ಕಳವು ಪ್ರಕರಣ
ಮಂಗಳೂರು ಪೂರ್ವ ಪೊಲೀಸ್ ಠಾಣೆ
- ದಿನಾಂಕ 11-03-2013 ರಂದು 18-30 ಗಂಟೆಯಿಂದ ದಿನಾಂಕ 12-03-2013 ರಂದು ಬೆಳಿಗ್ಗೆ 09-40 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ ಕುನಿಲ್ ಕಾಂಪ್ಲೆಕ್ಸ್ ಕಟ್ಟಡದ 2ನೇ ಮಹಡಿಯಲ್ಲಿರುವ ಕಚ್ಚೂರು ಕ್ರೆಡಿಟ್ ಕೋ-ಓಪರೇಟಿವ್ ಲಿ. ಸೊಸೈಟಿಯ ಕಿಟಕಿ ಸರಳುಗಳನ್ನು ತುಂಡರಿಸಿ ಒಳ ಪ್ರವೇಶಿಸಿ ಲೆನಾವೋ ಕಂಪನಿಯ ಅಂದಾಜು ರೂ. 6000/-ಬೆಲೆ ಬಾಳುವ ಮೊನಿಟರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಪದ್ಮನಾಭ.ಎಂ. ಜನರಲ್ ಮ್ಯಾನೇಜರ್, ಕಚ್ಚೂರು ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಕಂಕನಾಡಿ ಕುನಿಲ್ ಕಾಂಪ್ಲೆಕ್ಸ್ ಕಟ್ಟಡದ 2ನೇ ಮಹಡಿ, ಮಂಗಳೂರು ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಅ.ಕ್ರ 32/2013, ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹೆಂಗಸು ಕಾಣೆ ಪ್ರಕರಣ
ದಕ್ಷಿಣ ಠಾಣೆ
- ಫಿರ್ಯಾದುದಾರರಾದ ರಾಮಚಂದ್ರ ಪೂಜಾರಿ (38), ತಂದೆ: ದಿ: ಬಾಬು ಪೂಜಾರಿ, ವಾಸ: ಉಷಾ ನಿವಾಸ, ಅಂಗರ ಮಜಲು, ಗೋರಿಗುಡ್ಡ, ಮಂಗಳೂರುರವರ ಹೆಂಡತಿಯಾದ ಶ್ರೀಮತಿ ಉಷಾ ಪ್ರಾಯ 35 ವರ್ಷ ಎಂಬವರು ನಿನ್ನೆ ದಿನ ದಿನಾಂಕ 11-03-2013 ರಂದು ಪಿರ್ಯಾದುದಾರರು ಮನೆಯಲ್ಲಿ ಇಲ್ಲದ ಸಮಯ ಪಿರ್ಯಾದಿದಾರರಿಗೆ ತಿಳಿಸದೇ ಮನೆಯಿಂದ ಹೊರಟು ಹೋದವರು ಈವರೇಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಎಲ್ಲಾ ಸಂಬಂದಿಕರ ಮನೆಯಲ್ಲಿ ವಿಚಾರಿಸಿದರೂ ಕೂಡಾ ಈವರೇಗೆ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಶ್ರೀಮತಿ ಉಷಾ ಎಂಬವರನ್ನು ಪತ್ತೆ ಮಾಡಿಕೊಡುವಂತೆ ರಾಮಚಂದ್ರ ಪೂಜಾರಿ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ.56/13 ಕಲಂ ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ
- ದಿನಾಂಕ 09.03.2013 ರಂದು 13:15 ಗಂಟೆಗೆ ಮಂಗಳೂರು ನಗರದ ಅಡ್ಯಾರು ಗ್ರಾಮದ ಅಡ್ಯಾರು ಕಟ್ಟೆ ಎಂಬಲ್ಲಿ ರಾ.ಹೆ 75ರಲ್ಲಿ ಪಿಯರ್ಾದಿದಾರರಾದ ಮಂಜುನಾಥರವರು ತನ್ನ ಬಾಬ್ಬು ಲಾರಿ ನಂಬ್ರ ಕೆ.ಎ 19 ಬಿ 9852ನ್ನು ಪಡೀಲ್ ಕಡೆಯಿಂದ ಬಿ.ಸಿರೋಡ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಸಹ್ಯಾದ್ರಿ ಕಾಲೇಜು ಕಡೆಯಿಂದ ಮಂಗಳೂರು ಕಡೆಗೆ ಕೆ,ಎ 19 ಎಂಬಿ-5544ನೇ ಮಾರುತಿ ರಿಟ್ಸ್ ಕಾರನ್ನು ಅದರ ಚಾಲಕಿ ಸೋನಿಕಾ ಎಂಬವರು ಅತೀ ವೇಗಾ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಡ್ಯಾರು ಕಟ್ಟೆ ಜಂಕನ್ನಲ್ಲಿ ಒಮ್ಮೆಲೆ ತೆರೆದ ಡಿವೈಡರ್ಗೆ ಡಿಕ್ಕಿ ಹೊಡೆದು ನಂತರ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕಿ ಸೋನಿಕಾ ಮತ್ತು ಕಾರಿನಲ್ಲಿದ್ದ ಕೃಪಾ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಲಾರಿಯ ಮತ್ತು ಕಾರು ಜಖಂಗೊಂಡಿದ್ದು, ಗಾಯಳು ಸೋನಿಕಾ ಮತ್ತು ಕೃಪಾ ಎಂಬವರನ್ನು ನಗರದ ಯುನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಮಂಜುನಾಥ ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣಾ ಅಕ್ರ : 62/13 ಕಲಂ : 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರ್ ಪೊಲೀಸ್ ಠಾಣೆ
- ದಿನಾಂಕ 11-03-2013 ರಂದು ಫಿರ್ಯಾಧುದಾರರಾದ ಶ್ರೀ ಗಂಗಾಧರಪ್ಪ ರವರ ಜೊತೆ ಕೆಲಸ ಮಾಡುವ ಎಂ.ಎ. ಸುಲೇಮಾನ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ. ಕೆಎ-18-ಕ್ಯೂ-2758ನೇದನ್ನು ಕಾವೂರು ಕಡೆಯಿಂದ ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ, ಮಧ್ಯಾಹ್ನ ಸುಮಾರು 2-15 ಗಂಟೆಗೆ ಪಂಜಿಮೊಗರು ತಲುಪುವಾಗ ಕೂಳೂರು ಕಡೆಯಿಂದ ಕಾವೂರು ಕಡೆಗೆ ಕೆಎ-19-2758ನೇ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಲೇಮಾನ್ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸುಲೇಮಾನ್ ರವರು ರಸ್ತೆಗೆ ಬಿದ್ದು, ಅವರ ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಗಂಗಾಧರಪ್ಪ ರವರು ನೀಡಿದ ದೂರಿನಂತೆ ಕಾವೂರ್ ಪೊಲೀಸ್ ಠಾಣಾ ಅ.ಕ್ರ. 51/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment