ಕಳವು ಪ್ರಕರಣ:
ಬಕರ್ೆ ಠಾಣೆ;
- ದಿನಾಂಕ 24-02-2013ರಂದು ರಾತ್ರಿ 11 ಗಂಟೆಯಿಂದ ಈ ದಿನ ಬೆಳಿಗ್ಗೆ ದಿನಾಂಕ 25-02-2013ರಂದು ಬೆಳಿಗ್ಗೆ 7 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಕಂಪೌಂಡಿನೊಳಗಡೆ ಪಾಕರ್್ ಮಾಡಿದ್ದ ಕೆ.ಎ.-19-ಎಂಡಿ-1257ನೇ ಮಾರುತಿ ಓಮ್ನಿಯ ನಾಲ್ಕು ಟೈಯರ್ಗಳನ್ನು ಡಿಸ್ಕ್ ಸಮೇತ ಕಳವುಮಾಡಿಕೊಂಡು ಹೋಗಿದ್ದು, ಸದ್ರಿ ಸೊತ್ತಿನ ಮೌಲ್ಯ ಅಂದಾಜು ಸುಮಾರು ರೂ. 25,000/-. ಎಂಬುದಾಗಿ ್ರೇಮಾನಂದ.ಎಲ್. ಶೆಣೈ (73) ತಂದೆ:ದಿ.ಲಕ್ಷ್ಮಣ ಶೆಣೈ, ವಾಸ:ಶ್ರೀ ದತ್ತ ನಿವಾಸ ಡೋರ್ ನಂ. 7-6-860,ಸೌಪಣರ್ಿಕಾ ಕಂಪೌಂಡ್ 5ನೇ ಕ್ರಾಸ್ ಮಠದಕಣಿ ರಸ್ತೆ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣ ೆಕಲಂ. 379 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಂ. ಪೂರ್ವ ಠಾಣ;ೆ
- ದಿನಾಂಕ 25-02-2013 ರಂದು ಸುಮಾರು 18.45 ಗಂಟೆ ಸಮಯಕ್ಕೆ ಪಿಯರ್ಾದಿದಾರರು ಹಾಗೂ ಮಕ್ಕಳಾದ ಲೆನಿಶಾ ಡಿ'ಸೋಜ ಮತ್ತು ರೋವಿನ್ ಡಿ'ಸೋಜ ರವರು ಮನೆಯಲ್ಲಿದ್ದ ಸಮಯ ಲೀನಾ ಡಿ'ಸೋಜ ಮತ್ತು ಇತರ 3 ಜನ ಗಂಡಸರು ಸೇರಿ ಪಿಯರ್ಾದಿದಾರರ ಹಿಂಬಾಗಿಲನ್ನು ಬಡಿದು ಮನೆಯಿಂದ ಹೊರ ಹೋಗಿ ಎಂದು ಬೈದು, ಅವರಲ್ಲೊಬ್ಬ ಗಂಡಸು ಕತ್ತಿಯಿಂದ ಪಿಯರ್ಾದಿದಾರರಿಗೆ ಹೊಡೆದಿದ್ದು ಎಡ ಕೈಗೆ ತೀವೃ ತರಹದ ಗಾಯವಾಗಿರುತ್ತದೆ, ಮತ್ತು ಲೀನಾ ಡಿ'ಸೋಜರವರು ಬಂದು ಪಿಯರ್ಾದಿದಾರರ ಮಗಳಿಗೆ ಕಬ್ಬಿಣದ ಸರಳಿನಿಂದ ಹೊಡೆದ ಪರಿಣಾಮ ಎಡ ಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಲೀನಾ ಎಂಬವರು ಪಿಯರ್ಾದಿದಾರರ ಕಾಲಿನ ಬೆರಳಿಗೆ ಕಚ್ಚಿ ಗಾಯ ಮಾಡಿದ್ದು, ಗಂಡಸರಿಬ್ಬರು ಪಿಯರ್ಾದಿದಾರರ ಜುಟ್ಟು ಹಿಡಿದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಂತರ ಪಿಯರ್ಾದಿದಾರರು ತನ್ನ ಗಂಡನಿಗೆ ಕರೆ ಮಾಡಿ ಕರೆಸಿದ್ದು, ಪಿಯರ್ಾದಿದಾರರ ಗಂಡ ಮನೆಗೆ ಬಂದ ಸಮಯ ಅವರಿಗೂ ಆ ಮೂವರು ಗಂಡಸರು ಹೊಡೆದಿರುತ್ತಾರೆ. ಸದ್ರಿಯವರುಗಳನ್ನು ಕೊಲ್ಲುವ ಉದ್ದೇಶದಿಂದಲೇ ತೀವೃ ತರಹದ ಗಾಯ ಉಂಟು ಮಾಡಿರುತ್ತಾರೆ. ಎಂಬುದಾಗಿ ಶ್ರೀಮತಿ. ರೂಪ ಡಿ'ಸೋಜ (31) ಗಂಡ: ಲಿಯೋ ಡಿ'ಸೋಜ ವಾಸ: ಡೋರ್.ನಂ.2-5-25-280, ಕುಂಟಿಕಾನ ಜಂಕ್ಷನ್ ಬಳಿ, ಬಿಜೈ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ಮಂ. ಪೂರ್ವ ಠಾಣೆ ಅಪರಾದ ಕ್ರಮಾಂಕ 504 506 324 326 ಡಿ/ತಿ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಕ್ಷಿಣೆ ಠಾಣೆ;
- ದಿನಾಂಕ 15-02-2013 ರಂದು ಪಿರ್ಯಾದುದಾರರು ಓದುತ್ತಿರುವ ಕಾಲೇಜಿನ ಕಾಲೇಜ್ ಡೇ ಯು ವಳಚ್ಚಿಲ್ ಎಂಬಲ್ಲಿರುವ ಶ್ರೀನಿವಾಸ್ ಕ್ಯಾಂಪಸ್ನಲ್ಲಿ ನಡೆದಿದ್ದು, ಸದ್ರಿ ಕಾಲೇಜ್ ಡೆ ಗೆ ಪಿರ್ಯಾದುದಾರರು ಹಾಗೂ ಇತರರು ಕಾಲೇಜಿನ ಬಸ್ ರೂಟ್ ನಂಬ್ರ 11ರಲ್ಲಿ ಹೋಗಿ ವಾಪಾಸು ಬರುತ್ತಾ, ಸಂಜೆ ಸುಮಾರು 5-35 ಗಂಟೆಗೆ ಮಂಗಳೂರಿನ ಮಂಗಳಾದೇವಿ-ಮಂಕಿಸ್ಟಾಂಡ್ ಬಳಿ ತಲುಪುತ್ತಿದ್ದಂತೆ, ಬಸ್ಸಿನ ಒಳಗಡೆ ಆರೋಪಿಗಳಾದ ಅಜೀಲ್, ಸಿನೊ ಫೆನರ್ಾಂಡಿಸ್ ಮತ್ತು ಅನೀಸ್ ಮ್ಯಾಥ್ಯೂ ಎಂಬವರುಗಳು ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ 1ನೇ ವರ್ಷದ ಬಿಪಿಟಿ ವಿದ್ಯಾಥರ್ಿನಿಯರಿಗೆ ತಮಾಷೆ ಮಾಡುತ್ತಿದ್ದಾಗ, ಪಿರ್ಯಾದುದಾರರು ಯಾಕೆ ತಮಾಷೆ ಮಾಡುವುದು ಎಂದು ಕೇಳಿದಾಗ ಈ ಮೂವರು ಕೋಪಗೊಂಡು 'ನೀ ಆರಾಡ ಮೋನೆ,ತಮಾಷೆ ಮಾಡಿದರೆ ನೀನು ಯಾರು ಕೇಳಲು ಎಂದು ಹೇಳಿ ಅವರುಗಳ ಪೈಕಿ ಅಜಿಲ್ ಎಂಬಾತನು ಮೂಗಿನ ಮೇಲೆ ಬಲವಾಗಿ ಮುಷ್ಠಿ ಹಿಡಿದು ಗುದ್ದಿದ್ದಲ್ಲದೇ, ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಮುಖಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಬಲವಾಗಿ ಗುದ್ದಿರುತ್ತಾರೆ ಇದರಿಂದ ಮೂಗಿಗೆ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಅದೇ ದಿನ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಹರಿಕೃಷ್ಣನ್ (19) ವಾಸ: ರಕ್ಷಾ ಅಪಾರ್ಟಮೆಂಟ್ ಪಾಂಡೆಶ್ವರ ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣೆ ಠಾಣೆ ಅಪರಾದ ಕ್ರಮಾಂಕ 45/13 ಕಲಂ 323, 325, 504, 506 ಖ/ಘ 34 ಕಅ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
ಅಸ್ವಾಬಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 25-02-2013 ರಂದು ಫಿರ್ಯದುದಾರರು ಸರಕಾರಿ ಜಿಲ್ಲಾ ವನ್ಲಾಕ್ ಅಸ್ಪತ್ರೆ, ಮಂಗಳೂರು ಇಲ್ಲಿ ಕರ್ತವ್ಯದಲ್ಲಿದ್ದು, ಸದ್ರಿ ಅಸ್ಪತ್ರೆಯ ಆವರಣದಲ್ಲಿ ಬೆಳಿಗ್ಗೆ 08-00 ಗಂಟೆಗೆ ಬ್ರಹ್ಮಣ್ಣ ಪ್ರಾಯ ಸುಮಾರು 55 ವರ್ಷ ಎಂಬವರು ಮೃತಪಟ್ಟಿದ್ದು, ಈ ವ್ಯಕ್ತಿಯನ್ನು ದಿನಾಂಕ 24-02-2013 ರಂದು ಬೆಳ್ತಂಗಡಿಯ ಸರಕಾರಿ ಅಸ್ಪತ್ರೆಯಿಂದ 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಹೊರ ರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದು, ಸದ್ರಿ ವ್ಯಕ್ತಿ ಬೆಳಿಗ್ಗೆ 08-00 ಗಂಟೆಗೆ ಮೃತಪಟ್ಟಿರುತ್ತಾನೆ. ಈ ವ್ಯಕ್ತಿ ತನ್ನ ಹೆಸರು ಬ್ರಹ್ಮಣ್ಣ ಪ್ರಾಯ 55 ವರ್ಷ, ಎಂದು, ಆತನು ತನ್ನ ಅಸೌಖ್ಯದ ನಿಮಿತ್ತ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಬಗ್ಗೆ ನಮೂದು ಇರುತ್ತದೆ. ಈತನು ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದುದಾದರಾದ ಸುಧರ್ಶನ ಪವಾರ್ ಸಿ.ಪಿ.ಸಿ 1045, ದಕ್ಷಿಣ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ಯು.ಡಿ.ಆರ್ ನಂ: 16/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
No comments:
Post a Comment