ವಾಹನ ಕಳವು ಪ್ರಕರಣ:
ದಕ್ಷಿಣ ಠಾಣೆ ;
- ದಿನಾಂಕ 18-02-13 ರಂದು ಸಂಜೆ 17-00 ಗಂಟೆಗೆ ಫಿರ್ಯಾದುದಾರರು ತನ್ನ ಬಾಬ್ತು ಮಾರುತಿ 800 ಕಾರು ನಂಬ್ರ ಕೆ.ಎ 12 ಎಂ 4554 ನ್ನು ವಲೆನ್ಸಿಯಾ ಸ್ಟೇಟ್ಬ್ಯಾಂಕ್ ಆಪ್ ಮೈಸೂರು ಬಳಿ ನಿಲ್ಲಿಸಿ ಮನೆಗೆ ಹೋಗಿರುತ್ತಾರೆ ನಂತರ ದಿ: 19-02-13 ರಂದು ಬೆಳಿಗ್ಗೆ 08-00 ಗಂಟೆಗೆ ನೋಡಿದಾಗ ಫಿಯರ್ಾದುದಾರರು ಪಾಕರ್್ ಮಾಡಿದ್ದ ಬಿಳಿ ಬಣ್ಣದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಕಾರನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ. ಕಳವಾದ ಮಾರುತಿ 800 ಕಾರಿನ ಅಂದಾಜು ಬೆಲೆ ರೂ 40,000/- ಆಗಬಹುದು ಎಂಬುದಾಗಿ ಜಿ. ಆಲ್ವಿನ್ ಡಿಕೋಸ್ತಾ (66) ತಂದೆ : ಫೆಡ್ರಿಕ್ ಡಿಕೋಸ್ತಾ ವಾಸ : ಬಾಲಿಕಾಶ್ರಮ ರೋಡ್, ಕಂಕನಾಡಿ, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 41/13 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ;
- ದಿನಾಂಕ 17-02-2013 ರಂದು ಸಮಯ ಸುಮಾರು 2.50 ಗಂಟೆಗೆ ಕಾರು ನಂಬ್ರ ಏಂ- 20 ಒ- 4752 ನ್ನು ಅದರ ಚಾಲಕ ಡೊನಾಲ್ಡ್ ಜಾಯ್ವಿನ್ ರೇಗೊ ಎಂಬವರು ಕದ್ರಿ ಕಂಬ್ಳ ನ್ಯೂ ರೋಡ್ನಲ್ಲಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ಮೆಸ್ಕಾಂನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಿದ್ಯುತ್ ಕಂಬ ಜಖಂಗೊಳ್ಳಲು ಕಾರಣರಾಗಿರುವುದಾಗಿದೆ. ಈ ಅಪಘಾತದಿಂದ ಅರೋಪಿತರು ಎಡಕೈಗೆ ಗಂಭೀರ ಸ್ವರೂಪದ ಗಾಯಗೊಂಡು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬುದಾಗಿ ಎಂಬುದಾಗಿ ಕೆ. ಶಶೀಂದ್ರ (57) ವಾಸ: ಮೆಸ್ಕಂ ಇಂಜಿನಿಯರ್ ಎಸ್ ಬ್ರಾಂಚ್ ಬಿಜೈ ಮಂಗಳೂರು ರವರು ನೀಡಿದ ದೂರಿನಂತೆ 37/2013279 , 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಿರ್ಲಕ್ಷತನದಿಂದ ಮರಣ:
ಉಳ್ಳಾಲ ಠಾಣೆ;
- ದಿನಾಂಕ 18.02.2013 ರಂದು 19.25 ಗಂಟೆಗೆ ಪಿರ್ಯಾದಿದಾರರ ಅಳಿಯ ತನ್ನ ಹೆಂಡತಿಯಾದ ಶ್ರೀಮತಿ ರಮ್ಯಾಳನ್ನು ಹೆರಿಗೆಯ ಬಗ್ಗೆ ದಿನಾಂಕ 12.02.2013 ರಂದು ಮಂಗಳೂರು ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಡಾ/. ಅಪಣರ್ಾ ಮತ್ತು ಅವರ ಸಹೋದ್ಯೋಗಿಗಳು ಪ್ರಸೂತಿ ನಡೆಸಿ ಗಂಡು ಮಗುವಿಗೆ ಜನ್ಮ ನೀಡಿದ್ದು ನಂತರ ವೈದ್ಯಾಧಿಕಾರಿಯವರು ಮಗು ಮತ್ತು ತಾಯಿ ಆರಾಮವಾಗಿದ್ದಾರೆ ಎಂದು ತಿಳಿಸಿದ್ದು ಪ್ರಸೂತಿ ನಡೆಸಿದ ಬಳಿಕ ಪಿರ್ಯಾದಿಯ ಹೆಂಡತಯು ಸದ್ರಿ ಮಗುವನ್ನು ನೋಡಿ ಬಂದಿದ್ದು ನಂತರ ರಾತ್ರಿ 20.00 ಗಂಟೆ ಸಮಯಕ್ಕೆ ಆಸ್ಪತ್ರೆಯ ನಸರ್್ ಒಬ್ಬರು ಬಂದು ಪಿರ್ಯಾದಿದಾರರಲ್ಲಿ ಈಗಾಗಲೇ ಜನಿಸಿದ ಮಗು ಕುತ್ತಿಗೆಯಲ್ಲಿ ಕರುಳುಬಿಗಿದು ಮೃತ ಪಟ್ಟುರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ. ಈ ಘಟನೆಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ/. ಅಪಣರ್ಾ ಮತ್ತು ಅವರ ಸಹೋದ್ಯೋಗಿಗಳು ಪ್ರಸೂತಿಯ ಸಮಯ ಸರಿಯಾದ ಪ್ರಸೂತಿತನ್ನು ನಡೆಸದೇ ತೀವ್ರ ನಿರ್ಲಕ್ಷತೆಯಿಂದ ಪ್ರಸೂತಿಯನ್ನು ನಡೆಸಿದ್ದೇ ಪಿರ್ಯಾದಿದಾರರ ಮಗಳಾದ ರಮ್ಯಾಳ ಮಗುವಿನ ಸಾವಿಗೆ ಕಾರಣರಾಗಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿದಾರರಾದ ಕೃಷ್ಣ ಬಂಗೇರ ಪ್ರಾಯ 57 ವರ್ಷ ತಂದೆ: ದಿ. ಮಂಜಪ್ಪ ಬೆಳ್ಚಡ ವಾಸ: ತೋಟ ಮನೆ, ಕುಂಜತ್ತೂರು, ಸಣ್ಣಡ್ಕ ಕಾಸರಗೋಡು ಜಿಲ್ಲೆ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 50/2013 ಕಲಂ 304(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ:
ದಕ್ಷಿಣಠಾಣೆ;
- ದಿನಾಂಕ 18-02-13 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮಗಳು ಸೀಮಾ (19) ಮನೆಯಿಂದ ಪಾಂಡೇಶ್ವರದ ಆಸೀಫ್ರವರ ಫನರ್ಿಚರ್ ಕೆಲಸಕ್ಕೆ ಹೋದವಳು ಮಾಮೂಲಿಯಂತೆ ಮದ್ಯಾಹ್ನ 01-30 ಗಂಟೆಗೆ ಊಟಕ್ಕೆ ಬಾರದೇ ರಾತ್ರಿಯೂ ಮನೆಗೂ ಬಂದಿರುವುದಿಲ್ಲ, ಈ ಬಗ್ಗೆ ಆಸೀಫ್ರವರಲ್ಲಿ ಕೇಳಿದಾಗ ಸೀಮಾ ಮಧ್ಯಾಹ್ನ 12-00 ಗಂಟೆಗೆ ಅಂಗಡಿಯ ಬಾಗಿಲು ಹಾಕಿ ಹೋದವಳು ವಾಪಾಸು ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈಕೆಯು ನೆರೆಕರೆಯ ಶಶಿಕುಮಾರ್ ಎಂಬವರೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ಈತನು ಕೂಡಾ ದಿನಾಂಕ 18-02-13 ರಂದು ಮದ್ಯಾಹ್ನದಿಂದ ಕಾಣಿಸುತ್ತಿಲ್ಲ. ಈತನ ಜೊತೆ ಹೋಗಿರಬಹುದೆಂಬ ಅನುಮಾನವಿದೆ. ಈಕೆಯು ದಿನಾಂಕ 18-2-13 ರಂದು ಮಧ್ಯಾಹ್ನ 12-00 ಗಂಟೆಯಿಂದ ಕಾಣೆಯಾಗಿರುತ್ತಾಳೆ. ಆದುದರಿಂದ ಈಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶಶಿಕಲಾ (38) ಗಂಡ ಗಣೇಶ್ ವಾಸ :ಪಾಂಡೇಶ್ವರ ನ್ಯೂರೋಡ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 40/13 ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment