Sunday, February 17, 2013

Daily Crime Incidents for Feb 17, 2013


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 15-2-2013 ರಂದು ರಾತ್ರಿ ಕಿನ್ನಿಗೋಳಿ, ನೀರುಡೆ ಎಂಬಲ್ಲಿಗೆ ಪಿಯರ್ಾದುದಾರರಾದ ಶ್ರೀನಿವಾಸ ರವರು ತನ್ನ  ಅಣ್ಣ ಬೋಜ ಮತ್ತು ಬಾವ ಲಕ್ಷ್ಮಣರವರೊಂದಿಗೆ ತನ್ನ ಪರಿಚಯದ ಸುರೇಶ ಎಂಬವರ ಬಾಬ್ತು ಕೆಎ-19-ಸಿ-9187 ನೇ  ನಂಬ್ರದ ಅಟೋರಿಕ್ಷಾದಲ್ಲಿ ಮೇರಿ ಹಿಲ್ನಿಂದ ತನ್ನ ಸಂಭಂದಿಕರ ಮನೆಗೆ ಯಕ್ಷಗಾನ ನೋಡಲು ಹೋದವರು ವಾಪಾಸು ಅದೇ ರಿಕ್ಷದಲ್ಲಿ ಹಿಂತಿರುಗಿ ಬರುತ್ತಾ ರಾತ್ರಿ ಸುಮಾರು 12-05 ಗಂಟೆಯ ಸಮಯಕ್ಕೆ , ವಾಮಂಜೂರುನ ಮಂಗಳ ಜ್ಯೋತಿ ಎಂಬಲ್ಲಿ ಸದ್ರಿ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಸದ್ರಿ ಅಟೋರಿಕ್ಷವನ್ನು ಚಲಾಯಿಸಿದ ಪರಿಣಾಮ ಆತನಿಗೆ ಹತೋಟಿ ತಪ್ಪಿ ಸದ್ರಿ ರಿಕ್ಷವು ರಸ್ತೆಯ ಬಲಬದಿಗೆ ಹೋಗಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅಟೋರಿಕ್ಷದಲ್ಲಿ ಇದ್ದವರೆಲ್ಲರೂ ಮುಗ್ಗರಿಸಿ ಬಿದ್ದು ಈ ಕಾರಣ ಪಿಯರ್ಾದುದಾರರ ಎಡ ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಅವರ ಅಣ್ಣ ಬೋಜನಿಗೆ ಹಾಗೂ ಬಾವ ಲಕ್ಷ್ಮಣನಿಗೆ ಶರೀರದ ಅಲ್ಲಲ್ಲಿ ಗುದ್ದಿದ ಗಾಯವಾಗಿದ್ದು, ಅವರೆಲ್ಲರನ್ನು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆತಂದು ಓಳರೋಗಿಯಾಗಿ ದಾಖಲು ಮಾಡಿದ್ದಾಗಿದ್ದು, ಅವರ ಪೈಕಿ ಅವರ ಅಣ್ಣ ಪ್ರಾಯ ಸುಮಾರು 70 ವರ್ಷದ ಭೊಜ ಎಸ್ ಸುವರ್ಣ ಎಂಬವರು ಆಸ್ಪತ್ರೆಗೆ ತರುವಾಗಲೇ ಮೃತ ಪಟ್ಟಿರುವ ವಿಚಾರ, ಈ ದಿನ ಬೆಳಿಗ್ಗೆ ಪಿಯರ್ಾದುದಾರರಿಗೆ ತಿಳಿದು ಬಂದಿದೆ ಎಂಬುದಾಗಿ ಶ್ರೀನಿವಾಸ, ಪ್ರಾಯ 50 ವರ್ಷ ತಂದೆ: ಕೃಷ್ಣಪ್ಪ ವಾಸ: ಸುವರ್ಣ ಹೌಸ್, ಮೇರಿ ಹಿಲ್, ಗುರು ನಗರ. ಕೊಂಚಾಡಿ ಪೋಸ್ಟ್.  ಮಂಗಳೂರು ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣಾ ಅಕ್ರ: 45/13 ಕಲಂ: 279, 338, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಅಬೂಬಕ್ಕರ್ ರವರು ದಿನಾಂಕ 09.02.13 ರಂದು ಸಂಜೆ 4.00 ಗಂಟೆೆ ಸುಮಾರಿಗೆ ಜಪ್ಪಿನಮೊಗರು ಬಳಿ ಕುತ್ತಾರ್ ಕಡೆಗೆ ಹೋಗಲೆಂದು ರಸ್ತೆ ದಾಟಲು ನಿಂತಿದ್ದಾಗ ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ಕಡೆಗೆ ಮಾರುತಿ ಕಾರ್ ಕೆಎ-19-ಎಂಬಿ-4800 ನ್ನು ಅದರ ಚಾಲಕ ಬಿ.ಹೆಚ್ ಉಸ್ಮಾನ್ ಬೆಳ್ತಂಗಡಿ ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಹಣೆಗೆ, ಎಡ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ ಆರೋಪಿಯು ಚಿಕಿತ್ಸೆಯ ಖಚರ್ುವೆಚ್ಚನ್ನು ನೋಡುವುದಾಗಿ ತಿಳಿಸಿದ್ದು ಆದರೆ ಈಗ ವೆಚ್ಚ ಭರಿಸಲು ನಿರಾಕರಿಸಿರುವುದರಿಂದ ವಿಳಂಬವಾಗಿ ಪಿರ್ಯಾದಿ ನೀಡಿದ್ದಾಗಿದೆ ಎಂಬುದಾಗಿ ಅಬೂಬಕ್ಕರ್ ತಂದೆ: ಇದಿನಬ್ಬ ವಾಸ: ಕಲಾಯಿಬೆಟ್ಟು ಮನೆ ಅಮ್ಮುಂಜೆ ಬಂಟ್ವಾಳ ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣಾ ಅಕ್ರ: 46/12 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 15-02-2013 ರಂದು ಸಮಯ ಸುಮಾರು 13.00 ಗಂಟೆಗೆ ಸ್ಕೂಟರ್ ನಂಬ್ರ ಏಂ- 20 ಖ- 4107ನ್ನು ಅದರ ಸವಾರ ಹೈಲ್ಯಾಂಡ್ ಜಂಕ್ಷನ್ ಕಡೆಯಿಂದ ಕಂಕನಾಡಿ ಸರ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕಂಕನಾಡಿ ಸರ್ಕಲ್ ತಲುಪುವಾಗ, ಸ್ಕೂಟರ್ನ ಮುಂದಿನಿಂದ ಅಂದರೆ, ಹೈಲ್ಯಾಂಡ್ ಜಂಕ್ಷನ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ಶ್ರೀಮತಿ ಸುಮಿತ್ರಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ಶ್ರೀಮತಿ ರೇವತಿ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂಬ್ರ ಏಂ-19 ಇಆ-1156 ರ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಶ್ರೀಮತಿ ಸುಮಿತ್ರಾ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸುಮಿತ್ರಾರವರ ಬಲಕೈ ಮೊಣಗಂಟಿಗೆ, ಬಲಕಣ್ಣಿನ ಮೇಲ್ಬಾಗ ರಕ್ತಗಾಯವಾಗಿ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಶ್ರೀಮತಿ ರೇವತಿ (42) ತಂದೆ : ಎಮ್. ಲಕ್ಷಣ  ವಾಸ:# 3-19/11,ಅಳಪೆ ಕಮರ್ಾರ್, ವಾಣಿನಗರ, ಬಜಾಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 34/2013 279 , 337  ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ


  • ದಿನಾಂಕ: 15-02-213 ರಂದು ಫಿರ್ಯಾದಿದಾರರಾದ ಶ್ರೀ ರಾಧಾ ಕೃಷ್ಣ ರವರು ತನ್ನ ತಾಯಿ ಶ್ರೀಮತಿ ಗಿರಿಜಾ ಎಂಬವರೊಂದಿಗೆ ಮುಚ್ಚೂರು ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನದ ರಥೋತ್ಸವಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಾ ಮಂಗಳೂರು ತಾಲೂಕಿನ ಮುಚ್ಚೂರು ಗ್ರಾಮದ, ಮುಚ್ಚೂರು ಗ್ರಾಮ ಪಂಚಾಯತಿಯ ಎದುರು ತಲುಪುತ್ತಿದ್ದಂತೇ ಹಿಂದಿನಿಂದ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 0101 ನೇದರ ಸವಾರ ಮಂಜುನಾಥ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಾಯಿ ಶ್ರೀಮತಿ ಗಿರಿಜಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬಲಕಾಲಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀ ರಾಧಾ ಕೃಷ್ಣ, 37 ವರ್ಷ, ತಂದೆ: ಭೀಮ ಗೌಡ, ವಾಸ: ಮಂಗೆಬೆಟ್ಟು ಮನೆ, ತೆಂಕ ಮಿಜಾರು ಗ್ರಾಮ, ಅಶ್ವತ್ಥಪುರ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 36/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಪುರುಷೋತ್ತಮ ಡಿ.ಕೆ ವಾಸ: ಕುಳಾಯಿ ಮಂಗಳೂರು ರವರು  ದಿನಾಂಕ:16-03-13 ರಂದು ಅವರ ಬಾಬ್ತು ಕೆಎ-19-ಇಇ-410ನೇ ಮೋಟಾರ್ ಸೈಕಲ್ ನಲ್ಲಿ ಬೆಳಿಗ್ಗೆ ಹೊಸಬೆಟ್ಟುವಿನ ಹನುಮಂತ ದೇವಸ್ಥಾನಕ್ಕೆ ಬಂದಿದ್ದು ಅಲ್ಲಿ ಪೂಜೆ ಮುಗಿಸಿ ವಾಪಾಸು ಮನೆ ಕಡೆಗೆ ಹೋಗುವರೇ ಸದ್ರಿ ಮೋಟಾರ್ ಸೈಕಲ್ ನಲ್ಲಿ ರಾ.ಹೆ.66 ರಲ್ಲಿ ಗೋವಿಂದದಾಸ್ ಕಾಲೇಜಿನ ಬಳಿಯ ಜಂಕ್ಷನ್ ಗೆ ಬಂದು ಪೂರ್ವ ಬದಿಯ ರಸ್ತೆಗೆ ತಿರುಗಿಸುತ್ತಿರುವಾಗ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ.66 ರಲ್ಲಿ ಕೆಎ-20-ಪಿ-8392ನೇ ಕಾರನ್ನು ಅದರ ಚಾಲಕ ಡಾ.ಅಶ್ವಥ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಗೆ, ಕಾಲಿಗೆ, ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಅಪಘಾತಪಡಿಸಿದ ಕಾರಿನ ಚಾಲಕರು ಅದೇ ಕಾರಿನಲ್ಲಿ ಪಿರ್ಯಾದಿದಾರರನ್ನು ಕುಳ್ಳಿರಿಸಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬುದಾಗಿ ಪುರುಷೋತ್ತಮ ಡಿ.ಕೆ ವಾಸ: ಕುಳಾಯಿ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 39/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ


  • ದಿನಾಂಕ : 13/02/2013 ರಂದು ಸಂಜೆ ಸುಮಾರು 19-30 ಗಂಟೆಗೆ ಪಿರ್ಯಾದಿದಾರರಾದ ಬಿ ಐವನ್‌ ಕುಟಿನ್ಹ ರವರ ತಮ್ಮ ಸ್ಟೇಫಾನಿಯ  ಕುಟಿನ್ಹ ಪ್ರಾಯ 44 ವರ್ಷ ಎಂಬವರು ಮೋಟಾರು ಸೈಕಲ್‌ ನಂಬ್ರ ಕೆಎ 19 ಇಎ 3380 ನೇ ಬಜಾಜ್‌ ಡಿಸ್ಕವರಿಯಲ್ಲಿ ಮೂಡಬಿದ್ರೆಯಿಂದ ಪೇಪರ್‌ ಮಿಲ್‌ ಕಡೆ ಇರುವ ತಮ್ಮ ಮನೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನಾಯಿ ಒಮ್ಮೇಲೆ ಅಡ್ಡ ಬಂದ ಕಾರಣ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಆಳ್ವಾಸ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ಮೋಟಾರು ಸೈಕಲ್‌ ಸವಾರನಿಗೆ ತಲೆಗೆ ತೀವ್ರ ತರದ ಗುದ್ದಿದ ಗಾಯ ಹಾಗೂ ಕೈಗಳಿಗೆ ತರಚಿದ ಗಾಯ ಆಗಿದ್ದು , ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದು ಈಗ ತಡವಾಗಿ ಬಂದು ಪಿರ್ಯಾದಿ ನೀಡಿರುವುದಾಗಿದೆ ಎಂಬುದಾಗಿ ಬಿ ಐವನ್‌ ಕುಟಿನ್ಹ (45), ತಂದೆ : ಎಡ್ವಿನ್‌ ಕುಟಿನ್ಹ, ವಾಸ : ಇವಿಶ್‌ ಮಂಜುಶ್ರೀ ನಗರ, ಮಾರೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 32/2013 ಕಲಂ : 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




No comments:

Post a Comment