ಮನುಷ್ಯ ಕಾಣೆ
ದಕ್ಷಿಣ ಠಾಣೆ
- ಫಿರ್ಯಾದುದಾರರಾದ ಶ್ರೀಮತಿ ಶಾಂತಿ (32) ಗಂಡ ಹರಿಶ್ಚಂದ್ರ ವಾಸ: ನಾವೂರು ಗಾಂಧಿನಗರ, ಸುಳ್ಯ ರವರ ಗಂಡನಾದ ಹರಿಶ್ಚಂದ್ರರವರು ಸುಮಾರು 15 ವರ್ಷಗಳಿಂದ ಪಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಅವರ ಖಾಯಿಲೆ ಉಲ್ಬಣಗೊಂಡು ಅವರು ಕೆಳಗೆ ಬಿದ್ದು, ತಲೆಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಚಿಕಿತ್ಸೆಗಾಗಿ ದಿ: 06-03-13 ರಂದು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ದಿನಾಂಕ 07-03-13 ರಂದು ಅವರ ಆರೈಕೆಯಲ್ಲಿದ್ದ ಫಿರ್ಯಾದುದಾರರು ರಾತ್ರಿ 00-30 ಗಂಟೆಗೆ ನಿದ್ದೆ ಹೋದ ಬಳಿಕ ಬೆಳಿಗ್ಗೆ 04-00 ಗಂಟೆಗೆ ಎಚ್ಚರವಾದ ಬಳಿಕ ನೋಡಿದಾಗ ಹರೀಶ್ಚಂದ್ರರವರು ಆಸ್ಪತ್ರೆಯ ಹಾಸಿಗೆಯಲ್ಲಿರಲಿಲ್ಲ. ಕೂಡಲೇ ಆಸುಪಾಸಿನಲ್ಲಿ ಹಾಗೂ ಸುಳ್ಯದಲ್ಲಿರುವ ಸಂಬಂದಿಕರ ಮನೆಯಲ್ಲಿ ಕೂಡಾ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಹರೀಶ್ಚಂದ್ರರವರನ್ನು ಪತ್ತೆ ಮಾಡಿಕೊಡುವಂತೆ ಶ್ರೀಮತಿ ಶಾಂತಿ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಕ್ರ 55/2013 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
ಉತ್ತರ ಪೊಲೀಸ್ ಠಾಣೆ
- ಫಿಯರ್ಾದಿದಾರರಾದ ಮೊಹಮ್ಮದ್ ಇಂಮ್ತಿಯಾಜ್ ತಂದೆ: ಬಿ. ಮೊಯಿದಿನಬ್ಬ ವಾಸ: ಪ್ರಗತಿನಗರ , ಹೊಸಬೆಟ್ಟು, ಕುಳಾಯಿ ಮಂಗಳೂರು ರವರು ಸೆಂಟ್ರಲ್ ಮಾಕರ್ೆಟ್ ಸಿಟಿ ಮಾಕರ್ೆಟ್ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಏರ್ವಾಯ್ಸ್ ಎಂಬ ಹೆಸರಿನ ಮೊಬೈಲ್ ಶಾಪ್ ಇಟ್ಟುಕೊಂಡಿದ್ದು, ದಿನಾಂಕ 08-03-2013 ರಂದು 18:30 ಗಂಟೆಗೆ ಮಂಗಳೂರು ಕೆ.ಎಸ್. ರಾವ್ ರಸ್ತೆ ಇಂಡಿಯನ್ ಒವರ್ಸೀಸ್ ಬ್ಯಾಂಕ್ ಎದುರು ಪಾಕರ್ಿಂಗ್ ಸ್ಥಳದಲ್ಲಿ ತನ್ನ ಬಾಬ್ತು ಬಜಾಜ್ ಪಲ್ಸರ್ ಮೋ.ಸೈಕಲ್ ನಂಬ್ರ ಕೆಎ-19-ಇಬಿ-443 ನೇಯದ್ದನ್ನು ಹ್ಯಾಂಡ್ ಲಾಕ್ ಮಾಡದೇ ಪಾಕರ್್ ಮಾಡಿ ನಿಲ್ಲಿಸಿದ್ದು, ಬಳಿಕ 18:50 ಗಂಟೆಗೆ ಮೊಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಬಳಿಕ ಸದ್ರಿ ವಠಾರದಲ್ಲಿ ಮತ್ತು ಮಂಗಳೂರು ನಗರದಲ್ಲಿ ಇತರೇ ಕಡೆಗಳಲ್ಲಿ ಈ ವರೆಗೆ ಹುಡುಕಾಡಿದಲ್ಲಿ ಮೊಟಾರು ಸೈಕಲ್ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿ, ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 45,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲ್ನ್ನು ಪತ್ತೆ ಮಾಡಿಕೊಡಬೇಕಾಗಿ ಮೊಹಮ್ಮದ್ ಇಂಮ್ತಿಯಾಜ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 35/2013, ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಪೂರ್ವ ಪೊಲೀಸ್ ಠಾಣೆ
- ದಿನಾಂಕ: 09-03-2013 ರಂದು ಪಿರ್ಯಾದಿದಾರರಾದ ಲೋಕನಾಥ ಶೆಟ್ಟಿ ಪ್ರಾಯ (53) ತಂದೆ: ಶಾಂತಪ್ಪ ಶೆಟ್ಟಿ ವಾಸ: ಇ.ಎಸ್.ಐ ಆಸ್ಪತ್ರೆ, 3ನೇ ಅಡ್ಡ ರಸ್ತೆ, , ಬೆಂದೂರುವೆಲ್,ಮಂಗಳೂರು ರವರು ಠಾಣೆಗೆ ಬಂದು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ಸಂಜೆ ಸುಮಾರು 6.30 ಗಂಟೆಗೆ ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಸಮಯ ಮಂಗಳೂರು ನಗರದ ಕಂಕನಾಡಿಯಲ್ಲಿರುವ ಕಂಕನಾಡಿ ಮಾಕರ್ೇಟಿನ ಎದುರು ಕಟ್ಟಡದ 2ನೇ ಮಹಡಿಯಲ್ಲಿ ಯಾರೋ ಮೃತಪಟ್ಟಿರುವ ವಿಷಯ ತಿಳಿದು ಪಿರ್ಯಾದಿದಾರರು ಹೋಗಿ ನೋಡಲಾಗಿ ಅದು ಯಾರೋ ಅಪರಿಚಿತ ಗಂಡಸಿನ ಮೃತದೇಹವಾಗಿರುತ್ತದೆ. ಸದ್ರಿ ಮೃತದೇಹವನ್ನು ನೋಡಲಾಗಿ ಸದ್ರಿ ಮೃತನು ಕಪ್ಪು ಬಣ್ಣದ ಬಿಳಿ ಗೆರೆಯ ಉದ್ದ ತೋಳಿನ ಅಂಗಿ ಹಾಗೂ ನೀಲಿ ಬಿಳಿ ಮಿಶ್ರಿತ ಬಮರ್ುಡ ಚಡ್ಡಿ ಧರಿಸಿರುವುದಾಗಿದೆ. ಸದ್ರಿ ಮೃತನು ಯಾವುದೋ ಕಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದು ಸಂಶಯ ಕಂಡುಬರುತ್ತದೆ, ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವರೇ ಎಂಬುದಾಗಿ ಲೋಕನಾಥ ಶೆಟ್ಟಿ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್.ನಂ.04/2013 ಕಲಂ:174(ಸಿ) ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಮುಲ್ಕಿ ಪೊಲೀಸ್ ಠಾಣೆ
- ದಿನಾಂಕ 09-03-13 ರಂದು ಬೆಳಿಗ್ಗೆ ಸುಮಾರು 06-10 ಗಂಟೆ ಸಮಯಕ್ಕೆ ಹಳೆಯಂಗಡಿ ಗ್ರಾಮದ ಶ್ರೀ ನಾರಾಯಣಗುರು ಮಂದಿರದ ಬಳಿ ಕೆಎ-19-ವೈ-334ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ರಾಜೇಶ್ ಎಂಬವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಾಹೆ-66 ರಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಯಾದವ ರವರಿಗೆ ಡಿಕ್ಕಿಯಾದ ಪರಿಣಾಮ ಯಾದವರವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಯಾದವ (42) ತಂದೆ: ವಿಶ್ವನಾಥ ಸನಿಲ್ ವಾಸ: ಮಠತೋಟ ಮನೆ, ಹಳೆಯಂಗಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣಾ ಅ.ಕ್ರ 35/13 ಕಲಂ: 279-337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment