ಮಹಿಳೆ ವಿರುದ್ದ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 22-03-2013 ರಂದು ಸಂಜೆ ಸುಮಾರು 6-00 ಗಂಟೆಯ ಸಮಯಕಕೆ ಮಂಗಳೂರು ನಗರದ ಮೊಗರು ಗ್ರಾಮದ ಕುಕ್ಕಟ್ಟೆ ಎಂಬಲ್ಲಿ ಆರೋಪಿಗಳು ಕೃತ್ಯ ಮಾಡುವ ಉದ್ದೇಶದಿಂದ ಒಟ್ಟು ಸೇರಿ, ಆರೋಪಿಗಳಾದ ಮರಿಯಮ್ಮ ಹಸನಬ್ಬ @ ನೌಷಾದ ಮತ್ತು್ ಅಜರುದ್ದೀನ್ ಫಿರ್ಯಾದಿದಾರರ ಚೂಡಿದಾರದ ಶಾಲನ್ನು ಎಳೆದು ಮಾನಭಂಗವನ್ನುಂಟು ಮಾಡಿದ್ದಲ್ಲದೇ ಕೋಟರ್ಿನಿಂದ ನಮ್ಮ ಮೇಲಿರುವ ಕೇಸನ್ನು ಹಿಂದಕ್ಕೆ ತೆಗೆಯದಿದ್ದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಆ ಬಳಿಕ ಎಲ್ಲಾ ಆರೋಪಿಗಳು ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನ ಅಪ್ಪನಿಗೆ ಅಥವಾ ಬೇರೆ ಯಾರಿಗೂ ಹೇಳಿ ಶ್ಯಾಟ ಹರಿ ಎಂದು ಅವಾಚ್ಯವಾಗಿ ಬೈದಿರುವುದಲ್ಲದೇ ಆರೋಪಿಯು ಈ ಹಿಂದೆ ಫಿರ್ಯಾದಿದಾರರ ಮಾನಭಂಗವನ್ನುಂಟು ಮಾಡಿದ ಕೃತ್ಯದ ಬಗ್ಗೆ ಕೇಸು ಈಗ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ಕೇಸನ್ನು ವಾಪಾಸು ತೆಗೆಯಬೇಕೆಂದು ಹೇಳಿ ಕೃತ್ಯವನನುಂಟು ಮಾಡಿರುವುದಾಗಿದೆ ಎಂಬುದಾಗಿ 23 ವರ್ಷ ಹೆಂಗಸು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 85/2013 ಕಲಂ: 354, 504, 506 ಜತೆಗೆ 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತಡೆದು ಹಲ್ಲೆ ನಡೆಸಿದ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 22-03-2013 ರಂದು ಸಂಜೆ 19-10 ಗಂಟೆ ಸಮಯಕ್ಕೆ ಮಂಗಳೂರು ನಗರದ, ಮೂಳೂರು ಗ್ರಾಮದ ಕುಕ್ಕಟ್ಟೆ ಸೈಟ್ ಬಸ್ಸು ನಿಲ್ದಾಣದ ಬಳಿ ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಕೈಗಳಿಂದ ಹೊಡೆದು, ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದು ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಇಬ್ರಾಹಿಂ, 52 ವರ್ಷ, ತಂದೆ: ಮಹಮ್ಮದ್, ವಾಸ: ಕುಕ್ಕಟ್ಟೆ ಸೈಟ್ ಮದರಸದ ಬಳಿ, ಕುಕ್ಕಟ್ಟೆ, ಮೊಗರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 341, 323, 504, 506 ಜತೆಗೆ 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment