ಕೊಲೆ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 03-02-2013 ರಂದು ಠಾಣಾ ಪಿಸಿಆರ್ ವಾಹನ 1ನೇ ದರಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ, ಸುಮಾರು 09-00 ಗಂಟೆಗೆ ನಗರದ ನಿಸ್ತಂತು ಕೊಠಡಿಯಿಂದ ಮಂಗಳೂರು ನೆಹರು ಮೈದಾನದ ಕಾಪರ್ೊರೇಶ್ನ ಬ್ಯಾಂಕಿನ ಪಾಕರ್ಿನ ಪಕ್ಕಕ್ಕೆ ಹೋಗುವಂತೆ ತಿಳಿಸಿದ ಮೇರೆಗೆ ಫಿಯರ್ಾದುದಾರರು ನೆಹರು ಮೈದಾನದ ಕಾಪರ್ೊರೇಶನ್ ಬ್ಯಾಂಕಿನ ಪಾಕರ್ಿನ ಬಳಿ ಸುಮಾರು 50 ಅಡಿ ದೂರದ ದಕ್ಷಿಣ ದಿಕ್ಕಿನಲ್ಲಿರುವ ಕ್ರಿಕೆಟ್ ಪಿಚ್ನ ಬಳಿಗೆ ಹೋಗಿ ನೋಡಲಾಗಿ, ಅಲ್ಲಿ ಓರ್ವನು ಕ್ರಿಕೆಟ್ ಪಿಚ್ನಲ್ಲಿ ಅಂಗಾತನೆ ಮೈಮೇಲೆ ತಲೆಯಿಂದ ಕಾಲಿನ ವರೆಗೆ ಕಂಬಳಿಯನ್ನು ಹೊದ್ದು ಕೊಂಡು ಮಲಗಿದ್ದವನ ಮುಖದ ಮೇಲಿರುವ ಕಂಬಳಿಯನ್ನು ಸರಿಸಿ ನೋಡಿದಾಗ, ಆತನ ಹಣೆಯ ಎಡ ಭಾಗಕ್ಕೆ ಮೇಲ್ಗಡೆ ತೀವ್ರ ತರಹದ ರಕ್ತ ಗಾಯವಾಗಿದ್ದು, ಸದ್ರಿ ಗಾಯದಿಂದ ಈತನು ಹೊದ್ದು ಕೊಂಡಿದ್ದ ಕಂಬಳಿ, ತಲೆ, ಮುಖವು ಸಂಪೂರ್ಣ ರಕ್ತಸಿಕ್ತವಾಗಿರುವುದು ಕಂಡು ಬಂದಿರುತ್ತದೆ. ಸದ್ರಿ ಗಂಭೀರ ಗಾಯವು ಮೇಲ್ನೊಟ್ಟಕ್ಕೆ ನೋಡಿದಾಗ, ದಿನಾಂಕ 02-02-2013 ರಿಂದ ದಿನಾಂಕ 03-02-2013 ರ ಮಧ್ಯೆ ರಾತ್ರಿ ವೇಳೆಯಲ್ಲಿ ಯಾರೋ ದುಷ್ಕಮರ್ಿಗಳು ಹರಿತವಾದ ಆಯುಧವನ್ನು ಬಳಸಿ ಈತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಮೃತ ವ್ಯಕ್ತಿ ಅಪರಿಚಿತನಾಗಿದ್ದು, ಈತನ ವಾರಿಸುದಾರರನ್ನು ಪತ್ತೆ ಮಾಡಿ ಈತನ ಮೃತ ದೇಹದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಫಿಯರ್ಾದುದಾರರಾದ ಹರಿಶ್ಚಂದ್ರ ಸಿಹಚ್ಸಿ 799 ದಕ್ಷಿಣ ಪೊಲೀಸ್ ಠಾಣೆ ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 33/13 ಕಲಂ 302 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 02-02-2013 ರಂದು ಸಮಯ ಸುಮಾರು 12.30 ಗಂಟೆಗೆ ಸ್ಕಾಪರ್ಿಯೊ ಕಾರು ನಂಬ್ರ ಏಂ-19 ಒಃ- 2218 ನ್ನು ಅದರ ಚಾಲಕರು ಬಲ್ಮಠ ಸರ್ಕಲ್ ಕಡೆಯಿಂದ ಕದ್ರಿ - ಶಿವಭಾಗ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಎಸ್ಸಿಎಸ್ ಆಸ್ಪತ್ರೆ ಎದುರು ತಲುಪುವಾಗ ನಿರ್ಲಕ್ಷತನದಿಂದ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಸ್ಕಾಪರ್ಿಯೊ ಕಾರಿನ ಹಿಂದಿನಿಂದ ಅಂದರೆ, ಬಲ್ಮಠ ಸರ್ಕಲ್ ಕಡೆಯಿಂದ ಪಿರ್ಯಾದುದಾರರ ಮಗ ಕೀರ್ತನ್ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೊ,ಸೈಕಲ್ ನಂ ಏಂ-19 ಇಈ- 5646 ರ ಹಿಂಭಾಗಕ್ಕೆ ಸ್ಕಾಪರ್ಿಯೊ ಡಿಕ್ಕಿಯಾದ್ದರಿಂದ ಕೀರ್ತನ್ ಮೊ,ಸೈಕಲ್ ರಸ್ತೆಗೆ ಬಿದ್ದು ಬಲಕಾಲಿನ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಇಂದಿರಾ ಗಣಪತಿ ಭಟ್ (47) ಗಂಡ: ಗಣಪತಿ ಭಟ್, ವಾಸ: ಶಿತಿಜ ಹೌಸ್, ತಾರೆತೋಟ, ಶಿವಭಾಗ್ 1 ನೇ ಕ್ರಾಸ್, ಮಂಗಳೂರು ರವರು ನಿಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 25/2013 279 , 338 ಐ.ಪಿ.ಸಿ.ಕಾಯ್ದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುರತ್ಕಲ್ ಠಾಣೆ;
- ದಿನಾಂಕ 30-01-2013 ರಂದು ಬೆಳಿಗ್ಗ 11-30 ಗಂಟೆಗೆ ಕಾರು ಕೆ..ಎ 19 ಎಂ.ಎನ್ 77ನೇಯದರ ಚಾಲಕ ಹರೀಶ್ ರೈ ಕಾರನ್ನು ಪಣಂಬೂರು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶೆಟ್ಟಿ ಐಸ್ ಕ್ರೀಂ ಬಳಿ ರಸ್ತೆ ದಾಟುತ್ತಿದ್ದ ಚಂದ್ರನ್ ಎಂಬವರಿಗೆ ಢಿಕ್ಕಿ ಮಾಡಿದ ಪರಿಣಾಮ ಸಾಮನ್ಯ ಸ್ವರೂಪದ ಗಾಯವಾಗಿರುತ್ತದೆ ಎಂಬುದಾಗಿ ಜಲಜ ಗಂಡ: ರಾ,ಮಚಂದ್ರನ್ ವಾಸ: ರೀಜೆಂಟ್ ಪಾಕರ್್, ಹೊಸಬೆಟ್ಟು, ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ 30/2013 ಕಲಂ 279, 337 ಐಪಿಸಿ ಅಪರಾದ ಕ್ರಮಾಂಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಕಲಿ ಪಾಸಪೋಟರ್್ದಾರನ ಬಂಧನ:
ಬಜಪೆ ಠಾಣೆ ;
- ದಿನಾಂಕ 03/02/2013 ರಂದು ಹಾಸನ ಜಿಲ್ಲೆಯ ಕಸಬ ಹೋಬಳಿ ಸಾಲಗಾಮ ರಸ್ತೆ ರಂಗೋಳಿ ಹಳ್ಳಿ ವೀರಪ್ಪ ಎಂಬವರ ಮಗ ವೀರಪ್ಪ ಸತೀಶ್ ಪ್ರಾಯ 47 ವರ್ಷ ಎಂಬವರು ಬಸವರಾಜ್ ಪಾಲಾಕ್ಷ ತಂದೆ: ಬಸವರಾಜ ಮನೆ ನಂಬ್ರ 36/2, ಲಾಲ್ಭಾಗ್ ಕ್ರಾಸ್, ಬ್ಲಾಕ್ ನಂಬ್ರ 52, ಬೆಂಗಳೂರು ಇವರ ಪಾಸ್ಫೋಟರ್್ ನಂಬ್ರ ಉ 9936480 ನ್ನು ಉಪಯೋಗಿಸಿ ನ್ಶೆಜ ಪಾಸ್ಫೋಟರ್್ ಬದಲಿಗೆ ತನ್ನ ಹೆಸರನ್ನು ಹಾಗೂ ಫೋಟೋವನ್ನು ಲಗತ್ತಿಸಿ ನಕಲಿ ಪಾಸ್ಪೋಟರ್್ ಮಾಡಿ ಕಾನೂನು ಬಾಹಿರವಾಗಿ ಉಪಯೋಗಿಸಿಕೊಂಡು ಭಾರತದಿಂದ ವಿದೇಶಕ್ಕೆ ಪ್ರಯಾಣಿಸಲು ಉಪಯೋಗಿಸಿಕೊಂಡಿರುವುದಾಗಿ ಎಂಬುದಾಗಿ ಫಿರ್ಯಾದಿದಾರರಾದ ಕೆ.ಎಂ. ಚಂದ್ರಶೇಖರ್, ಇಮ್ಮಿಗ್ರೇಶನ್ ಅಧಿಕಾರಿ, ಮಂಗಳೂರು, ಬಜ್ಪೆ. ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 28/2013 ಕಲಂ 12 (ಸಿ)(ಡಿ)(ಇ) ಪಾಸ್ಫೋಟರ್್ ಆ್ಯಕ್ಟ್ 1967 ಮತ್ತು ಕಲಂ 419, 467, 471 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment