ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 07-03-2013 ರಂದು ಸಮಯ ಬೆಳಿಗ್ಗೆ ಸುಮಾರು 09.45 ಗಂಟೆಗೆ ಪಿರ್ಯಾದುದಾರರು ಪದವು ಜಂಕ್ಷನ್ ಕಡೆಯಿಂದ ಸುರತ್ಕಲ್ ಕಡೆಗೆ ಗ್ಯಾಸ್ ಟ್ಯಾಂಕರ್ ನಂಬ್ರ ಏಂ- 21 ಃ- 1008 ನ್ನು ಎನ್ಎಚ್ -66 ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಕೆ.ಪಿ.ಟಿ. ಜಂಕ್ಷನ್ ತಲುಪುವಾಗ ಸಕ್ಯರ್ೂಟ್ ಹೌಸ್ ಜಂಕ್ಷನ್ ಕಡೆಯಿಂದ ಮೋಟಾರು ಸೈಕಲು ನಂಬ್ರ ಏಂ- 19 ಘಿ- 9909 ನ್ನು ಅದರ ಸವಾರ ಮೋನು ಶರ್ಮರವರು ರಾಘವೇಂದ್ರ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಯೆಯ್ಯಾಡಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಾಷ್ಟೀಯ ಹೆದ್ದಾರಿ-66ನ್ನು ಪ್ರವೇಶಿಸುವ ವೇಳೆ ನಿಂತು ಮುಂದಕ್ಕೆ ಚಲಾಯಿಸದೆ ಒಮ್ಮೆಲೆ ಮೋ, ಸೈಕಲನ್ನು ಎನ್ಎಚ್ -66 ರಸ್ತೆಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರ ಟ್ಯಾಂಕರಿನ ಮುಂಭಾಗದ ಎಡಭಾಗಕ್ಕೆ ಮೊ,ಸೈಕಲ್ ಡಿಕ್ಕಿಯಾಗಿ ಮೊ,ಸೈಕಲ್ ಸವಾರ ಮತ್ತು ಸಹಸವಾರ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಸಹಸವಾರ ರಾಘವೇಂದ್ರರವರ ಬಲಕಾಲಿಗೆ ರಕ್ತಗಾಯ ಉಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಮೊ,ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂಬುದಾಗಿ ಫಿರ್ಯಾದಿದಾರರಾದ ಎನ್ ಮಹಾಲಿಂಗಂ (27ವರ್ಷ) ತಂದೆ: ನಡೆಸಾನ್ ವಾಸ: 1/262, ಮುರುತ್ತಲ್ ಕೊಂಬಾಯಿ ಅಂಚೆ, ತಿರುವನಂದೂರು ತಾಲೂಕು, ತಿರುಂಬಿ ಜಿಲ್ಲೆ, ತಮಿಳ್ನಾಡು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 51/2013 279 , 337 ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಬಾವಿಕ ಮರಣ ಪ್ರಕರಣ:
ಮಂಗಳೂರು ಉತ್ತರ ಠಾಣೆ;
- ದಿನಾಂಕ 06-03-2013 ರಂದು ಸಂಜೆ ಸುಮಾರು 5 ಗಂಟೆ ಸಮಯಕ್ಕೆ ಫಿಯರ್ಾದಿದಾರರು ಸುಮಾರು 40 ವರ್ಷಗಳಿಂದ ಮಂಗಳೂರಿನ ಹಳೆ ಬಸ್ ನಿಲ್ದಾಣದ ಬಳಿ ಇರುವ ಪಾನ್ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡಿಕೊಂಡಿದ್ದು, ಇವರ ಸ್ವಂತ ಊರು ಉತ್ತರ ಪ್ರದೇಶದ ಸೂರಜ್ ಪುರ ತಾಲೂಕು ಅಗಿರುತ್ತದೆ. ಇವರ ಪಾನ್ ಅಂಗಡಿಯಲ್ಲಿ ಸುಮಾರು 52 ವರ್ಷ ಪ್ರಾಯದ ಮಾರ್ಖಂಡೆ ಎಂಬವರು ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು, ಇವರು ವಿಪರೀತ ಮದ್ಯಪಾನ ಚಟವುಳ್ಳವರಾಗಿದ್ದು, ಬಸ್ ನಿಲ್ದಾಣದ ಬಳಿ ಇರುವ ಟೈಟಾನ್ ವಾಚ್ ಶೋ ರೂಂ ಕೆಳಗಡೆ ಬಿದ್ದುಕೊಂಡಿದ್ದವರನ್ನು 108 ಆಂಬ್ಯುಲೆನ್ಸಿನಲ್ಲಿ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ದಾಖಲುಮಾಡಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನ ರಾತ್ರಿ 11:30 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ವರೆಗೂ ಆತನ ಮನೆಯವರು ಯರೂ ಲಭ್ಯವಾಗದ ಕಾರಣ ಈ ಫಿಯರ್ಾದಿಯನ್ನು ನೀಡಿದ್ದು ಆತನ ವಾರಸುದಾರರನ್ನು ಪತ್ತೆ ಮಾಡಿ ಆತನ ಮೃತ ದೇಹದ ಬಗ್ಗೆ ಮುಂದಿನ ತನಿಖೆ ಮಾಡಬೇಕಾಗಿ ಎಂಬುದಾಗಿ ನೇಬುಲಾಲ್ ಚೌವ್ಹಾಣ್ (74) ತಂದೆ: ರಾಮ್ ಸೋಚ್ ಚೌವ್ಹಾಣ್ ವಾಸ: ಮುಳಿ ಹಿತ್ಲು ಟಿಲ್ಲರಿ ರಸ್ತೆ ಚೌವ್ಹಾಣ್ ಕಂಪೌಂಡ್ ಮಂಗಳಾದೇವಿ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ ಯುಡಿಆರ್ ನಂಬ್ರ 13/2013, ಕಲಂ 174 ಸಿಆರ್ ಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಕ್ಷಿಣ ಠಾಣೆ;
- ಪಿರ್ಯಾದಿದಾರರ ತಂದೆಯವರಾದ ಸುಬ್ಬಯ್ಯ ನಾಯ್ಕ್ ರವರು ಪಾಂಡೇಶ್ವರ ಬಿಎಸೆನೆಲ್ ಮುಖ್ಯ ಕಛೇರಿಯಲ್ಲಿ ಸಬ್ಡಿವಿಜನಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು ದಿ 07-03-11 ರಂದು ಬೆ. 11-00 ಗಂಟೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರ ಕಛೆರಿಯ ಸಿಬ್ಬಂದಿಯವರು ಚಿಕಿತ್ಸೆ ಬಗ್ಗೆ ಜಯಶ್ರೀ ನಸರ್ಿಂಗ್ ಹೋಮ್ಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿರುವಾಗಲೇ ಬೆಳಿಗ್ಗೆ 11-35 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಇಂದುಶ್ರೀ ಎಂ.ಎಸ್ ತಂದೆ: ಟಿ. ಸುಬ್ಬಯ್ಯ ನಾಯ್ಕ ಗುರುಕೃಪಾ ಮನೆ, ಮನ್ನಿಪ್ಪಾಡಿ, ರಾಮದಾಸ್ ನಗರ, ಕೂಡ್ಲು, ಕಾಸರಗೋಡು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 19/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment