ಅಸ್ವಾಭಾವಿಕ ಮರಣ ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದುದಾರರಾದ ಶ್ರೀ ರೋಹನ್ ಡಿಸೋಜಾ ರವರು ದಿನಾಂಕ 15-03-2013 ರಂದು ಬೆಳಿಗ್ಗೆ 7-45ಗಂಟೆ ಸಮಯಕ್ಕೆ ಮಂಗಳೂರು ನೆಹರೂ ಮೈದಾನಕ್ಕೆ ವಾಕಿಂಗ್ ಮಾಡುವರೇ ಬಂದು, ಮೈದಾನದ ಸುತ್ತ ನಡೆಯುತ್ತಿದ್ದ ಸಮಯದಲ್ಲಿ ಬೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ಮೈದಾನದ ಪ್ರವೇಶ ದ್ವಾರದ ಗೇಟ್ನ ಸಮೀಪ ಮೈದಾನದ ಒಳ ಭಾಗದಲ್ಲಿ ಒಬ್ಬ ಅಪರಿಚಿತ ಗಂಡಸು ಪ್ರಾಯ 45 ರಿಂದ 50 ವರ್ಷದ ವ್ಯಕ್ತಿ ಒಂದು ಪೇಪರಿನ ಮೇಲೆ ತಲೆಯ ಕೆಳಭಾಗದಲ್ಲಿ ಪ್ಲಾಸ್ಟಿಕ್ ಚಪ್ಪಲಿಯನ್ನು ಇಟ್ಟುಕೊಂಡು ಅಂಗಾತನೆ ಮಲಗಿದ್ದು, ತಲೆಯ ಭಾಗದಿಂದ ಕಾಲಿನವರೆಗೆ ರಕ್ತ ಹರಿಯುತ್ತಿದ್ದು, ನೆಲದಲ್ಲಿ ಹಾಸಲಾದ ಪೇಪರಿಗೂ ಕೂಡಾ ರಕ್ತ ತಾಗಿದ್ದು, ಈತನು ಯಾವುದೋ ಖಾಯಿಲೆಯಿಂದ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ಅಥವಾ ಇನ್ನಾವುದೋ ಆಯುಧದಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಮೃತಪಟ್ಟಿರಬಹುದೆಂದು ಈತನು ದಿನಾಂಕ 14-03-2013 ರಂದು ರಾತ್ರಿ ಸಮಯ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ರೋಹನ್ ಡಿಸೋಜಾ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಯು.ಡಿ.ಆರ್ ನಂ: 22/2013 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 15-03-2013 ರಂದು ಮಧ್ಯಾಹ್ನ 2-15 ಗಂಟೆ ಸಮಯಕ್ಕೆ ಫಿಯರ್ಾದಿದಾರರಾದ ಚೇತನ್ ಸುವರ್ಣ (33) ತಂದೆ: ದಿ: ಅಶೋಕ, ವಾಸ: ವಿಷ್ನುಮೂತರ್ಿ ದೇವಸ್ಥಾನದ ಬಳಿ, ಸೋಮೇಶ್ವರ ಗ್ರಾಮ ಉಚ್ಚಿಲ, ಮಂಗಳೂರು ರವರು ತನ್ನ ಬಾಬ್ತು ಮೋಟಾರು ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮಂಗಳೂರು ನಗರ ಮಹಾಕಾಳಿಪಡ್ಪು ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ಅನಿಲ್ ಹಾಗೂ ಇನ್ನೊಬ್ಬ ಸಮಾನ ಉದ್ದೇಶದಿಂದ ಫಿಯರ್ಾದುದಾರರನ್ನು ತಡೆದು ನಿಲ್ಲಿಸಿ ಸೂಳೆ ಮಗನೆ ಬೇವಸರ್ಿ ನಿನಗೆ ಟಿ.ವಿಯ ಲೋನ್ ಕಟ್ಟಲು ಸಂಕಟವಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಜಲ್ಲಿ ಕಲ್ಲಿನಿಂದ ಫಿಯರ್ಾದುದಾರರ ತಲೆಯ ಎಡ ಬದಿಗೆ ಹೊಡೆದು ರಕ್ತ ಗಾಯಗೊಳಿಸಿ, ಕೈಗಳಿಂದ ಮುಖಕ್ಕೆ ಹೊಡೆದು, ಟಿ.ವಿಯ ಲೋನ್ ಕಟ್ಟದೇ ಇದ್ದರೆ ನಿನ್ನನ್ನು ಜೀವ ಸಹಿತ ಬಿಡಲಿಕ್ಕಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಫಿಯರ್ಾದುದಾರರ ತನಗಾದ ಗಾಯದ ಬಗ್ಗೆ ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆರೋಪಿತರು ಬಜಾಜ್ ಫೈನಾನ್ಸ್ನ ಸಾಲ ವಸೂಲಿಗಾರರಾಗಿರುತ್ತಾರೆ ಎಂಬುದಾಗಿ ಚೇತನ್ ಸುವರ್ಣ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಕ್ರ 63/13 ಕಲಂ 341-323-324-504-506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಕೊಣಾಜೆ ಠಾಣೆ
- ದಿನಾಂಕ 15.03.2013 ರಂದು ಫಿರ್ಯಾದಿದಾರರಾದ ಶ್ರೀಮತಿ ಕಮಲ (60) ಗಂಡ: ದಿ.ಬಟ್ಯ, ವಾಸ: ಕುಕ್ಕುದ ಕಟ್ಟೆ ಸೈಟ್ ಬಾಳೆಪುಣಿ ಗ್ರಾಮ, ಬಂಟ್ವಾಳ ರವರು ಮುಡಿಪು ಪೇಟೆಯಿಂದ ತನ್ನ ಮನೆಗೆ ಹೋಗುತ್ತಾ ಮದ್ಯಾಹ್ನ 1:30 ಗಂಟೆಗೆ ಸಮಯಕ್ಕೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮನೀಶ್ ಗ್ಯಾರೇಜ್ ಎಂಬಲ್ಲಿ ತಲುಪುತ್ತಿದ್ದಂತೆಯೇ ಮುಡಿಪುನಿಂದ ಇರಾ ಕಡೆಗೆ ಮೋಟಾರ್ ಸೈಕಲ್ ನಂಬ್ರಕೆಎ-19ಇಜಿ-2382 ನೇಯದನ್ನು ಅದರ ಸವಾರ ಮೊಹಮ್ಮದ್ ಸಿರಾಜ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯ ಮತ್ತು ತಲೆಯ ಹಿಂಬದಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಕಮಲ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 44/2013 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment