ಗಾಂಜಾ ಮಾರಾಟ ಪ್ರಕರಣ
ದಕ್ಷಿಣ ಠಾಣೆ
ದಿನಾಂಕ 05-03-2013 ರಂದು ಬೆಳಿಗ್ಗೆ ಮಂಗಳೂರು ನಗರದ ಜಪ್ಪು ಕುಡ್ಪಾಡಿ ರಸ್ತೆಯ ಕೊನೆಗಿರುವ ರೈಲ್ವೇ ಟ್ರಾಕ್ನ ಬಳಿಯಲ್ಲಿ ಸಾರ್ವಜನಿಕ ರಸ್ತೆಯ ಬಳಿಯಲ್ಲಿ ಇರುವ ದೊಡ್ಡದಾದ ಮರದ ಬಳಿಯಲ್ಲಿ ಓರ್ವ ವ್ಯಕ್ತಿಯು ಯಾವುದೇ ಪರವಾನಿಗೆ ಇಲ್ಲದೆ ಗಾಂಜಾವನ್ನು ತಮ್ಮ ವಶದಲ್ಲಿಟ್ಟುಕೊಂಡು, ಇದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ವರ್ತಮಾನದಂತೆ ಫಿಯರ್ಾದಿದಾರರಾದಸಿ.ಎನ್ ದಿವಾಕರ, ಪೊಲೀಸ್ ನಿರೀಕ್ಷಕರುದಕ್ಷಿಣ ಪೊಲೀಸ್ ಠಾಣೆ ಮಂಗಳೂರು ಠಾಣೆಯ ಸಿಬ್ಬಂದಿಗಳ ಜೊತೆಯಲ್ಲಿ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ಬೆಳಿಗ್ಗೆ ಸುಮಾರು 09-10 ಗಂಟೆಗೆ ತಲುಪಿ ಸುತ್ತುವರಿದು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಂಬ ಹೆಸರಿನ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಿಸಲಾಗಿ ಆತನ ಹೆಸರು ಪುರುಷೋತ್ತಮ ಇ (39) ಎಂಬುದಾಗಿ ತಿಳಿದು ಬಂದಿದ್ದು, ಆತನು ಹೊಂದಿರುವ ಗಾಂಜಾ ಮಾದಕ ವಸ್ತುವಿನ ಬಗ್ಗೆ ವಿಚಾರಿಸಲಾಗಿ ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿದ್ದ ಆತನ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ತುಂಬಿರುವ 41ಪ್ಯಾಕೇಟ್ ಗಾಂಜಾ ಒಟ್ಟು ತೂಕ ಸುಮಾರು 205 ಗ್ರಾಮ್ ಇದರ ಅಂದಾಜು ಮೌಲ್ಯ ರೂ 4000/-ನ್ನು ಮತ್ತು ಗಾಂಜಾ ಮಾರಾಟ ಮಾಡಿ ಬಂದ ನಗದು ಹಣ ರೂ 1100/- ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಮತ್ತು ದಕ್ಷಿಣ ಠಾಣೆ ಅಕ್ರ 53/13 ಕಲಂ 8 (ಅ), 20 (ಃ) ಓ.ಆ.ಕ.ಖ. ಂಅಖಿ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ
ಆರೋಪಿ ಶೇಖ್ ನಜೀರ್ ಹುಸೈನ್ ಎಂಬವನು ತನ್ನ ಸಹಚರರಾದ ಪುರುಷ ಯಾನೆ ಪುರುಷೋತ್ತಮ. ತೊಕ್ಕೊಟ್ಟಿನ ಪವರ್ಿಜ್, ಲತೀಪ್ ಯಾನೆ ಬೊಡ್ಡ ಲತೀಪ್ ಕೂಡಾ ಸೇರಿಕೊಂಡು ಮಂಗಳೂರು ಶಹರು ಮತ್ತು ಪಂಪ್ವೆಲ್ ವಗೈರೆ ಸ್ಥಳಗಳಲ್ಲಿ ಸಮಾಜದ ಸ್ವಾಸ್ತ್ಥ ಕೆಡಿಸುವ ಗಾಂಜಾ ಎಂಬ ಮಾಧಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತವಾದ ಮಾಹಿತಿಯು ಪಿಯರ್ಾದುದಾರರಾದ ರವೀಶ್ ಎಸ್ ನಾಯಕ್ ಪಿಐ ಮಂಗಳೂರು ಗ್ರಾಮಾಂತರ ಠಾಣೆರವರಿಗೆ ಲಭ್ಯವಾಗಿದ್ದು, ಅದರಂತೆ ಈ ದಿನ ಬಂದ ಖಚಿತವಾದ ಮಾಹಿತಿಯ ಮೇರೆಗೆ, ರಾತ್ರಿ ಸುಮಾರು 7-30 ಗಂಟೆಯ ಸಮಯಕ್ಕೆ ಪಂಪ್ವೆಲ್ ಕಡೆಯಿಂದ ತಲಪಾಡಿ ಕಡೆಯತ್ತ ಹೋಗುತ್ತಿದ್ದ, ಕೆಎ 20-ಪಿ-4730 ನೇ ನಂಬ್ರದ ಮೆರೋನ್ ಬಣ್ಣದ ಮಾರುತಿ ಅಲ್ಟೋ ಕಾರನ್ನು ನಿಲ್ಲಿಸಿ ಪರಿಶೋದಿಸಿದಾಗ, ಅದರಲ್ಲಿ ಆರೋಪಿ ಶೇಖ್ ನಜೀರ್ ಹುಸೈನ್ ಎಂಬವನು ಚಾಲಕನಾಗಿದ್ದು, ಆತನಲ್ಲಿ ಆತನ ವಿರುದ್ದ ಇರುವ ಆರೋಪಗಳನ್ನು ತಿಳಿಯಪಡಿಸಿದಾಗ, ತಾನು ಗಾಂಜಾ ಎಂಬ ಮಾಧಕ ವಸ್ತುವನ್ನು ತನ್ನ ಸಹಚರರಾದ ಕಲ್ಲಾಪಿನ ಲತೀಪ್ ಯಾನೆ ಬೊಡ್ಡ ಲತೀಪ್, ರಿಕ್ಷಾ ಚಾಲಕ ತೊಕ್ಕೊಟ್ಟಿನ ಪವರ್ಿಜ್ ಮತ್ತು ಮಾಡೂರಿನ ಪುರುಷ ಎಂಬವರ ಜೊತೆ ಸೇರಿ ಮಾರಾಟ ಮಾಡುತ್ತಿರುವುದು ನಿಜವೆಂದು ಒಪ್ಪಿ ತನ್ನಲ್ಲಿ ಈಗಲೂ ಕೂಡಾ ಸದ್ರಿ ಮಾದಕ ವಸ್ತು ಇದೆ ಎಂದು ತಿಳಿಸಿ, ತನ್ನನ್ನು ಗೆಜೆಟೆಡ್ ಅಧಿಕಾರಿಯವರ ಅನುಪಸ್ಥಿತಿಯಲ್ಲಿ, ನೀವೇ ಜಡ್ತಿ ಕ್ರಮವನ್ನು ಜರುಗಿಸ ಬಹುದೆಂದು ತನ್ನ ಒಪ್ಪಿಗೆ ಪತ್ರವನ್ನು ಬರೆಸಿಕೊಟ್ಟಿದ್ದು, ಆತನಲ್ಲಿ ಮೇಲೆ ಹೇಳಿದ ರೀತಿಯಲ್ಲಿ ಕಾನೂನಿಗೆ ವಿರೋದವಾಗಿ, ಗಾಂಜಾ ಎಂಬ ಮಾಧಕ ವಸ್ತುಗಳು ಇರುವುದಾಗಿ ಇತ್ಯಾದಿ ಸಾರಾಂಶ ಇರುವ ವರದಿಯನ್ನು ಪಿಯರ್ಾದುದಾರರು ಠಾಣೆಗೆ ಮುಂದಿನ ಕ್ರಮದ ಬಗ್ಗೆ ಕಳುಹಿಸಿಕೊಟ್ಟಿರುವುದಾಗಿದೆ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ಅಕ್ರ : 56/13 ಕಲಂ : 8(ಸಿ), 20 ಎನ್ಡಿಪಿಎಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ದಕ್ಷಿಣ ಠಾಣೆ
ಫಿರ್ಯಾದುದಾರರಾದ ಕಣ್ಣನ್(49), ತಮದೆ: ಚಿನ್ನಸ್ವಾಮಿ, ವಾಸ: ಮೇಲಿನ ಕುರುವಳ್ಳಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ ರವರ ಭಾವನಾದ ಸಂತೋಷ್, ಪ್ರಾಯ 28 ವರ್ಷ ಎಂಬವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 04-03-13 ರಂದು ಆತನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಪಾದರ್ ಮುಲ್ಲರ್ ಆಸ್ಪತ್ರೆಗೆ ಫಿರ್ಯಾದುದದಾರರ ಸಂಬಂದಿ ಈಶ್ವರ ಎಂಬವರು ಕರೆದುಕೊಂಡು ಬಂದಿರುತ್ತಾರೆ. ಬೆಳಿಗ್ಗೆ 11-00 ಗಂಟೆಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕುಳ್ಳಿರಿಸಿ ಭಟ್ಕಳದಿಂದ ಬಂದಿದ್ದ ಕಾರನ್ನು ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿ ವಾಪಾಸು ಬಂದು ಸಂತೋಷನನ್ನು ನೋಡಿದಾಗ ಕಾಣೆಯಾಗಿರುತ್ತಾನೆ. ಈ ಬಗ್ಗೆ ಮಂಗಳೂರು ಆಸುಪಾಸಿನಲ್ಲಿ, ಸಂಬಂದಿಕರ ಮನೆಯಲ್ಲಿ ಹಾಗೂ ತೀರ್ಥಹಳ್ಳಿ, ಆತನ ಹೆಂಡತಿ ಮನೆಯಾದ ಭಟ್ಕಳದಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯಲಿಲ್ಲ. ಆದುದರಿಂದ ಕಾಣೆಯಾದ ಸಂತೋಷ್ನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಕಣ್ಣನ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಕ್ರ 54/13 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
ದಿನಾಂಕ: 04-03-2013 ರಂದು ಸಮಯ ಬೆಳಿಗ್ಗೆ ಸುಮಾರು 19.15 ಗಂಟೆಗೆ ಬಸ್ಸು ನಂಬ್ರ ಏಂ- 20 ಂಂ- 2526 ನ್ನು ಅದರ ಚಾಲಕ ಕೈಕಂಬ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸನ್ನು ಹತ್ತಲು ನಿಲ್ಲಿಸಿರುವಾಗ ಪಿರ್ಯಾದುದಾರರಾದ ವರುಣ್ ಡಿ. (16 ವರ್ಷ) ತಂದೆ: ಮನೋಹರ.ಡಿ. ವಾಸ: ದೇವನ್ಯ ಹೌಸ್, ಕೆಂಬಾರ್ 1ನೇ ಕ್ರಾಸ್, ಪಡೀಲ್, ಮಂಗಳೂರು ರವರು ಬಸ್ಸು ಹತ್ತುತ್ತಿದ್ದ ಸಮಯ ಚಾಲಕನು ನಿವರ್ಾಹಕನ ಸೂಚನೆಗೂ ಕಾಯದೆ ನಿರ್ಲಕ್ಷತನದಿಂದ ವೇಗವಾಗಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ಬಸ್ಸಿನಿಂದ ರಸ್ತೆಗೆ ಬಿದ್ದು ತಲೆಗೆ ಗಾಯಗೊಂಡು ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ವರುಣ್ ಡಿ. ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 49/2013 279 , 337 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment