Tuesday, February 12, 2013

Daily Crime Incidents for Feb 12, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 08-02-2013 ರಂದು ಸಮಯ ಸುಮಾರು 21.00 ಗಂಟೆಗೆ ಅಟೊರಿಕ್ಷಾ ನಂಬ್ರ ಏಂ- 19 ಆ- 6081 ನ್ನು ಅದರ ಚಾಲಕ ಕೃಷ್ಣರವರು ಬಿಕರ್ನಕಟ್ಟೆ ಕೈಕಂಬ  ಕಡೆಯಿಂದ ಕುಲಶೇಖರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಶಕ್ತಿನಗರ ಕ್ರಾಸ್ ಬಳಿ ತಲುಪುವಾಗ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ, ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ-ಕೈಕಂಬ ಕಡೆಗೆ ರಾಜು ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ಸುದರ್ಶನ್  (26) ತಂದೆ : ದಿ.ಜಯಂತ್ ವಾಸ: ಸರಸ್ವತಿ ನಗರ, ಸರಿಪಳ್ಳ, ಪಡೀಲ್ ಅಂಚೆ, ಮಂಗಳೂರು ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನೊಂದಣಿಯಾಗದ ಹೊಸ ಮೊ,ಸೈಕಲ್ (ಚಾಸಿಸ್ ನಂಬ್ರ ಒಇ145509602013874) ಕ್ಕೆ ಅಟೊರಿಕ್ಷಾ ಡಿಕ್ಕಿಯಾಗಿ ರಾಜು ಮತ್ತು ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಮುಖಕ್ಕೆ ಮತ್ತು ಕೈಗಳಿಗೆ ತರಚಿದ ಗಾಯ ಹಾಗೂ ಎದೆಗೆ ಗುದ್ದಿದ ಗಾಯವಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಸುದರ್ಶನ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 30/13 279 , 337,  ಐ.ಪಿ.ಸಿ.ಕಾಯ್ದೆ ಮತ್ತು 134 (ಬಿ) ಮೋ.ವಾ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಜಯರಾಮ ಶೆಟ್ಟಿ ತಂದೆ : ದಿ ದೂಮ ಶೆಟ್ಟಿ ಕಣ್ಣೂರು ಮಂಗಳೂರು ರವರು ದಿನಾಂಕ 10-02-2013 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ತನ್ನ ಸ್ನೇಹಿತನೊಂದಿಗೆ ಕಣ್ಣೂರು ಬಸ್ ಸ್ಟಾಪ್ ಬಳಿ ಮತಾಡುತ್ತಾ ನಿಂತುಕೊಂಡಿರುವಾಗ ಬಿಸಿ ರೋಡ್ ಕಡೆಯಿಂದ ಮೋಟಾರು ಸೈಕಲೊಂದು ಅತೀವೇಗವಾಗಿ ಮಂಗಳೂರು ಕಡೆಗೆ ಸಾಗಿದ್ದು, ಸ್ವಲ್ಪ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಸವಾರನ ಹತೋಟಿ ತಪ್ಪಿ ಬಿದ್ದದ್ದನ್ನು ನೋಡಿ ಪಿಯರ್ಾದಿದಾರರು ಮತ್ತು ಅವರ ಗೆಳೆಯ ಹೋಗಿ ನೋಡಿದಾಗ ಬೈಕಿನ ಹಿಂಬದಿ ಸವಾರರಾಗಿದ್ದ ಹೆಂಗಸಿಗೆ ಮೂಗು, ಹಣೆಗೆ ಗಾಯಗಳಾಗಿ ರಕ್ತ ಬರುತ್ತಿದ್ದು, ವಿಚಾರಿಸಲಾಗಿ ಅವರಿಬ್ಬರೂ ಗಂಡ ಹೆಂಡತಿಯರಾಗಿದ್ದು, ಬೈಕ್ ಸವಾರನ ಹೆಸರು ನರೇಶ್ ಮತ್ತು ಹೆಂಗಸು ಗೀತಾ ಎಂಬುದಾಗಿ ತಿಳಿಯಿತು. ಗಾಯಗೊಂಡ ಗೀತಾರವರನ್ನು ಪಿಯರ್ಾದಿದಾರರು ಮತ್ತು ಅವರ ಗೆಳೆಯ ಸೇರಿಕೊಂಡು ಆಸ್ಪತ್ರೆಗೆ ಕಳುಹಿಸಿದ್ದು, ಬೈಕಿನ ನಂಬ್ರ ಕೆಎ 19 ಇಇ 1275 ಹಿರೋಹೋಂಡಾ ಆಗಿರುತ್ತದೆ. ಈ ಅಪಘಾತಕ್ಕೆ ಬೈಕ್ ಸವಾರ ತನ್ನ ಬಾಬ್ತು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಜಯರಾಮ ಶೆಟ್ಟಿ ತಂದೆ : ದಿ ದೂಮ ಶೆಟ್ಟಿ ಕಣ್ಣೂರು ಮಂಗಳೂರು ರವರು ನೀಡಿದ ದೂರಿನಂತೆ  ಮಂ. ಗ್ರಾಮಾಂತರ ಠಾಣೆ ಅ.ಕ್ರ 37/2013 ಕಲಂ 279 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ   30-01-13 ರಂದು ಮಂಗಳೂರು ನಗರದ ಸ್ಟೇಟ್ಬ್ಯಾಂಕ್ ರಸ್ತೆ ಬದಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಯ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯನ್ನು 108 ಅಂಬ್ಯುಲೆನ್ಸ್ ವಾಹನದ ಮೂಲಕ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು, ಈದಿನ ದಿನಾಂಕ       11-02-2013 ರಂದು ಬೆಳಿಗ್ಗೆ 5-45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತರ ಮೈಮೇಲೆ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲ.  ಮೃತರು ಅಪರಿಚಿತರಾಗಿದ್ದು, ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ವೆನ್ಲಾಕ್ ಒ.ಪಿ.ಕರ್ತವ್ಯದಲ್ಲಿದ್ದ ಪಿರ್ಯಾದುದಾರರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ:  13/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಶ್ರೀಮತಿ ವಿನೋದ ಗಂಡ ರಾಮ ಅಡ್ಯಾರ್ ಕೆಮಂಜೂರು ಅಡ್ಯಾರ್ ಮಂಗಳೂರು ರವರ ಗಂಡ ರಾಮ ಎಂಬವರು ದಿನಾಂಕ 10-01-2013 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಸುಮರು 6-00 ಗಂಟೆಗೆ ವಿಪರೀತ ಶರಾಬು ಕುಡಿದು ಮನೆಗೆ ಬಂದು ಊಟ ಮಾಡದೆ ಮಲಗಿದವರು ರಾತ್ರಿ ಸುಮಾರು 8-30 ಗಂಟೆಗೆ ನರಳುತ್ತಿರುವವರನ್ನು  ಪಿಯರ್ಾದಿದಾರು ಹೋಗಿ ನೋಡಿದಾಗ ಅವರ ಹತ್ತಿರದಲ್ಲಿ ಕೃಷಿಗೆ ಹಾಕುವ ಕೀಟನಾಶಕದ ಬಾಟಲಿ ಇದ್ದು, ಬಾಟಲಿಯನ್ನು ಸರಿಯಾಗಿ ಪರಿಶೀಲಿಸಿದಾಗ ಅದು ವಿಷದ ಬಾಟಲಿಯಾಗಿದ್ದು, ಖಾಲಿಯಾಗಿದ್ದು, ರಾಮರವರು ವಿಷವನ್ನು ಸೇವಿಸಿರುವುದು ಗೊತ್ತಾಗಿ, ಅವರನ್ನು ಪಿಯರ್ಾದಿದಾರರು ಮತ್ತು ಅವರ ತಂಗಿಯ ಗಂಡ ಸೇರಿ ಕಂಕನಾಡಿ ಪಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸೇರಿಸಿದ್ದು, ಈ ದಿನ ದಿನಾಂಕ 11-02-2013 ರಂದು ಬೆಳಿಗ್ಗೆ 5-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಪಿಯರ್ಾದಿದಾರರ ಗಂಡ ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೃತ ಶರೀರವನ್ನು ಬಿಟ್ಟುಕೊಡಬೇಕಾಗಿ ವಿನೋದ ರವರು ನೀಡಿದ ದೂರಿನಂತೆ ಮಂ. ಗ್ರಾಮಾಂತರ ಠಾಣೆ ಯುಡಿಆರ್ ನಂಬ್ರ  11/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 10-2-2013 ರಂದು ರಾತ್ರಿ ಸುಮಾರು 12 ಗಂಟೆಯ ಸಮಯಕ್ಕೆ ಆರೋಪಿಗಳು, ಪಿಯರ್ಾದುದಾರರಾದ ಸಂಜೀವ ತಂದೆ : ನಾರಾಯಣಪ್ಪ ಕೋಟಿಮುರ ಪದವು ಮಂಗಳೂರು ರವರ ಮಗನಾದ  ರಜನೀಶ್ ಎಂಬವರನ್ನು ಹುಡುಕಿಕೊಂಡು ಪಿಯರ್ಾದುದಾರರ ಮನೆಗೆ ಬಂದವರು, ಮನೆಯೊಳಗೆ ಅಕ್ರಮ ಪ್ರವೇಶಿಸಿ ಆತನನ್ನು ಹುಡುಕುವಾಗ ಪಿಯರ್ಾದುದಾರರರು ಆಕ್ಷೇಪಿಸಿದಕ್ಕೆ, ಅವರನ್ನು ಆರೋಪಿಗಳು ಮನೆಯಿಂದ ಹೊರಗೆ ಎಳೆದು ತಂದು, ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ, ಆಗ ತಡೆಯಲು ಬಂದ ಅವರ ಮಗ ರತೀಶ್ನಿಗೆ ಕೂಡಾ ಅವರೆಲ್ಲರು ಕೈಯಿಂದ ಹೊಡೆದು,  ಪ್ರಸನ್ನ ಎಂಬವನು ಕಲ್ಲಿನಿಂದ ರತೀಶನ ತಲೆಗೆ ಹೊಡೆದು ಗಾಯಗೊಳಿಸಿರುತ್ತಾರೆ. ಅವಿನಾಶ ಎಂಬವನು ಆತನಿಗೆ ತುಳಿದು ಕೆಳಗೆ ಬೀಳಿಸಿ ತುಳಿಯುವಾಗ, ಪಿಯರ್ಾದುದಾರರ ಹೆಂಡತಿ ಚಂದ್ರಾವತಿ ಎಂಬವರು ತಡೆಯಲು ಬಂದಾಗ ಅವರಿಗೆ ಕೂಡಾ ಅವಿನಾಶನು ಮುಖಕ್ಕೆ ಗುದ್ದಿರುತ್ತಾನೆ. ಅಲ್ಲದೇ ಸದ್ರಿ ಆರೋಪಿಗಳು ರಜನೀಶನನ್ನು ತೋರಿಸಿಕೊಡದಿದ್ದರೆ, ನಿಮ್ಮೆಲ್ಲರ ಕೈಕಾಲುಗಳನ್ನು ಮುರಿದು ಹಾಕುವುದಾಗಿ ಬೆದರಿಕೆ ಹಾಕಿ ಅವರುಗಳು ಬಂದ ಆಟೋರಿಕ್ಷದಲ್ಲಿ ಅಲ್ಲಿಂದ ಹೋಗಿರುತ್ತಾರೆ. ಈ ಘಟನೆಯ ಕಾರಣ ಸದ್ರಿ ಮೂವರಿಗೆ ಗಾಯ ಮತ್ತು ಜಖಂಗಳಾಗಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಸಂಜೀವ ತಂದೆ : ನಾರಾಯಣಪ್ಪ ಕೋಟಿಮುರ ಪದವು ಮಂಗಳೂರು ರವರು ನೀಡಿದ ದೂರಿನಂತೆ ಮಂ. ಗ್ರಾಮಾಂತರ ಠಾಣೆ ಅ.ಕ್ರ 37/2013 ಕಲಂ 448, 323, 324, 506, ಖ/ತಿ 34 ಕಅ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಪೊಲೀಸ್ ಠಾಣೆ


  • ದಿನಾಂಕ 11/02/2013 ರಂದು 21-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಪ್ರಕಾಶ್ ಕರ್ಕೆರಾ ಪ್ರಾಯ: 28 ಮೊಗವೀರಪಟ್ನ ಉಳ್ಳಾಲ ಮಂಗಳೂರು ರವರು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಕೋಟೆಪುರ, ಲಾಂಚ್ಚಿ-ಜಟ್ಟಿ (ದೋಣಿಯನ್ನು ನಿಲ್ಲಿಸುವ ಸ್ಥಳ) ಎಂಬಲ್ಲಿ ದೋಣಿ ಕಾಯುತ್ತಿರುವ ಸಮಯ ಅವರಿಗೆ ಮುಖಪರಿಚಯ ವಿರುವ ಒಬ್ಬ ವ್ಯಕ್ತಿ ಬಂದು " ನೀನು ನನ್ನ ಮೊಬೈಲ್‌ ಕಳವು ಮಾಡಿದ್ದಿಯಾ ಎಂದು ಕೇಳಿದ್ದು, ಪಿರ್ಯಾದಿಯು ಅದನ್ನು ನಿರಾಕರಿಸಿದಾಗ ಆತ ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೇ ಇದ್ದ ಮೀನು ರಾಶಿ ಹಾಕಲು ಉಪಯೋಗಿಸುವ ಮರದ ಹಿಡಿಯಿರುವ ಕಬ್ಬಿಣ ಕೊಕ್ಕೆಯಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಉಂಟುಮಾಡಿ ಕೈಯಿಂದ ಬೆನ್ನಿಗೆ ಹೊಡೆದು ಗಾಯಗೊಳಿಸಿದನು. ಪಿರ್ಯಾದಿಯ ಬೊಬ್ಬೆ ಕೇಳಿದ ಆತ ಅಲ್ಲಿಂದ ಓಡಿಹೋಗಿದ್ದು, ಪಿರ್ಯಾದಿಯು ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪ್ರಕಾಶ್ ಕರ್ಕೆರಾ  ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸು ಠಾಣಾ ಅ.ಕ್ರ. 45/2013 ಕಲಂ: 504, 323, 324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



No comments:

Post a Comment