Saturday, March 2, 2013

Daily Crime Incidents for March, 02, 2013


ಅಪಘಾತ ಪ್ರಕರಣ

ಬಜಪೆ ಠಾಣೆ


  • ದಿನಾಂಕ 01-03-13 ರಂದು ಪಿರ್ಯಾದಿದಾರರಾದ ಮಹಮ್ಮದ್ ಅಸೀಪ್ 34 ವರ್ಷ ತಂದೆಃ ಹಸೈನಾರ್ ವಾಸಃ ಜುಬೈದಾ ಮಂಜ್ಹಿಲ್ ನವರಂಗ್ ಕಂಪೌಂಡ್ ಸುಂಕದ ಕಟ್ಟೆ ಕೊಳಂಬೆ ಗ್ರಾಮ ಮಂಗಳೂರು ರವರು ಅವರ ಸ್ನೇಹಿತ  ಹನೀಪ್ರವರೊಂದಿಗೆ ಕಾರ್ಕಳದಿಂದ ಕೈಕಂಬಕ್ಕೆ ಜಯರಾಜ್ ಬಸ್ ನಂಬ್ರ ಕೆಎ-19-ಡಿ-3555 ರಲ್ಲಿ ಕುಳಿತು ಪ್ರಯಾಣಿಸಿಕೊಂಡು ಬರುತ್ತಾ ಬೆಳಿಗ್ಗೆ 09-40 ಗಂಟೆಗೆ ತೆಂಕೆಡಪದವು ಗ್ರಾಮದ ಗಾಯತ್ರಿ ಜ್ಯುವೆಲ್ಲರ್ಸ್ನ ಎದುರು ತಲುಪಿದಾಗ ಎದುರಿನಿಂದ ಅಂದರೆ ಕೈಕಂಬದಿಂದ ಮೂಡಬಿದ್ರೆ ಕಡೆಗೆ ಟಿಪ್ಪರ್ ಲಾರಿ ನಂಬ್ರ ಸಿಎನ್ಜಿ-4349ನ್ನು ಅದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಬಲಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ಎಲುಬು ಮುರಿದು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಮಹಮ್ಮದ್ ಅಸೀಪ್ ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ.ಕ್ರ. 46/13 ಕಲಂಃ 279-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 28-02-13ರಂದು ಪಿರ್ಯಾದಿದಾರರಾದ ಸಂಶುದ್ದಿನ್ ಪ್ರಾಯ ಃ 21 ವರ್ಷ ತಂದೆಃ ಮಹಮದ್ ವಾಸಃ ಸಂಶುದ್ದೀನ್ ಮಂಜ್ಹಿಲ್ ಅತ್ತೂರು ಗ್ರಾಮ ಕಾಪಿಕಾಡು ಕೆಮ್ರಾಲ್ ಮಂಗಳೂರು ತಾಲೂಕು ರವರ ಬಾವ ಬಶೀರ್ ಅಹಮ್ಮದ್ ಎಂಬವರು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಎಕ್ಸ್ 9924 ನೇಯದರಲ್ಲಿ ಎಕ್ಕಾರು ಕಡೆಯಿಂದ ಬಜಪೆ ಕಡೆಗೆ ಬರುತ್ತಾ  ಅಪರಾಹ್ನ 13-50 ಗಂಟೆಗೆ ಬಡಗ ಎಕ್ಕಾರು ಗ್ರಾಮದ ಬೂತಗುಂಡಿ ಎಂಬಲ್ಲಿ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಮಾರುತಿ ಇಕೋ ಕಾರು ನಂಬ್ರ ಕೆಎ-19-ಎಂಸಿ-4042 ನ್ನು ಅದರ ಚಾಲಕ ರಾಘವೇಂದ್ರ ರಾವ್ರವರು ಅತಿಷವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಶೀರ್ ಅಹಮ್ಮದ್ರವರ ಮೋಟಾರ್ ಸೈಕಲ್ಲಿಗೆ ಡಿಕ್ಕಿಪಡಿಸಿದ ಪರಿಣಾಮ ಬಶೀರ್ ಅಹಮ್ಮದ್ರವರ ತಲೆಗೆ ತೀವ್ರ ತರದ ರಕ್ತಗಾಯವಾಗಿದ್ದು ಮಂಗಳೂರು ಎ.ಜೆ. ಆಸತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸಂಶುದ್ದಿನ್ ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾಅ.ಕ್ರ 45/13 ಕಲಂಃ 279-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ

  • ದಿನಾಂಕ: 01-03-2013 ರಂದು ಸಮಯ ಸುಮಾರು 12.00 ಗಂಟೆಗೆ ಪಿರ್ಯಾದುದಾರರಾದ ಅಶೀಶ್ ಅಮೀನ್ (22) ತಂದೆ : ಜಯಾನಂದ್ ಅಮೀನ್, ವಾಸ: ಶಾಮ್ ಕಾಟೇಜ್, ಮರಿಯನಗರ, ನಿಯರ್ ರೋಶನಿ ನಿಲಯ, ವೆಲೆನ್ಸಿಯಾ,    ಮಂಗಳೂರು ರವರು ಇತ್ತೀಚೆಗೆ ಹೊಸದಾಗಿ ಖರೀದಿಸಿದ ಯಮಹಾ ಎಫ್ಜೆಡ್ ಮೊ,ಸೈಕಲ್ನಲ್ಲಿ ಸವಾರರಾಗಿ ಕು|| ಜೋಯ್ಸ್ ಲೀಸಾ ಕುಟ್ಹಿನೊ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮೊ,ಸೈಕಲನ್ನು ಮೊರ್ಗನ್ಸ್ಗೇಟ್ನ ಬಜಾಜ್ ಫೈನಾನ್ಸ್ ಕಚೇರಿ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿರುವಾಗ್ಗೆ ಮಾರ್ನಮಿಕಟ್ಟೆ ಕಡೆಯಿಂದ  ಮೊರ್ಗನ್ಸ್ಗೇಟ್ ಕಡೆಗೆ ಅಟೊ ಟೆಂಪೊ ನಂಬ್ರ ಏಂ-19          ಅ-7250 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊ,ಸೈಕಲ್ಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಜೋಯ್ಸ್ ಲೀಸಾ ಕುಟ್ಹಿನೊ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕೋಲು ಕಾಲಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಕೆಎಮ್ಸಿ ಅತ್ತಾವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಹಾಗೂ ಅಪಘಾತದ ಸಮಯ ಜೋಯ್ಸ್ ಲೀಸಾ ಕುಟ್ಹಿನೊರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂಬುದಾಗಿ ಅಶೀಶ್ ಅಮೀನ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಮೊ.ನಂಬ್ರ 44/2013 279 , 338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ: 01-03-2013 ರಂದು ಸಮಯ ಸುಮಾರು 16:15  ಗಂಟೆಗೆ ಆರೋಪಿ ತನ್ನ ಬಾಬ್ತು ಕಾರು ನಂಬ್ರ ಏಂ- 19 ಒಆ 1178ನ್ನು  ಬಲ್ಮಠ ಜಂಕ್ಷನ್ ಕಡೆಯಿಂದ ಹಾಟರ್ಿಕಲ್ಚರ್ ಜಂಕ್ಷನ್ ಆಗಿ ಬೆಂದೂರುವೆಲ್ ಸರ್ಕಲ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಕರವಾಗಿ ಚಲಾಯಿಸಿ ಕೊಂಡು ಬರುತ್ತ ಸುಮಾರು 16.15 ಗಂಟೆಗೆ ತೆರೆಸ ಸ್ಕೂಲ್ ಬಳಿ ಇರುವ ಹಾಟರ್ಿಕಲ್ಚರ್ ಜಂಕ್ಷನ್ ತಲುಪುವಾಗ ಸೈಂಟ್ ಅಗ್ನೇಸ್ ಜಂಕ್ಷನ್  ಕಡೆಯಿಂದ ಬೆಂದೂರುವೆಲ್ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಏಐ 23 1684ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಜಿಜೊ ಜೋಸೆಫ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲ ತೊಡೆಗೆ ಗುದ್ದಿದ ನೋವು ಉಂಟಾಗಿ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಜಿಜೋ ಜೋಸೆಫ್  (22) ತಂದೆ : ಜೋಸೆಫ್  ವಾಸ: ಕಿಜಾಕೆ, ಪರಿಷವಿಲ್ಲಾಯಿಲ್, ಅರಿನಲ್ಲೂರ್ ಅಂಚೆ, ಕೊಲ್ಲಂ ಜಿಲ್ಲೆ, ಕೇರಳ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 45/2013 279 , 337 ಐ.ಪಿ.ಸಿ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 28-02-2013 ರಂದು ಪಿಯರ್ಾದಿದಾರರಾದ ವಿ.ಹೆಚ್ ಬಶೀರ್ ತಂದೆ :ಹುಸೇನಬ್ಬ ವಾಸ : ಕಣ್ಣೂರು ಮಂಗಳೂರು ರವರು ಹೊಯ್ಗೆ ವ್ಯಾಪಾರದ ಬಗ್ಗೆ ಕಣ್ಣೂರು ಹೊಯ್ಗೆ ಧಕ್ಕೆಯಲ್ಲಿ ನಿಂತುಕೊಂಡಿರುವಾಗ, ಮರಳು ಸಾಗಿಸುವ ಬಗ್ಗೆ ಲಾರಿ ನಂಬ್ರ ಕೆಎ 20 ಎ 1690 ನೇದನ್ನು ಅದರ ಚಾಲಕ ಇಬ್ರಾಹಿಂ ಎಂಬವನು ನಿರ್ಲಕ್ಷ್ಯತನದಿಂದ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದ ಪರಿಣಾಮ ಲಾರಿಯ ಎಡಬದಿಯ ಬಾಡಿ ಪಿಯರ್ಾದಿದಾರರಿಗೆ ತಾಗಿ ಅವರು ಕೆಳಗೆ ಬಿದ್ದಿದ್ದು, ಪಿಯರ್ಾದಿದಾರರು ಮತ್ತು ಇತರರು ಜೋರಾಗಿ ಬೊಬ್ಬೆ ಹೊಡೆದರೂ ಲಾರಿ ಚಾಲಕ ಸದ್ರಿ ಲಾರಿಯನ್ನು ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿದ್ದರಿಂದ ಲಾರಿಯ ಎಡಬದಿ ಚಕ್ರವು ನೆಲದ ಮೇಲೆ ಬಿದ್ದಿದ್ದ ಪಿಯರ್ಾದಿದಾರರ ಬಲ ಅಂಗೈಯ ಮೇಲೆ ಹರಿದುಹೋಗಿದ್ದರಿಂದ ಬಲಕೈಯ ಹೆಬ್ಬೆರಳು ಹೊರತುಪಡಿಸಿ ಉಳಿದ 4 ಬೆರಳುಗಳು ತೀವ್ರ ಜಖಂ ಗೊಂಡಿದ್ದು ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಅಪಘಾತಕ್ಕೆ ಕೆಎ 20 ಎ 1690 ನೇ ಲಾರಿಯನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಹಿಮ್ಮಖವಾಗಿ ಚಲಾಯಿಸಿದ್ದೇ ಕಾರಣವಾಗಿದ್ದು, ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿ.ಹೆಚ್ ಬಶೀರ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂಬ್ರ 54/13 ಕಲಂ: 279 338  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಠಾಣೆ


  • ದಿನಾಂಕ 01/03/2013 ರಂದು ಪಿಯರ್ಾದುದಾರರಾದ ಸದಾನಂದ  ಪ್ರಾಯ 39 ವರ್ಷ, ತಂದೆ: ನಾರಾಯಣ ವಾಸ: ಧರ್ಮನಗರ, ಉಳ್ಳಾಲ ಗ್ರಾಮ, ಮಂಗಳೂರು ರವರು ಅವರ ಬಾಬ್ತು ಏಂ 19 ಅ 1199 ನೇ ನಂಬ್ರದ ಆಟೋ ರಿಕ್ಷಾವನ್ನು ಮಂಗಳೂರಿನಿಂದ ಚಾಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 23-30 ಗಂಟೆಗೆ ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ, ಉಳ್ಳಾಲಬೈಲು ಬಂಗೇರಾ ಕ್ರಾಸ್ ಬಳಿ ತಲುಪುತ್ತಿದ್ದಂತೆ ಅವರ ಎದುರಿನಿಂದ ಏಂ 19 ಇಅ 1375 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಕಬೀರ್ ಎಂಬಾತನು ಮೋಟಾರು ಸೈಕಲ್ನ ಹೆಡ್ಲೈಟ್ನ್ನು ಹಾಕದೇ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಅಟೋರಿಕ್ಷಾ ಜಖಂಗೊಂಡು ಪಿಯರ್ಾದಿಯ ಗಲ್ಲ, ಬಲ ಕಣ್ಣಿಗೆ, ಕುತ್ತಿಗೆಗೆ, ಮೂಗಿಗೆ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಬೈಕ್ ಸವಾರ ಕಬೀರ್ನಿಗೆ ಕೂಡಾ ರಕ್ತಗಾಯವಾಗಿದ್ದು, ಇಬ್ಬರು ಗಾಯಾಳುಗಳು ಮಂಗಳೂರು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸದಾನಂದ ರವರು ನೀಡಿದ ದೂರಿನಂತೆ ಉಳ್ಳಾಲ ಅ.ಕ್ರ. 57/2013 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ: 01-03-13 ರಂದು ಫಿರ್ಯದುದಾರರಾದ ಶ್ರೀ ಮುರುಗೇಶನ್, ಪ್ರಾಯ 49 ವರ್ಷ, ತಂದೆ: ದಿ.ಎಚ್ರಾಜರ, ವಾಸ: ವಿಳಾಪುರಂ ಮಾವುಟ, ಕಲ್ಲಕುಜರ್ಿ ಪುಕ್ರಾವಂ, ತಮಿಳುನಾಡು ರಾಜ್ಯ. ಹಾಲಿ ದೂಮಾವತಿ ಕಂಪೌಂಡ್ ದೇವಸ್ಥಾನ, ಹೊಯ್ಗೆ ಬಜಾರ್, ಮಂಗಳೂರು ರವರು ಠಾಣೆಗೆ ಬಂದು ಹಾಜರಾಗಿ ಒಂದು ಲಿಖಿತ ದೂರನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ತನ್ನ ಮಗ ಮಣಿಕಂಠ ಎಂಬಾತನು ಎಂದಿನಂತೆ ನಿನ್ನೆ ದಿನ ದಿನಾಂಕ:28-02-2013ರಂದು ಸಾಯಂಕಾಲ ಬೋಟ್ನಲ್ಲಿ ಕೆಲಸ ಮುಗಿಸಿ, ಮಂಗಳೂರು ನಗರದ ಹೊಯ್ಗೆ ಬಜಾರ್ ಎಂಬಲ್ಲಿ ಭಗತ್ ಸಿಂಗ್ ರಸ್ತೆಯ ಬಳಿಯ ಹೊಳೆ ಬದಿಯಲ್ಲಿ ತನ್ನ ಗೆಳೆಯರೊಂದಿಗೆ ಅಮಲು ಪದಾರ್ಥ ಸೇವಿಸಿ,ಆಟವಾಡಲು ಹೋಗಿದ್ದು, ಆಡಿದ ನಂತರ ಪುನಃ ಅಮಲು ಪದಾರ್ಥ ಸೇವಿಸಿ ವಾಪಾಸ್ಸು ಅಲ್ಲಿಗೇ ಹೋದವನು ಪಕ್ಕದ ಒತ್ತಾಗಿ ಬೆಳೆದಿರುವ ಗಿಡಪೊದರುಗಳ ಮಧ್ಯೆ  ಇರುವ ಮರಗಳ ಬಳಿ  ಹೋದವನು  ವಾಪಾಸ್ಸು ಬಾರದೇ ಇರುವುದನ್ನು ಹೋಗಿ ನೋಡಿದಾಗ ಮಣಿಕಂಠನು ಬೋಟಿನ 3 ಮಿ.ಮೀ. ಹಗ್ಗದಿಂದ ಮರವೊಂದಕ್ಕೆ ನೇಣುಹಾಕಿಕೊಂಡಿರುವುದು ಕಂಡು ಬಂದಿದ್ದು, ಆತನ ಗೆಳೆಯರು ಹಾಗೂ ಅಲ್ಲಿ ಸೇರಿದ್ದ ಸಾರ್ವಜನಿಕರು ಮಣಿಕಂಠನನ್ನು ನೇಣಿನಿಂದ ಬಿಡಿಸಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಣಿಕಂಠನ ಮರಣದ ಬಗ್ಗೆ ಯಾವುದೇ ಸಂಶಯವಿಲ್ಲವಾಗಿಯೂ, ಆತನು ಯಾವುದೋ ಕಾರಣದಿಂದ   ಕುಡಿತದ ಚಟದಿಂದ ಈ ಕೃತ್ಯವೆಸಗಿರುವುವುದು ಎಂಬುದಾಗಿ  ಮುರುಗೇಶನ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 17/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment