Monday, March 18, 2013

Daily Crime Incidents For March 18, 2013


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ 07.03.2013 ರಂದು ತನ್ನ ಮನೆಯಿಂದ ಕುತ್ತಾರ್ ಎಂಬಲ್ಲಿಗೆ ಯಕ್ಷಗಾನ ನೋಡಲು ಆಟೋರಿಕ್ಷಾ ನಂಬ್ರ ಕೆಎ19 ಸಿ 4950ನೇಯದನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ಸದ್ರಿ ರಿಕ್ಷಾದಲ್ಲಿ ಕುಳಿತು ಹೋಗುತ್ತಿದ್ದ ಸಮಯ ರಾತ್ರಿ ಸುಮಾರು 10.45 ಗಂಟೆಗೆ ಸದ್ರಿ ಆಟೋರಿಕ್ಷಾ ಚಾಲಕನು ರಿಕ್ಷಾವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕುತ್ತಾರ್ ಬಳಿ ಇರುವ ಆಶ್ವಿನಿ ಬಾರ್ನ ಎದುರು ರಸ್ತೆ ರಿಪೇರಿಗೆಂದು ನಿಲ್ಲಿಸಿದ್ದ ರೋಡ್ ರೋಲರ್ಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದ ಎದುರುಗಡೆ ಇದ್ದ ಸರಳಿಗೆ ಪಿರ್ಯಾದಿಯ ಮುಖ ಹೊಡೆದು ರಕ್ತಗಾಯವಾಗಿದ್ದು ಮಾತ್ರವಲ್ಲದೇ ಎರಡು ಕಾಲಿನ ಮೊಣಗಂಟಿನ ಕೆಳಗಡೆ ತರಚಿದ ಗಾಯವಾಗಿದ್ದು ಕೂಡಲೇ ಸದ್ರಿ ರಿಕ್ಷಾ ಚಾಲಕನು ಪಿರ್ಯಾದಿಯನ್ನು ಬೇರೊಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕೆಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ವೈಧ್ಯಾಧಿಕಾರಿಯವರು ಪಿರ್ಯಾದಿಯನ್ನು ಒಳರೋಗಿಯಾಗಿ ದಾಖಲಿಸಿ ನಂತರ 3-4 ದಿವಸಗಳ ಬಳಿಕ ಪಿರ್ಯಾದಿಯು ಸದ್ರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿರುತ್ತಾ ಗಾಯದ ನೋವು ಜಾಸ್ತಿಯಾದುದರಿಂದ ದಿನಾಂಕ 16.03.2013 ರಂದು ರಾತ್ರಿ 9.00 ಗಂಟೆಗೆ ಚಿಕಿತ್ಸೆಯ ಬಗ್ಗೆ ಫಾ.ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿರುವುದು ಎಂಬುದಾಗಿ ಹೇಮಾ (42) ಗಂಡ: ಶೇಖರ, ಕೃಷ್ಣಕೋಡಿ, ಕುತ್ತಾರ್, ಮುನ್ನೂರು ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 86/2013 ಕಲಂ 279,337 ಐಪಿಸಿ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,.


ಸಂಚಾರ ಪೂರ್ವ ಠಾಣೆ;


  • ದಿನಾಂಕ: 16-03-2013 ರಂದು ಸಮಯ ಸುಮಾರು 22.30 ಗಂಟೆಗೆ  ಪಿರ್ಯಾದುದಾರರು ತನ್ನ ಬಾಬ್ತು ಮೊ,ಸೈಕಲ್ ನಂಬ್ರ ಏಂ- 19 ಇಂ- 3645 ನ್ನು  ಮಾರ್ನಮಿಕಟ್ಟೆ ಕಡೆಯಿಂದ ಬೊಳಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕಾಶಿಯಾ ಜಂಕ್ಷನ್ ಬಳಿಯಿರುವ ಕಾಶಿಯಾ ಸ್ಕೂಲ್ ಎದುರು ತಲುಪುವಾಗ ಜೆಪ್ಪು ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಕಾರು ನಂಬ್ರ ಏಂ- 19 ಒಅ-7752 ನ್ನು ಅದರ ಚಾಲಕ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊ,ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಣ್ಣಿಗ ಮತ್ತು ಜನನಾಂಗಕ್ಕೆ ರಕ್ತಗಾಯವಾಗಿ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಅತ್ತಾವರ ಕೆಎಮ್ಸಿಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಂಜುನಾಥ ಎಸ್.ಜಿ(24 ವರ್ಷ)  ತಂದೆ: ಶಂಕರಪ್ಪ ವಾಸ: ಬೋಳಾರ ಎನ್ಕ್ಲೇವ್ ಅಪಾಟರ್್ಮೆಂಟ್, ಕೆನರಾ ಬ್ಯಾಂಕ್ ಎದುರು, ಬೋಳಾರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 56/2013 279, 337  ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಹರ್ಷ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಕೇಶವ ಪ್ರಾಯ 65 ವರ್ಷ ರವರು ಈ ದಿನ ದಿನಾಂಕ 17-03-2013 ರಂದು ಬಾರ್ನ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು, ಮಧ್ಯಾಹ್ನ 15-00 ಗಂಟೆಗೆ ವಾಂತಿ ಮಾಡುತ್ತಿದ್ದು, ಕೂಡಲೇ ಅಲ್ಲಿನ ಇತರ ಕೆಲಸಗಾರರು ಕೇಶವರವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈಧ್ಯಾಧಿಕಾರಿಯವರು ಕೇಶವರವರನ್ನು ಪರೀಕ್ಷಿಸಿದಾಗ, ಅವರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೇಶವರವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಎಂಬುದಾಗಿ ಶೇಖರ ಪೂಜಾರಿ (35) ತಂದೆ: ದಿ: ಜಿನ್ನಪ್ಪ ಪೂಜಾರಿ, ವಾಸ: ಕಂದುಕ ಮನೆ, ಜಿಲ್ಲಾಧಿಕಾರಿಯವರ ಕಛೇರಿ, ಬಳಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 23/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಪೂರ್ವ ಠಾಣೆ;


  • ದಿನಾಂಕ: 16-03-2013 ರಂದು  ಪಿರ್ಯಾದಿಯ ತಮ್ಮನ ಹೆಂಡತಿ ಪ್ರಾಯ 50 ವರ್ಷದ ಶ್ರೀಮತಿ ಮಾನವ್ವ ಎಂಬವರು ಪಾರ್ಶವಾಯು ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಬಂದು ಮಗಳು ಶ್ರೀಮತಿ ಸುಜಾತಳು ವಾಸವಿದ್ದ ಮನೆಯಲ್ಲಿರುತ್ತಾ ಮಂಗಳೂರು ವೆನ್ಲಾಕ್ ಆಸ್ಪತೆಯಲ್ಲಿ ಸುಮಾರು ಒಂದು ವರ್ಷದಿಂದ ಚಿಕಿತ್ಸೆ ಪಡೆದಿದ್ದು ಹುಷಾರಿಲ್ಲದ ಕಾರಣ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಒಂದು ಅಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಾ ಸಂಜೆ 6-45 ಗಂಟೆಗೆ ದಾರಿಯ ಮಧ್ಯೆ ಮೃತಪಟ್ಟಿರುತ್ತಾರೆ.  ಮೃತಳ ಮರಣದ ಬಗ್ಗೆ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಮಾನಪ್ಪ , ಪ್ರಾಯ 56 ವರ್ಷ, ತಂದೆ: ದಿ|| ಗಣೇಶಪ್ಪ ಕಮ್ಮಾರ್ ವಾಸ: ಶಂಕರಿಗುಪ್ಪೆ ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲೆ ರವರು ನೀಡಿದ ದೂರಿನಂತೆ  ಮಂಗಳೂರು ಪೂರ್ವ ಠಾಣೆ ಯು.ಡಿ.ಆರ್ ನಂ: 05/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ .

No comments:

Post a Comment