ಹಲ್ಲೆ ಪ್ರಕರಣ
ಬಜಪೆ ಠಾಣೆ
- ದಿನಾಂಕ: 29-03-2013 ರಂದು ರಾತ್ರಿ 9-30 ಗಂಟೆಯಿಂದ 10-30 ಗಂಟೆಯ ಮದ್ಯದ ಅವಧಿಯೊಳಗೆ ಆರೋಪಿಗಳು ಕೃತ್ಯವನ್ನುಂಟು ಮಾಡುವ ಸಮಾನ ಉದ್ದೇಶದಿಂದ ಕಂದಾವರ ಗ್ರಾಮದ ಕಾಮ ಹೌಸ್ ಬಳಿ ಅಕ್ರಮ ಕೂಟ ಸೇರಿ ಫಿರ್ಯಾಧಿದಾರರನ್ನು ಹಗೂ ಅವರೊಂದಿಗೆ ಅವರ ಸಂಬಂಧಿಕರನ್ನು ತಡೆದು ನಿಲ್ಲಿಸಿ, ಫಿರ್ಯಾದಿದಾರರು ಮತ್ತು ಅವರ ತಾಯಿಯವರ ಮೈಗೆ ಕೈ ಹಾಕಿ ಮಾನಭಂಗವನ್ನುಂಟು ಮಾಡಿದ್ದಲ್ಲದೇ ಇತರರಿಗೂ ಕೈಗಳಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆಯನ್ನುಂಟು ಮಾಡಿದ್ದಲ್ಲದೇ ನೀವು ಯಾರು ಬೇವಸರ್ಿಗಳು, ನಮ್ಮ ಊರಿಗೆ ಬಂದು ನಮ್ಮ ಮೇಲೆ ದೂರು ನೀಡುತ್ತೀರಿ ಪೊಲೀಸರನ್ನು ಕರೆದುಕೊಂಡು ಬಂದರೆ, ನಾವು ಹೆದರುತ್ತೇವೆ ಎಂದು ತಿಳಿದಿದ್ದೀರಾ? ದಿಕ್ಕನವರು ಇಷ್ಟು ಇರಬೇಕಿದ್ದರೆ, ಇನ್ನು ಶೆಟ್ಟಿ ಪೂಜಾರಿಯಾದ ನಮಗೆ ಎಷ್ಟಿರಬೇಕು? ಎಂದು ಹೇಳಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಲ್ಲದೇ ಕೆಲವು ಮೋಟಾರು ಸೈಕಲ್ಗಳಿಗೆ ಜಖಂ ಉಂಟು ಮಾಡಿ ನಷ್ಟವನ್ನುಂಟು ಮಾಡಿರುವುದಾಗಿಯೂ, ದಿನಾಂಕ: 28-03-2013 ರಂದು ಫಿರ್ಯಾದಿದಾರರು ತಾನು ಮದುವೆಯಾಗಲಿರುವ ರಜನಿಕಾಂತ ಹಾಗೂ ಅವರ ಸಂಬಂಧಿಕರೊಂದಿಗೆ ಕಂದಾವರ ಬೈಲಿನಲ್ಲಿರುವ ಶ್ರೀ ಧೂಮಾವತಿ ದೈವಸ್ಥಾನದ ನೇಮೋತ್ಸವಕ್ಕೆ ಹೋಗಿ ಅಲ್ಲಿಂದ ವಾಪಾಸು ಮನೆಗೆ ಬರುವಾಗ, ಸಂಶಯದಿಂದ ತಡೆದು ನಿಲ್ಲಿಸಿದ ಆರೋಪಿಗಳು ತದನಂತರ ಫಿರ್ಯಾದಿದಾರರ ಮೊಬೈಲ್ಗೆ ಅಶ್ಲೀಲ ಸಂದೇಶ ರವಾನಿಸಿ, ಫೋನ್ ಕರೆ ಮಾಡಿದ ಬಗ್ಗೆ ವಿಚಾರಿಸಲು ಹೋದಾಗ ಈ ಘಟನೆ ಸಂಭವಿಸಿರುವುದಾಗಿದೆ. ಎಂಬುದಾಗಿ , 29 ಪ್ರಾಯದ ಮಹಿಳೆ ವಾಸ: ಮಂಗಳುರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಅಪರಾದ ಕ್ರಮಾಂಕ 106/2013 ಕಲಂ: 143, 147, 341, 504, 323, 427, 506, 354 ಜತೆಗೆ 149 ಮತ್ತು ಕಲಂ: 3()(ಘಿ) ಖಅ/ಖಖಿ ಂಛಿಣ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವಠಾಣೆ
- ದಿನಾಂಕ: 27-03-2013 ರಂದು ಸಮಯ ಸುಮಾರು 15-30 ಗಂಟೆಗೆ ಅಬ್ದುಲ್ ಅಜೀಜ್ ಎಂಬವರು ತನ್ನ ಬಾಬ್ತು ಮೋ.ಸೈಕಲ್ ನಂಬ್ರ ಏಂ- 20ಗಿ-441 ರಲ್ಲಿ ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಬಟ್ಟಗುಡ್ಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಿಜೈ ಜಂಕ್ಷನ್ ನಲ್ಲಿ ವೃತ್ತ ಬಳಸದೆ ಒಳ ಬದಿಯಿಂದ ಚಲಾಯಿಸಿದಾಗ ಬಿಜೈ ಚಚರ್್ ಹಾಲ್ ಕಡೆಯಿಂದ ಬಟ್ಟಗುಡ್ಡ ಕಡೆಗೆ ಬಿಜೈ ವೃತ್ತ ಬಳಸಿ ಹೋಗುತ್ತಿದ್ದ ಆಕ್ಟೀವ್ ಹೊಂಡಾ ಸ್ಕೂಟರ್ ನಂಬ್ರ ಏಂ- 19ಇಅ-7537 ಕ್ಕೆ ಡಿಕ್ಕಿಯಾಗಿ ಆಕ್ಟೀವ್ ಹೊಂಡಾ ಸವಾರ ಕಿರಣ್ ಯು. ರಾವ್ ರಸ್ತೆಗೆ ಬಿದ್ದು ಬಲತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಕಿರಣ್ ರಾವ್ (40 ವರ್ಷ) ತಂದೆ: ಬಿ.ಪಿ. ಉಮೇಶ್ ರಾವ್, ವಾಸ: 204, ಸೆರನಿಟಿ ಅಪಾಟರ್್ಮೆಂಟ್, ಬಿಜೈ ಚಚರ್್ ಹಾಲ್ ಎದುರು, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಮೊ.ನಂಬ್ರ 64/2013 279,338 ಐ.ಪಿ.ಸಿ. ಮತ್ತು ಆರ್ ಆರ್ ರೂಲ್ 2 ಜೊತೆಗೆ 177 ಮೋ.ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment