Saturday, March 9, 2013

Daily Crime Incidents for March 09, 2013



ವಾಹನ ಕಳವು ಪ್ರಕರಣ:

ಉತ್ತರ ಠಾಣೆ;

  • ದಿನಾಂಕ 07-03-2013 ರಂದು 13:15 ಗಂಟೆಗೆ ಫಿಯರ್ಾದಿದಾರರು ಮಂಗಳೂರು ಗೋಪಾಲಕೃಷ್ಣ ಅಸೋಶಿಯೇಶನ್ ಎಂಬ ಕಛೇರಿಯಲ್ಲಿ ಅಂಕೌಟೆಂಟ್ ಆಗಿ ಸುಮಾರು ಒಂದುವರೆ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು,ಮಂಗಳೂರು ಕೆ.ಎಸ್. ರಾವ್ ರಸ್ತೆ ಹರ್ಷ ಶೋ ರೂಮ್ ಎದುರು ಪಾಕರ್ಿಂಗ್ ಸ್ಥಳದಲ್ಲಿ ತನ್ನ ಬಾಭ್ತು ಹೊಂಡಾ ಶೈನ್ ಮೋ.ಸೈಕಲ್ ನಂಬ್ರ ಕೆಎ-20-ವಿ-3811 ನೇಯದ್ದನ್ನು ಕೀ ಸಮೇತ್ ಮರೆತು ಪಾಕರ್್ ಮಾಡಿ ನಿಲ್ಲಿಸಿದ್ದು, ಬಳಿಕ 13:45 ಗಂಟೆಗೆ ಮೊಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಬಳಿಕ ಸದ್ರಿ ವಠಾರದಲ್ಲಿ ಮತ್ತು ಮಂಗಳೂರು ನಗರದಲ್ಲಿ ಈ ವರೆಗೆ ಹುಡುಕಾಡಿದಲ್ಲಿ ಮೊಟಾರು ಸೈಕಲ್ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ವಾಹನದ ನೊಂದಣಿ ಪತ್ರದ ಮೂಲ ಪ್ರತಿ ಮೋ.ಸೈಕಲ್ ನಲ್ಲಿ ಇದ್ದು, ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 23,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬುದಾಗಿ ಶೈಲೆಂದ್ರ ಉಪಾಧ್ಯಾಯ ತಂದೆ: ಶ್ರೀನಿವಾಸ ಉಪಾಧ್ಯಾಯ ಡೋರ್ ನಂ 8-11, ಕೃಷ್ಣಾಪು ಮಠ, ಬೆಂಗರೆ  ರೋಡ್ , ಪಡುಬಿದ್ರಿ, ಉಡುಪಿ ರವರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 34/2013, ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಸುರತ್ಕಲ್ ಠಾಣೆ;

  • ದಿನಾಂಕ 08-03-13 ರಂದು ಪಿರ್ಯಾದಿದಾರರಾದ ಉಮೆಶ್ ದೇವಾಡಿಗ ಎಂಬವರ ಮಗಳು ಸೌಂದರ್ಯ ಎಂಬವಳು ಮೊಬೈಲ್ ಸಿಮ್ ಕಾಡರ್್ ವಾಪಾಸು ತರುವಳೇ ಸುರತ್ಕಲ್ ಮಾಕರ್ೆಟ್ಗೆ ತೆರಳಿ ವಾಪಾಸು ಮನೆ ಕಡೆಗೆ ಬಸ್ಸಿನಲ್ಲಿ ಬರುತ್ತಿರುವಾಗ ಬಸ್ಸಿನಲ್ಲಿ ಕೆಲವು ಯುವಕರು ಆಕೆಯನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿರುವುದರಿಂದ ಬಸ್ಸಿನಲ್ಲಿದ್ದ ತನ್ನ ಹತ್ತಿರ ಮನೆಯ ನಿವಾಸಿ ನೌಶಾಲ್ ಎಂಬವನಿಗೆ ವಿಷಯ ತಿಳಿಸಿ, ಗಣೇಶಪುರದಲ್ಲಿ ಬಸ್ಸಿನಿಂದ ಇಳಿದು ಮನೆ ಕಡೆಗೆ ನೌಶಾಲ್ನ ಜೊತೆಯಲ್ಲಿ ಪಿ.ಹೆಚ್.ಸಿ ಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ರಾತ್ರಿ 8-30 ಗಂಟೆಗೆ 8 ರಿಂದ 10 ಮಂದಿ ಹುಡುಗರು ನೌಶಾಲ್ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಸೌಂದರ್ಯಳಿಗೂ ಅವಾಚ್ಯ ಶಬ್ದಗಳಿಂದ ಬೈದು ಭಯ ಹುಟ್ಟಿಸಿ ಬೆದರಿಕೆ ಒಡ್ಡಿದ್ದು, ಸೌಂದರ್ಯಳು ಘಟನಾ ಸ್ಥಳದಿಂದ ಮನೆಗೆ ಬಂದು ಪಿರ್ಯಾದಿದಾರರಿಗೆ ತಿಳಿಸಿದ್ದು, ಫಿರ್ಯಾದಿದಾರರು ಹಾಗೂ ಅವರ ಪತ್ನಿ ಘಟನಾ ಸ್ಥಳಕ್ಕೆ ಹೋದಾಗ ಅವರನ್ನು ನೋಡಿದ ಹಲ್ಲೆಕೋರರು ಅಲ್ಲಿಂದ ತೆರಳಿದ್ದು, ಹಲ್ಲೆಕೋರರ ವಿರುದ್ದ ಕ್ರಮ ಜರುಗಿಸಬೇಕಾಗಿ ಕೋರಿರುತ್ತಾರೆ ಎಂಬುದಾಗಿ ಉಮೇಶ್ ದೇವಾಡಿಗ, ಪ್ರಾಯ ಃ 67 ವರ್ಷ ತಂದೆಃ ದಿ: ಹರಿಯಪ್ಪ ದೇವಾಡಿಗ, ವಾಸ: ಮನೆ ನಂಬ್ರ 1-145, ಸೈಟ್ ನಂಬ್ರ 12,  1ನೇ ಬ್ಲಾಕ್, ಕಾಟಿಪಳ್ಳ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 65/2013 ಕಲಂ: 143-147-323, 341,504 ಡಿ/ತಿ 149   ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ:

  • ದಿನಾಂಕ 05-03-13 ರಂದು ಫಿರ್ಯಾದುದಾರರು ಹಾಗೂ ಪಿಸಿ 891 ಗಂಗಾಧರ್ ರವರ ಜೊತೆ ಪಿಸಿಆರ್ ವಾಹನ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 06-00 ಗಂಟೆ ಸಮಯಕ್ಕೆ ಪೊಲೀಸ್ ನಿಸ್ತಂತು ಕಛೇರಿಯಿಂದ ಬಂದ ಮಾಹಿತಿಯಂತೆ, ನಂದಿಗುಡ್ಡ ಗುಡ್ಡೆ ಬಸ್ ನಿಲ್ದಾಣದ ಬಳಿ ಹೋಗಿ ನೋಡಿದಾಗ ಪ್ರಾಯ ಸುಮಾರು 50 ವರ್ಷದ ಅಪರಿಚಿತ ಗಂಡಸು ಮಲಗಿದಲ್ಲಿಯೇ ಮೃತಪಟ್ಟಂತೆ ಕಂಡುಬಂದಿರುತ್ತದೆ. ಸದ್ರಿ ವ್ಯಕ್ತಿಯು ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ಮಲಗಿದಲ್ಲಯೇ ಮೃತಪಟ್ಟಂತೆ ಕಂಡು ಬಂದಿರುತ್ತದೆ ಎಂಬುದಾಗಿ ತಾರನಾಥ ಪುತ್ರನ್ ಹೆಚ್ಸಿ 1338 ದಕ್ಷಿಣ ಪೊಲೀಸ್ ಠಾಣೆ ಮಂಗಳೂರು ರವರು ನೀಡಿದ ದೂರಿನಂತೆ ಯು.ಡಿ.ಆರ್ ನಂ: 20/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment