ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ: 27-03-2013 ರಂದು ಸಮಯ ಸಂಜೆ ಸುಮಾರು 6.45 ಗಂಟೆಗೆ ಪಿರ್ಯಾದುದಾರರದ ಸುರೇಶ್ (34 ವರ್ಷ) ತಂದೆ: ವಿಶ್ವನಾಥ ಕೊಟ್ಟಾರಿ, ವಾಸ: ಎದುರು ಪದವು, ಮೂಡುಶೆಡ್ಡೆ, ಮಂಗಳೂರು ರವರು ಪಾಂಡೇಶ್ವರ ಏ2 ಟವರ್ಸ್ ಎದುರು ರಸ್ತೆ ದಾಟಲು ನಿಂತಿರುವಾಗ ಮಾರುತಿ ಒಮ್ನಿ ಕಾರು ನಂಬ್ರ ಏಂ-19 ಒಅ-6460 ನ್ನು ಅದರ ಚಾಲಕ ಮಂಗಳಾದೇವಿ ಕಡೆಯಿಂದ ಪಾಂಡೇಶ್ವರ ಜಂಕ್ಷನ್ ಕಡೆಗೆೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ, ಪಿರ್ಯಾದುದಾರರು ರಸ್ತೆಗೆ ಬಿದ್ದು , ಬಲಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ಕಾಲುಮೂಳೆ ಮುರಿತವಾಗಿ, ಎಡಭುಜಕ್ಕೆ ತೀವೃ ಸ್ವರೂಪದ ಗುದ್ದಿದ ಗಾಯ, ಹಣೆಯ ಮೇಲೆ, ಎಡಕಿವಿಯ ಮೇಲೆ ತರಚಿದ ಗಾಯವಾಗಿ ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುರೇಶ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 63/2013 279,338 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ
- ದಿನಾಂಕ 28-03-2013 ರಂದು ಬೆಳಿಗ್ಗೆ 9-40 ಗಂಟೆಗೆ ಪಿಯರ್ಾದಿದಾರರಾದ ಸಂತೋಷ್ ವಾಸ: ಕೊಣಾಜೆ ಗ್ರಾಮ ಮಂಗಳೂರು ತಾಲೂಕು ರವರು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಮಂಗಳೂರು ಕಡೆಗೆ ಬರುತ್ತಿರುವಾಗ ಜಪ್ಪಿನಮೊಗರು ಗ್ರಾಮದ ಮುಗೇರು ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಇನ್ನೋವಾ ಕಾರು ನಂಬ್ರ ಕೆಎಲ್ 13 ಆರ್ 8899ನ್ನು ಅದರ ಚಾಲಕ ಇಬ್ರಾಹಿಂ ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ 19 ಸಿ 5689 ನಂಬ್ರದ ಟಾಟಾ 407 ಟೆಂಪೋದ ಹಿಂಬದಿಯ ಬಲಬದಿ ಚಕ್ರಕ್ಕೆ ಡಿಕ್ಕಿ ಹೊಡೆದು ನಂತರ ಅದರ ಹಿಂದಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ 19 ವಿ 4234ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರಾದ ಪ್ರಶಾಂತ್ರವರಿಗೆ ಕುತ್ತಿಗೆ ಹಾಗೂ ಕಾಲಿಗೆ ತೀವ್ರ ತರವಾದ ಗಾಯವಾಗಿದ್ದು ಹಾಗೂ ಅವರ ಹಿಂಬದಿಯಲ್ಲಿ ಸಹ ಸವಾರರಾಗಿದ್ದ ಅವರ ಪತ್ನಿ ಕ್ಷಮಾ ಎಂಬವರಿಗೆ ಕುತ್ತಿಗೆ ಹಾಗೂ ಬೆನ್ನಿಗೆ ತೀವ್ರ ಸ್ವರೂಪದ ಗಾಯಗೊಂಡವರನ್ನು ಪಿಯರ್ಾದಿದಾರರು ಹಾಗೂ ಇತರರು ಸೇರಿ ಚಿಕಿತ್ಸೆ ಬಗ್ಗೆ ಪಂಪುವೆಲ್ ಇಂಡಿಯಾನ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದು ಎಂಬುದಾಗಿ ಸಂತೋಷ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 117/13 ಕಲಂ: 279, 338, ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಪೊಲೀಸ್ ಠಾಣೆ
- ದಿನಾಂಕ 28/03/2013 ರಂದು ಪಿಯರ್ಾದಿದಾರರಾದ ರಾಜೇಶ್ ಪೂಜಾರಿ, 33 ವರ್ಷ ತಂದೆ: ದಿ. ದೊಂಬಯ್ಯ ಪೂಜಾರಿ, ವಾಸ: ಮೇಲ್ ಲಚ್ಚಿಲ್ ಮನೆ, ಬೊಳಿಯ, ಕುಪ್ಪೆಪದವು, ಕೊಳವೂರು ಗ್ರಾಮ, ಮಂಗಳೂರು ತಾಲೂಕು ರವರು ಅಟೋರಿಕ್ಷಾ ಒಂದರಲ್ಲಿ ಕುಪ್ಪೆಪದವಿನಿಂದ ಬೈಲು ಮಾಗಣಿ ಕಡೆಗೆ ಹೋಗುತ್ತಿರುವ ಸಮಯ ಅಟೋರಿಕ್ಷಾದ ಎದುರಿನಿಂದ ಪಿಯರ್ಾದಿದಾರರಿಗೆ ಪರಿಚಯವಿರುವ ರಾಜಶೇಖರ ರೈ ರವರು ಅವರ ಬಾಬ್ತು ಮೋ. ಸೈಕಲ್ ನಂ. ಕೆಎ 19 ಯು 1082 ರಲ್ಲಿ ಸಹ ಸವಾರರಾಗಿ ಭಾಸ್ಕರ 30 ವರ್ಷ ಎಂಬವರನ್ನು ಕುಳ್ಳಿರಿಸಿಕೊಂಡು ಕೈಕಂಬದಿಂದ ಕಂದಾವರ ಬೈಲು ಕಡೆಗೆ ಹೋಗುತ್ತಾ ಬೆಳಿಗ್ಗೆ 10.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕಂದಾವರ ಗ್ರಾಮದ ಕಂದಾವರ ಪದವು ಕ್ರಾಸ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಂದಾವರ ಪದವು ಕಡೆಯಿಂದ ಕೈಕಂಬ ಕಡೆಗೆ ಟಿಪ್ಪರ್ ಲಾರಿ ನಂ. ಕೆಎ 19 ಡಿ 3854 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರು ಚಲಾಯಿಸುತ್ತಿದ್ದ ಮೋ. ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋ. ಸೈಕಲ್ ಹತೋಟಿ ತಪ್ಪಿ ಬಿದ್ದು, ಅದರ ಸವಾರ ರಸ್ತೆಯ ಎಡಬದಿಗೆ ಎಸೆಯಲ್ಪಟ್ಟು, ಸಹ ಸವಾರ ಭಾಸ್ಕರರವರು ಲಾರಿಯ ಅಡಿಗೆ ಬಿದ್ದು, ಲಾರಿಯ ಹಿಂದಿನ ಚಕ್ರವು ಭಾಸ್ಕರರವರ ಸೊಂಟದ ಭಾಗದ ಮೇಲೆ ಹರಿದ ಪರಿಣಾಮ ಭಾಸ್ಕರರವರ ಸೊಂಟದ ಭಾಗವು ತೀವೃ ಜಖಂಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವರ ರಾಜಶೇಖರ ರವರಿಗೆ ರಕ್ತಗಾಯವಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ರಾಜೇಶ್ ಪೂಜಾರಿ ಯವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 105/2013 ಕಲಂ: 279, 337, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಮುಲ್ಕಿ ಪೊಲೀಸ್ ಠಾಣೆ
- ಪಿಯರ್ಾಧಿದಾರರಾದ ಶ್ರೀಮತಿ ರೇವತಿ (44) ಗಂಡ ಗೋವಿಂದ ಮೂಲ್ಯ ವಾಸ: ಕೆಳಗಿನ ಮನೆ ಏಳಿಂಜೆ ಗ್ರಾಮ ಮಂಗಳೂರು ರವರ ಅಕ್ಕಳ ಗಂಡ ಕೃಷ್ಣ ಮೂಲ್ಯ ಎಂಬವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಈತನು ವಿಪರೀತ ಅಮಲು ಸೇವಿಸುವ ಚಟವುಳ್ಳವನಾಗಿದ್ದು ಈತನು ದಿನಾಂಕ 27-03-13 ರಂದು 18.30 ಗಂಟೆಗೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ವಿಪರೀತ ಅಮಲು ಪದಾರ್ಥ ಸೇವಿಸಿ ಅಸ್ವಸ್ತಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27-03-13 ರಂದು ರಾತ್ರಿ 10.0 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಶ್ರೀಮತಿ ರೇವತಿ ಯವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಯು.ಡಿ.ಆರ್ ನಂ 08/2013 ಕಲಂ 174 ಸಿ.ಆರ್,ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ದಕ್ಷಿಣ ಠಾಣೆ
- ಫಿಯರ್ಾಧಿದಾರರಾದ ಬಪಿ ಸರ್ಕಾರ್, ಪ್ರಾಯ: 22 ವರ್ಷ ತಂದೆ: ನಿಖಿಲ್ ಸರ್ಕಾರ್ ವಾಸ: ಕಳಿತೋಲಾ, ಪರವೋಡರ್್, ನಂಬ್ರ 9, ಐಸ್ತಾಲಾ, ರಾಣಾ ಘಾಟ್, ನದಿಯಾ ಜಿಲ್ಲೆ, ಪಶ್ಚಿಮ ಬಂಗಾಲ ರವರ ಜೊತೆಯಲ್ಲಿ ಕೆಲಸ ಮಾಡುವ ಬಸುದೇಬ್ ಬಸಕ್ ರವರು ಶ್ರೀ ವಾಸುದೇವ ಕಕರ್ೆರಾ ರವರಿಗೆ ಸೇರಿದ್ದ ಓಂ ಮಾರುತಿ ಎಂಬ ಬೋಟ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ದಿ: 27-03-13 ರಂದು ರಾತ್ರಿ ಸುಮಾರು 10-00 ಗಂಟೆಗೆ ಬಸುದೇಬ್ ಬಸಕ್ ರವರು ಊಟ ಮಾಡಿ ಬೋಟ್ನಲ್ಲಿಯೇ ಮಲಗಿದ್ದರು. ಈ ದಿನ ದಿ: 28-03-13 ರಂದು ಬೆಳಿಗ್ಗೆ 4-00 ಗಂಟೆಗೆ ಮಹಮ್ಮದ್ ರವರು ಫಿರ್ಯಾದುದಾರರಿಗೆ ಫೋನ್ ಮಾಡಿ ಬಸುದೇಬ್ ಬಸಕ್ ರವರು ಏಳುತ್ತಿಲ್ಲ, ಒಮ್ಮೆ ಬನ್ನಿ ಎಂದು ತಿಳಿಸಿದಂತೆ ಹೋಗಿ ನೋಡಿದಾಗ ಮೈ ತಣ್ಣಗಾಗುತ್ತಾ ಬಂದಿತ್ತು. ನಂತರ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಇವರು ಯಾವುದೋ ಖಾಯಿಲೆಯಿಂದಲೋ, ವಿಪರೀತ ಅಮಲು ಪದಾರ್ಥ ಸೇವನೆಯಿಂದಲೋ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಬಪಿ ಸರ್ಕಾರ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಯು.ಡಿ.ಆರ್ ನಂ: 28/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment