ಹಲ್ಲೆ ಪ್ರಕರಣ:
ಕಾವೂರು ಠಾಣೆ;
- ತಾರೀಕು 05-03-2013 ರಂದು ರಾತ್ರಿ 11-00 ಗಂಟೆಗೆ ಪಿರ್ಯದಿದಾರರಾದ ಅರ್ಜುನ್ ಎಂಬವರು ಬಸವನಗರದಲ್ಲಿ ನಿಂತು ಕೊಂಡ ಸಮಯ ಅವರ ಹಿಂದಿನಿಂದ ಬಸವನಗರದ ನೀಲಪ್ಪ ಮತ್ತು ಅವರ ತಮ್ಮ ಸಿದ್ದು ಬಂದು “ಬೋಳಿ ಮಗನೇ ಬೇವಾರ್ಸಿ, ನಿನ್ನನ್ನು ಬಿಡುವುದಿಲ್ಲ” ಎಂಬುದಾಗಿ ಬೈದು ನೀಲಪ್ಪ ಆತನ ಕೈಯಲ್ಲಿದ್ದ ಬಿಯರ್ ಬಾಟ್ಲಿಯಿಂದ ಪಿರ್ಯಾದಿದಾರರ ತಲೆಯ ಎಡ ಭಾಗಕ್ಕೆ ಮತ್ತು ಎಡಕೈಯ ಕೋಲು ಕೈಗೆ ಹೊಡೆದಿದ್ದು ಪಿರ್ಯದಿದಾರರು ಅಲ್ಲಿಯೇ ಬಿದ್ದಗಾ ನೀಲಪ್ಪ ಮತ್ತು ಸಿದ್ದುರವರು ಕೈಗಳಿಂದ ಹೊಡೆದು ಮತ್ತು ಕಾಲುಗಳಿಂದ ತುಳಿದು ಹಲ್ಲೆ ಮಾಡಿರುತ್ತಾರೆ. ಈ ಘಟನೆಗೆ ದಿನಾಂಕ 20-02-2013 ರಂದು ಪಿರ್ಯಾದಿದಾರರು ಮತ್ತು ಇನ್ನೊಬ್ಬ ವ್ಯಕ್ತಿಯು ನೀಲಪ್ಪನ ತಮ್ಮ ಸಿದ್ದುವಿಗೆ ಹೊಡೆದಿರುತ್ತಾರೆ ಎಂಬ ದ್ವೇಷದಿಂದಲೇ ಪಿರ್ಯಾದಿದಾರರಿಗೆ ಹೊಡೆದಿರುತ್ತಾರೆ. ಎಂಬುದಾಗಿ ಪಿರ್ಯಾದಿದಾರರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ನೀಡಿದ ಹೇಳಿಕೆ ಸಾರಾಂಶವಾಗಿದೆ ಎಂಬುದಾಗಿ ಅರ್ಜುನ್ ವಾಸ: ಬಸವನಗರ ಕುಂಜತ್ ಬೈಲ್ ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 44/2013 ಕಲಂ 324, 323, 504, 506 ಜೊತೆಗೆÉ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುರತ್ಕಲ್ ಠಾಣೆ;
- ದಿನಾಂಕ 06-03-2013 ರಂದು ಪಿರ್ಯಾದಿದಾರರಾದ ಶ್ರೀ ರೋಬಟರ್್ ಪ್ರವೀಣ್ ತೌರೋರವರು ಅವರ ಸ್ನೇಹಿತ ನಿಶಾಕ್ರ ಜೊತೆಗೆ ನಿಶಾಕ್ರವರು ಕೆಲಸ ಮಾಡುತ್ತಿದ್ದ ಪೆನರ್ಾಂಡಿಸ್ ಗ್ರೂಪ್ಗೆ ಸಂಬಂದಿಸಿದ ಕೆಎ-19-ಎಕ್ಸ್-3159 ನೇ ಮೋಟಾರ್ ಸೈಕಲ್ಲಿನಲ್ಲಿ ಸವಾರರಾಗಿಯೂ ನಿಶಾಕ್ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಾ ರಾತ್ರಿ 19-30 ಗಂಟೆಗೆ ಮುಕ್ಕ ಚೆಕ್ಪೋಸ್ಟ್ ಬಳಿಯ ಚೇಳ್ಯಾರು ಕ್ರಾಸ್ ಎಂಬಲ್ಲಿ ರಾ.ಹೆ 66 ರಲ್ಲಿ ಬರುತ್ತಿದ್ದಾಗ ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಕೆಎ-19-ಎಂಸಿ-289 ನೇ ಕಾರನ್ನು ಅದರ ಚಾಲಕ ಲಾಯ್ ಅರುಣ್ ಪೆರಾವೋ ಎಂಬವರು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದು ಯಾವುದೇ ಸಿಗ್ನಲ್ ಲೈಟ್ ಅಥವಾ ಸೂಚನೆ ನೀಡದೇ ಒಮ್ಮೆಲೇ ನಿರ್ಲಕ್ಷತನದಿಂದ ರಸ್ತೆಯ ಪೂರ್ವ ಬದಿಗೆ ಚಲಾಯಿಸಿದ ಸದ್ರಿ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಹಾಗೂ ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿಯ ಎಡಕೈ ಮೊಣಗಂಟಿಗೆ ಹಾಗೂ ಬೆನ್ನಿಗೆ ಒಳನೋವಾಗಿದ್ದು ನಿಶಾಕ್ರವರಿಗೆ ಎಡಕೈಯ ಹಸ್ತಕ್ಕೆ ಎಡಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ಎಡ ತೊಡೆಯ ಬಳಿ ಒಳನೋವಾಗಿದ್ದು ಚಿಕಿತ್ಸೆಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗಿರುತ್ತಾರೆ ಅಲ್ಲದೇ ಸದ್ರಿ ಮೋಟಾರ್ ಸೈಕಲ್ನ ಮುಂಬಾಗ ಹಾಗೂ ಕಾರಿನ ಮುಂಬಾಗಕ್ಕೆ ಜಖಂ ಆಗಿರುತ್ತದೆ ಎಂಬುದಾಗಿ ರೋಬಟರ್್ ಪ್ರವೀಣ್ ತೌರೋ ಪ್ರಾಯ ಃ 25 ವರ್ಷ ತಂದೆಃ ಪೆಲಿಕ್ಸ್ ತೌರೋ ವಾಸಃ ಡೋರ್ ನಂಬ್ರ 4-209 ಶಿವನಗರ ಮೂಡುಶೆಡ್ಡೆ ಅಂಚೆ ಮತ್ತು ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 59/2013 ಕಲಂ: 279-337 ಐ.ಪಿ.ಸಿ ಯಂತೆ ಪ್ರಕರಣ ದಾಘಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment