Sunday, March 17, 2013

Daily Crime Incidents for March 17, 2013


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 16-03-2013 ರಂದು ಮಧ್ಯಾಹ್ನ ಸುಮಾರು 13-50 ಗಂಟೆಗೆ ಪಿಯರ್ಾದಿದಾರರಾದ ಪುರುಷೋತ್ತಮ ನಾಯಕ್ (32) ತಂದೆ: ವೀರಪ್ಪ ನಾಯಕ್ ವಾಸ: ವಳಚ್ಚಿಲ್ ಅಕರ್ುಳ ಗ್ರಾಮ ಮಂಗಳೂರು ತಾಲೂಕು ರವರ ಅಣ್ಣ ದಾಮೋದರ್ ನಾಯಕ್ ಎಂಬವರು ಮಂಗಳೂರು ನಗರದ ಪಂಪುವೆಲ್ ಎಂಬಲ್ಲಿ ಮಂಗಳೂರು ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಬಿ.ಸಿ. ರೋಡ್ ಕಡೆಗೆ ಹೋಗುವ ಕೆ.ಎ 19 ಎ 3465 ನೇ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರ ಅಣ್ಣನಾದ ದಾಮೋದರ್ ನಾಯಕ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ದಾಮೋದರ್ ನಾಯಕ್ರವರು ಗಂಭೀರ ಸ್ವರೂಪದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದ್ದು, ದಾಮೋದರ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪುರುಷೋತ್ತಮ ನಾಯಕ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 70/13 ಕಲಂ : 279 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವರದಕ್ಷಿಣೆ ಕಿರುಕುಳ ಪ್ರಕರಣ

ಬಜಪೆ ಪೊಲೀಸ್ ಠಾಣೆ


  • ಫಿರ್ಯಾದಿದಾರರಾದ ಮುಮ್ತಾಜ್, 26 ವರ್ಷ, ಗಂಡ: ಅಬ್ದುಲ್ ರವೂಫ್, ವಾಸ: ಪಟೇಲ್ ನೂರ್ ಮಂಜಿಲ್, ಗುರುಕಂಬಳ, ಕಿನ್ನಿಕಂಬಳ ರವರು ಆರುವರೆ ವರ್ಷಗಳ ಹಿಂದೆ 1ನೇ ಆರೋಪಿ ಅಬ್ದುಲ್ ರವೂಫ್ ಎಂಬರನ್ನು ಮದುವೆಯಾಗಿದ್ದು, ಆ ಬಳಿಕ ಗಂಡ ಅಬ್ದುಲ್ ರವೂಫ್ ಮತ್ತು ಆತನ ಮನೆಯವರೊಂದಿಗೆ ಉಡುಪಿ ಜಿಲ್ಲೆಯ ಕಾಪು ಭಾರತ್ ನಗರ ಎಂಬಲ್ಲಿಯ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ಕೆಲವೇ ದಿನಗಳಲಿ ಫಿರ್ಯಾದಿದಾರರ ಗಂಡ ರವೂಫ್ , ತಾಯಿ ಅಖಿಲಾ ಬಾನು, ಅಕ್ಕ ನೂರ್  ಜಹಾನ್, ತಮ್ಮ ಇಮ್ರಾನ್, ಭಾವ ಅಬ್ದುಲ್ ರಶೀದ್ ಮತ್ತಿತರರು ಸೇರಿ ಈಗಾಗಲೇ ಫಿರ್ಯಾದಿದಾರರ ಮನೆಯವರು ವರದಕ್ಷಿಣೆಯಾಗಿ ನೀಡಿದ 50 ಪೌಂಡ್ ಚಿನ್ನಾಭರಣ ಅಲ್ಲದೇ ಇನ್ನೂ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರಬೇಕೆಂದೂ ಒತ್ತಾಯಿಸಿ ಚಪ್ಪಲಿ, ಕೋಲು ಮತ್ತಿತರ ವಸ್ತುಗಳಿಂದ ಹಲ್ಲೆ ಮಾಡಿರುವುದಲ್ಲದೇ ಇವರುಗಳ ಹಿಂಸೆ ತಾಳದೆ ಫಿರ್ಯಾದಿದಾರರು ಮಕ್ಕಳೊಂದಿಗೆ ತನ್ನ ತಾಯಿಯ ಮನೆಯಾದ ಮಂಗಳೂರು ತಾಲೂಕು, ಗುರುಕಂಬಳದ ಮನೆಯಲ್ಲಿದ್ದಾಗ ಅಲ್ಲಿಗೆ ದಿನಾಂಕ: 20-10-2012 ರಂದು ಸದ್ರಿ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳು ಫಿರ್ಯಾದಿದಾರರ ವಶದಲ್ಲಿದ್ದ 50 ಪೌಂಡ್ ಚಿನ್ನಾಭರಣಗಳ್ನು ಬಲವಂತವಾಗಿ ವಶಕ್ಕೆ ಪಡೆದಿರುತ್ತಾರೆ ಎಂಬುದಾಗಿ ಮುಮ್ತಾಜ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 60/2013 ಕಲಂ: 498(ಎ), 341, 504, 506, 323. 395 ಐಪಿಸಿ ಮತ್ತು ಕಲಂ: 3 & 4 ಡಿ.ಪಿ. ಆಕ್ಟ್.ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment