ಕಳವು ಪ್ರಕರಣ:
ದಕ್ಷಿಣ ಠಾಣೆ ;
- ದಿನಾಂಕ 01/02-02-2013 ರಂದು ರಾತ್ರಿ ವೇಳೆ ಯಾರೋ ಕಳ್ಳರು ಮಂಗಳೂರು ನಗರದ ಹೊಯ್ಗೆ ಬಜಾರ್ ಎಂಬಲ್ಲಿರುವ ಫಿಯರ್ಾದುದಾರರ ಬಾಬ್ತು ಹುದೈಪ ಮೊಬೈಲ್ ಎಂಬ ಹೆಸರಿನ ಅಂಗಡಿಯ ಮಾಡಿನ ಹಂಚನ್ನು ತೆಗೆದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ ಕಂಪ್ಯೂಟರ್, ಮೊಬೈಲ್ ಫೋನು, ಮೊಬೈಲ್ ಬ್ಯಾಟರಿ, ಹೆಡ್ ಫೋನು ಮತ್ತು ಕಲವು ಕಾಗದ ಪತ್ರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ ರೂ 23,500/- ಆಗಬಹುದು ಎಂಬುದಾಗಿ ಫಿಯರ್ಾದುದಾರರಾದ ಮಹಮ್ಮದ್ ಶರೀಫ್ (31), ತಂದೆ: ಅಬ್ಬಾಸ್ ಬ್ಯಾರಿ, ವಾಸ: ಸೈದು ಮಂಝಿಲ್, ಮಾರಿಗುಡಿ ಕ್ರಾಸ್ ರೋಡ್, ಬೋಳಾರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 31/13 ಕಲಂ 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 01/02/2013 ರ ರಾತ್ರಿ ಸಮಯ ಮಂಗಳೂರು ನಗರದ ಕಂಕನಾಡಿ ಗ್ರಾಮದ ಕಪಿತಾನಿಯೋ ರಸ್ತೆಯ ಕರಾವಳಿ ಟ್ರೇಡರ್ಸ್ ಎಂಬ ಹಾಡರ್್ವೇರ್ ಅಂಗಡಿಯ ಶೆಟ್ಟರ್ ಬಾಗಿಲಿಗೆ ಹಾಕಿರುವ ಬೀಗವನ್ನು ಬಾಗಿಲನ್ನು ಯಾರೋ ಕಳ್ಳರು ಯಾವುದೋ ಬಲವಾದ ಆಯುದದಿಂದ ಬೀಗ ತೆರೆದು ಅಂಗಡಿಯೊಳಗಡೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಂಖಏ, ಎಂಐ, ಎಂಕಿಗಂಖ ಕಂಪನಿಯ ಸ್ಟೀಲ್ ಕೋಟೆಡ್ ಹಿತ್ತಾಳೆಯ ಟ್ಯಾಪ್ಗಳು -150 ಖಿಊಔಖಊಃಂ ಕಂಪನಿಯ ಲ್ಯಾಪ್ಟಾಪ್,ಊಖಿಂಅಊ ಕಂಪನಿಯ ಡ್ರಿಲಿಂಗ್ ಮೆಷಿನ್-2 ಂಒಆ ಕಂಪನಿಯ ಯು.ಪಿ.ಎಸ್-1, ನಗದು ಹಣ -1000/- ನ್ನು ಕಳವು ಮಾಡಿರುವುದಾಗಿ ಹಾಗೂ ಕಳು ಆದ ಸೊತ್ತು ಹಾಗೂ ನಗದು ಹಣ ಒಟ್ಟು ಅಂದಾಜು ಮೌಲ್ಯ 95000/- ಆಗಬಹುದು ಎಂಬುದಾಗಿ ಶ್ರೀವತ್ಸ ಭಟ್(30) ತಂದೆ: ದಿ. ಬಾಲಕೃಷ್ಣ ಭಟ್ ಕರಾವಳಿ ಟ್ರೇಡರ್ಸ್ ಕಪಿತಾನಿಯೋ ರೋಡ್ ಕಂಕನಾಡಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 21/13 ಕಲಂ: 457, 380 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 01-02-2013 ರಂದು ಸಮಯ ಸುಮಾರು 13.00 ಗಂಟೆಗೆ ಸ್ಕೂಟರ್ ನಂಬ್ರ ಏಂ-19 ಇಈ- 9983 ನ್ನು ಅದರ ಸವಾರರು ಸೆಂಟ್ ಅಗ್ನೇಸ್ ಸರ್ಕಲ್ ಕಡೆಯಿಂದ ಬೆಂದೂರ್ವೆಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸೆಬಾಸ್ಟಿಯನ್ ಹಾಲ್ ಎದುರು ತಲುಪುವಾಗ ಪಿರ್ಯಾದುದಾರರ ಜೊತೆ ರಸ್ತೆ ದಾಟಲು ನಿಂತಿದ್ದ ಶ್ರೀಮತಿ ಪುಷ್ಪಾವತಿ ಎಂಬವರಿಗೆ ಡಿಕ್ಕಿಯುಂಟು ಮಾಡಿದ ಶ್ರೀಮತಿ ಪುಷ್ಪಾವತಿ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಎಡಪಕ್ಕೆಗೆ ಗುದ್ದಿದ ಗಾಯವಾಗಿ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುರೇಶ್ ಶೆಟ್ಟಿ (43) ತಂದೆ: ದಿ.ಸೀತಾರಾಮ ಶೆಟ್ಟಿ, ವಾಸ: ಪಡ್ಯಾರ್ ಹೌಸ್, ಅಂಬ್ಲಮೊಗರು ಅಂಚೆ ಮತ್ತು ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವಠಾಣೆ ಅಪರಾದ ಕ್ರಮಾಂಕ 24/2013 279 , 338 ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಉಳ್ಳಾಲ ಠಾಣೆ
- ದಿನಾಂಕ 17/01/2013 ರಂದು ಸಂಜೆ 4-30 ಗಂಟೆಗೆ ಆರೋಪಿಯು ಕೋಟೆಕಾರು ಗ್ರಾಮದ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಕ್ಯಾಂಟೀನ್ಗೆ ಬಂದು ಸದ್ರಿ ಕ್ಯಾಂಟೀನ್ ಕ್ಲೀನಿಂಗ್ ಕೆಲಸದಲ್ಲಿ ತೊಡಗಿದ್ದ ಪಿಯರ್ಾದಿದಾರರನ್ನು ಅಕ್ರವಮವಾಗಿ ತಡೆದು ನಿಲ್ಲಿಸಿ ಬ್ಯಾವಸರ್ಿ ರಂಡೆ ಈ ಬಾರಿ ತಿರುಗುವನಾ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬಯದು ಕೈಯಿಂದ ಕೆನ್ನೆಗೆ ಬಲವಾಗಿ 2-3 ಪೆಟ್ಟು ಹೊಡೆದ ಪರಿಣಾಮ ಪಿಯರ್ಾದಿದಾರರ ಎಡ ಕೆನ್ನೆಯ ಭಾಗಕ್ಕೆ ಗಾಯವಾಗಿರುತ್ತದೆ ಇತ್ಯಾದಿ ಈ ತಕ್ಷೀರಿಗೆ ಕಾರಣವೇನೆಂದರೆ ಆರೋಪಿಯು ಪಿಯರ್ಾದಿದರರ ಗಮಡನಾಗಿದ್ದು, ಆತನು ಶಬರಿಮಲೆ ಯಾತ್ರೆಗೆ ಹೋದ ಸಮಯದಲ್ಲಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಎಂಬವರ ಜೊತೆಯಲ್ಲಿ ಪರಿಚಯದ ಐರಿನ್ ಎಂಬವರ ಮನೆಗೆ ಹಬ್ಬದ ಊಟಕ್ಕೆ ಹೋದ ವಿಚಾವನ್ನು ತಿಳಿದುಕೊಂಡು ತಪ್ಪು ಅಭಿಪ್ರಾಯ ಹಾಗೂ ಸಂಶಯಗೊಂಡು ಈ ಕೃತ್ಯ ಎಸಗಿರುವುದಾಗಿದೆ ಎಂಬುದಾಗಿ ಪಿ.ಕೆ. ಗಿರಿಜಾ ಪ್ರಾಯ 23 ವರ್ಷ, ತಂದೆ: ಕೇಶವ ವಾಸ: ಪಲ್ಲಸೈಟ್ ಹೌಸ್, ಬೋಳಿಯಾರ್, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 33/2012 ಕಲಂ 341, 323, 504, 506 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment