ಕಳವು ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 13-03-2013 ರಂದು ಮಂಗಳೂರು ತಾಲೂಕು, ಪೆಮರ್ುದೆ ಗ್ರಾಮದ ಚಂದ್ರಹಾಸ ನಗರದಲ್ಲಿರುವ ಎಲ್ & ಟಿ ಪ್ರೊಜೆಕ್ಟ್ ಸೈಟ್ ನಲ್ಲಿ ಕಾಮಗಾರಿಗೆ ಬಳಸಿದಿ ಎಫ್ಎಂಸಿ ಕ್ರೇನ್ ಗಳ ಬಿಡಿಭಾಗಗಳನ್ನು ಶೇಖರಿಸಿಟ್ಟಿದ್ದು, ಸದ್ರಿ ಬಿಡಿಭಗಗಳನ್ನು ಪರಿಶೀಲನೆ ಮಾಡಿದ ಸಮಯ ಶೇಖರಿಸಿಟ್ಟ1. Ringer mode mat locks pin-72 Nos (Each weight 40 Kgs) 2. Bearing plate support stopped clit Nos -54 (Each weight 2 Jgs) ಇವುಗಳನ್ನುಇವುಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂಬುದಾಗಿ ಎ.ಬಿ. ಹಡಂಬರ, ಮೇನೇಜರ್ ಐ.ಆರ್., ಎಲ್ & ಟಿ ಲಿಮಿಟೆಡ್, ದೇರ್ ಆಫ್ ಓಎನ್ಜಿಸಿ, ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಪೆಮರ್ುದೆ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 56/2013 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಪಣಂಬೂರು ಠಾಣೆ;
- ದಿನಾಂಕ 12-03-2013ರಂದು ಪಿರ್ಯಾದಿದಾರರು ಆಕೆಯ ಮಗನೊಂದಿಗೆ ಮಗಳ ಮದುವೆಯ ವಷರ್ಾಚರಣೆಯ ಬಗ್ಗೆ ಬೈಕಂಪಾಡಿ ಅಂಗಾರಗುಂಡಿಗೆ ಬೆಳಗ್ಗೆ ಹೋದವರು ಅಲ್ಲಿ ಮದ್ಯಾಹ್ನದ ಊಟ ಮುಗಿಸಿ ಬಳಿಕ ಅಲ್ಲಿಂದ ವಾಪಾಸು ಮನೆ ಕಡೆಗೆ ಹೋಗುವರೇ ಕೆ.ಎ.19.ಸಿ.4127ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಚಾಲಕ ಜೈನುಲ್ ಹಮೀದ್ರವರು ಆಟೋವನ್ನು ರಾ.ಹೆ.66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂಜೆ 4-15 ಗಂಟೆ ಸಮಯಕ್ಕೆ ರಾ.ಹೆ.ಯಲ್ಲಿರುವ ಎಂ.ಸಿ.ಎಫ್.ನ ರೈಲ್ವೇ ಕ್ರಾಸಿಂಗ್ ಬಳಿ ಆಟೋ ರಿಕ್ಷಾ ಬಲ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವಾಗಿ ಮೂಳೆ ಮುರಿತದ ಗಾಯವಾಗಿದ್ದು ಆಪಾದಿತ ರಿಕ್ಷಾ ಚಾಲಕನು ಪಿರ್ಯಾದಿದಾರರಿಗೆ ಚಿಕಿತ್ಸೆ ಖಚರ್ು ನೀಡುವುದಾಗಿ ಒಪ್ಪಿ ನಂತರ ಹಿಂಜರಿದ ಕಾರಣ ಪ್ರಕರಣ ದಾಖಲಿಸುವರೇ ವಿಳಂಭವಾಗಿ ದೂರು ನೀಡಿರುವುದಾಗಿ ಖತೀಜಮ್ಮ ವಾಸ: ಕೆಂಪುಗುಡ್ಡೆ ಉಳಾಯಿಬೆಟ್ಟು ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 30/2013 ಕಲಂಃ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ಮೂಲ್ಕಿ ಠಾಣೆ:
- ದಿನಾಂಕ 14.03.2013 ರಂದು ಬೆಳಿಗ್ಗೆ ಸುಮಾರು 4.30 ರಿಂದ 6.15 ರ ಮಧ್ಯೆ ಕೊಂಕಣೆ ರೈಲ್ವೇಯ ಕೊಳಕಾಡಿ ಗೇಟ್ ನ ಗೇಟ್ ಮೆನ್ ಆದ ಗಣಪತಿ ಪಂಡಿತ್ ಪ್ರಾಯ:46 ವರ್ಷ ಎಂಬವರು ಮಂಗಳೂರು ತಾಲೂಕು ಅತಿಕಾರಿಬೆಟ್ಟು ಗ್ರಾಮದ ಕೊಳಕಾಡಿ ರೈಲ್ವೇ ಗೇಟ್ ನ ರೈಲ್ವೇ ಹಳಿ ನಂ ಕೆ.ಎಮ್ 721/7-8 ರಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ರೈಲ್ವೇ ಹಳಿಯಲ್ಲಿ ಸಂಚರಿಸುತ್ತಿದ್ದ ರೈಲು ಆಕಸ್ಮಿಕವಾಗಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಎಡ ಕೈ ತುಂಡಾಗಿದ್ದು .ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಚಂದ್ರಹಾಸ ಅಮೀನ್ ಪ್ರಾಯ:41 ವರ್ಷ ತಂದೆ: ಕರಿಯ ಅಮೀನ್ ವಾಸ: ಪಲಯಮಾರ್ ಬೆಟ್ಟು ಹಳೆಯಂಗಡಿ ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ` ಮೂಲ್ಕಿ ಠಾಣೆ ಯು.ಡಿ.ಆರ್ ನಂಬ್ರ 06/2013 ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment