ವಂಚನೆ ಪ್ರಕರಣ
ಉತ್ತರ ಪೊಲೀಸ್ ಠಾಣೆ
- ಪಿರ್ಯಾದಿದಾರರಾದ ಅರುಣ್ ಶೆಟ್ಟಿ ಜೈರಾಮ ಎಲೆಕ್ಟ್ರಿಕಲ್ಸ್ ಸೇಲ್ಸ್ ಕಾಪರ್ೊರೇಶನ್ ಮಹಾಲಕ್ಷ್ಮೀ ಕಮಷರ್ಿಯಲ್ ಕಾಂಪ್ಲೇಕ್ಸ್ ಭವಂತಿ ರಸ್ತೆ ಮಂಗಳೂರು ರವರು ಮಂಗಳೂರು ಭವಂತಿ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಕಮಷರ್ಿಯಲ್ ಕಾಂಪ್ಲೇಕ್ಷ ನಲ್ಲಿ ಜೈರಾಮ ಎಲೆಕ್ಟ್ರಿಕಲ್ಸ್ ಸೇಲ್ಸ್ ಕಾಪರ್ೊರೇಶನ್ ಎಂಬ ಅಂಗಡಿಯ ಮಾಲಕರಾಗಿದ್ದು, ದಿನಾಂಕ 02-03-2013 ರಂದು 17:15 ಗಂಟೆಯಿಂದ 18:15 ಗಂಟೆಯವರೆಗೆ ಆರೋಪಿತರು ಪಿರ್ಯಾದಿದಾರರ ಅಂಗಡಿಗೆ ಬಂದು ಸರಕುಗಳನ್ನು ಖರೀದಿಸಿ ರೂ. 1,98,000/- ನೇದರ ಸಿಂಡಿಕೇಟ್ ಬ್ಯಾಂಕ್ನ ಡಿ.ಡಿ. ಕೊಟ್ಟು, ಸರಕನ್ನು ಕೊಂಡು ಹೋಗಿದ್ದು, ಪಿರ್ಯಾದಿದಾರರ ದಿನಾಂಕ 04-03-2013 ರಂದು ಸದ್ರಿ ಡಿ.ಡಿ. ಯನ್ನು ಕೆನರಾ ಬ್ಯಾಂಕ್ ಹಂಪನಕಟ್ಟೆ ಶಾಖೆಗೆ ತನ್ನ ಬ್ಯಾಂಕ್ ಖಾತೆಗೆ ಹಾಕಿದಾಗ, ಸದ್ರಿ ಡಿ.ಡಿ. ನಕಲಿ ಎಂಬುದಾಗಿ ತಿಳಿದು ಬಂದಿರುತ್ತದೆ. ಆದುದರಿಂದ ಆರೋಪಿಗಲ ವಿರುದ್ದ ಸೂಕ್ತ ಕ್ರಮಕ್ಕಾಗಿ ಅರುಣ್ ಶೆಟ್ಟಿ ಯವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 36/2013, ಕಲಂ 468, 471, 420 ಖ/ತಿ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆ ಪ್ರಕರಣ
ಮಂಗಳೂರು ಉತ್ತರ ಪೊಲೀಸ್ ಠಾಣೆ
- ಫಿಯರ್ಾದಿದಾರರಾದ ಆರೀಫ್ ಉಲ್ ಹಖ್ ತಂದೆ: ಮುಝಾಫರ್ ರೆಹಮಾನ್ ವಾಸ: ಗ್ಲೋಬಲ್ ಮೆನೆಜ್ಮೆಂಟ್ ಸಿಟಿ ಸೆಂಟರ್, ಕೆಎಸ್ ರಾವ್ ರಸ್ತೆ ಮಂಗಳೂರು ರವರು ಗ್ಲೋಬಲ್ ಮೆನೆಜ್ಮೆಂಟ್ ಸವರ್ಿಸ್ ಕಂಪೆನಿಯಲ್ಲಿ ಹೆಡ್ಗಾಡರ್್ ಆಗಿ ಕೆಲಸ ಮಾಡುತ್ತಿದ್ದು, ಸದ್ರಿ ಕಂಪೆನಿಯಲ್ಲಿ ಸೆಕ್ಯೂರಿಟಿ ಸುಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ವೀರಪ್ಪ @ ವಿರೇಶ್ @ ವೀರಪ್ಪ ಹೆಚ್. ಗುಜ್ಜರಿ ಎಂಬವರು ದಿನಾಂಕ 08-03-2013 ರಂದು ಕಂಪೆನಿಯ ಎಂ.ಡಿ. ತಾರನಾಥ್ ರವರು ಸೆಕ್ಯೂರಿಟಿ ರವರ ಸಂಬಳದ ಬಾಬ್ತು ರೂ. 2,40,000/- ನಗದು ಹಣವನ್ನು ಕೊಟ್ಟಿದ್ದು, ದಿನಾಂಕ 09-03-2013 ರಂದು ಪಿರ್ಯಾದಿದಾರರು ಫೋನ್ ಮಾಡಿದಾಗ ಡ್ಯೂಟಿಗೆ ಲೇಟ್ ಆಗಿ ಬರುವುದಾಗಿ ತಿಳಿಸಿ, ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಕಾಣೆಯಾಗಿರುವುದಾಗಿ ಆರೀಫ್ ಉಲ್ ಹಖ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 37/2013, ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬರ್ಕೆ ಪೊಲೀಸ್ ಠಾಣೆ
- ಪಿರ್ಯಾದಿದಾರರಾದ ಶ್ರೀ ಡಿ.ಸಿ. ರಮೇಶ್ (53) ತಂದೆ: ಡಿ.ಎಂ. ಪೊನ್ನಪ್ಪ, ನಂಬ್ರ 36/1, ರೇಂಜರ್ ಬ್ಲಾಕ್, ಸೋಮವಾರಪೇಟೆ, ಕೊಡಗು ಜಿಲ್ಲೆ. ರವರ ಮಗ ಡಿ.ಆರ್. ಭಾರ್ಗವ ಪ್ರಾಯ 18 1/2 ವರ್ಷ ಎಂಬಾತನು ತನ್ನ ಮನೆಯಾದ ಸೋಮವಾರ ಪೇಟೆಯಿಂದ ದಿನಾಂಕ 06-03-2013 ರಂದು ಮುಂಜಾನೆ ಸುಮಾರು 4 ಗಂಟೆಗೆ ಪಿರ್ಯಾದುದಾರರ ಕಾರು ನಂಬ್ರ ಕೆ.ಎ.-12-ಪಿ-3643 (ಊಣಟಿಜಚಿ 10) ನೇದ್ದರಲ್ಲಿ ಮಂಗಳೂರು ನಗರದ ಕೋಡಿಯಾಲ್ಬೈಲ್ನಲ್ಲಿರುವ ಇಥಠಿಜಡಿಣ ಕಗ ಖಛಿಜಟಿಛಿಜ ಅಠಟಟಜರಜನಲ್ಲಿ ಸಿ.ಇ.ಟಿ. ಪರೀಕ್ಷೆ ಬಗ್ಗೆ ಫೀಸ್ ಕಟ್ಟಲು ಹೋಗುತ್ತೇನೆ ಎಂದು ಹೇಳಿ ಹೊರಟವನು ಅದೇ ದಿನ ಸಂಜೆ 4 ಗಂಟೆಗೆ ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್ಗೆ ಹೋಗಿ ವಾಪಾಸ್ಸು ರಾತ್ರಿ 8 ಗಂಟೆಗೆ ಅದೇ ಕಾರಿನಲ್ಲಿ ಸಿಟಿ ಸೆಂಟರ್ಮಾಲ್ನಿಂದ ಹೊರಬಂದವನು ನಂತರ ಕಾಲೇಜಿಗೆ ಫೀಸು ಕಟ್ಟಲು ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ ಎಂಬುದಾಗಿ ಡಿ.ಸಿ. ರಮೇಶ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಮೊನಂ. 15/2013 ಕಲಂ. ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ: 10-03-2013 ರಂದು ಸಮಯ ಬೆಳಿಗ್ಗೆ ಸುಮಾರು 10.10 ಗಂಟೆಗೆ ಪಿರ್ಯಾದುದಾರರಾದ ಫಯಾಜ್ ಅಹಮದ್ ಶೇಕ್. (42 ವರ್ಷ) ತಂದೆ: ಶೇಖ್ ಇಸ್ಮಾಯಿಲ್ವಾಸ: ಇಸ್ಮಾಯಿಲ್ ಕಾಂಪೌಂಡ್, ಕಿನ್ನಿಕಂಬಳ ಹೌಸ್, ಕೈಕಂಭ, ಮಂಗಳೂರು ರವರು ತನ್ನ ಬಾಬ್ತು ಸ್ಕೂಟರ್ ನಂಬ್ರ ಏಂ- 19 ಇಉ- 4658 ನ್ನು ಕಂಕನಾಡಿ ಕಡೆಯಿಂದ ವೆಲೆನ್ಸಿಯಾ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸೆಂಟ್ ಅಂಟೊನಿ ಆಶ್ರಮದ ಎದುರು ತಲುಪುವಾಗ ಪಿರ್ಯಾದುದಾರರ ಸ್ಕೂಟರ್ನ ಹಿಂದಿನಿಂದ ಅಂದರೆ, ಕಂಕನಾಡಿ ಕಡೆಯಿಂದ ಮಹಿಂದ್ರಾ ಪಿಕಪ್ ವಾಹನ ನಂಬ್ರ ಏಂ- 19 ಆ-5285 ನ್ನು ಅದರ ಚಾಲಕ ಜಯಪ್ರಕಾಶ್ ಅಲ್ಪೋನ್ಸ್ ಕ್ರಾಸ್ತ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿ ಯೆನಪೊಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಫಯಾಜ್ ಅಹಮದ್ ಶೇಕ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣ ೆಮೊ.ನಂಬ್ರ 52/2013 279 , 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದುದಾರರಾದ ಶ್ರೀ ಅಬ್ದುಲ್ಲ ರವರ ತಮ್ಮ ಹಮೀದ್ ಪ್ರಾಯ 40 ವರ್ಷ ಎಂಬವರು ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದವರನ್ನು ಫಿಯರ್ಾದುದಾರರ ಪರಿಚಯದ ಜಯಂತ್ ಎಂಬವರು ದಿನಾಂಕ 25-02-2013 ರಂದು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ದಿನಾಂಕ 26-02-2013 ರಂದು ಹಮೀದ್ರವರು ಚಿಕಿತ್ಸೆಯಲ್ಲಿರುವ ಸಮಯ ಅಸ್ಪತ್ರೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಠಾಣಾ ಅಕ್ರ 52/13 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. ಫಿಯರ್ಾದುದಾರರು ಮತ್ತು ಅವರ ಸ್ನೇಹಿತರು ಹಮೀದ್ರವರನ್ನು ಹುಡುಕಾಡುತ್ತಿದ್ದು, ವೆನ್ಲಾಕ್ ಅಸ್ಪತ್ರೆಯ ಶವಾಗಾರದಲ್ಲಿ ಅಪರಿಚಿತ ಮೃತದೇಹ ಇರುವ ಬಗ್ಗೆ ಮಾಹಿತಿ ಪಡೆದ ಫಿಯರ್ಾದುದಾರರು ಅಲ್ಲಿಗೆ ಹೋಗಿ ಮೃತದೇಹವನ್ನು ಪರಿಶೀಲಿಸಿದಾಗ, ಹಮೀದ್ ರವರ ಮೃತದೇಹ ವೆನ್ಲಾಕ್ ಅಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದ್ದು, ಹಮೀದ್ ರವರು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಮಯ ದಿನಾಂಕ 27-02-2013 ರಂದು ಮೃತಪಟ್ಟಿರುವುದಾಗಿದೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅಬ್ದುಲ್ಲ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 21/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment