ಹಲ್ಲೆ ಪ್ರಕರಣ
ಪೂರ್ವ ಪೊಲೀಸ್ ಠಾಣೆ
- ದಿನಾಂಕ: 11-03-2013 ರಂದು ಮದ್ಯಾಹ್ನ ಸುಮಾರು 12-45 ಗಂಟೆಗೆ ಫಿಯರ್ಾದಿದಾರರಾದ ಲೊಕೇಶ್(34), ತಂದೆ: ಸುಂದರ, ವಾಸ: ಸಿಟಿ ಕಂಪೌಂಡ್, ಭವಂತಿ ಸ್ಟ್ರೀಟ್, ಮಂಗಳೂರು ರವರು ಮಂಗಳೂರು ನಗರದ ಕದ್ರಿ ಪಾಕರ್್ ಬಳಿಯಿಂದಾಗಿ ತನ್ನ ಸ್ನೇಹಿತರಾದ ಪ್ರವೀಣ್ಕುಮಾರ್, ಅಬೂಬಕ್ಕರ್ ಮತ್ತು ಸಚಿನ್ ಎಂಬವರ ಜೊತೆ ನಡೆದುಕೊಂಡು ಹೋಗುತ್ತಿದ್ದ ಸಮಯ ಫಿಯರ್ಾದಿದಾರರಿಗೆ ಪರಿಚಯವಿರುದ ಹಸನ್ ಬಶೀರ್ ಮತ್ತು ಇನ್ನಿಬ್ಬರು ಸ್ವಲ್ಪ ದೂರದಲ್ಲಿ ಅವರ ಬೈಕ್ನ್ನು ನಿಲ್ಲಿಸಿ ಫಿಯರ್ಾದಿದಾರರನ್ನು ಹಸನ್ ಬಶೀರ್ನ ಬಳಿಗೆ ಹೋಗುವಂತೆ ಕರೆದಾಗ ಫಿಯರ್ಾದಿದಾರರು ಆತನ ಬಳಿಗೆ ಹೋದಾಗ ಹಸನ್ ಬಶೀರ್ನು ಫಿಯರ್ಾದಿದಾರರನ್ನು ಉದ್ದೇಶಿಸಿ ಸೂಳೆಮಗ, ಬೇವಸರ್ಿ, ನಿಕ್ಕ್ ಕಾಸ್ ಬೋಡಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಬೈಕ್ನಲ್ಲಿದ್ದ ಕಬ್ಬಿಣದ ರಾಡ್ನಿಂದ ಫಿಯರ್ಾದಿದಾರರ ಬಲಕಾಲಿಗೆ, ತೊಡೆಗೆ ಮತ್ತು ಹೊಟ್ಟೆಗೆ ಹೊಡೆದಿರುವುದಲ್ಲದೇ ಆತನ ಜೊತೆಗಿದ್ದ ಇನ್ನಿಬ್ಬರು ಫಿಯರ್ಾದಿದಾರರಿಗೆ ಕಾಲಿನಿಂದ ತುಳಿದು, ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ಕೃತ್ಯಕ್ಕೆ ಕಾರಣ ಫಿಯರ್ಾದಿದಾರರಿಗೆ ಈ ಹಿಂದೆ ಆರೋಪಿ ಹಸನ್ ಬಶೀರ್ ಎಂಬಾತನು ಫಿಯರ್ಾದಿದಾರರಿಂದ ರೂ 75,000/-ಹಣವನ್ನು ಪಡೆದಿದ್ದು, ಈ ಹಣವನ್ನು ಫಿಯರ್ಾದಿದಾರರು ಹಲವಾರು ಬಾರಿ ಕೇಳಿದರೂ ಕೂಡಾ ಆರೋಪಿ ಹಸನ್ ಬಶೀರ್ ನೀಡದೇ ಇದ್ದು, ಫಿಯರ್ಾದಿದಾರರು ಹಣವನ್ನು ಈ ಹಿಂದೆ ಕೇಳಿದ ವಿಚಾರದಲ್ಲಿ ಪಿಯರ್ಾದಿದಾರರಲ್ಲಿ ದ್ವೇಷಗೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಲೊಕೇಶ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಅ.ಕ್ರ 31/2013, ಕಲಂ 323, 324, 504, 506 ಡಿ/ತಿ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಬಜಪೆ ಪೊಲೀಸ್ ಠಾಣೆ
- ಪಿಯರ್ಾದಿದಾರರಾದ ಶ್ರೀ ಮ್ಯಾಕ್ಸಿಸ್ ಒ.ವಿ. 47 ವರ್ಷ ತಂದೆ: ವಗರ್ೀಸ್ ಒ.ವಿ. ವಾಸ: ಒಲಿಕೂಝಿಯಿಲ್ ಹೌಸ್, ಮೇಪಾಡಿ ಗ್ರಾಮ, ವಯನಾಡು, ಕೇರಳ ರಾಜ್ಯ. ಹಾಲಿ ವಾಸ: ತಾರಿಕಂಬ್ಳ ಮನೆ, ಬಜಪೆ ಗ್ರಾಮ, ಮಂಗಳೂರು ತಾಲೂಕು ರವರ ಮಗ ಡಾಲಿನ ಮ್ಯಾಕ್ಸಿಸ್ 15 ವರ್ಷ ಎಂಬವರು ದಿನಾಂಕ 10/03/2013 ರಂದು ರಾತ್ರಿ 11.30 ಗಂಟೆಯಿಂದ 12.00 ಗಂಟೆ ಮಧ್ಯೆ ತನ್ನ ತಾಯಿಯು ಪರೀಕ್ಷೆಗೆ ಓದದೇ ಟಿ.ವಿ. ನೋಡುತ್ತಿದ್ದಿಯಲ್ಲಾ? ಎಂದು ಬೈದ ಕೋಪದಿಂದ ತನ್ನ ಮನೆಯಾದ ಮಂಗಳೂರು ತಾಲೂಕು ಬಜಪೆ ಗ್ರಾಮದ ತಾರಿಕಂಬ್ಳ ಎಂಬಲ್ಲಿ ತನ್ನ ಮನೆಯ ಬೆಡ್ ರೂಂ ನಲ್ಲಿ ಫ್ಯಾನಿಗೆ ಬೆಡ್ಶೀಟ್ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮ್ಯಾಕ್ಸಿಸ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. ಯುಡಿ.ಆರ್. ನಂ 10/2013 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ 11-03-2013 ರಂದು ಸಮಯ ಸುಮಾರು ಸಂಜೆ 6.15 ಗಂಟೆಗೆ ಕಾರು ನಂಬ್ರ ಏಂ- 19 ಒಂ- 4051 ನ್ನು ಅದರ ಚಾಲಕ ಕೆ. ಪುರುಷೋತ್ತಮ ಕಾಮತ್ ಎಂಬವರು ಕದ್ರಿ ಕಂಬ್ಲ ಕಡೆಯಿಂದ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಾದಅಬ್ದುಲ್ ರಹಿಮಾನ್ (31 ವರ್ಷ) ತಂದೆ: ಪಿ. ಮಹಮ್ಮದ್ವಾಸ: ಹೊಸಮನೆ , ರಂಗನಕೆರೆ, ಹೆರಾಡಿ ಗ್ರಾಮ, ಬಾರಕೂರು, ಉಡುಪಿ ರವರು ಕದ್ರಿ ಕಂಬ್ಲ ರಸ್ತೆಯ ಶ್ರೀ ದುಗರ್ಾ ಇಂಜಿನಿಯರ್ಸ್ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್ ನಂಬ್ರ ಏಂ- 20 ಖ- 47 ಕ್ಕೆ ಡಿಕ್ಕಿಯಾಗಿ ನಂತರ ವೇಗ ನಿಯಂತ್ರಿಸಲಾಗದೆ ಮಂದಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾ ನಂಬ್ರ ಏಂ- 19 ಆ- 2570ಕ್ಕೆ ಡಿಕ್ಕಿಯಾಗಿ ಮುಂದಕ್ಕೆ ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಡಿಕ್ಕಿಯಾಗಿ, ವಾಹನಗಳು ಜಖಂಗೊಂಡಿರುವುದಾಗಿದೆ ಎಂಬುದಾಗಿ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 53/2013 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರ್ ಪೊಲೀಸ್ ಠಾಣೆ
- ದಿನಾಂಕ 11-03-2013 ರಂದು ಮದ್ಯಾಹ್ನ 1-10 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ನೌಷದ್ (30) ರವರ ತಮ್ಮ ಮಹಮ್ಮದ್ ಇಕ್ಬಾಲ್ ರವರ ಬಾಬ್ತು ಅಂಟೋ ಟೆಂಪೋ ಕೆಎ-19-ಡಿ-8056 ನೇಯದರಲ್ಲಿ ಕೂಳೂರಿನಿಂದ ವಿದ್ಯಾನಗರಕ್ಕೆ ಬರುತ್ತಿದ್ದು ಚಾಲಕ ಅಬ್ಬೂಬಕ್ಕರ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ವಿದ್ಯಾನಗರಕ್ಕೆ ತಲುಪಿದಾಗ ಮಾರುತಿ ಓಮಿನಿ ಕಾರಿಗೆ ಸೈಡ್ ಕೊಡುವ ಸಮಯ ಓಮ್ಮೆಲೇ ಬಲಕ್ಕೆ ತಿರುಗಿ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದಾಗ ಪಿರ್ಯಾದಿದಾರರ ತಮ್ಮ ಮತ್ತು ಚಾಲಕ ಅಂಟೋ ಟೆಂಪೋ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ರಕ್ತಗಾಯ ವಾಗಿದ್ದು, ಬಲಕಾಲಿನ ಮೊಣಗಂಟಿನ ಮೇಲೆ ಮೂಳೆಮುರಿತದ ಗಾಯ ಮತ್ತು ಮುಖಕ್ಕೆ ತರಚಿತ ಗಾಯವಾಗಿದ್ದು,ಮಹಮ್ಮದ್ ಇಕ್ಬಾಲ್ ರವರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ನೌಷದ್ ರವರು ನೀಡಿದ ದೂರಿನಂತೆ ಕಾವೂರ್ ಪೊಲೀಸ್ ಠಾಣಾ ಅ.ಕ್ರ. 49/2013 ಕಲಂ. 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment