ಸುಲಿಗೆ ಪ್ರಕರಣ:
ಪಣಂಬೂರು ಠಾಣೆ;
- ದಿನಾಂಕ 20-03-2013 ರಂದು ಬೆಳಗ್ಗಿನ ಜಾವ 03-20 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮತ್ತು ಅಲ್ತಾಫ್ರವರುಗಳು ಸೈಯಾದ್ ಮದನಿ ಮದರಸ ಎಮ್.ಜೆ.ಎಮ್ 854 ಕಸಬಾ ಬೆಂಗ್ರೆ ಮಂಗಳೂರಿನ ಮದರಸದಲ್ಲಿ ಉಸ್ತಾದ್ಗಳಾಗಿ ಕೆಲಸ ಮಾಡಿಕೊಂಡಿದ್ದು ಮದರಸದ ಒಳಗೆ ಹಾಲ್ ಮತ್ತು ಕೋಣೆಯಲ್ಲಿ ಮಲಗಿದ್ದ ಸಮಯ ಆರೋಪಿತರುಗಳು ಮದರಸದ ಕಿಟಕಿಯ ರೋಲ್ನ್ನು ಬಲವಂತವಾಗಿ ಮುರಿದು ಒಳನುಗ್ಗಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಮತ್ತು ಅಲ್ತಾಫ್ರವರನ್ನು ಮಾರಕ ಅಸ್ತ್ರ ಚೂರಿಯಿಂದ ಬೆದರಿಸಿ ಪಿರ್ಯಾದಿದಾರರ ಮೊಬೈಲ್ ಪೋನ್ನನ್ನು ಹಾಗೂ ಅಲ್ತಾಫ್ರವರ ಮೊಬೈಲ್ ಪೋನ್ನನ್ನು ಹಾಗೂ 2000/- ನಗದು ಹಣವನ್ನು ಬಲತ್ಕಾರವಾಗಿ ಸುಲಿಗೆ ಮಾಡಿ ನಂತರ ಅಲ್ಲಿಂದ ಹೊರಗೆ ಬಂದು ಮದರಸದ ಕಾಪೌಂಡ್ ಒಳಗೆ ಇದ್ದ ಬಾಡಿಗೆ ರೂಮಿನ ಫಾಹೀಂ ಎಂಬವರ ರೂಮಿನ ಬಾಗಿಲನ್ನು ದೂಡಿ ಒಳಗೆ ನುಗ್ಗಿ ಫಾಹೀಂ ರವರಿಗೆ ಚಾಕುವಿನಿಂದ ಗೀರಿ ಗಾಯಮಾಡಿ ಅವರ ಪಸರ್್ನಲ್ಲಿದ್ದ 20/- ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದು ಎಂಬುದಾಗಿ ಮೈನ್ನೂದ್ದೀನ್, ತಂದೆ ಃ ಮಹಮ್ಮದ್ ಆಲಿ, 25 ವರ್ಷ, ವಿಳಾಸ ಃ ದೊಡ್ಡ ಮನೆ. ಸಾಕಿಂ ಕೆರೋಡಿ, ಜುಮ್ಮ ಮಸೀದಿ ಬಳಿ, ಕೆರೋಡಿ ಗ್ರಾಮ, ಬೇಡಗಿ ತಾಲೂಕು, ಹಾವೇರಿ ಜಿಲ್ಲೆ ಹಾಲಿ ವಿಳಾಸ ಃ ಉಸ್ತಾದ್. ಸೈಯಾದ್ ಮದನಿ, ಅರಬಿ ಮದರಸ. ಎಮ್.ಜೆ.ಎಮ್. 854 ಕಸಬಾ ಬೆಂಗ್ರೆ, ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 42/13 ಕಲಂ .392.394.450. ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 20-03-2013 ರಂದು ಸಮಯ ಬೆಳಿಗ್ಗೆ ಸುಮಾರು 10.00 ಗಂಟೆಗೆ ಪಿರ್ಯಾದುದಾರರು ತನ್ನ ಅಂಗಡಿಯಲ್ಲಿರುವಾಗ್ಗೆ, ಮೊ,ಸೈಕಲ್ ನಂಬ್ರ ಏಂ-19 ಇಃ-6696 ನ್ನು ಅದರ ಸವಾರ ಪ್ರೀತಂ ಎಂಬವರು ಕಲ್ಪನೆ ಕಡೆಯಿಂದ ಕುಲಶೇಖರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸೆಕ್ರೆಡ್ ಹಾಟರ್್ ಸ್ಕೂಲ್ನ ಮೇನ್ ಗೇಟ್ ಎದುರು ತಲುಪುವಾಗ, ಕುಲಶೇಖರ ಡೈರಿ ಕಡೆಯಿಂದ ಮೊ,ಸೈಕಲ್ ನಂಬ್ರ ಏಂ-19 ಇಅ-9928 ನ್ನು ಕಿಶೋರ್ ಕುಮಾರ್ ಎಂಬವರು ಮಹಿಳೆಯೊಬ್ಬರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಾ ಸೆಕ್ರೆಡ್ ಹಾಟರ್್ ಸ್ಕೂಲ್ನ ಮೇನ್ ಗೇಟ್ ಎದುರು ನಿರ್ಲಕ್ಷತನದಿಂದ ಬಲಕ್ಕೆ ತಿರುಗಿಸಿ ರಸ್ತೆ ಅಂಚಿಗೆ ತಲುಪುವಾಗ, ಪ್ರೀತಂ ಸವಾರಿ ಮಾಡಿಕೊಂಡಿದ್ದ ಮೊ,ಸೈಕಲ್ ಏಂ-19 ಇಃ-6696, ಕಿಶೊರ್ ಕುಮಾರ್ ಸವಾರಿ ಮಾಡಿಕೊಂಡಿದ್ದ ಮೊ,ಸೈಕಲ್ ಏಂ-19 ಇಅ-9928 ಕ್ಕೆ ಡಿಕ್ಕಿಯಾಗಿ, ಎರಡೂ ಮೊ,ಸೈಕಲ್ ಸವಾರರು ಮತ್ತು ಮಹಿಳೆ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪ್ರೀತಂರವರಿಗೆ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಅಪಘಾತದಿಂದ ಹೊಟ್ಟೆಗೆ ಗುದ್ದಿದ ಗಾಯಗೊಂಡಿದ್ದ ಕಿಶೋರ್ಕುಮಾರ್ರವರು ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕುಮಾರ್ (51 ವರ್ಷ) ತಂದೆ: ಬಾಬು ಸಾಲಿಯಾನ ವಾಸ: ಪ್ರಖ್ಯಾತ್ ಜೆರಾಕ್ಸ್ ಸೆಂಟರ್, ಸೆಕ್ರಡ್ ಹಾಟರ್್ ಸ್ಕೂಲ್ನ ಮೈನ್ ಗೇಟ್ ಎದುರು, ಕುಲಶೇಖರಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 58/2013279, 337 , 304(ಂ) ಐ.ಪಿ.ಸಿ. ಮತ್ತು ಆರ್ಆರ್ ರೂಲ್ 2 ಮೋವಾ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ: 20.03.2013 ರಂದು ಬೆಳಿಗ್ಗೆ ಸುಮಾರು 06.50 ಗಂಟೆಗೆ ಮಂಗಳೂರು ನಗರದ ಸಾರ್ವಜನಿಕ ರಸ್ತೆಯಾದ ಪಡೀಲ್ ಕ್ರಾಸ್ ಕಡೆಯಿಂದ ಜಲ್ಲಿಗುಡ್ಡೆ ಕಡೆಗೆ ಸಿಟಿ ಬಸ್ಸ್ ರೂಟ್ ನಂಬ್ರ: 11(ಸಿ) ಕೆಎ-19-ಎಇ-909 ನ್ನು ಅದರ ಚಾಲಕ ಸುರೇಶ್ ಎಂಬವರು ಅತೀವೇಗ ಯಾ ದುಡುಕು ತನದಿಂದ ಚಲಾಯಿಸಿ ಕಮರ್ಾರ್ ಭಜನಾ ಮಂದಿರದ ಎಂಬಲ್ಲಿ ಒಮ್ಮೆಲೇ ಟನರ್್ ಮಾಡಿರುವ್ಯದರ ಪ್ರಯುಕ್ತ ಬಸ್ಸಿನಲ್ಲಿ ಪ್ರಯಾಣಿಸ್ಮತ್ತಿದ್ದ ಶ್ರೀಮತಿ. ಪ್ರಸನ್ನ ಎಂಬವರು ಬಸ್ಸಿನಿಂದ ಹೊರಗಡೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟದ್ದಾಗಿರುತ್ತದೆ ಎಂಬುದಾಗಿ ಶಿವಪ್ರಸಾದ್ (29) ತಂದೆ: ಸದಾಶಿವ ಸಾಲ್ಯಾನ್ ವಾಸ: ಅಡ್ಯಾರ್ ಗಾಣದಮನೆ, ಆರ್.ಕೆ ಗ್ಯಾರೇಜ್ ಎದುರು ಅಡ್ಯಾರ್ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ 76/13 ಕಲಂ : 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 11-03-13 ರಂದು 15-30 ಗಂಟೆ ಫಿಯರ್ಾದುದಾರರಾದ ಶ್ರೀ ಸುಭಾಶ್ಚಂದ್ರ ರವರು ಠಾಣಾ ಪ್ರಭಾದಲ್ಲಿರುವ ಸಮಯ ಪೊಲೀಸ್ ನಗರ ನಿಯಂತ್ರಣ ಕೊಠಡಿಯಿಂದ ಮಂಗಳೂರು ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಬಂದ ಮಾಹಿತಿಯಂತೆ, ಫಿಯರ್ಾದಿದಾರರ ಸದ್ರಿ ಸ್ಥಳಕ್ಕೆ ಹೋಗಿ ನೋಡಿ ಪರಿಶೀಲಿಸಿದಾಗ, ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದಲ್ಲಿಯೇ ಮೃತಪಟ್ಟಿದ್ದು, ಈತನು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವನು ಮಲಗಿದಲ್ಲಿಯೇ ಮೃತಪಟ್ಟಿರಬಹುದಾಗಿದ್ದು, ಈತನ ಮೃತದೇಹವನ್ನು ವಾರಸುದಾರರು ಬರುವ ತನಕ ಸರಕಾರಿ ವೆನ್ಲಾಕ್ ಅಸ್ಪತ್ರೆಯ ಶೀಥಿಲಗಾರದಲ್ಲಿ ಇರಿಸಿದ್ದು, ಈತನಕ ಯಾರೂ ಬಂದಿರುವುದಿಲ್ಲ. ಈ ಬಗ್ಗೆ ತನಿಖೆ ನಡೆಸಿ, ಈತನ ವಾರಸುದಾರರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ಫಿಯರ್ಾದು ಸಾರಂಶವಾಗಿದೆ ಎಂಬುದಾಗಿ ಸುಭಾಶ್ಚಂದ್ರ, ಹೆಚ್.ಸಿ 746, ದಕ್ಷಿಣ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 24/2013 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Please investigate Pramila Poojari's death
ReplyDelete