ಹುಡುಗಿ ಕಾಣೆ:
ದಕ್ಷಿಣ ಠಾಣೆ;
- ದಿನಾಂಕ 26-02-2013 ರಂದು ಮಧ್ಯಾಹ್ನ 02-30 ಗಂಟೆಗೆ ಫಿರ್ಯಾದುದಾರರು ತನ್ನ ಮಕ್ಕಳಾದ ಕುಮಾರಿ ಡೆನಿಟಾ ಮತ್ತು ಡೆಲಿಟಾ ರವರೊಂದಿಗೆ ಮಂಗಳೂರು ವಲೆನ್ಸಿಯಾ ಚಚರ್್ಗೆ ತೆರಳಿದ್ದರು. ಪ್ರಾರ್ಥನೆಯು ಮಧ್ಯಾಹ್ನ 03-00 ಗಂಟೆಗೆ ಆರಂಭವಾಗಿದ್ದು, ತನ್ನ ಮಗಳಾದ ಡೆನಿಟಾ ಡಿಸೋಜಾ ಸಂಜೆ 5-00 ಗಂಟೆ ತನಕ ತನ್ನ ಜೊತೆಯಲ್ಲಿಯೇ ಇದ್ದಳು. ನಂತರ ಡೆನಿಟಾ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದಳು. ಸಂಜೆ ಸುಮಾರು 7-30 ಗಂಟೆಗೆ ಪ್ರಾರ್ಥನೆ ಮುಕ್ತಾಯವಾಗಿದ್ದು, ಮನೆಗೆ ತೆರಳಲೆಂದು ಹೊರಟಾಗ ಡೆಲಿಟಾಳ ಬಳಿ ಡೆನಿಟಾ ಬಗ್ಗೆ ವಿಚಾರಿಸಿದಾಗ ಹೊರಗೆ ಹೋಗಿ ಬರುತ್ತೇನೆಂದು ಹೋದವಳು ಮರಳಿ ಬರಲೇ ಇಲ್ಲ ಎಂದು ಹೇಳಿದಳು. ನಂತರ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರವರಲ್ಲಿ ವಿಚಾರಿಸಿದಾಗ ಕಾಣೆಯಾದ ಡೆನಿಟಾಳ ಬಗ್ಗೆ ಯಾವುದೇ ಮಾಹಿತಿ ದೊರೆಯಲ್ಲಿಲ್ಲ. ಆದುದರಿಂದ ತನ್ನ ಮಗಳು ಡೆನಿಟಾಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶ್ರೀ ಜೋಕಿಂ ಡಿಸೋಜಾ (50), ತಂದೆ : ದಿ/ ರೈಮಂಡ್ ಡಿಸೋಜಾ, ವಾಸ : ಮೆಲ್ಕಾರ್ ಮನೆ, ಪಾಣೆಮಂಗಳೂರು ಅಂಚೆ ಮತ್ತು ಗ್ರಾಮ, ಬಂಟ್ವಾಳ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 48/13 ಕಲಂ ಹುಡುಗಿ ಕಾಣೆ ರಣತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ: 27.02.2013 ರಂದು 18:00 ಗಂಟೆಗೆ ಮಂಗಳೂರು ನಗರದ ಕುಲಶೇಖರ ಕಡೆಯಿಂದ ವಾಮಂಜೂರು ಕಡೆಗೆ ಸಿಟಿ ಬಸ್ಸು ರೂಟ್ ನಂಬ್ರ: 3(ಎ) ಕೆಎ-19-ಡಿ-6336 ನ್ನು ಅದರ ಚಾಲಕ ದೇವಿಪ್ರಸಾದ್ ಎಂಬವರು ಮಾನವ ಜೀವಕ್ಕೆ ಅಪಾಯವಾಗುವಂತೆ ಅತಿವೇಗ ಯಾ ದುಡುಕುತನದಿಂದ ಚಲಾಯಿಸಿ ನೀರುಮಾರ್ಗ ಕಡೆಯಿಂದ ಬರುತ್ತಿದ್ದ ಮೋಟಾರು ಬೈಕ್ ಕೆಎ-19-ಇಎಫ್-7540 ಕ್ಕೆ ಬೈತುಲರ್ಿ ಜಂಕ್ಷನ್ ಹತ್ತಿರ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸವಾರ ವಾಲ್ಸನ್ ಡಿ ಸೋಜ, (22) ಎಂಬವರು ತೀವ್ರಸ್ವರೂಪದ ಜಖಂಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಯು ಫಲಕಾರಿಯಾಗದೇ ರಾತ್ರಿ 19:00 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ಎಂಬುದಾಗಿ ವಾಲ್ಟರ ಡಿ ಸೋಜ ವಾಸ: ಶಕ್ತಿನಗರ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 53/13 ಕಲಂ 279 304 (ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.
No comments:
Post a Comment