ಕಳವು ಪ್ರಕರಣ:
ಪಣಂಬೂರು ಠಾಣೆ;
- ದಿನಾಂಕ 27-03-2013 ರ 00-40 ಗಂಟೆ ಆರೋಪಿ ಸಂತೋಷ್ ಹಾಗೂ ಮಂಜುನಾಥ ಎಂಬವರು ಕೆ.ಎ.19.ಡಿ.1472ನೇ ಟಿಪ್ಪರ್ ಲಾರಿಯ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸದಲ್ಲಿದ್ದು ದಿನಾಂಕ 26-03-2013ರಂದು ರಾತ್ರಿ ಸಮಯ ಸದ್ರಿ ಟಿಪ್ಪರ್ ಲಾರಿಯಲ್ಲಿ ಯೂರಿಯಾವನ್ನು ನವ ಮಂಗಳೂರು ಬಂದರು ಪ್ರದೇಶದ ಒಳಗೆ ಇರುವ ಠತಜಡಿ ಜಿಟಠತಿ ಜಜ ಟಿಠ 01 ಮತ್ತು 02 ರಿಂದ ಲೋಡ್ ಮಾಡಿ ಬಂದರು ಪ್ರದೇಶದ ಹೊರಗೆ ಇರುವ ಸಿ.ಸಿ.ಎಲ್ ಗೋದಾಮಿಗೆ ಅನ್ಲೋಡ್ ಮಾಡುವ ಕೆಲಸ ನಿರ್ವಹಿಸುತ್ತಿದ್ದು, ಅದೇ ರಾತ್ರಿ ಅಂದರೆ ಸಮಯಕ್ಕೆ ಬಂದರು ಪ್ರದೇಶದ ಒಳಗೆ ಇರುವ ಣಡಿಚಿಟಿಣ ಜಜ ಟಿಠ 02 ರ ಹಿಂದಿನಿಂದ ಸುಮಾರು 40 ಕೆ.ಜಿ ಯಷ್ಟು ಗೋದಿಯನ್ನು ಒಂದು ಗೋಣಿ ಚೀಲದಲ್ಲಿ ಕಳವು ಮಾಡಿ ಟಿಪ್ಪರ್ ಲಾರಿಯ ಕ್ಯಾಬಿನ್ ಒಳಗೆ ಅಡಗಿಸಿಟ್ಟಿರುವುದನ್ನು ರಾತ್ರಿ ಪಾಳಿಯ ಕೆಲಸದಲ್ಲಿರುವ ಸಿ.ಐ.ಎಸ್.ಎಫ್. ಕಾನ್ಸಟೇಬಲ್ ಡಿ.ಗುಣಸೇಕರನ್ ಎಂಬವರು ಪತ್ತೆ ಮಾಡಿ ಈ ಬಗ್ಗೆ ಮಾಹಿತಿಯನ್ನು ಅವರ ಮೇಲಾಧಿಕಾರಿಯವರಿಗೆ ತಿಳಿಸಿದಂತೆ ಮೇಲಾಧಿಕಾರಿಯಾದ ಪಿರ್ಯಾದಿದಾರರು ಆರೋಪಿತರನ್ನು ಹಾಗೂ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಸ್ತಾಂತರಿಸಿ ಸೂಕ್ತ ಕಮ್ರಕ್ಕಾಗಿ ಕೋರಿದ ಲಿಖಿತ ಪಿರ್ಯಾದಿಯ ಎಂಬುದಾಗಿ ಬಿ ಕುಮಾರ್ ಎಸ್ಐ/ಇಎಕ್ಸ್ಇ ಸಿಐಎಸ್ಎಫ್ ನಂ 921360098 ಇನ್ಚಾಜರ್್ ಕ್ರೈಂ & ಇಂಟ್ ವಿಂಗ್, ಸಿಐಎಸ್ಎಫ್ ಯುನಿಟ್, ಎನ್ಎಂಪಿಟಿ, ಪಣಂಬೂರು, ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 49/13 ಕಲಂ 379 ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ;
- ದಿನಾಂಕ 25-03-2013 ರಂದು ಫಿರ್ಯಾದಿದಾರರು ಕೊಳಂಬೆ ಗ್ರಾಮದ ಕೌಡೂರು ಎಂಬಲ್ಲಿರುವ ಚಂದ್ರಹಾಸ ಎಂಬವರ ಕಲ್ಲಿನ ಕೋರೆಗೆ ಕೆಲಸಕ್ಕೆಂದು ಹೋದವರು, ಮಧ್ಯಾಹ್ನ 3-00 ಗಂಟೆಗೆ ಕೋರೆಗೆ ಜಲ್ಲಿ ತುಂಬಿಸಲು ಬಂದ ಟಿಪ್ಪರ್ ಲಾರಿ ನಂ: ಕೆಎ 19 ಡಿ 8907 ನೇದನ್ನು ಅದರ ಚಾಲಕ ಒಮ್ಮೆಲೇ ಅತೀವೇಗ ಮತ್ತು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್ ಫಿರ್ಯಾದಿದಾರರಿಗೆ ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು, ಲಾರಿಯ ಚಕ್ರ ಎಡ ಕಾಲಿನ ಕೆಳಗೆ ಹರಿದು ಗಾಯಗೊಂಡವರು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಭೋಜ, 45 ವರ್ಷ ತಂದೆ: ದಿ: ಅಂಗರ, ವಾಸ: ಕಲ್ಲಗುಡ್ಡೆ ಮನೆ, ಕತ್ತಲ್ಸಾರ್, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರು ನೀಟಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 101/2013 ಕಲಂ: 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ
- ದಿನಾಂಕ: 26-03-2013 ರಂದು ಸಮಯ ಸುಮಾರು ಮಧ್ಯಾಹ್ನ 3:30 ಗಂಟೆಗೆ ಲಾರಿ ನಂಬ್ರ್ರ ಏಂ-20-3953 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಿಜೈ ಜಂಕ್ಷನ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಎಸ್.ಎಸ್.ಬಿ. ಕ್ರಾಸ್ ಜಂಕ್ಷನ್ ಬಳಿ ನಿಂತಿದ್ದ ಸ್ಕೋಪರ್ಿಯೋ ಕಾರು ನಂಬ್ರ ಏಂ-19ಚ-3295 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೋಪರ್ಿಯೋ ಕಾರಿನ ಬಲಭಾಗ ಸಂಪೂರ್ಣ ಜಖಂ ಹಾಗೂ ಕಾರಿನ ಚೇಸ್ ತಿರುಗಿಹೋಗಿರುತ್ತದೆ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ. ಲಾರಿ ಚಾಲಕ ಅಪಘಾತದಿಂದ ಆದ ನಷ್ಟದ ಖಚರ್ುವೆಚ್ಚಗಳನ್ನು ನೀಡುತ್ತೇನೆೆ ಎಂದು ಹೇಳಿ ನಂತರ ನಿರಾಕರಿಸಿರುತ್ತಾನೆ, ಆದುದರಿಂದ ಪಿರ್ಯಾದಿ ನೀಡಲು ತಡವಾಗಿರುತ್ತದೆ ಎಂಬುದಾಗಿ ಉಮ್ಮರ್ ಫಾರೂಕ್ (29 ವರ್ಷ) ತಂದೆ: ಅಬ್ದುಲ್ ಖಾದರ್, ವಾಸ: 7/247 ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 62/2013 279 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಬಕರ್ೆ ಠಾಣೆ;
- ದಿನಾಂಕ 27-03-2013 ರಂದು 16-30 ಗಂಟೆಗೆ ಪ್ರತಿವಾದಿ ವಾಮನ ಶೆಟ್ಟಿ, (50) ತಂದೆ: ಈಶ್ವರ ಶೆಟ್ಟಿ, ವಾಸ: ಮೀನಾಕ್ಷಿ ನಿಲಯ, ಕುಕ್ಕಾಡಿ ಕ್ಷೇತ್ರ, ಅಶೋಕನಗರ, ಮಂಗಳೂರು ಎಂಬಾತನು ರೂಡಿಗತವಾಗಿ ರೌಡಿ ಸ್ವಭಾವದ ಚಟುವಟಿಕೆಯನ್ನು ಹೊಂದಿದ್ದು, ವಿನಾ: ಕಾರಣ ಹಲ್ಲೆ ತಂಟೆ ತಕರಾರುಗಳಲ್ಲಿ ತೊಡಗಿಕೊಂಡಿದ್ದು, ಈ ಪರಿಣಾಮ ಮಂಗಳೂರು ನಗರದ ಬಕರ್ೆ ಠಾಣಾ ವ್ಯಾಪ್ತಿಯ ಉರ್ವ ಮಾಕರ್ೆಟ್ ಪರಿಸರದಲ್ಲಿ ಈ ಪ್ರತಿವಾದಿಯ ಕೃತ್ಯದಿಂದ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುವ ವಾತಾವರಣವುಂಟಾಗಿರುತ್ತದೆ. ಅಲ್ಲದೆ ಪ್ರತಿವಾದಿಯು ಮುಂಬರುವ ವಿಧಾನ ಸಭಾ ಚುನಾವಣೆ-2013ರ ಸಂದರ್ಬದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಚುನಾವಣೆಯ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ರಕ್ತಪಾತವಾಗಿ ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತ ದೃಪ್ಠಿಯಿಂದ ಮುಂಜಾಗ್ರತೆಯ ಕ್ರಮವಾಗಿ ನಾನು ಪ್ರತಿವಾದಿಯ ವಿರುದ್ದ ಈ ದಿನ ಠಾಣೆಯ ಅ.ಕ್ರ ನಂಬ್ರ 42/2013 ಕಲಂ 107, 116(3) ದಂಡಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವುದು ಎಂಬುದಾಗಿ ಮಹಮ್ಮದ್ ಶರೀಫ್ ಪೊಲೀಸ್ ಉಪ ನಿರೀಕ್ಷಕರು ಕಾನೂನು ಮತ್ತು ಸುವ್ಯವಸ್ಥೆ ಬಕರ್ೆ ಪೊಲೀಸ್ ಠಾಣೆ, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 42/2013 ಕಲಂ 324ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ.
No comments:
Post a Comment