ಹಲ್ಲೆ ಪ್ರಕರಣ
ಸುರತ್ಕಲ್ ಠಾಣೆ
ಮೂಡಬಿದ್ರೆ ಠಾಣೆ
ಸುರತ್ಕಲ್ ಠಾಣೆ
- ಫಿರ್ಯಾದಿದಾರರಾದ ಹರೀಶ್ ಪುತ್ರನ್ (32) ವಾಸ: ಪಡುಪಣಂಬೂರು ಗ್ರಾಮ ಹಳೆಯಂಗಡಿ ಅಂಚೆ ಮಂಗಳೂರು ತಾಲೂಕು ರವರು ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕರಾವಳಿ ಅಲೆ ಪತ್ರಿಕೆ ವ್ಯವಸ್ಥಾಕರಾದ ಬಿ.ವಿ. ಸೀತಾರಾಮರವರ ಕಛೇರಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ 06-02-2013 ರಂದು ಫಿರ್ಯಾದಿದಾರರು ಕೆಲಸ ಮುಗಿಸಿ ಮನೆಗೆ ಹೋಗುವರೇ ಕುಳಾಯಿ ಶೆಟ್ಟಿ ಐಸ್ ಕ್ರೀಂ ಹತ್ತಿರ ರಸ್ತೆ ಬದಿಯಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಸಮಯ ಸುಮಾರು ರಾತ್ರಿ 8-30 ಗಂಟೆಗೆ 3 ಜನ ಯುವಕರು ಫಿರ್ಯಾದಿದಾರರನ್ನು ಅಡ್ಡ ತಡೆದು ವಿಕೆಟ್‌ನಿಂದ ತಲೆಗೆ, ಹಣೆಗೆ ಹೊಡೆದಿದ್ದು ಫಿರ್ಯಾದಿದಾರರು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಗುಂಪಿನಲ್ಲಿ ಸುಮಾರು 10 ಮಂದಿ ಇದ್ದು ಈ ದಿನ ಕರಾವಳಿ ಅಲೆ ಪೇಪರಿನಲ್ಲಿ ಡ್ರಗ್ಸ್ ಬಗ್ಗೆ ಪ್ರಿಂಟ್ ಮಾಡಿದ್ದು ವ್ಯವಸ್ಥಾಪಕರಿಗೆ ಆಗದ ಕೆಲವು ವ್ಯಕ್ತಿಗಳು ಈ ಹಲ್ಲೆ ಮಾಡಲು ಕಾರಣವಾಗಿರುತ್ತದೆ ಎಂಬುದಾಗಿ ಹರೀಶ್ ಪುತ್ರನ್ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 34/2013 ಕಲಂ: 143, 147, 148, 341, 324 ಜತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೂಡಬಿದ್ರೆ ಠಾಣೆ
- ಪಿರ್ಯಾದಿದಾರರಾದ ಗಿರೀಶ್ ಎಂ ಕಲ್ಲಗೋನಾಳ , ಅರಣ್ಯ ಇಲಾಖೆ ಶಿರ್ತಾಡಿ ಗ್ರಾಮ ಮಂಗಳೂರು ತಾಲೂಕು ರವರು ಕರ್ನಾಟಕ ರಾಜ್ಯ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು ದಿನಾಂಕ : 05/02/2013 ರಂದು ಸಂಜೆ ಸಮಯ 4-00 ಗಂಟೆಗೆ ಸಮವಸ್ತ್ರದಾರಿಯಾಗಿ ಮಂಗಳೂರು ತಾಲೂಕು ಮೂಡಬಿದ್ರೆ ಠಾಣಾ ವ್ಯಾಪ್ತಿಯ ಧರೆಗುಡ್ಡೆ ಎಂಬಲ್ಲಿರುವ ದಿನೇಶ್ ಪೂಜಾರಿಯವರ ಮನೆಯ ಬಳಿಯ ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಮಹಮ್ಮದ್ ಹಾಗೂ ಜಯಕುಮಾರ್ ಶೆಟ್ಟಿ ಎಂಬವರು ಅಕ್ರಮವಾಗಿ ಕಡಿದು ಅವರ ಬಾಬ್ತು ಟೆಂಪೋ ನಂಬ್ರ ಕೆಎ 18 – 1887 ರಲ್ಲಿ ಮರದ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದವರನ್ನು ಸದ್ರಿ ಪಿರ್ಯಾದಿದಾರರು ತಡೆದಾಗ ಅವರನ್ನು ದೂಡಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಟೆಂಪೋವನ್ನು ಮರ ಸಮೇತ ಕೊಂಡು ಹೋಗಿದ್ದು ಮುಂದಿನ ಕ್ರಮಕ್ಕಾಗಿ ಪಿರ್ಯಾದಿದಾರರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 28/2013 ಕಲಂ : 353 ಜೊತೆಗೆ 34 ಐಪಿಸಿ ಮತ್ತು 33 (2) (V), 2 ಕರ್ನಾಟಕ ಅರಣ್ಯ ಕಾಯ್ದೆ 1963 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment