅಷ್ಟರಲ್ಲಿ ಜೊತೆಯಲ್ಲಿದ್ದ ಎಲ್ಲರೂ ರಿತೇಶನಿಗೆ ಕಡಿಯಲಾರಂಭಿಸಿದಾಗ ಪಿರ್ಯಾದುದಾರರು ಮತ್ತು ಆತನ ಜೊತೆಗಿದ್ದ ಮಿಥುನ್, ಯತೀಶ್ರವರು ಅಡ್ಡ ತಡೆದಾಗ ಅವರಿಗೂ ಕೂಡಾ ಕಡಿದ ಏಟು ಬಿತ್ತು ಪಿರ್ಯಾದುದಾರರ ಬಲ ಕೈ ತಟ್ಟಿಗೆ, ಬಲಭುಜಕ್ಕೆ, ಯತೀಶ್ ಎಂಬವರಿಗೆ ಕೈ, ಕಾಲಿಗೆ, ಮಿಥುನ್ ರವರಿಗೆ ಬಿನ್ನಿಗೆ, ಕಣ್ಣಿನ ಬದಿಗೆ, ಕುತ್ತಿಗೆಯ ಬಲ ಬದಿಗೆ ಗಾಯಗಳಾದವು, ರಿತೇಶನಿಗೆ ಹೊಟ್ಟೆಯ ಭಾಗಕ್ಕೆ ತೀವ್ರವಾದ ಗಾಯವಾಗಿದ್ದು, ಗಾಯದ ತೀವ್ರತೆ ತಾಳಲಾರದೇ ಸ್ಥಳದಲ್ಲಿಯೇ ಬಿದ್ದನು, ಇದನ್ನು ಗಮನಿಸಿದ ಹಲ್ಲೆಕೋರರು ತಮ್ಮಲ್ಲಿದ್ದ ಆಯುಧ ಸಮೇತ ಪರಾರಿಯಾಗಿದ್ದು, ರಿತೇಶ್ ಸ್ಥಳದಲ್ಲಿಯೇ ಮೃತನಾಗಿರುತ್ತಾನೆ, ಗಾಯಗೊಂಡ ಗಾಯಾಳುಗಳು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಘಟನೆಗೆ ಮೃತ ರಿತೇಶ್ ಮತ್ತು ಪ್ರಭಾಕರನ ಜೊತೆಗಿದ್ದ ಹಣದ ವ್ಯವಹಾರವೇ ಆಗಿರುತ್ತದೆ ಈ ಘಟನೆಯು ರಾತ್ರಿ ಸುಮಾರು 1-30 ಗಂಟೆಗೆ ಆಗಿರಬಹುದು ಎಂಬಿತ್ಯಾದಿಯಾಗಿರುತ್ತದೆ.                                                                                

 

No comments:

Post a Comment