ವಾಹನ ಕಳವು ಪ್ರಕರಣ
ಉತ್ತರ ಠಾಣೆ;
- ದಿನಾಂಕ 24-02-2013 ರಂದು ಬೆಳಿಗ್ಗೆ 6:30 ಗಂಟೆಗೆ ತನ್ನ ಬಾಬ್ತು ಏಂ-19-ಖ-599 ನೇ ಟಿವಿಎಸ್ ವಿಕ್ಟರ್ ವಾಹನವನ್ನು ಯುನೈಟೆಡ್ ಪ್ಲಾಝಾ, ಭವಂತಿ ಸ್ಟ್ರೀಟ್ ಇಲ್ಲಿನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿ ಗೆಳೆಯರೊಂದಿಗೆ ಪಿಕ್ ನಿಕ್ ಸಲುವಾಗಿ ಕೇರಳದ ಕಣ್ಣನ್ನೂರಿಗೆ ಹೋಗಿದ್ದು, ಬಳಿಕ ರಾತ್ರಿ 9.15 ಗಂಟೆಗೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 16,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬುದಾಗಿ ಭರತ್ ಪ್ರಸಾದ್, ವಾಸ: ಶ್ರೀ ದುಗರ್ಾ ನಿವಾಸ, ಡೋರ್ ನಂಬ್ರ 24-2-168/1, ನಿಯರ್ ಚಕ್ರಪಾಣಿ ಟೆಂಪಲ್, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 26/2013 ಕಲಂ 379 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ:
ಮಂಗಳೂರು ಪೂರ್ವ ಠಾಣೆ ;
ದಿನಾಂಕ 25-02-2013 ರಂದು 22-30 ಗಂಟೆಯಿಂದ ದಿನಾಂಕ 26-02-2013ರಂದು ಬೆಳಿಗ್ಗೆ 07-00 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಬಲ್ಮಠ ನ್ಯೂ ರಸ್ತೆಯಲ್ಲಿ ಇ. ಬಿ. ಸೊನ್ಸ್ ಕಂಪೌಂಡಿನಲ್ಲಿ ವಾಸ್ತವ್ಯವಿರುವ ಪಿರ್ಯಾದಿದಾರರ ಬಾಬ್ತು ವಾಸ್ತವ್ಯದ ಮನೆಯ ಬಾಗಿಲಿನ ಚಿಲಕವನ್ನು ಬಾಗಿಲಿನ ಪಕ್ಕದ ಕಿಟಕಿಯ ಮೂಲಕ ಕೈ ಹಾಕಿ ತೆರೆದು ಆ ಮೂಲಕ ಒಳ ಪ್ರವೇಶಿಸಿ ಮನೆಯೊಳಗಡೆಯಿಂದ ಅಂದಾಜು ರೂ 3900/- ರೂ ಬೆಲೆ ಬಾಳುವ ನೊಕಿಯಾ ಕಂಪನಿಯ 7411811915 ಹಾಗೂ 9480042979 ನಂಬ್ರದ ಸೀಮ್ಗಳಿದ್ದ ಐ.ಎಂ.ಇ.ಐ. ನಂ. 354130052220305 ನಂಬ್ರದ ಮೊಬೈಲ್ ಸೆಟ್-1, ನಗದು ಹಣ 1000/- ಹಾಗೂ ಮನೆಯೊಳಗಡೆಯಿಂದ ಕಳವು ಮಾಡಿದ್ದ ಕೀ ಯ ಸಹಾಯದಿಂದ ಮನೆಯ ಹೊರಗಡೆ ಪಾಕರ್್ ಮಾಡಲಾಗಿದ್ದ ಸಿಲ್ವರ್ ಕ್ರೋಮ್ ಬಣ್ಣದ 11/2007ನೇ ಮೊಡಲ್ನ ಅಂದಾಜು ರೂ 20000/-ಬೆಲೆ ಬಾಳುವ ದ್ಚಿಚಕ್ರ ವಾಹನ ಸಹಿತ ಒಟ್ಟು 24900/-ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಎಂಬುದಾಗಿ ಎಂ.ಸಮುಲ್ ರಾಜ್(36) ತಂದೆ: ಕೋಟೇಶ್ವರ್ ರಾವ್, ವಾಸ: ಆ.ಓಠ.16-11-621, ಇ.ಬಿ.ಸೊನ್ಸ್ ಹೌಸ್, ಬಲ್ಮಠ ನ್ಯೂ ರಸ್ತೆ, ಫಳ್ನೀರು, ಮಂಗಳೂರು ರವರು ನೀಿಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 21/2013 ಕಲಂ. 457, 380, 379 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ:
ಮಂಗಳೂರು ದಕ್ಷಿಣ ಠಾಣೆ;
ದಿನಾಂಕ 28-12-2012 ರಿಂದ ಫಿರ್ಯದುದಾರರಾದ ಶ್ರೀ ಲಕ್ಷ್ಮೀ ನಾರಾಯಾಣ ಭಟ್.ಪಿ ರವರ ಮನೆಯಲ್ಲಿ ಕೆಲಸಕ್ಕಿದ್ದ, ಉಡುಪಿ ಸ್ಟೇಟ್ಹೋಮ್ನ ನಿವಾಸಿ ಕುಮಾರಿ ಪ್ರೇಮ ಪ್ರಾಯ 20 ವರ್ಷ ಎಂಬವಳು ದಿನಾಂಕ 03-01-2013 ರಂದು ಮಧ್ಯಾಹ್ನ 1-15 ಗಂಟೆತನಕ ಫಿಯರ್ಾದುದಾರರ ಮನೆಯಲ್ಲಿಯೇ ಇದ್ದವಳು ಸಂಜೆ 3-45 ಗಂಟೆಗೆ ಫಿರ್ಯದುದಾರರು ಕುಮಾರಿ ಪ್ರೇಮಳನ್ನು ಹುಡುಕಾಡಿದಾಗ, ಪತ್ತೆಯಾಗದೇ ಇದ್ದು, ಕುಮಾರಿ ಪ್ರೇಮಳು ಫಿಯರ್ಾದುದಾರರ ಮನೆಯಲ್ಲಿ ಯಾರಿಗೂ ತಿಳಿಸದೆ ಕಾಣಿಯಾಗಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿಯರ್ಾದುದಾರರಾದ ಲಕ್ಷ್ಮಿನಾರಾಯಣ ಭಟ್, ಸದನ, ಡಿಸಿಲ್ವ ಲೇನ್, ಫಳ್ನೀರ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 46/2013, ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ;
ದಿನಾಂಕ: 25.02.2013 ರಂದು 11.00 ಗಂಟೆಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಪಿರ್ಯಾದಿದಾರರ ಮಗಳು ಕು. ಸೆಲಿಕಾ (19) ಎಂಬಾಕೆಯು ಮನೆಯಿಂದ ಕಣ್ಣೂರು ಶಾಲೆಗೆ ಸಹಿ ಹಾಕೆಲೆಂದು ಹೋದವರು ಮನೆಗೆ ವಾಫಾಸು ಬಾರದೆ ಕಾಣೆಯಾಗಿರುತ್ತಾಳೆ, ಆಸುಪಾಸಿನಲ್ಲಿ ಹಾಗೂ ಸಂಭಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಹಸನಬ್ಬ ವಾಸ: ಕಣ್ಣೂರು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 51/2013, ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment