Monday, March 25, 2013

Daily Crime Incidents for March 25, 2013


ಅಪಘಾತ ಪ್ರಕರಣಗಳು


ಬಕರ್ೆ ಠಾಣೆ

ದಿನಾಂಕ: 23-03-2013 ರಂದು ಸಮಯ ಸುಮಾರು ರಾತ್ರಿ 20:45 ಗಂಟೆಗೆ ಕಾರು ನಂಬ್ರ್ರ ಏಂ-19 ಒಃ-7818 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ರಾ.ಹೆ 66 ರಸ್ತೆಯಲ್ಲಿರುವ ಕನರ್ಾಟಕ ಬ್ಯಾಂಕ್ ಹೆಡ್ ಆಫೀಸು ಎದುರು ತಲುಪುವಾಗ ಮಹಾವೀರ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮೋ.ಸೈಕಲ್ ನಂಬ್ರ ಏಂ-19 ಇಈ-2501 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋ.ಸೈಕಲ್  ಸವಾರ ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಮಾಡಿಕೊಂಡಿರುತ್ತಾರೆ. ಡಿಕ್ಕಿ ಮಾಡಿದ ಕಾರು ಸ್ವಲ್ಪ ಮುಂದಕ್ಕೆ ಚಲಿಸಿ ಮಹಾವೀರ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಂಬ್ರ ಏಂ-19 ಒಅ-1988  ಡಿಕ್ಕಿ ಮಾಡಿ ಜಖಂ ಗೊಳಿಸಿದ್ದಾಗಿದೆ. ಅಪಘಾತದಿಂದ ಮೋ.ಸೈಕಲ್ ಸವಾರನ ಎರಡು ಕೈಗಳಿಗೆ ಮತ್ತು ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗೊಂಡು ಫಾದರ್ ಮುಲ್ಲರ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಡಿಕ್ಕಿ ಮಾಡಿದ ಕಾರು ಚಾಲಕ  ಕಾರನ್ನು ಚಲಾಯಿಸಿ ಕೊಂಡು ಪರಾರಿಯಾಗಿರುತ್ತಾನೆ  ಎಂಬುದಾಗಿ ಫಿರ್ಯಾದುದಾರರಾದ ಮಹಮದಾಲಿ (47) ವಾಸ: ಬಿಕರ್ನಕಟ್ಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 61/2013 279, 338 , ಐ.ಪಿ.ಸಿ. ಮತ್ತು 134 (ಎ) & (ಬಿ) ಮೋವಾ ಕಾಯ್ದೆಯಡಿಯಲ್ಲಿ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುರತ್ಕಲ್ ಠಾಣೆ

ದಿನಾಂಕ: 24-3-2013 ರಂದು ಪಿರ್ಯಾದಿದಾರರಾದ ಗಣೇಶ್ ಅಂಚನ್ ಇವರು ಅವರ ಮನೆಯಾದ ಹೊಸಬೆಟ್ಟುವಿನ ಶಿಲ್ಪ ಕಾಂಪ್ಲೇಕ್ಸ್ ಹತ್ತಿರ ನಿಂತುಕೊಂಡಿದ್ದ ಸಮಯ ಸಂಜೆ ಸುಮಾರು 4-15 ಗಂಟೆಗೆ ಹೊಸಬೆಟ್ಟು ಕಡೆಯಂದ ಕೆಎ-19-ಇಡಿ-5615 ನೇದನ್ನು ಅದರ ಸವಾರ ಹರೀಶ್ ಬಿ ಬಂಗೇರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಆ ಸಮಯ ಅವರ ಬೈಕಿನ ಹಿಂದೆ ಕೆಎ-19-ಸಿ-6190 ನೇ ಕಾರನ್ನು ಅದರ ಚಾಲಕ ವಿಶ್ವನಾಥ ಎಂಬಾತನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹರೀಶ್ ಬಿ ಬಂಗೇರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಬೈಕ್ ಸವಾರ ಹರೀಶ್ ಬಂಗೇರ ಇವರಿಗೆ ಗಲ್ಲಕ್ಕೆ ತುಟಿಗೆ, ಎಡ ಕಿವಿಗೆ ಮುಖಕ್ಕೆ ಬಲಕೈಗೆ ಗಾಯವಾಗಿದ್ದು,ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. ಮೊ.ನಂ.86/2013 ಕಲಂ: 279-337  ರಂತೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಮನುಷ್ಯ ಕಾಣೆ ಪ್ರಕರಣ


ಮಂಗಳೂರು ದಕ್ಷಿಣ ಠಾಣೆ 

ಫಿರ್ಯಾದುದಾರರಾದ ಮುನಿರುದ್ದೀನ್ (34) ತ್ರಿಕಾರಿಪುರ ಗ್ರಾಮ, ಕಾಸರಗೋಡು ರವರ ಅಕ್ಕನ ಮಗನಾದ ಮಹಮ್ಮದ್ ಅಶ್ರಫ್ (24) ಎಂಬವರು ದಿನಾಂಕ 21-03-13 ರಂದು ದುಬೈಯಿಂದ ಮಂಗಳೂರಿಗೆ 12-30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಕಾಯಿನ್ ಬಾಕ್ಸ್ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದು, ಇನ್ನು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದು, ಅಲ್ಲದೇ ದುಬೈಯಲ್ಲಿರುವ ಇಬ್ರಾಹಿಂದ ಎಂಬವರಿಗೆ ಕೂಡಾ ಈ ಮಾಹಿತಿ ನೀಡಿ ಮಹಮ್ಮದ್ ಅಶ್ರಫ್ ರವರು ಈ ವರೆಗೆ ತನ್ನ ಮನೆಗೂ ಹೋಗದೇ ಗೆಳೆಯನ ಮನೆಯಾದ ಬೆಂಗಳೂರಿಗೂ ಹೋಗದೇ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ಮಹಮ್ಮದ್ ಅಶ್ರಫ್ನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 104/03 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.

No comments:

Post a Comment