ಅಸ್ವಾಭಾವಿಕ ಮರಣ ಪ್ರಕರಣ
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ
ಅಪಘಾತ ಪ್ರಕರಣ
ಮುಲ್ಕಿ ಠಾಣೆ
ಸಂಚಾರ ಪೂರ್ವ ಠಾಣೆ
ವಾಹನ ಕಳವು ಪ್ರಕರಣ
ಬರ್ಕೆ ಪೊಲೀಸ್ ಠಾಣೆ
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ
- ಪಿರ್ಯಾದಿದಾರರಾದ ಶೈಲೇಶ್ ಶೆಟ್ಟಿ ಯವರ ತಂದೆ: ಶಂಭು ಶೆಟ್ಟಿ ಎಂಬವರು ದಿನಾಂಕ: 20.01.2013 ರಂದು ತಮ್ಮ ಮನೆಯಲ್ಲಿ ಬೀಡಿ ಸೇದುತ್ತಿದ್ದ ಸಮಯ ಬೆಂಕಿಯ ಕಿಡಿಯು ಅವರು ಧರಿಸಿದ್ದ ಲುಂಗಿಗೆ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಸದ್ರಿಯವರ ಎರಡೂ ತೊಡೆಗೆ ಗಳಿಗೆ ಹಾಗೂ ಮರ್ಮಾಂಗಕ್ಕೆ ಮತ್ತು ಹೊಟ್ಟೆಗೆ ತೀವ್ರ ಸುಟ್ಟ ಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಘದೆ ದಿನಾಂಕ: 26.02.2013 ರಂದು ರಾತ್ರಿ: 07.30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶೈಲೇಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ. 13/13 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಮುಲ್ಕಿ ಠಾಣೆ
- ದಿನಾಂಕ 27.02.2013 ರಂದು 16.20 ಗಂಟೆಗೆ ಮಂಗಳೂರು ತಾಲೂಕು ಬೆಳ್ಳಾಯೂರು ಗ್ರಾಮದ ಕೊಲ್ನಾಡು ಎಂಬಲ್ಲಿ ಎನ್.ಎಚ್ 66ರಲ್ಲಿ ಕೆಎ 18 ಬಿ.1422 ನಂಬ್ರದ ಕೆ.ಕೆ.ಬಿ ಎಂಬ ಹೆಸರಿನ ಬಸ್ಸನ್ನು ಅದರ ಚಾಲಕ ನಾಗೇಶ್ ಎಂಬಾತನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ ಬರುತ್ತಿದ್ದ ಕೆಎ 20 ಬಿ. 8345 ನಂಬ್ರದ ಗೂಡ್ಸ್ ಟೆಂಪೋಗೆ ಢಿಕ್ಕಿ ಪಡಿಸಿದ ಪರಿಣಾಮ ಗೂಡ್ಸ್ ಟೆಂಪೋ ಚಾಲಕ ರಾಜೇಶ್ರವರ ಎರಡು ಕಾಲುಗಳಿಗೆ ಗಾಯವಾಗಿದ್ದು ಹಾಗೂ ಫಿರ್ಯಾದಿ ಪ್ರದೀಪರವರ ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವುಂಟಾಗಿದ್ದು ಅಲ್ಲದೇ ಬಸ್ಸಿನಲ್ಲಿದ್ದ ಪ್ರಯಾಣಿಕರೋರ್ವರವರಿಗೂ ಕೂಡಾ ಕಣ್ಣಿನ ಬಳಿ ಚಿಕ್ಕ ರಕ್ತಗಾಯವಾಗಿರುತ್ತದೆ ಎಂಬುದಾಗಿ ಪ್ರದೀಪ್ ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ 32/2013 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ
- ದಿನಾಂಕ: 26-02-2013 ರಂದು ಸಮಯ ಬೆಳಿಗ್ಗೆ ಸುಮಾರು 06:15 ಗಂಟೆಗೆ ಸ್ಕೂಟರ್ ನಂಬ್ರ ಏಂ -20 ಘಿ-3080 ನ್ನು ಅದರ ಸವಾರ ಕ್ಲಾಕ್ ಟವರ್ ಕಡೆಯಿಂದ ಬಾವುಟಗುಡ್ಡ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಕರ್ಾರಿ ವೆನ್ಲಾಕ್ ಆಸ್ಪತ್ರೆ ಬಳಿ ತಲುಪುವಾಗ ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಾದ ಅಬ್ದುಲ್ ರಜಾಕ್ (48) ತಂದೆ- ಬಾಪು ಕುಂಜ್ಙ ವಾಸ : ಗುಡ್ಡೆ ಹೌಸ್, ಉಚ್ಚಿಲ, ಸೋಮೆಶ್ವರ, ಉಚ್ಚಿಲ ಅಂಚೆ, ಮಂಗಳೂರು ರವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಹಣೆಯ ಎಡಭಾಗಕ್ಕೆ ರಕ್ತಗಾಯವಾಗಿ ದೇಹದ ಅಲ್ಲಲ್ಲಿ ಗುದ್ದಿದ ನೋವಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿವುದಾಗಿದೆ ಹಾಗೂ ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಅಬ್ದುಲ್ ರಜಾಕ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 43/2013 279 , 337 ಐ.ಪಿ.ಸಿ. & 134 (ಬಿ) ಐ.ಎಮ್.ವಿ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ಬರ್ಕೆ ಪೊಲೀಸ್ ಠಾಣೆ
- ಪಿರ್ಯಾದಿದಾರರಾದ ಶ್ರೀ.ದೀಪಕ್ ಬಿ(28) ರವರು ತನ್ನ ಬಾಬ್ತು ಏಂ-50 ಎ- 6895ನೇ ನಂಬ್ರದ ಕಣಟಚಿಡಿ ಮೋಟಾರು ಸೈಕಲ್ನ್ನು ದಿನಾಂಕ 22-02-2013ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ಎಸ್.ಡಿ.ಎಂ. ಕಾಲೇಜಿನ ಎದುರುಗಡೆ ಇರುವ ವೆಸ್ಟ್ ಕೊಸ್ಟ್ ಲಾಡ್ಜ್ನ ಎದುರು ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ಮಾಡಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲ್ನ ಮೌಲ್ಯ ಅಂದಾಜು ರೂ. 43,000/- ಆಗಬಹುದು ಎಂಬುದಾಗಿ ಶ್ರೀ.ದೀಪಕ್ ಬಿಬಿ(28) ತಂದೆ: ಬಸವರಾಜು, ವಾಸ:ಗೌಡ್ರಮನೆ, ಹಿತೇರ್,ಸಕಲೇಶ್ಪುರ ಹಾಸನ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಮೊನಂ. 13/2013 ಕಲಂ. 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment