ಹಲ್ಲೆ ಪ್ರಕರಣ
ಉತ್ತರ ಪೊಲೀಸ್ ಠಾಣೆ
- ಫಿಯರ್ಾದಿದಾರರಾದಶ್ರೀ ಮಹಮ್ಮದ್ ಅಶ್ರಫ್, ತಂದೆ: ಅಬೂಕಲಂದನ್, ವಾಸ: ಮಿಷನ್ ಸ್ಟ್ರೀಟ್, ಮಿಷನ್ ಕಂಪೌಂಡ್, ನಿಯರ್ ಜ್ಯೋತಿ ಗ್ಯಾರೇಜ್, ಮಂಗಳೂರು ರವರು ದಿನಾಂಕ 01-03-2013 ರಂದು ಮಿಷನ್ ಸ್ಟ್ರಿಟ್ನ ಮನೆಯಲ್ಲಿರುವ ಸಮಯ ಮಧ್ಯಾಹ್ನ 3:30 ಗಂಟೆ ಸಮಯಕ್ಕೆ ಫಿಯರ್ಾದಿದಾರರ ಮಾವನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಮದ್ ಅವರಲ್ಲಿ ಮನೆ ಎದುರು ನಿಲ್ಲಿಸಿದ್ದ ಟೆಂಪೋವನ್ನು ತೆಗೆಯಲು ಹೇಳಿದ್ದು, ಅದರಂತೆ ಅದೇ ದಿನ ರಾತ್ರಿ 20:30 ಗಂಟೆಗೆ ಫಿರ್ಯದಿದಾರರು ಮನೆಯಲ್ಲಿರುವ ಸಮಯ ಆರೋಪಿಗಳು ಬಂದು ಫಿಯರ್ಾದಿದಾರರಿಗೆ ಬೈಯ್ಯಲು ಶುರು ಮಾಡಿದ್ದು, ಅದಕ್ಕೆ ಫಿಯರ್ಾದಿದಾರರು ಯಾಕೆ ಬೈಯ್ಯುತ್ತೀರಿ ಎಂದು ಕೇಳಿದಾಗ ಆರೋಫಿಗಳ ಪೈಕಿ ಅಫ್ತಾಭ್ ಎಂಬವರು ಅಲ್ಲೇ ಇದ್ದ ಮರದ ರೀಪಿನಿಂದ ಎಡ ಕಣ್ಣಿನ ಬಳಿ ಹೊಡೆದಿದ್ದು, ಇದರಿಂದ ರಕ್ತ ಗಾಯವಾಗಿರುತ್ತದೆ. ಬಳಿಕ ಸಮದ್ ಹಾಗೂ ಅನ್ವರ್ರವರು ಕೈಯಿಂದ ತಲೆಗೆ, ಕೈಗೆ, ಬೆನ್ನಿಗೆಹೊಡೆದು ನೆಲಕ್ಕೆ ಬೀಳಿಸಿರುತ್ತಾರೆ, ಆರೋಪಿಗಳಿಗೆ ಮನೆ ಬಾಡಿಗೆ ಹಾಗೂ ಒಕ್ಕಲೆಬ್ಬಿಸುವ ವಿಚಾರದಲ್ಲಿ ತಕರಾರು ಇದ್ದು ಇದೇ ಕಾರಣಕ್ಕೆ ಆರೋಪಿಗಳು ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಮಹಮ್ಮದ್ ಅಶ್ರಫ್, ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 29/2013 ಕಲಂ 324, 323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉತ್ತರ ಪೊಲೀಸ್ ಠಾಣೆ
- ಫಿಯರ್ಾದಿದಾರರಾದ ಮುಹಮ್ಮದ್ ಅನ್ವರ್, ತಂದೆ: ಯು. ಪೋಕಬ್ಬ, ವಾಸ: ಮಿಷನ್ ಸ್ಟ್ರೀಟ್, ಮಿಷನ್ ಕಂಪೌಂಡ್, ನಿಯರ್ ಜ್ಯೋತಿ ಗ್ಯಾರೇಜ್, ಮಂಗಳೂರು ರವರು ದಿನಾಂಕ 01-03-2013 ರಂದು ಮಿಷನ್ ಸ್ಟ್ರಿಟ್ನ ಮನೆಯಲ್ಲಿರುವ ಸಮಯ ರಾತ್ರಿ ಸುಮಾರು 19:45 ಗಂಟೆ ಸಮಯಕ್ಕೆ ಅವರ ನೆರೆಮನೆಯ ಮುಹಮ್ಮದ್ ಅಶ್ರಫ್ ಎಂಬವರು ಫಿಯರ್ಾದಿದಾರರ ಮನೆಯ ಒಳಗೆ ಬಂದು ಬೇವಾಸರ್ಿ ರಂಡೆ ಮಕ್ಕಳೆ ಎಂದು ಫಿರ್ಯದಿದಾರರಿಗೆ ಬೈಯ್ದು, ಅಲ್ಲದೆ ಅಬ್ದುಲ್ ಸಮದ್ ಹಾಗೂ ಅಫ್ತಾಬ್ ರವರಿಗೆ ಅವಾಚ್ಯಶಬ್ದಗಳಿಂದ ಬೈಯ್ದು, ಗಲಾಟೆ ಮಾಡಿ ಫಿಯರ್ಾದಿದಾರರಿಗೆ ಹಾಗೂ ಅವರ ಮಗ ಅಫ್ತಾಬ್ ಹಾಗೂ ತಮ್ಮ ಅಬ್ದುಲ್ ಸಮದ್ರವರಿಗೆ ಕಬ್ಬಿಣದ ರಾಡಿನಿಂದ ಹೊಡೆದಿರುತ್ತಾರೆ. ಇದರಿಂದ ಅಫ್ತಾಬ್ ರವರಿಗೆ ಎಡಕೈ ಮಣಿಗಂಟು, ಪಾದದ ಬಳಿ ಗಾಯವಾಗಿರುತ್ತದೆ. ಅಬ್ದುಲ್ ಸಮದ್ ನಿಗೆ ಕೂಡಾ ಆರೋಪಿಯು ಕೈಯಿಂದ ಹಲ್ಲೆ ಮಾಡಿರುತ್ತಾರೆ, ನಂತರ ಫಿಯರ್ಾದಿದಾರರು ಹಾಗೂ ಅವರ ಮಗ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಮುಹಮ್ಮದ್ ಅನ್ವರ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 30/2013 ಕಲಂ 448, 324, 323, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ
- ದಿನಾಂಕ: 02-03-2013ರಂದು ಬೆಳಿಗ್ಗೆ ಸುಮಾರು08-45ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಮಾಕರ್ೆಟ್ ಒಳಗಡೆ ಮಟನ್ ಸ್ಟಾಲ್ಅಂಗಡಿಯ ಬಳಿ ಆರೋಪಿ ಅಬ್ದುಲ್ ಸಲೀಂ ಎಂಬವನು ಯಾವುದೋ ಕ್ಷುಲ್ಲಕ ಕಾರಣದಿಂದ ದ್ವೇಷಗೊಂಡು ಫಿರ್ಯಾಧಿದಾರರಾದ ಮಹಮ್ಮದ್ ಆಲಿ, 53 ವರ್ಷ ತಂದೆ: ಅಬ್ದುಲ್ ವಾಸ: ಸಹಲ್ ಕಾಟೇಜ್ , ಗ್ರೀನ್ ಲ್ಯಾಂಡ್ ಬಜಪೆ, ಗ್ರಾಮ, ಮಂಗಳೂರು ತಾಲೂಕು ರವರು ಕಾರು ನಂಬ್ರ: ಕೆಎ-19-ಎಂಸಿ-6909 ನೇದರ ಬಳಿ ಬಂದು ಬಾಗಿಲು ತೆರೆಯುವಾಗ ಆರೋಪಿಯುತಡೆದು ನಿಲ್ಲಿಸಿ ನೀನು ನನ್ನ ಬಗ್ಗೆ ಭಾರಿಅಪಪ್ರಚಾರ ಮಾಡುತೀಯಾ ಬೇವಾಸರ್ಿ, ಸೂಳೇ ಮಗನೇ ನಿನ್ನನು ಈಗಲೇಕೊಂದು ಹಾಕುತ್ತೇನೆ ಎಂದುಜೀವ ಬೆದರಿಕೆಒಡ್ಡಿದ್ದಲ್ಲದೇ, ಫಿರ್ಯಾಧಿದಾರರ ಮುಖಕ್ಕೆ, ತುಟಿಗೆ, ಕೆನ್ನೆಗೆ, ಎದೆಗೆಕೈಯಿಂದ ಹೊಡೆದಲ್ಲದೆ ಕಾಲಿನಿಂದ ಹೊಟ್ಟೆಗೆ, ಕಾಲುಗಳಿಗೆ ತುಳಿದು ಗುದ್ದಿದಂತಹ ನೋವುಂಟು ಮಾಡಿದ್ದುಚಿಕಿತ್ಸೆಯ ಬಗ್ಗೆ ಮಂಗಳೂರು ಎನಪೋಯ ಸ್ಪéೆಶಾಲಿಟಿಅಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಮಹಮ್ಮದ್ ಆಲಿ, ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 47/2013 ಕಲಂ: 341, 504, 506, 323 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ
ಪೂರ್ವ ಪೊಲೀಸ್ ಠಾಣೆ
- ದಿನಾಂಕ: 01-03-2013 ರಂದು ಪೈಂಟಿಂಗ್ ಕಾಂಟ್ರಕ್ಟಾರ್ ಆದ ರಾಜೇಶ್ ಎಂಬವರಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರಾದ ಮಂಜುನಾಥ(42), ತಂದೆ: ದಿ.ಗೋಪಿ, ವಾಸ:ನೀತಿನಗರ ಹೌಸ್, ಶಕ್ತಿನಗರ, ಮಂಗಳೂರು. ರವರ ಅಣ್ಣನ ಮಗನಾದ ಸುದೀಪ್ ಎಂಬವನು ಯಾವುದೇ ಭದ್ರತೆ ಇಲ್ಲದೇ ಹಾಗೂ ಇತರೆ ಸೌಲಭ್ಯ ಇಲ್ಲದೇ ಕೆಲಸ ಮಾಡುತ್ತಿರುವಾಗ ಬಿದ್ದು ತೀವ್ರ ತರದ ಗಾಯವಾದವರು ಕಂಕನಾಡಿ ಪಾದರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಪೈಂಟಿಂಗ್ ಕಾಂಟ್ರಾಕ್ಟರ್ ರಾಜೇಶ್ಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ಮಾಲೀಕರು ಯಾರು ಎಂದು ಕೇಳಿದಾಗ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದಿದ್ದು ದಿನಾಂಕ: 1-3-2013 ರಂದು ಸುದೀಪ್ನ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪಿರ್ಯಾದಿದಾರರು ಕದ್ರಿ ಪೊಲೀಸ್ ಠಾಣೆಗೆ ಹೋಗಿ ವಾಪಾಸು ಬರುತ್ತಿರುವಾಗ ರಾತ್ರಿ ಸುಮಾರು 7-45 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ 9008149006 ಕ್ಕೆ ಮೊಬೈಲ್ ನಂಬ್ರ 961167202 ನಿಂದ ರಾಜೇಶ್ ಪೋನ್ ಮಾಡಿ ಬೆವಾಸರ್ಿ, ಬೋಳಿಮಗ ಧನಿ ಮೊಬೆಲ್ ನಂಬ್ರ ಕೇಳಿದರೆ ನಿನ್ನನ್ನು ಕಿಡ್ನಾಪ್ ಮಾಡಿ ಸಾಯಿಸುತ್ತೇನೆ ಬೆದರಿಕೆಹಾಕಿ ಮಾದಿಗ ಪುಟ್ಟುದಾಯ ಎಂದು ಜಾತಿ ನಿಂದಿಸಿ ಅವಮಾನ ಮಾಡಿರುತ್ತಾರೆ ಎಂಬುದಾಗಿ ಮಂಜುನಾಥ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಮೊನಂ. 28/2013 ಕಲಂ. 3(1)(ಥ) ಖಅ & ಖಖಿ (ಠಿಡಿಜತಜಟಿಣಠಟಿ ಠಜಿ ಂಣಡಿಠಛಿಣಥಿ)ಂಛಿಣ 1989 ಮತ್ತು 504, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ಸುರತ್ಕಲ್ ಠಾಣೆ
- ಪಿರ್ಯಾದಿದಾರರಾದ ಅಬುಬಕ್ಕರ್ (32) ವಾಸ: ಸೂರಿಂಜೆ ಮಂಗಳೂರು ತಾಲೂಕು ರವರು ಸಂಸಾರದೊಂದಿಗೆ ವಾಸವಾಗಿದ್ದು ದಿನಾಂಕ 01-03-2013 ರಂದು ಎಂದಿನಂತೆ ಮನೆಯ ಎಲ್ಲಾ ಬಾಗಿಲುಗಳನ್ನು ಭದ್ರ ಪಡಿಸಿ ರಾತ್ರಿ 11-30 ಗAಟೆಗೆ ಮಲಗಿದ್ದು ದಿನಾಂಕ 02-03-2013 ರಂದು ಬೆಳಿಗ್ಗೆ ಸುಮಾರು 05-00 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದಿದ್ದು ಗಾಬರಿಗೊಂಡ ಪಿರ್ಯಾದಿದಾರರು ತಂದೆ ತಾಯಿ ಮಲಗಿದ್ದ ಬೆಡ್ ರೂಮ್ ಗೆ ಹೋಗಿ ನೋಡಲಾಗಿ ಕಬ್ಬಿಣದ ಕಪಾಟಿನ ಬಾಗಿಲು ತೆರೆದು ಅದರೊಳಗೆ ಸೇಫ್ ಲಾಕರ್ ನಲ್ಲಿಟ್ಟಿದ್ದ ಒಂದು ಲಕ್ಷ ನಗದು ಹಣ ಮತ್ತು ಸುಮಾರು 2 ಪವನ್ ತೂಕದ ಕಿವಿಯ ಲೋಲಾಕ್ ಕಳವಾಗಿದ್ದು ಕಂಡು ಬಂದಿದ್ದು ಯಾರೋ ಕಳ್ಳರು ಈ ಕಳವನ್ನು ಮಾಡಿದ್ದು ಪತ್ತೆ ಮಾಡಿಕೊಡುವರೇ ಕೋರಿರುತ್ತಾರೆ ಎಂಬಿತ್ಯಾದಿ . MlÄÖ ªÀiË®å MAzÀÄ ®PÀëzÀ E¥ÀàvÉÊzÀÄ ¸Á«ರ ಎಂಬುದಾಗಿ ಅಬುಬಕ್ಕರ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 53/2013 ಕಲಂ 457-380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment