ಕಳವು ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 23.03.2013 ರಂದು ಪಿಯರ್ಾದಿದಾರರಾದ ಎಸ್ ರಜತ್ ಕೊನರ್ಾಯ ಎಂಬವರು 3ನೇ ಶಿಪ್ಟ್ನ ಕರ್ತವ್ಯದ ಬಗ್ಗೆ ಮೇರಿಹಿಲ್ ಕಿಂಗ್ಸ್ಪಾಕರ್್ ಲೇಔಟ್ನಲ್ಲಿರುವ ದಿಯಾ ಸಿಸ್ಟಮ್ ಕಂಪನಿಗೆ ಹೋದವರು ಕರ್ತವ್ಯ ಮುಗಿದು ರಾತ್ರಿ 12 ಗಂಟೆಗೆ ಬಂದಾಗ ರೂಮಿನಲ್ಲಿಟ್ಟಿದ್ದ ಡೆಲ್ ಕಂಪನಿಯ ಲ್ಯಾಪ್ಟಾಪ್ ಕಾಣೆಯಾಗಿರುವುದಾಗಿಯೂ, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ದಿನಾಂಕ 25.03.2013 ರಂದು ರಜೆ ಇದ್ದುದರಿಂದ ಪಿಯರ್ಾದಿದಾರರು ಊರಿಗೆ ಹೋದವರು ಈ ದಿನ ಠಾಣೆಗೆ ಬಂದು ಪಿಯರ್ಾದಿಯನ್ನು ನೀಡಿರುವುದಾಗಿಯೂ, ಇದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರಾಗಿಯೂ, ಕಳವು ಆದ ಲ್ಯಾಪ್ಟಾಪ್ನ ಮೌಲ್ಯ ಸುಮಾರು 33,550/ ಎಂಬುದಾಗಿ ಎಸ್ ರಜತ್ ಕೊನರ್ಾಯ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 109/13 ಕಲಂ : 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಬಕರ್ೆ ಪೊಲೀಸ್ ಠಾಣೆ;
- ದಿನಾಂಕ 25-03-2013 ರಂದು 19-30ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮಂಜುನಾಥ(48)ತಂದೆ: ದಿ| ಕುಂಜ್ಞ ಕಣ್ಣನ್ ವಾಸ: ಸಿ-4 ಅನುಗ್ರಹ ಸೆಂಟ್ರಲ್ ವೇರ್ ಹೌಸ್ ಮಣ್ಣಗುಟ್ಟ ಮಂಗಳೂರು ರವರು ತನ್ನ ಮನೆಯಿಂದ ತರಕಾರಿ ಖರೀದಿಸಲು ಹೊರಟು ವಿಶಾಲ್ ನಸರ್ಿಂಗ್ ಹೋಮ್ ಜಂಕ್ಷನ್ ಬಳಿ ತಲುಪಿದಾಗ ಆರೋಪಿತರು ದ್ವಿಚಕ್ರ ವಾಹನದಲ್ಲಿ ಬಂದು ಪಿರ್ಯಾದಿದಾರರ ಬಳಿ ನಿಲ್ಲಿಸಿ ಕೆಳಗಿಳಿದು ಪಿರ್ಯಾದಿದಾರರಲ್ಲಿ ಮಾತುಕತೆಗಿಳಿದು ಅವರನ್ನು ಯಾವುದೋ ದ್ವೇಷದಿಂದ ದುರುಗುಟ್ಟಿ ನೋಡಿ ಏಕಾಏಕಿ ಆರೋಪಿತರ ಪೈಕಿ ಶೋಭಿತನು ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದಾಗ ತಡೆದ ಪಿರ್ಯಾದಿಯ ಬಲಕೈಗೆ ಕಲ್ಲಿನಿಂದ ಹೊಡೆದುದಲ್ಲದೇ ಇನ್ನೋರ್ವ ಕೇಬಲ್ ಅಪರೇಟರ್ ಎಡ ಅಳ್ಳೆಗೆ ಕಾಲಿನಿಂದ ತುಳಿದು ಗಾಯಉಂಟು ಮಾಡಿರುವುದಾಗಿದೆ ಎಂಬುದಾಗಿ ಮಂಜುನಾಥ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಅ.ಕ್ರ 40/2013 ಕಲಂ 324ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ಮಂಗಳೂರು ಪೂರ್ವ ಪೊಲೀಸ್ ಠಾಣೆ;
- ಫಿರ್ಯಾದಿದಾರರಾದ ದೀಪಕ್. (29), ತಂದೆ: ದಿ.ಸುಂದರ ಗೌಡ, ವಾಸ: ಸರಕೋಡಿ, ಕುಲಶೇಖರ, ಕಕ್ಕೆಬೆಟ್ಟು, ಶಕ್ತಿನಗರ ಕ್ರಾಸ್ ರಸ್ತೆ, ಕುಲಶೇಖರ, ಮಂಗಳೂರು ರವರ ಅಣ್ಣನಾದ ಸುರೇಶ್(32) ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರಿಗೆ ವಿಪರೀತ ಕುಡಿತದ ಚಟ ಇದ್ದು, ಕೆಲಸಕ್ಕೆ ಕೂಡಾ ಸರಿಯಾಗಿ ಹೋಗದೆ ವಿಪರೀತ ಕುಡಿಯುತ್ತಿದ್ದುದಾಗಿದೆ. ಈ ದಿನ ದಿನಾಂಕ 26-03-2013 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸದ ನಿಮಿತ್ತ ಮುಲ್ಕಿಗೆ ಹೋಗಿದ್ದು, ಸದ್ರಿಯವರ ಅಣ್ಣನಾದ ಸುರೇಶ್ ಎಂಬವರು ಸಂಜೆ ಸುಮಾರು 17.00 ಗಂಟೆಗೆ ಜೀವನದಲ್ಲಿ ಜಿಗುಪ್ಸೆಗೊಂದು ಅಥವಾ ಇನ್ಯಾವುದೋ ಕಾರಣದಿಂದ ಮನೆಯ ಒಳಗೆ ಪಕ್ಕಾಸಿಗೆ ಹಗ್ಗದಿಂದ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತನ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಎಂಬುದಾಗಿ ದೀಪಕ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್.ನಂಬ್ರ: 08/2013 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
- ಪಿಯರ್ಾದಿದಾರರಾದ ಯತೀಶ್ ತಂದೆ ಧೂಮ ಶೆಟ್ಟಿ ರೈಲ್ವೇ ಸ್ಟೇಶನ್ ಹತ್ತಿರ ಸೋಮೇಶ್ವರ ಮಂಗಳೂರು ರವರು ದಿನಾಂಕ 25.03.2013 ರಂದು 17:30 ಗಂಟೆ ಸಮಯಕ್ಕೆ ಪಿಯರ್ಾದಿದಾರರ ಬಾಬ್ತು ಪಿಯರ್ಾದಿದಾರರು ಕೆ.ಎ 19-ಇಬಿ-144ನೇ ಮೋಟಾರು ಸೈಕಲ್ನಲ್ಲಿ ಪಂಪುವೆಲ್ ಪೆಂಟಗಾನ್ ಹೊಟೇಲ್ ಬಳಿ ತಲುಪಿದಾಗ ಪಡೀಲ್ ಕಡೆಯಿಂದ ಮಂಗಳೂರು ಕಡೆಗೆ ಕೆ.ಎ 19- ಎಂ.ಎಚ್ 4517 ನೇ ನ್ಯಾನೋ ಕಾರು ಚಾಲಕ ಕೌಸರ್ ಎಂಬವರು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿಯರ್ಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರು ಮೋಟಾರು ಸೈಕಲ್ ಸಮೇತ ಮಗುಚಿ ಬಿದ್ದು ಸೊಂಟಕ್ಕೆ ಗುದ್ದಿದ ಗಾಯಾವಾಗಿರುತ್ತಾರೆ ಎಂಬುದಾಗಿ ಯತೀಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 107/13 ಕಲಂ : 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment