ಮಹಿಳೆ ವಿರುದ್ದ ಪ್ರಕರಣ:
ಮಹಿಳ ಠಾಣೆ;
- ದಿನಾಂಕ 21-03-2013 ರಂದು ರಾತ್ರಿ 19-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ಆರೋಪಿ 1 ನೇರವರಾದ ಮಹೇಶ್, 2 ನೇ ಆರೋಪಿ ಮನೋಜ್ (35) 3 ನೇ ಆರೋಪಿ ದೀಪಾ (28) 4ನೇ ಆರೋಪಿ ಸೋಮನ್ (50) 5 ನೇ ಆರೋಪಿ ಆನಂದ ವಲ್ಲಿ(40) ಹಾಗು 6 ನೇ ಆರೋಪಿ ಎಂಬುವವರೊಂದಿಗೆ ಹಿಂದೂ ಸಂಪ್ರದಾಯದಂತೆ ದಿನಾಂಕ 03-05-2012 ರಂದು ಮದುವೆಯಾಗಿದ್ದು ಮದುವೆಯ ಸಮಯದಲ್ಲಿ ಪಿರ್ಯಾದಿದಾರರ ಮನೆಯವರು ವರದಕ್ಷಿಣೆಯಾಗಿ 30 ಪವನ್ ಚಿನ್ನಾಭರಣವನ್ನು ಮತ್ತು ಸುಮಾರು 30,000 ಸಾವಿರ ಬೆಲೆ ಬಾಳುವ ಮನೆ ಸಾಮಾನುಗಳನ್ನು ನೀಡಿರುವುದಲ್ಲದೇ ಮದುವೆಯ ಎಲ್ಲಾ ಖಚರ್ುವೆಚ್ಚವನ್ನು ಪಿರ್ಯಾದಿಯ ಮನೆಯವರೇ ಭರಿಸಿರುತ್ತಾರೆ. ಮದುವೆಯಾಂದಿನಿಂದ ಪಿರ್ಯಾದಿದಾರರು ಗಂಡನೊಂದಿಗೆ ಆರೋಪಿ 4 ನೇರವರ ಮನೆಯಲ್ಲಿ ವಾಸವಾಗಿದ್ದು, ಪಿರ್ಯಾದಿಯ 30 ಪವನ್ ಚಿನ್ನಾಭರಣವನ್ನು 5 ನೇ ಆರೋಪಿಯು ಕಸಿದುಕೊಂಡಿರುತ್ತಾರೆ. ಆರೋಪಿ 1 ನೇರವರು ಪಿರ್ಯಾದಿಯ ಮೇಲೆ ಸಂಶಯಪಟ್ಟು ಬೈದು, ಹೊಡೆದು ತೊಂದರೆ ಮಾಡುತ್ತಿದ್ದುದ್ದಲ್ಲದೇ ಹಿಯಾಳಿಸಿ ಮಾತನಾಡುತ್ತಿದ್ದರು. ಅಲ್ಲದೇ ಆರೋಪಿರೆಲ್ಲರೂ ಸೇರಿ ಪಿರ್ಯಾದಿದಾರರಿಗೆ ನೀನು ಹುಚ್ಚು ಹಿಡಿದವಳು ಎಂದು ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ ಪಿರ್ಯಾದಿದಾರರು ಹಿಂಸೆ ತಾಳಲಾರದೇ ಆಗಸ್ಟ್ ತಿಂಗಳಿನಲ್ಲಿ ತಂದೆ ಮನೆ ಮಂಗಳೂರಿಗೆ ಬಂದಿದ್ದು ಅಲ್ಲಿಯೂ ಸಹಾ ಆರೋಪಿ 1 ರವರು ಫೋನ್ ಮುಖಾಂತರ ಅವಮಾನ ಮಾಡುತ್ತಿದ್ದುದ್ದಲ್ಲದೇ, ದಿನಾಂಕ 02-01-2013 ರಂದು ಪಿರ್ಯಾದಿದಾರರ ತಂದೆಗೆ ಕರೆ ಮಾಡಿ ಆರೋಪಿತರ ಮನೆಗೆ ಬರಲು ಹೇಳಿ ರೂ 10 ಲಕ್ಷ ಹಣ ನೀಡಿದರೆ ನಿಮ್ಮ ಮಗಳಿಗೆ ಡೈವೋಸರ್್ ನೀಡುತ್ತೇವೆ ಇಲ್ಲದಿದ್ದರೆ ಅವಳನ್ನು ಬದುಕಲು ಬಿಡುವುದಿಲ್ಲ. ಎಂದು ಬೆದರಿಕೆ ಹಾಕಿ ಕಳುಹಿಸಿರುತ್ತಾರೆ. ದಿನಾಂಕ 18-02-2013 ರಂದು ಸಂಜೆ 6-00 ಗಂಟೆಗೆ ಆರೋಪಿ 1 ಮತ್ತು 2 ನೇರವರು ಪಿರ್ಯಾದಿಯ ತಂದೆ ಮನೆಗೆ ಬಂದು ಪಿರ್ಯಾದಿ ಹಾಗೂ ಅವರ ಮನೆಯವರಿಗೆ ಅವಮಾನ ಮಾಡಿ 10 ಲಕ್ಷ ನೀಡದಿದ್ದರೆ. ನಿಮ್ಮ ಹುಡುಗಿಯ ಜೀವನ ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ನೀತಾ(21) ಗಂಡ : ಮಹೇಶ ವಾಸ: ದೂಮಾವತಿ ಕಂಪೌಂಡು, ಹೊಯಿಗೆ ಬಝಾರ್, ಮಂಗಳೂರು ರವರು ನೀಡಿದ ದೂರಿನಂತೆ ಮಹಿಳ ಠಾಣೆ ಅಪರಾದ ಕ್ರಮಾಂಕ 03/2013 ಕಲಂ 498(ಎ),506, ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 20-03-2013 ರಂದು ನಗರದ ರೈಲ್ವೆ ನಿಲ್ದಾಣದ ಬಳಿ ಬಾವಿಯ ಹತ್ತಿರ ಅಪರಿಚಿತ ಗಂಡಸಿನ ಮೃತವಿದ್ದು, ಸದ್ರಿ ಮೃತ ದೇಹವನ್ನು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಶಿಥಿಲಗಾರದಲ್ಲಿ ಇರಿಸಲಾಗಿದ್ದು, ಈ ಮೃತ ದೇಹವನ್ನು ಫಿಯರ್ಾದುದಾರರು ಮತ್ತು ಅವರ ಸ್ನೇಹಿತರು ನೋಡಿ ಗುರುತಿಸಿದ್ದು, ಮೃತ ವ್ಯಕ್ತಿಯು ಫಿಯರ್ಾದುದಾರರ ಪರಿಚಯದ ಬಾಸಿಲ್ ಪ್ರಾಯ 75 ವರ್ಷ ಎಂಬವರಾಗಿದ್ದು, ಈ ವ್ಯಕ್ತಿ ಮನೆ ಮನೆಗೆ ದಿನ ಪತ್ರಿಕೆ ಹಂಚುವ ಕೆಲಸ ಮಾಡಿಕೊಂಡಿದ್ದು, ಇವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ರೈಲ್ವೆ ನಿಲ್ದಾಣದ ಬಳಿ ಬಾವಿಯ ಹತ್ತಿರ ಮಲಗಿದ್ದಲ್ಲಿಯೇ ಮೃತಪಟ್ಟಿರ ಬಹುದಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಯಾರೂ ಈ ವರೆಗೆ ಬಾರದೇ ಇದ್ದುದರಿಂದ ಮೃತ ದೇಹದ ಮುಂದಿನ ವಿಲೇವಾರಿ ಬಗ್ಗೆ ಮೃತ ದೇಹವನ್ನು ಫಿಯರ್ಾದುದಾರರಿಗೆ ಬಿಟ್ಟುಕೊಡುವಂತೆ ನೀಡದ ಫಿಯರ್ಾದು ಸಾರಂಶವಾಗಿದೆ ಎಂಬುದಾಗಿ ಆಲ್ವಿನ್ ಡಿ'ಸೋಜಾ (46) ತಂದೆ: ಜೋಸೆಫ್ ಡಿ'ಸೋಜಾ, ವಾಸ: ಕದ್ರಿ ಟೋಲ್ ಗೇಟ್, ಕಂಕನಾಡಿ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಯು.ಡಿ.ಆರ್ ನಂ: 25/2013 ಕಲಂ 174 (ಸಿ) ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಿರ್ಯಾದಿದಾರರ ತಮ್ಮ ಷಣ್ಮುಖ 27 ವರ್ಷ ಎಂಬವನು ಸುರತ್ಕಲ್ನ ಬನ್ನಾರಿ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಲಾರಿ ಚಾಲಕನಾಗಿರುತ್ತಾನೆ. ಈ ದಿನ ದಿನಾಂಕ 21-03-13 ರಂದು ಬೆಳಿಗ್ಗೆ 7-00 ಗಂಟೆಗೆ ತಮ್ಮನ ಜೊತೆಗೆ ಕೆಲಸ ಮಾಡುವ ನರೇಂದ್ರ ಎಂಬವರು ಮಂಗಳೂರಿನಿಂದ ಪೋನ್ ಕರೆಮಾಡಿ ಪಿರ್ಯಾದಿದಾರರ ತಮ್ಮ ಷಣ್ಮುಖನು ಬೆಳಿಗ್ಗೆ 5-00 ಗಂಟೆಗೆ ಕಾನ ಎಂಬಲ್ಲಿ ಲಾರಿಯೊಳಗೆ ಮಲಗಿದ್ದವನು ವಾಂತಿ ಬೇದಿ ಮಾಡಿದವನನ್ನು ಕೂಡಲೇ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವ್ಶೆದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದುದಾಗಿ ಪಿರ್ಯಾದಿದಾರರಿಗೆ ತಿಳಿಸಿದ ಮೇರೆಗೆ ಅವರು ಇಲ್ಲಿಗೆ ಬಂದಿದ್ದು ಷಣ್ಮುಖನಿಗೆ ಸುಮಾರು 2 ವರ್ಷದಿಂದ ಎದೆನೋವು ಮತ್ತು ರಕ್ತದ ಒತ್ತಡ ಇದ್ದು ಇದರಿಂದ ಪಾಶ್ರ್ವವಾಯು ಉಂಟಾಗಿದ್ದು ಇದಕ್ದೆ ಔಷದಿ ಮಾಡುತ್ತಿದ್ದು ಈಗ್ಗೆ ಕೆಲವು ಸಮಯದಿಂದ ಔಷದಿ ತೆಗೆದುಕೊಳ್ಳದೇ ಇದ್ದು ದಿನಾಂಕ 20-03-13ರಂದು ರಾತ್ರಿ ಊರಿನಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದು ಈ ದಿನ ಮುಂಜಾನೆ ಸುರತ್ಕಲ್ ಕಾನಾ ಬಳಿ ಎದೆ ನೋವು ಹಾಗೂ ರಕ್ತದ ಒತ್ತಡ ಜಾಸ್ತಿಯಾಗಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿರುವುದು ಎಂಬುದಾಗಿ ಯಶವಂತ ಕುಮಾರ್ ಪ್ರಾಯ ಃ 32 ವರ್ಷ ತಂದೆಃ ದಿಃ ಕೆ.ಎನ್ ಶ್ರೀನಿವಾಸ ವಾಸಃ ಆಶಾ ಬಡಾವಣೆ ಆಲೂರು ತಾಲೂಕು ಮತ್ತು ಅಂಚೆ ಹಾಸನ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಯು.ಡಿ.ಆರ್ ನಂ: 6/2013 ಕಲಂ: 174 ದಂ.ಪ್ರ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ಸುರತ್ಕಲ್ ಠಾಣೆ
- ಪಿರ್ಯಾದಿದಾರರ ಗಂಡ ಶ್ರೀನಿವಾಸ ಪ್ರಾಯ 36 ವರ್ಷ ಎಂಬವರು ಕಾಟಿಪಳ್ಳದಲ್ಲಿ 2 ಸೆಲೂನ್ ನಡೆಸಿಕೊಂಡಿದ್ದು ದಿನಾಂಕ 16-03-13 ರಂದು ಬೆಳಿಗ್ಗೆ 07-00 ಗಂಟೆಗೆ ಅವರು ಕೆಲಸ ಮಾಡುತ್ತಿದ್ದ ಸೆಲೂನ್ಗೆ ಮನೆಯಿಂದ ಹೋಗಿದ್ದು ಬಳಿಕ ಮನೆಗೆ ಬಾರದೇ ಇದ್ದು ರಾತ್ರಿ ಅವರ ಮೊಬೈಲ್ಗೆ ಕರೆ ಮಾಡಿದಲ್ಲಿ ಸ್ವಿಚ್ ಆಪ್ ಆಗಿದ್ದು ಅವರ ಊರಾದ ಹೈದಾರಬಾದ್ಗೆ ಪೋನ್ ಮೂಲಕ ವಿಚಾರಿಸಿದಲ್ಲಿ ಅಲ್ಲಿಗೂ ಹೋಗದೇ ಕಾಣೆಯಾಗಿದ್ದು ಬಳಿಕ ವಿಚಾರಿಸಿದಲ್ಲಿ ಕಾಟಿಪಳ್ಳ.ದ 2 ಅಂಗಡಿಗಳನ್ನು ಮಾರಾಟ ಮಾಡಿ ಹೋಗಿದ್ದು ಅಲ್ಲದೇ ಸೆಲೂನ್ನ ಸಾಮಾಗ್ರಿಗಳಾದ ಕತ್ತರಿ ಟಿಷ್ಯೂ ಪೇಪರ್ ಹಾಗೂ ಕಟ್ಟಿಂಗ್ಗೆ ಬೇಕಾದ ಸಾಮಾಗ್ರಿಗಳನ್ನು ಚೀಲದಲ್ಲಿ ಹಾಕಿ ಕೊಂಡು ಎಲ್ಲಿಗೋ ಹೋಗಿದ್ದು ಅವರನ್ನು ಪತ್ತೆ ಮಾಡಿಕೊಡುವರೇ ಕೋರಿರುತ್ತಾರೆ ಎಂಬುದಾಗಿ ಪುಷ್ಪ ಪ್ರಾಯ ಃ 32 ವರ್ಷ ಗಂಡಃ ಶ್ರೀನಿವಾಸ ವಾಸಃ ಚೇಗೂರು ಗ್ರಾಮ ಕೊತ್ತೂರು ತಾಲೂಕು ಹೈದರಾಬಾದ್ ಹಾಲಿ ವಾಸಃ ಸೈಟ್ ನಂಬ್ರ ಜಿಎಲ್217- 2 ನೇ ಬ್ಲಾಕ್ ಕಾಟಿಪಳ್ಳದಲ್ಲಿ ಬಾಡಿಗೆ ಮನೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 78/13, ಕಲಂ: ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment