Sunday, April 5, 2015

Daily Crime Reports : 04-04-2015

ದೈನಂದಿನ ಅಪರಾದ ವರದಿ.
ದಿನಾಂಕ 04.04.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
1
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
6
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
0
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ದ.ಕ. ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸ್ ನಿರೀಕ್ಷರಾದ ಶ್ರೀ ಪ್ರಶಾಂತ್ ಕೆ.ಎಸ್. ರವರಿಗೆ ಮಾನ್ಯ ಜಿಲ್ಲಾ ಪೊಲೀಸ್ಅಧೀಕ್ಷಕರು ಮೊಬೈಲ್ಮೂಲಕ ತಿಳಿಸಿರುವ ಪ್ರಕಾರ ದಿನಾಂಕ : 02-04-2015 ರಂದು ಸಮಯ ಸುಮಾರು 19:40 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ಅಧೀಕ್ಷಕರು ಇದ್ದ ಇಲಾಖಾ ಸ್ವಿಫ್ಟ್ಡಿಸೈರ್ವಾಹನ ನಂಬ್ರ ಕೆ..-19-ಜಿ-1234 ನೇದನ್ನು ಅದರ ಚಾಲಕ ಎ.ಎಚ್‌.ಸಿ 171 ನೇ ಲಿಂಗಪ್ಪ ಗೌಡ ಎಂಬವರು ಪೊಲೀಸ್ಅಧೀಕ್ಷಕರ ನಿವಾಸದ ಕೆಳಗೆ ಲೇಡಿಹಿಲ್ಕಡೆಗೆ ಇಳಿಜಾರು ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿ ಲೇಡಿಹಿಲ್ಸರ್ಕಲ್ಬಳಿಯ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಇಲಾಖಾ ವಾಹನಕ್ಕೆ ಎದುರುಗಡೆ ತೀವ್ರ ಜಖಂ ಉಂಟು ಮಾಡಿರುತ್ತಾರೆ.
 
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 31.03.2015 ರಂದು ಫಿರ್ಯಾದಿದಾರರಾದ ಶ್ರೀ ಶೇಖ್ ಮೊಹಮ್ಮದ್ ರವರು ಆರೋಪಿ ಶಂಶೀರ್ಅಹಮ್ಮದ್ಎಂಬಾತನ ಬಾಬ್ತು ನಂಬರ್ಪ್ಲೇಟ್ಆಗದ ಸುಝುಕಿ ಗಿಕ್ಸರ್ಮೋಟಾರ್ಸೈಕಲಿನಲ್ಲಿ ಸಹ ಸವಾರನಾಗಿ ತನ್ನ ಮನೆಯಿಂದ ಉಳ್ಳಾಲ ದರ್ಗಾಕ್ಕೆ ಹೋಗಿ ಮರಳಿ ತನ್ನ ಮನೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 9:00 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ, ಫಾದರ್ಮುಲ್ಲರ್ಸ್ಆಸ್ಪತ್ರೆಯ ದ್ವಾರದ ಬಳಿ ತಲುಪುತ್ತಿದ್ದಂತೆಯೇ ಆರೋಪಿ ಮೋಟಾರ್ಸೈಕಲನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಮಣ್ಣು ತೆಗೆದ ಜಾಗದಲ್ಲಿ ಮೋಟಾರ್ಸೈಕಲ್ಸ್ಕಿಡ್ಆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು, ಫಿರ್ಯಾದಿದಾರರ ಮುಖಕ್ಕೆ, ಎರಡೂ ಕಣ್ಣುಗಳಿಗೆ, ಮೂಗಿಗೆ ಬಾಯಿಗೆ ರಕ್ತ ಗಾಯವಾಗಿದ್ದು, ಅಲ್ಲದೇ ಮೇಲ್ಗದ್ದಕ್ಕೆ, ವಲಭುಜಕ್ಕೆ, ಬಲಕೈ ಮೊಣಗಂಟೆಇಗೆ ಹೊಟ್ಟೆ ಗುದ್ದಿದ ನೋವು ಹಾಗೂ ಬಲಕೈ ಬೆರಳಿಗೆ ಎಡಕೈ ತಟ್ಟಿಗೆ ಎಡಕಾಲಿನ ಕೋಲುಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ದಾಖಲಿಸಿರುತ್ತಾರೆ.
 
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 02/042015 ರಂದು ಸಮಯ ಸುಮಾರು ಸಂಜೆ 18:05 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಮಬೆಲ್ ಡಿ'ಸೋಜಾ ರವರು ತಮ್ಮ ಬಾಬ್ತು ಕಾರು ನಂಬ್ರ KA-47-M-1516 ನೇ ದರಲ್ಲಿ ಚಾಲಕಿಯಾಗಿದ್ದುಕೊಂಡು ತಮ್ಮ ಬಾಬ್ತು ಕಾರನ್ನು ಮಂಗಳೂರು ನಗರದ ನೀರುಮಾರ್ಗ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಚಲಾಯಿಸಿಕೊಂಡು ಬರುತ್ತ ಕಲ್ಪನೆ MCC ಬ್ಯಾಂಕ್ ಎದುರುಗಡೆ ತಲುಪುತ್ತಿದ್ದಂತೆ ಫಿರ್ಯಾದುದಾರರ ಹಿಂದುಗಡೆಯಿಂದ ರೂಟ್ ನಂಬ್ರ 3B, ಬಸ್ಸು ನಂಬ್ರ KA-19-C-3883 ನೆ ದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಕಾರಿನ ಎಡಭಾಗಕ್ಕೆ ಒರಸಿಕೊಂಡು ಬಸ್ಸನ್ನು ಚಲಾಯಿಸಿಕೊಂಡು ಹೋಗಿರುತ್ತಾರೆ.
 
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 03-04-2015 ರಂದು ಪಿರ್ಯಾಧಿದಾರರಾದ ಹೇಮಂತ ರವರು ತನ್ನ ಮನೆಯಿಂದ ಹೊರಟು ಮಂಗಳೂರಿಗೆ ಕೆಎ-19-ಸಿ-0329 ನೇ ನಂಬ್ರದ ಬಸ್ಸಿನಲ್ಲಿ ಪ್ರಯಾಣಿಸುತ್ತಾ ರಾ ಹೆ. 66 ರಲ್ಲಿ ಕುಳಾಯಿ ಹೊನ್ನಕಟ್ಟೆ ಜಂಕ್ಷನ್ ಬಳಿ ತಲುಪಿದಾಗ ಬಸ್ಸುನ್ನು ಅದರ ಚಾಲಕ ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸುವ ಸಲುವಾಗಿ. ಬೆಳಿಗ್ಗೆ 06-45 ಗಂಟೆಗೆ ನಿಲ್ಲಿಸಿದಾಗ. ಹಿಂದಿನಿಂದ ಅಂದರೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಎಮ್ ಪಿ-09-ಹೆಚ್ ಎಫ್-7560 ನೇ ನಂಬ್ರದ ಲಾರಿಯನ್ನು ಅದರ  ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ನಿಂತ್ತಿದ್ದ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ. ಪಿರ್ಯಾಧಿದಾರರು ಬಸ್ಸಿನ ಹಿಂದಿನ ಬಲ ಬದಿಯ ಸೀಟಿನಲ್ಲಿ ಕುಳ್ಳಿತ್ತಿದ್ದವರಿಗೆ ಸೊಂಟಕ್ಕೆ ಮೂಳೆ ಮುರಿತದ ಗಂಭೀರ ಗಾಯವಾಗಿ ಬಲ ಕಾಲಿಗೆ ಮತ್ತು ಬಲ ಕೈ ಗೆ ತರಚಿದ ಗಾಯವಾಗಿ. ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ. ಒಳರೋಗಿಯಾಗಿ ದಾಖಲಾರುತ್ತಾರೆ. ಅದೇ ರೀತಿ ಗಿರೀಶ್. ಇಕ್ಬಾಲ್. ಸುರೇಶ. ಆಫ್ರೀದ್. ಎಂಬುವರು ಕೂಡಾ. ಗಾಯಗೊಂಡು ಎ ಜೆ. ಆಸ್ಪತ್ರೆಯಲ್ಲಿ ಹಾಗೂ ಸುರತ್ಕಲ್ ಪದ್ಮವತಿ ಆಸ್ಪತ್ರೆಯಲ್ಲಿ ರಮೇಶ್ ಜೆ. ರಮೇಶ್ ಎಸ್ ಶೆಟ್ಟಿ. ಗಂಗಾಧರ ಶೆಟ್ಟಿ. ರತನ್ನ ಕೋಟ್ಯಾನ್. ಎಂಬುವರುಗಳು ಹಾಗೂ  ಇತರರು. ಗಾಯಗೊಂಡು ದಾಖಲಾರುತ್ತಾರೆ.
 
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾಧಿದಾರ ಮಹಿಳೆಯು ಮಂಗಳೂರು ತಾಲ್ಲೂಕು ಕೊಳಂಬೆ ಗ್ರಾಮದ ಕೌಡೂರು ಎಂಬಲ್ಲಿ ಚಂದ್ರಹಾಸ ಅಮೀನ್ ಎಂಬವರ ಬಾಬ್ತು ಕ್ರಶರ್ ನಲ್ಲಿ ಸುಮಾರು 8 ವರ್ಷಗಳಿಂದ ಕೂಲಿ ಕೆಲಸ ಮಾಡಕೊಂಡಿದ್ದು ದಿನಾಂಕ: 02/04/2015 ರಂದು ಮಧ್ಯಾಹ್ನ ಸುಮಾರು 01-45 ಗಂಟೆಗೆ ಚಂದ್ರಹಾಸ ಅಮೀನ್ ರವರ ಬಾಬ್ತು ಮುಖ್ಯ ಗೇಟಿನ ಬಳಿ ಒಂದು ಕಾರು ಬಂದು ನಿಂತಿದ್ದು ಆ ಕಾರಿನಲ್ಲಿ 5, 6  ಜನ ಬಂದಿದ್ದು ಕಾರಿನಿಂದ ಇಳಿದು ಒಬ್ಬರು ಫಿರ್ಯಾಧಿದಾರರಿಗೆ ಏಕಾಎಕಿ ಏನು ಮಾತನಾಡದೇ ಎದೆಗೆ ಕೈ ಹಾಕಿ ಜುಟ್ಟು ಹಿಡಿದು ಕಾಲಿನಿಂದ ಸೊಂಟಕ್ಕೆ ಹೊಡೆದು ಬೆನ್ನಿಗೆ ಹಾಗೂ ಎದೆಗೆ ಪುನ: ಹೊಡೆದಿದ್ದು ಆ ಪರಿಣಾಮ ಫಿರ್ಯಾಧಿದಾರರಿಗೆ ಎಡ ಕೈ ಹೆಬ್ಬರಳಿಗೆ ನೋವುಂಟಾಗಿದ್ದು ಆ ಸಮಯ ಬಿಡಿಲು ಬಂದ ಇನ್ನೊಂದು ಮಹಿಳೆಗೆ ದೂಡಿ ಹಾಕಿ ಬಲ ಕೈ ಮೊಣಗಂಟಿಗೆ ನೋವುಂಟು ಮಾಡಿದ್ದು ಅಲ್ಲದೇ ಉಸ್ಮಾನ್ ಎಂಬವರಿಗೆ ಟಿಪ್ಪಾರ್ ನಿಂದ ಎಳೆದು ಹಾಕಿ ಎಡಬದಿ ಸೊಂಟಕ್ಕೆನೋವುಂಟು ಮಾಡಿರುತ್ತಾರೆ. ನಂತರ ವಿಚಾರಿಸಿದಾಗ ಫಿರ್ಯಾಧಿದಾರರಿಗೆ ಹೊಡೆದವರು ದಿನಕರ ರೈ, ಸಂತೋಷ ರೈ, ನವೀನ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹಾಗು ಇತರ ಇಬ್ಬರು ಇದ್ದು ಅವರೆಲ್ಲರೂ ಫಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದಕ್ಕೆ ಇಲ್ಲಿ ಕೆಲಸ ಮಾಡಿದರೆ ನಿಮ್ಮನ್ನು ಕೊಂದು ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.
 
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 03/04/2015 ರಂದು ಬೆಳಗ್ಗೆ 7-15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಗಂಗಾಧರ ಪೂಜಾರಿ ರವರ ಪತ್ನಿ ಶ್ರೀ ಮತಿ ಮೀನಾಕ್ಷಿ  ಎಂಬುವರು ಮೂಳೂರು ಗ್ರಾಮದ ಗುರುಪೇಟೆ ರಸ್ತೆಯಲ್ಲಿ ಬಸ್ ನಿಲ್ದಾಣದ ಹತ್ತಿರ ನಡೆದುಕೂಂಡು ಹೋಗುತ್ತಿರುವಾಗ  ಮಂಗಳೂರು ಕಡೆಯಿಂದ ಕೈಕಂಬ ಕಡೆಗೆ ಬರುತ್ತಿದ್ದ  ಬೈಕ್ ನಂ ಕೆ.. 46 ಜೆ. 3940 ನೇದರ ಸವಾರನು ಬೈಕ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೂಂಡು ಬಂದು ಮೀನಾಕ್ಷಿ ಎಂಬುವರಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಮೀನಾಕ್ಷಿಯವರ ಹಣೆಗೆ, ತುಟಿಗೆ, ಎಡಕಾಲಿನ ಗಂಟಿಗೆ ರಕ್ತಗಾಯವಾಗಿದ್ದು, ಆ ಸಂಧರ್ಭ ಪಿರ್ಯಾದುದಾರರ ತಮ್ಮನಾದ ಮಹಾಬಲ ಹಾಗೂ ಜೀಪು ಚಾಲಕ ರಫೀಕ್ ಎಂಬುವರು ಸೇರಿಸಿಕೂಂಡು ಚಿಕಿತ್ಸೆ ಬಗ್ಗೆ ಮಂಗಳೂರು ಎಸ್.ಸಿ. ಎಸ್. ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ.
 
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 02-04-2015 ರಂದು ಪಿರ್ಯಾದಿದಾರರಾದ ಶ್ರೀ ಹರೀಶ್ ಪೂಜಾರಿ ರವರು ಮಂಗಳೂರಿನ ಅಡು ಮರೋಳಿ ಎಂಬಲ್ಲಿ ತನ್ನ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಅಲ್ಲಿಂದ ರಾತ್ರಿ 9:00 ಗಂಟೆಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-EC-7116 ನೇದನ್ನು ಸವಾರಿ ಮಾಡಿಕೊಂಡು ಸಹಸವಾರರಾಗಿ ಪಿರ್ಯಾದಿದಾರರ ಸಂಬಂಧಿ ರವಿಚಂದ್ರ ರವರನ್ನು ಕುಳ್ಳಿರಿಸಿಕೊಂಡು ಮನೆ ಕಡೆಗೆ ಹೊರಟು ರಾತ್ರಿ 9:30 ಗಂಟೆಗೆ ಕಲ್ಲಾಪು ಎಂಬಲ್ಲಿಗೆ ತಲುಪುವಾಗ ಪಿರ್ಯಾದಿದಾರರ ಎಡಗಡೆ ಕಲ್ಲಾಪು ಪಟ್ಲ ಎಂಬಲ್ಲಿಂದ KA-19-EA-1318ನೇ ಮೋಟಾರು ಸೈಕಲ್ ಸವಾರನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ಎಡಕೈ ರಸ್ತೆಗೆ ತಾಗಿ ಗುದ್ದಿದ ನೋವು, ಎಡಕಾಲಿನ ಗಂಟಿಗೆ ಹಾಗೂ ಕೋಲು ಕಾಲಿಗೆ ತರಚಿದ ರಕ್ತ ಗಾಯವಾಗಿದ್ದು, ಅಲ್ಲದೆ ಬೈಕ್ ಜಖಂ ಉಂಟಾಗಿರುತ್ತದೆ. ಸಹಸವಾರ ರವಿಚಂದ್ರ ರವರಿಗೆ ಎಡಕೈಗೆ ಗಾಯವಾಗಿರುತ್ತದೆ.
 
8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಶ್ರೀ ಗಣೇಶ್ ಪದಕಣ್ಣಯ ರವರು ಕೆ.ಎಸ್.ಆರ್ ರಸ್ತೆಯಲ್ಲಿರುವ ಕೇರಳ ಸಮಾಜದ ಕಾಂಪ್ಲೆಕ್ಷ ನ ಕೆಳ ಅಂತಸ್ತಿನಲ್ಲಿ ಶಾಫ್ ನಂ 10 ರಲ್ಲಿ, ಜನರಲ್ ಮರ್ಚಂಟ್ ಪದಕಣ್ಣಯ ಬ್ರದರ್ಸ್ ಎಂಬ ಅಂಗಡಿಯಲ್ಲಿ ಸುಮಾರು 20 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವುದಾಗಿದೆ. ಪಿರ್ಯಾದಿದಾರರು ಎಂದಿನಂತೆ ದಿನಾಂಕ 02-04-2015 ರಂದು ರಾತ್ರಿ 11:00 ಗಂಟೆಗೆ ಬಂದ್ ಮಾಡಿ ಹೋಗಿದ್ದು, ದಿನಾಂಕ 03-04-2015 ರಂದು ಬೆಳಿಗ್ಗೆ 08:00 ಗಂಟೆಗೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಶೆಟರ್ ಅರ್ಧ ತೆರೆದಿದ್ದು, ಪಿರ್ಯಾದಿದಾರರು ಶೆಟರ್ ನ್ನು ತೆರೆದು ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು, ಬಿದ್ದಿದ್ದು, ಕಪಾಟಿನಲ್ಲಿ ಇಟ್ಟಿದ್ದು, ಸುಮಾರು ರೂ 35,000/- ನಗದು ಹಣ, 04 ಬಂಡಲ್ ಕಿಂಗ್ಸ್ ಸಿಗರೇಟು, 03 ಬಂಡಲ್ ಕ್ಲಾಸಿಕ್ ಸಿಗರೇಟು  ಹಾಗೂ 01 ಬಂಡಲ್ ಬ್ಲಾಕ್ ಸಿಗರೇಟು ಮತ್ತು ಚಾಕಲೇಟ್ ನ್ನು ಯಾರೋ ಕಳ್ಳರು ಅಂಗಡಿಯ ಬೀಗವನ್ನು ಮುರಿದು ಒಳಹೊಕ್ಕು ಕಳವು ಮಾಡಿ ಹೋಗಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು ರೂ 55.000/- ಆಗಬಹುದು.
 
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 26.03.2015 ರಂದು ಫಿರ್ಯಾದಿದಾರ ಮಹಿಳೆಯು ತಂಗಿಯ ಮನೆಯಲ್ಲಿ ತಂಗಿ ಜೊತೆಯಲ್ಲಿ ಮಾತನಾಡುತ್ತಿದ್ದ ಸಮಯ ಪಿರ್ಯಾದಿದಾರರ ತಮ್ಮಂದಿರಾದ ಅಜರ್ ಮತ್ತು ಪೈಜಲ್ ರವರು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ "ನೀನು ಯಾಕೆ ಇಲ್ಲಿ ಬಂದದ್ದು" ಎಂದು ಅವಾಚ್ಯ ಶಬ್ದಗಳಿಂದ ಬೈದು ಪೈಜಲನು ಕೈಯಿಂದ ಬೆನ್ನಿಗೆ ಗುದ್ದಿದನು, ಅಝರನು ಕಿಸೆಯಿಂದ ಯಾವುದೋ ಒಂದು ವಸ್ತುವನ್ನು ತೆಗೆದು ಪಿರ್ಯಾದಿದಾರರ ಎಡ ಕೈಯ ಉಂಗುರ ಬೆರಳಿಗೆ ಹೊಡೆದ ಪರಿಣಾಮ ರಕ್ತ ಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರು ತುಂಬೆಯ ಪಾಧರ್ ಮುಲ್ಲರ್ಸ್‌‌‌ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಮನೆಗೆ ಬಂದಿದ್ದು  ನೋವು ಕಡಿಮೆ ಆಗಿರದ ಪರಿಣಾಮ 28.03.2015 ರಂದು ಹೈಲ್ಯಾಂಡ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಬಂದಾಗ ವೈಧ್ಯಾಧಿಕಾರಿಯವರು ಪರಿಕ್ಷೀಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು 01.04.2015 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ದಿನಾಂಕ 03.05.2015 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದವರು ತಮ್ಮಂದಿರಾದ ಕಾರಣ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ.
 
10. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 03.04.2015 ರಂದು ಬೆಳಿಗ್ಗೆ 11.30 ರಿಂದ ಮದ್ಯಾಹ್ನ 1.30 ರ ಅವಧಿಯಲ್ಲಿ ಮಂಗಳೂರು ತಾಲೂಕು ಅರ್ಕುಳದಲ್ಲಿನ ಯಶಸ್ವಿನಿ ಕಲ್ಯಾಣ ಮಂಟಪದ ಹಾಲನಲ್ಲಿ ಪಿರ್ಯಾದಿದಾರರಾದ ಶ್ರೀ ರಾಜೇಶ್ ರವರ ತಮ್ಮ ಹೇಮಂತರ ಮದುವೆ ಕಾರ್ಯಕ್ರಮದಲ್ಲಿ ವರನ ಡ್ರೇಸ್ಸಿಂಗ ಕೊಠಡಿಯಲ್ಲಿ ಪಿರ್ಯಾದಿದಾರರ ತಂಗಿ ರತ್ನಾವತಿರವರ ಬ್ಯಾಗನಲ್ಲಿ ಇರಿಸಿದ್ದ ವರನು ವಧುವಿಗೆ ಉಡುಗೊರೆಯಾಗಿ ಕೋಡುವ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಚಿನ್ನಾಭರಣಗಳ ಮೌಲ್ಯ ಸುಮಾರು 92,000/- ಆಗಿರುತ್ತದೆ. ಕಳುವಾದ ಸ್ವತ್ತುಗಳ ವಿವರ. 1) ಎರಡು ಎಳೆಯ ಮುತ್ತಿನ ಹಾರ ಇದಕ್ಕೆ ಲಕ್ಷ್ಮೀ ಪೆಂಡೆಂಟ ಇದೆ. ತೂಕ 2 1/2  ಪವನ್ ಬೆಲೆ ಸುಮಾರು  65.000/- 2)ಲೇಡಿಸ್ ರಿಂಗ್-1 ಇದರ ತೂಕ 3 ಗ್ರಾಮ, ಇದರಲ್ಲಿ ಬಿಳಿ ಮತ್ತು ಕೆಂಪು ಕಲ್ಲು ಇರುತ್ತದೆ. ಬೆಲೆ ಸುಮಾರು  8.500/- 3)ಲೇಡಿಸ್ ರಿಂಗ-1 ಇದರಲ್ಲಿ ಎಸ್‌‌ಆರ್ಬರೆದಿದ್ದು ಇದರ ತೂಕ 2 1/2 ಗ್ರಾಂ ಇದೆ  ಬೆಲೆ ಸುಮಾರು  6500/- 4)ಜಂಟ್ಸ್ ರಿಂಗ್-1 ಇದು ಸ್ಟಾರ ಆಗಿದ್ದು, ಇದರ ತೂಕ 4 ಗ್ರಾಂ ಆಗಿರುತ್ತದೆ. ಬೆಲೆ ಸುಮಾರು 12.000/- ಆಗಿರುತ್ತದೆ.
 

1 comment: